ಗೂಗಲ್ ಸೆಲ್ಪ್ ಡ್ರೈವಿಂಗ್ ಸೈಕಲ್ ಬೆಂಗಳೂರಿಗೆ ಬರುತ್ತಾ?

By Nagaraja

ಪ್ರತಿ ಬಾರಿಯೂ ಒಂದಲ್ಲ ಒಂದು ನೂತನ ತಂತ್ರಜ್ಞಾನದೊಂದಿಗೆ ಮುಂದೆ ಬರುತ್ತಿರುವ ಸರ್ಚ್ ಎಂಜಿನ್ ದೈತ್ಯ ಗೂಗಲ್, ಸೆಲ್ಪ್ ಡ್ರೈವಿಂಗ್ ಕಾರುಗಳ ಬಳಿಕವೀಗ ಸೆಲ್ಪ್ ಡ್ರೈವಿಂಗ್ ಸೈಕಲ್ ತಂತ್ರಗಾರಿಕೆಯನ್ನು ಪರಿಚಯಿಸುತ್ತಿದೆ.

ಒಂದೆಡೆ ವಾಹನ ಲೋಕಕ್ಕೆ ಹೊಸತನ ತುಂಬಿರುವ ಸ್ವಯಂಚಾಲಿತ ಕಾರುಗಳ ಪರೀಕ್ಷೆಯು ಜೋರಾಗಿ ನಡೆಯುತ್ತಿರುವಂತೆಯೇ ಗೂಗಲ್ ಮಗದೊಂದು ಕ್ರಾಂತಿಕಾರಿ ತಂತ್ರಗಾರಿಕೆಯತ್ತ ಹೆಜ್ಜೆಯನ್ನಿಟ್ಟಿದೆ.

ಗೂಗಲ್ ಸೆಲ್ಪ್ ಡ್ರೈವಿಂಗ್ ಸೈಕಲ್

ವಿಶ್ವದ ಪ್ರೀಮಿಯರ್ ಸೈಕಲಿಂಗ್ ನಗರಿ ಎಂದೇ ಪ್ರಖ್ಯಾತಿ ಪಡೆದಿರುವ ಆರ್ಮ್‌ಸ್ಟರ್‌ಡ್ಯಾಮ್ ನಲ್ಲಿ ಗೂಗಲ್ ಸೆಲ್ಫ್ ಡ್ರೈವಿಂಗ್ ತಂತ್ರಜ್ಞಾನವು ಪರಿಚಯವಾಗಲಿದೆ.

ಗೂಗಲ್ ಸೆಲ್ಪ್ ಡ್ರೈವಿಂಗ್ ಸೈಕಲ್

ಅಧ್ಯಯನ ವರದಿಯ ಪ್ರಕಾರ ಜಗತ್ತಿನ ಪೈಕಿ ಹಾಲೆಂಡ್ ನಲ್ಲಿ ಅತಿ ಹೆಚ್ಚು ಮಂದಿ ಸೈಕಲ್ ತುಳಿಯುತ್ತಿದ್ದಾರೆ. ಅಲ್ಲದೆ ಓರ್ವ ವ್ಯಕ್ತಿ ವರ್ಷಕ್ಕೆ 900 ಕೀ.ಮೀ. ಸೈಕಲ್ ತುಳಿಯುತ್ತಿದ್ದಾರೆ.

ಗೂಗಲ್ ಸೆಲ್ಪ್ ಡ್ರೈವಿಂಗ್ ಸೈಕಲ್

ಅಂದರೆ ಡಚ್ಚರು ವಾರ್ಷಿಕವಾಗಿ 15 ಬಿಲಿಯನ್ ಕೀ.ಮೀ.ಗಳಷ್ಟು ದೂರ ಸೈಕಲ್ ತುಳಿಯುತ್ತಾರೆ. ಇದು ಪರಿಸರ ಸ್ನೇಹಿ ವಾಹನಗಳ ಮೇಲಿರುವ ಖಾಳಜಿ ಮತ್ತು ದೈಹಿಕವಾಗಿಯೂ ಫಿಟ್ ಆಗಿರುವಂತೆ ಮಾಡುತ್ತದೆ.

ಗೂಗಲ್ ಸೆಲ್ಪ್ ಡ್ರೈವಿಂಗ್ ಸೈಕಲ್

ನೂತನ ಸ್ವಯಂ ಚಾಲಿತ ಸೈಕಲ್ ಗಳಲ್ಲಿ ಸೇಫ್ ನೇವಿಗೇಷನ್ ತಂತ್ರಜ್ಞಾನವನ್ನು ಆರ್ಮ್ ಸ್ಟರ್ ಡ್ಯಾಮ್ ನಿವಾಸಿಗಳಿಗಾಗಿ ಒದಗಿಸಲಾಗುತ್ತಿದೆ.

ಗೂಗಲ್ ಸೆಲ್ಪ್ ಡ್ರೈವಿಂಗ್ ಸೈಕಲ್

ನಗರ ಪ್ರದೇಶದ ಸಂಚಾರ ವಾಹನಕವನ್ನು ಸುಧಾರಣೆ ಮಾಡುವ ಇರಾದೆಯಲ್ಲಿರುವ ಗೂಗಲ್, ಇದಕ್ಕಾಗಿ ತಂತ್ರಜ್ಞಾನದ ನೆರವನ್ನು ಪಡೆಯಲಿದೆ.

ಗೂಗಲ್ ಸೆಲ್ಪ್ ಡ್ರೈವಿಂಗ್ ಸೈಕಲ್

ಈ ಸಂಬಂಧ ಗೂಗಲ್ ಹಾಲೆಂಡ್ ವಿಭಾಗವು ದಿಟ್ಟ ಹೆಜ್ಜೆಯನ್ನಿಟ್ಟಿದ್ದು, ನಾವೀನ್ಯ ತಂತ್ರಗಾರಿಕೆ ಜಾರಿಗೊಳಿಸುವುದರಲ್ಲಿ ಹೆಮ್ಮೆ ಪಟ್ಟುಕೊಳ್ಳುತ್ತಿದೆ.

ಗೂಗಲ್ ಸೆಲ್ಪ್ ಡ್ರೈವಿಂಗ್ ಸೈಕಲ್

ನಿಮಗೆಲ್ಲರಿಗೂ ಗೊತ್ತಿರುವಂತೆಯೇ ಸೈಕಲ್ ಸವಾರಿಯು ಹೆಚ್ಚು ಸುರಕ್ಷಿತ, ಸರಳ ಮತ್ತು ಸ್ಮಾರ್ಟರ್ ಎನಿಸಿಕೊಳ್ಳಲಿದೆ.

ಗೂಗಲ್ ಸೆಲ್ಪ್ ಡ್ರೈವಿಂಗ್ ಸೈಕಲ್

ದ್ವಿಚಕ್ರ ವಾಹನ ಸವಾರಿಯಿಂದ ಅನೇಕ ಅಪಘಾತಗಳು ಘಟಿಸುತ್ತಿದೆ. ಇದರಿಂದಾಗಿ ಗಾಯಾಳುಗಳ ಸಂಖ್ಯೆಯಲ್ಲಿ ಗಣನೀಯ ವರ್ಧನೆಯುಂಟಾಗುತ್ತಿದೆ.

ಗೂಗಲ್ ಸೆಲ್ಪ್ ಡ್ರೈವಿಂಗ್ ಸೈಕಲ್

ಗೂಗಲ್ ಸೆಲ್ಪ್ ಡೈವಿಂಗ್ ಸೈಕಲ್ ಗಳು ಟ್ರಾಫಿಕ್ ಪರಿಸ್ಥಿತಿಗಳನ್ನು ಅತ್ಯಂತ ಜಾಣತಣದಿಂದ ನಿರ್ವಹಿಸುವ ಶಕ್ತಿಯನ್ನು ಹೊಂದಿರುತ್ತದೆ.

ಗೂಗಲ್ ಸೆಲ್ಪ್ ಡ್ರೈವಿಂಗ್ ಸೈಕಲ್

ಗೂಗಲ್ ಸೆಲ್ಪ್ ಡ್ರೈವಿಂಗ್ ಸೈಕಲ್ ನಲ್ಲಿ ಎರಡು ಹೆಚ್ಚುವರಿ ವೈಶಿಷ್ಟ್ಯಗಳನ್ನು ಆಳವಡಿಸಲಾಗಿದೆ. ಮೊದಲನೇಯದಾಗಿ ಪಿಕಪ್ ಪಾಯಿಂಟ್ ನೀವು ಎಂಟರ್ ಮಾಡಿಕೊಳ್ಳಬೇಕು. ಇದಕ್ಕಾಗಿ ವಿಶಿಷ್ಟ ಆಪ್ ಸೇವೆಯನ್ನು ನೀಡಲಾಗುವುದು.

ಗೂಗಲ್ ಸೆಲ್ಪ್ ಡ್ರೈವಿಂಗ್ ಸೈಕಲ್

ತದಾ ಬಳಿಕ ಕಂಫರ್ಟ್ ಮೋಡ್ ಮುಖಾಂತರ ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ಪೆಡಲ್ ಸ್ಥಾನವನ್ನು ಹೊಂದಾಣಿಸಬಹುದಾಗಿದೆ.

ಗೂಗಲ್ ಸೆಲ್ಪ್ ಡ್ರೈವಿಂಗ್ ಸೈಕಲ್

ನೀವು ಕಚೇರಿ, ಮನೆಯಲ್ಲಿ ಕೆಲಸ ಮಾಡುವೀರಾ. ಇನ್ನು ಮುಂದೆ ಸೆಲ್ಪ್ ಡ್ರೈವಿಂಗ್ ಸೈಕಲ್ ನಲ್ಲೂ ಆರಾಮವಾಗಿ ಕೆಲಸ ಮಾಡಬಹುದು ಎಂದು ಸಂಸ್ಥೆ ಅಭಿಪ್ರಾಯಪಟ್ಟಿದೆ. ಇನ್ನು ಮಕ್ಕಳ ಮೋಜಿಗಾಗಿ ಇಂದೊಂದು ಅತ್ಯುತ್ತಮ ಆಯ್ಕೆಯಾಗಿರಲಿದೆ.

ಗೂಗಲ್ ಸೆಲ್ಪ್ ಡ್ರೈವಿಂಗ್ ಸೈಕಲ್

ಒಟ್ಟಿನಲ್ಲಿ ಸೈಕಲ್ ತಂತ್ರಗಾರಿಕೆಯಲ್ಲಿ ಇದನ್ನು ಕ್ರಾಂತಿಕಾರಿ ಬದಲಾವಣೆ ಎಂದೇ ಬಣ್ಣಿಸಬಹುದಾಗಿದೆ.

ಗೂಗಲ್ ಸೆಲ್ಪ್ ಡ್ರೈವಿಂಗ್ ಸೈಕಲ್

ಅಷ್ಟಕ್ಕೂ ಇಂತಹದೊಂದು ತಂತ್ರಜ್ಞಾನ ನಮ್ಮ ಬೆಂಗಳೂರಿಗೂ ಆಗಮಿಸಿದ್ದಲ್ಲಿ ಹೇಗಿರಬಹುದು? ನಿಮ್ಮ ಬಹುಮೂಲ್ಯ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಉಲ್ಲೇಖಿಸಿರಿ.

More from DriveSpark

Article Published On: Wednesday, April 13, 2016, 12:16 [IST]
English summary
Google Self Driving Bicycle
Read more on ಗೂಗಲ್ google
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+