Google Map ನಂಬಿ ಶಾರ್ಟ್‌ಕಟ್‌ನಲ್ಲಿ ಹೋಗಿ ಪಲ್ಟಿಯಾದ ಜೀಪ್

ಅನೇಕ ಜನರು ಒಂದ ಸ್ಥಳದಿಂದ ಮತ್ತೊಂದು ಜಾಗಕ್ಕೆ ಹೋಗಲು ದಾರಿ ಗೊತ್ತಿಲ್ಲ ಅಂದರೆ ಗೂಗಲ್ ಮ್ಯಾಪ್ಸ್ (Google Map) ಮೇಲೆ ಅವಲಂಬಿತರಾದ್ದಾರೆ. ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲಿ ಗೂಗಲ್ ಮ್ಯಾಪ್ ಸಾಮಾನ್ಯವಾಗಿ ನಿಖರವಾಗಿದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಗೂಗಲ್ ಮ್ಯಾಪ್ ಅಷ್ಟು ನಿಖರವಿರಲ್ಲ. ಕೆಲವು ಸಲ ಇತರ ಜಾಗಗಳಿಗೂ ಕರೆದುಕೊಂಡಿರುವ ಉದಾಹರಣೆಗಳಿವೆ.

ನಾವು ಗೂಗಲ್ ಮ್ಯಾಪ್ ನೋಡಿ ಹೋಗುವಾಗ, ಸಾಮಾನ್ಯವಾಗಿ ಫ್ಲೈಓವರ್ ತೆಗೆದುಕೊಳ್ಳುವ ಅಥವಾ ಅದರ ಕೆಳಗೆ ಹೋಗುವುದರ ಬಗ್ಗೆ ಗೊಂದಲಕ್ಕೊಳಗಾಗುತ್ತೇವೆ. ಗೂಗಲ್ ಮ್ಯಾಪ್ ನಮ್ಮ ಡ್ರೈವಿಂಗ್‌ನ ಅವಿಭಾಜ್ಯ ಅಂಗವಾಗಿರುವುದರಿಂದ, ನಮ್ಮಲ್ಲಿ ಹೆಚ್ಚಿನವರು ನಾವು ಕಾರನ್ನು ಸ್ಟಾರ್ಟ್ ಮಾಡಿದ ತಕ್ಷಣ ಗೂಗಲ್ ಮ್ಯಾಪ್ ಅನ್ನು ಆನ್ ಮಾಡುತ್ತೇವೆ. ಗೂಗಲ್ ಮ್ಯಾಪ್ ಅನ್ನು ಕಣ್ಮುಚ್ಚಿ ನಂಬುವ ಹಾಗೆಯೇ ಇಲ್ಲ. ಇದಕ್ಕೆ ಸಾಕ್ಷಿಯಾಗಿ ಈಗಾಗಲೇ ಬಹಳಷ್ಟು ಘಟನೆಗಳನ್ನು ನೀವು ಕೇಳಿರುತ್ತೀರಾ.

Google Map

ಇತ್ತೀಚೆಗೆ, ಗೂಗಲ್ ಮ್ಯಾಪ್ ನೋಡಿ ಶಾರ್ಟ್‌ಕಟ್ ನಲ್ಲಿ ಹೋಗಿ ಮಹೀಂದ್ರಾ MM540 ಜೀಪ್ ಪಲ್ಟಿಯಾದ ಘಟನೆಯು ವರದಿಯಾಗಿದೆ. ಕೇರಳದ ಕೂರಾಚುಂಡು ಎಂಬಲ್ಲಿ ಈ ಘಟನೆ ನಡೆದಿದೆ. ವರದಿಗಳ ಪ್ರಕಾರ, ಮಹೀಂದ್ರಾ MM540 ಜೀಪ್ ನಲ್ಲಿ ಐವರ ತಂಡ ಪ್ರಯಾಣಿಸುತ್ತಿತ್ತು. ಅವರು ವಯಲಾದ ಮುಲ್ಲನ್‌ಪಾರ ಪ್ರವಾಸಿ ಕೇಂದ್ರಕ್ಕೆ ಹೋಗುತ್ತಿದ್ದರು ಮತ್ತು ಗೂಗಲ್ ಮ್ಯಾಪ್ ಸೂಚಿಸಿದ ದಾರಿಯನ್ನು ಅನುಸರಿಸುತ್ತಿದ್ದರು.

ಗೂಗಲ್ ಮ್ಯಾಪ್ ನಲ್ಲಿ ಪೂವತುಮ್‌ಚೋಲಾದಿಂದ ತನ್ನಿಯಂಕುನ್ ಬೆಟ್ಟದ ಮೂಲಕ ವಯಲಾಡಾಕ್ಕೆ ಶಾರ್ಟ್‌ಕಟ್ ಅನ್ನು ತೋರಿಸಿದೆ. ಯಾವುದೇ ಪ್ರಯಾಣಿಕರು ಮೊದಲು ಈ ಪ್ರದೇಶಕ್ಕೆ ಭೇಟಿ ನೀಡದ ಕಾರಣ, ಅವರು ಮ್ಯಾಪ್ ಅನ್ನು ನಂಬಿ ಮುಂದೆ ಹೋದರು. ಆದರೆ ಮುಂದೆ ಹೋಗುತ್ತಿದ್ದಂತೆ ರಸ್ತೆಗಳು ಸಾಕಷ್ಟು ಕೆಟ್ಟ ಸ್ಥಿತಿಯಲ್ಲಿತ್ತು. ಇದರಿಂದ ವಾಹನ ನಿಯಂತ್ರಣ ಕಳೆದುಕೊಂಡು ಟೈರ್ ಸ್ಕಿಡ್ ಆಗಿ ರಸ್ತೆಯಿಂದ ತೋಟಕ್ಕೆ ಪಲ್ಟಿಯಾಗಿದೆ.

ಸ್ಥಳೀಯರು MM540 ಅನ್ನು ಹೊರತೆಗೆಯಲು ಪ್ರಯಾಣಿಕರಿಗೆ ಸಹಾಯ ಮಾಡಿದರು. ಅಧಿಕಾರಿಗಳಿಗೆ ಈ ರಸ್ತೆ ಹದಗೆಟ್ಟಿದೆ ಎಂಬ ಬೋರ್ಡ್ ಹಾಕಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. Google Map ಅನ್ನು ಅವಲಂಬಿಸುವ ಬದಲು ಯಾವಾಗಲೂ ಸ್ಥಳೀಯರಿಗೆ ನಿರ್ದೇಶನಗಳನ್ನು ಕೇಳುವುದು ಯಾವಾಗಲೂ ಸೂಕ್ತವಾಗಿದೆ. ಯಾವುದೇ ಆ್ಯಪ್ ನೀಡುವ ಸಲಹೆಗಳಿಗಿಂತಲೂ ಸ್ಥಳೀಯರಿಗೆ ರಸ್ತೆಗಳ ಬಗ್ಗೆ ಚೆನ್ನಾಗಿ ತಿಳಿದಿರುತ್ತವೆ.

ಇನ್ನು ಗೂಗಲ್ ಮ್ಯಾಪ್ ರಸ್ತೆ ಗೊತ್ತಿಲ್ಲದ ವಾಹನ ಸವಾರರಿಗೆ ನೆರವಾಗುತ್ತದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಆದರೆ ಕೆಲವೊಮ್ಮೆ ಗೂಗಲ್ ಮ್ಯಾಪ್ ಅನ್ನು ಕಣ್ಣುಮುಚ್ಚಿ ನಂಬುವುದು ಅಪಾಯಕ್ಕೆ ದೂಡಬಹುದು. ಈ ರೀತಿಯ ಹಲವಾರು ಘಟನೆಗಳು ವಿಶ್ವಾದ್ಯಂತ ಹಾಗೂ ಭಾರತದಲ್ಲಿಯೂ ನಡೆದಿವೆ. ಕೆಲವರು ಗೂಗಲ್ ಮ್ಯಾಪ್ ಅನ್ನು ನಂಬಿ ದಾರಿ ತಪ್ಪಿರುವ ಹಲವಾರು ಉದಾಹರಣೆಗಳಿವೆ. ಗೂಗಲ್ ಮ್ಯಾಪ್ ಅನ್ನು ಅತಿಯಾಗಿ ನಂಬಿಕೊಂಡವರಿಗೆ ಈ ಘಟನೆಯು ಆಘಾತವನ್ನುಂಟು ಮಾಡಿದೆ.

ನಗರ ಪ್ರದೇಶಗಳಲ್ಲಿ ದಿನ ನಿತ್ಯ ಗೂಗಲ್ ಮ್ಯಾಪ್ ಬಳಸಿದರೆ ಯಾವುದೇ ತೊಂದರೆಯಿಲ್ಲ. ಆದರೆ ದೂರದ ಪ್ರಯಾಣ ಮಾಡುವಾಗ, ಗೂಗಲ್ ಮ್ಯಾಪ್ ಅನ್ನು ಕುರುಡಾಗಿ ನಂಬುವುದು ಅಪಾಯಕಾರಿಯಾಗಬಲ್ಲದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ದೂರದ ಪ್ರಯಾಣವನ್ನು ಆರಂಭಿಸುವ ಮೊದಲು ಆ ಮಾರ್ಗದಲ್ಲಿ ಓಡಾಡಿ ಅನುಭವವಿರುವವರಿಂದ ಮಾರ್ಗದ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು. ಒಂದು ವೇಳೆ ಗೂಗಲ್ ಮ್ಯಾಪ್ ಬಳಸುವುದೇ ಆದರೆ ಎರಡೆರಡು ಬಾರಿ ಪರಿಶೀಲಿಸುವುದು ಉತ್ತಮ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, June 7, 2023, 16:11 [IST]
English summary
Google map shows shortcut mahindra mm540 overturns details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+