Google Maps: ಗೂಗಲ್ ಮ್ಯಾಪ್ಸ್ ನಂಬಿ ಬರಬೇಡಿ... ಇಲ್ಲಿ ದಾರಿಯಿಲ್ಲ, ಗ್ರಾಮಸ್ಥರ ಎಚ್ಚರಿಕೆ!

Google Maps: ಈ ಹಿಂದೆ ದಾರಿ ಹೋಕರನ್ನು ಕೇಳಿ ಗಮ್ಯ ಸ್ಥಳಗಳನ್ನು ತಲುಪುತ್ತಿದ್ದೆವು. ತಂತ್ರಜ್ಞಾನ ಬೆಳೆದಂತೆ ಗೂಗಲ್ ಮ್ಯಾಪ್ಸ್ ಬಳಕೆ ಹೆಚ್ಚಾಗಿದೆ. ಆದ್ರೆ ಇದು ನಿಖರ ದಾರಿಯನ್ನು ದೋರುವುದಿಲ್ಲ ಎಂದು ಪುರಾವೆ ಸಮೇತ ಹಲವರು ಆರೋಪಿಸಿದ ಉದಾಹರಣೆಗಳಿವೆ. ಇದೀಗ ಮಡಿಕೇರಿಯಲ್ಲಿ ಗೂಗಲ್ ಮ್ಯಾಪ್ಸ್ ಸರಿಯಲ್ಲ ಎಂದು ತೋರುವ ಬೋರ್ಡ್ ಕಾಣಿಸಿಕೊಂಡಿದೆ.

ಕೊಡಗು ಕನೆನ್ಟ್ ಎಂಬ X (Twitter) ಅಕೌಂಟ್‌ನಲ್ಲಿ ಈ ಬೋರ್ಡ್ ಅನ್ನು ಹಂಚಿಕೊಳ್ಳಲಾಗಿದೆ. ಇದರಲ್ಲಿ ಗೂಗಲ್ ಮ್ಯಾಪ್ಸ್ ತಪ್ಪು ದಾರಿ ತೋರುತ್ತದೆ. ಈ ರಸ್ತೆಯಲ್ಲಿ ನಿಮ್ಮ ಗಮ್ಯ ಸ್ಥಳವನ್ನು ತಲುಪಲು ಯಾವುದೇ ದಾರಿಯಿಲ್ಲ ಎಂದು ಬರೆಯಲಾಗಿದೆ. ಅಂದರೆ ಗೂಗಲ್ ಮ್ಯಾಪ್ಸ್ ಪ್ರಕಾರ ಆ ದಾರಿಯು ''ಕ್ಲಬ್ ಮಹೀಂದ್ರಾ'' ಎಂಬ ಸ್ಥಳಕ್ಕೆ ಸಂಪರ್ಕಿಸುತ್ತದೆ ಎಂದು ಮ್ಯಾಪ್ಸ್‌ನಲ್ಲಿ ತೋರುತ್ತದೆ. ಆದರೆ ಸ್ಥಳೀಯರ ಪ್ರಕಾರ ಅಲ್ಲಿ ಯಾವುದೇ ದಾರಿಯಿಲ್ಲ.

google-maps-is-not-the-right-way-villagers-warning-board-in-coorg

ಹಾಗಾಗಿಯೇ ಬೋರ್ಡ್‌ನಲ್ಲಿ "ಗೂಗಲ್ ತಪ್ಪಾಗಿದೆ, ಈ ರಸ್ತೆಯು ಕ್ಲಬ್ ಮಹೀಂದ್ರಾಗೆ ಹೋಗುವುದಿಲ್ಲ" ಎಂಬ ಬೋರ್ಡ್ ಅನ್ನು ಅಲ್ಲಿ ಪ್ರಯಾಣಿಕರಿಗೆ ಕಾಣುವಂತೆ ನಿಲ್ಲಿಸಲಾಗಿದೆ. ಅಕ್ಕಪಕ್ಕದಲ್ಲಿ ವಾಸವಿರುವ ಸ್ಥಳೀಯರು ಈ ಬೋರ್ಡ್ ಹಾಕಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಉಳಿದಂತೆ ಈ ತಮಾಷೆಯ ಬೋರ್ಡ್ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ. ನಮ್ಮ ಪ್ರಕಾರ ಗೂಗಲ್ ಇದರ ಹೊಸ ರಸ್ತೆಯ ಡೇಟಾವನ್ನು ಅಪ್‌ಡೇಟ್‌ ಮಾಡಿಲ್ಲ ಎಂದೆನಿಸುತ್ತಿದೆ.

ಗೂಗಲ್ ಮ್ಯಾಪ್ಸ್‌ನಿಂದ ಅಪಘಾತಗಳು: ಗೂಗಲ್ ಮ್ಯಾಪ್ಸ್ ರಸ್ತೆ ಇಲ್ಲದಿದ್ದರೂ ಮುಂದೆ ರಸ್ತೆ ಇದೆ ಎಂದು ತೋರಿಸುವ ಹಲವು ಪ್ರಕರಣಗಳು ದಾಖಲಾಗಿವೆ. ಗೂಗಲ್ ಮ್ಯಾಪ್ಸ್ ಅವಲಂಬಿಸಿ ಜನರು ತಮ್ಮ ಗೊತ್ತುಪಡಿಸಿದ ಸ್ಥಳಗಳನ್ನು ತಲುಪುವುದರ ಬದಲು ಅಪಘಾತಗಳಿಗೆ ಸಿಲುಕಿದ ಸಂದರ್ಭಗಳು ಕೂಡ ಇವೆ. ಇವು ನಗರಗಳಲ್ಲಿ ಕಡಿಮೆ, ಆದ್ರೆ ಹೊರವಲಯದ ಪ್ರದೇಶಗಳಲ್ಲಿ ಹೆಚ್ಚು.

google-maps-is-not-the-right-way-villagers-warning-board-in-coorg

ಕೇರಳದ ಕೂರಚುಂಡುವಿನಲ್ಲಿ ವಯಲಾಡಾ ಮುಲ್ಲನ್ಪಾರಾ ಪ್ರವಾಸಿ ಕೇಂದ್ರಕ್ಕೆ ಮಹೀಂದ್ರಾ ಎಂಎಂ 540 ಜೀಪ್‌ನಲ್ಲಿ ಹೊರಟಿದ್ದ ಐದು ಜನರ ಗುಂಪು Google Maps ನಿರ್ದೇಶನಗಳನ್ನು ಅನುಸರಿಸುತ್ತಿದ್ದರು. ಬೆಟ್ಟದ ಮೂಲಕ ವಯಲಾಡಾಕ್ಕೆ ಮ್ಯಾಪ್ಸ್‌ನಲ್ಲಿ ಕಿರುಹಾದಿ ತೋರುವುದನ್ನು ನೋಡಿ ಆ ಮಾರ್ಗದಲ್ಲಿ ಹೊರಟಿದ್ದರು. ಮುಂದಕ್ಕೆ ಹೋಗುತ್ತಾ ದಾರಿ ತುಂಬಾ ಕೆಟ್ಟ ಸ್ಥಿತಿಯಲ್ಲಿರುವುದು ಅರಿವಾಗುವಷ್ಟರಲ್ಲೆ ವಾಹನ ಪಲ್ಟಿಯಾಗಿದೆ.

ಇಂತಹ ಹಲವು ಘಟನೆಗಳು ಹಲವು ನಡೆದಿವೆ, ಮಾರ್ಗ ತಿಳಿಯದೆ ಮ್ಯಾಪ್ಸ್ ಆನ್ ಮಾಡಿಕೊಂಡ ಫಾರ್ಚುನರ್ ಚಾಲಕ ಸೀದ ಹೋಗಿ ಕೊಳವೆ ಬಾವಿಗೆ ಬಿದ್ದಿದ್ದ. ಇನ್ನೊಂದು ಘಟನೆಯಲ್ಲಿ ಇನ್ನೋವಾ ಕಾರು ಮಾರ್ಗ ತಿಳಿಯದೆ ಮ್ಯಾಪ್ಸ್ ನೋಡಿಕೊಂಡು ಮೆಟ್ಟಿಲುಗಳಲ್ಲಿ ಸಿಲುಕಿತ್ತು. ಮತ್ತೊಂದು ಘಟನೆಯಲ್ಲಿ ದಾರಿ ತಪ್ಪಿ ಮಾರುತಿ ಬ್ರೆಜಾ ಬಾವಿಗೆ ಬಿದ್ದ ಘಟನೆ ನಡೆದಿತ್ತು. ಹೀಗೆ ಗೂಗಲ್ ಮ್ಯಾಪ್ಸ್ ವಿಷಯದಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ.

google-maps-is-not-the-right-way-villagers-warning-board-in-coorg

ಕಾರಣವೇನು?: ಗೂಗಲ್ ಮ್ಯಾಪ್ಸ್ ನಿಖರವಾದ ದಾರಿಯನ್ನು ತೋರಬೇಕಾದರೆ ಅದಕ್ಕೆ ತಕ್ಕ ಡೇಟಾವನ್ನು ಗೂಗಲ್ ಅಪ್‌ಡೇಟ್ ಮಾಡಿರಬೇಕು. ಉದಾಹರಣೆಗೆ ನಿನ್ನೆ ಒಂದು ರಸ್ತೆಯಿತ್ತು, ಇಂದು ಆ ರಸ್ತೆಯನ್ನು ಮುಚ್ಚಲಾಗಿದೆ ಎಂದುಕೊಳ್ಳಿ ಅದನ್ನು ಕೂಡಲೇ ಗೂಗಲ್‌ನಲ್ಲಿ ಅಪ್‌ಡೇಟ್ ಮಾಡಲು ಕ್ರಮ ತೆಗೆದುಕೊಳ್ಳಬೇಕು ಇಲ್ಲದಿದ್ದರೇ ಮ್ಯಾಪ್ಸ್ ಹಳೆಯ ದಾರಿಯನ್ನೇ ತೋರುತ್ತದೆ.

ಇದು ಕೇವಲ ಕೆಲವು ಸಂದರ್ಭಗಳಲ್ಲಿ ಮಾತ್ರ ಆಗಬಹುದಾದ ತಪ್ಪುಗಳು. ತೀರಾ ಹಿಂದುಳಿದ ಗ್ರಾಮಾಂತರ ಪ್ರದೇಶಗಳ ದಾರಿಗಳು ಗೂಗಲ್‌ ಮ್ಯಾಪ್‌ಗಳಲ್ಲಿ ತಪ್ಪಾಗಿ ತೋರುತ್ತದೆ. ನೀವು ನಗರ ಹಾಗೂ ಗ್ರಾಮಾಂತರಗಳಲ್ಲಿ ಗೂಗಲ್ ಮ್ಯಾಪ್ಸ್ ಬಳಸಿದ್ದರೆ ಈ ಬಗ್ಗೆ ನಿಮಗೊಂದು ಐಡಿಯಾ ಇರಬಹುದು. ಏನೇ ಆಗಲಿ ಗೂಗಲ್ ಮ್ಯಾಪ್ಸ್ ಅನ್ನು ಸಂಪೂರ್ಣವಾಗಿ ನಂಬುವುದು ಸರಿಯಲ್ಲ ಎಂಬುದು ನಮ್ಮ ಅನಿಸಿಕೆ. ಈ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ.

Article Published On: Friday, March 15, 2024, 12:18 [IST]
English summary
Google maps is not the right way villagers warning board in coorg
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+