ಅಯೋಧ್ಯೆ ಶ್ರೀರಾಮನ ದರ್ಶನಕ್ಕೆ ಉಚಿತ ರೈಲು ಘೋಷಣೆ: 2023ರಲ್ಲಿ ಭರವಸೆ ನೀಡಿದ್ದ ಪ್ರಧಾನಿ ಮೋದಿ

ಬಿಜೆಪಿ ನೇತೃತ್ವದ ಛತ್ತೀಸ್‌ಗಢ ಸರ್ಕಾರವು ಉತ್ತರ ಪ್ರದೇಶದ ಅಯೋಧ್ಯೆಯ ಶ್ರೀ ರಾಮನ ಮಂದಿರಕ್ಕೆ ಭೇಟಿ ನೀಡಲು ಬಯಸುವ ಭಕ್ತರಿಗೆ ವಾರ್ಷಿಕ ಉಚಿತ ರೈಲು ಪ್ರಯಾಣ ಯೋಜನೆಯನ್ನು ಬುಧವಾರ ಮಂಜೂರು ಮಾಡಿದೆ. ಈ ನಿರ್ಧಾರವನ್ನು ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಪ್ರಕಟಿಸಿದ್ದಾರೆ.

ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಅವರ ಅಧ್ಯಕ್ಷತೆಯಲ್ಲಿ ಜನವರಿ 10 ರಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರವನ್ನು ಔಪಚಾರಿಕವಾಗಿ ಅನುಮೋದಿಸಲಾಗಿದೆ. 2023ರ ವಿಧಾನಸಭಾ ಚುನಾವಣೆಯ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಭರವಸೆಯಂತೆ ಛತ್ತೀಸ್‌ಗಢ ಪ್ರವಾಸೋದ್ಯಮ ಮಂಡಳಿಯಿಂದ ವಾರ್ಷಿಕ ಉಚಿತ ರೈಲು ಪ್ರಯಾಣ ಯೋಜನೆಯನ್ನು ಜಾರಿಗೊಳಿಸಲಾಗಿದೆ.

chhattisgarh-government-has-announced-free-train-to-ayodhya-details

ಛತ್ತೀಸ್‌ಗಢ ರಾಜ್ಯ ಪ್ರವಾಸೋದ್ಯಮ ಇಲಾಖೆಯು ಇದಕ್ಕೆ ಅಗತ್ಯವಾದ ಬಜೆಟ್ ಅನ್ನು ನಿಗದಿಪಡಿಸಲಿದೆಯಂತೆ. ರೈಲಿನ ಮೂಲಕ ಅಯೋಧ್ಯೆಗೆ ವಾರ್ಷಿಕ 20,000 ಜನರಿಗೆ ತೀರ್ಥಯಾತ್ರೆಗೆ ಅನುಕೂಲ ಮಾಡಿಕೊಡಲಿದ್ದಾರೆ. ರಾಯ್‌ಪುರ, ದುರ್ಗ್, ರಾಯ್‌ಗಢ್ ಮತ್ತು ಅಂಬಿಕಾಪುರ, ಜೊತೆಗೆ 900 ಕಿ.ಮೀ ಪ್ರಯಾಣವು ಅಯೋಧ್ಯೆಯಲ್ಲಿ ಕೊನೆಗೊಳ್ಳುತ್ತದೆ. ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಲು ಮತ್ತು ಗಂಗಾ ಆರತಿಯಲ್ಲಿ ಪಾಲ್ಗೊಳ್ಳಲು ಭಕ್ತರಿಗೆ ವಾರಣಾಸಿಯಲ್ಲಿ ನಿಲುಗಡೆ ಇರಲಿದೆ.

ಯಾತ್ರಾರ್ಥಿಗಳ ಆಯ್ಕೆ ಪ್ರಕ್ರಿಯೆಯ ಮೇಲ್ವಿಚಾರಣೆಗಾಗಿ ಪ್ರತಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗುವುದು. ಛತ್ತೀಸ್‌ಗಢ ಪ್ರವಾಸೋದ್ಯಮ ಮಂಡಳಿಯು ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ಅಗತ್ಯ ಬಜೆಟ್ ಹಂಚಿಕೆಗಳೊಂದಿಗೆ ಯೋಜನೆಯ ಅನುಷ್ಠಾನವನ್ನು ಮುನ್ನಡೆಸುತ್ತದೆ. ಸಾಪ್ತಾಹಿಕ ವಿಶೇಷ ರೈಲಿನ ವ್ಯವಸ್ಥೆಯನ್ನು ಒಳಗೊಂಡ ಉಪಕ್ರಮವನ್ನು ಕಾರ್ಯಗತಗೊಳಿಸಲು ಭಾರತೀಯ ರೈಲ್ವೇಸ್ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC) ನೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಲು ನಿರ್ಧರಿಸಲಾಗಿದೆ.

chhattisgarh-government-has-announced-free-train-to-ayodhya-details

ಈ ಯೋಜನೆಯನ್ನು ಪಡೆಯಲು ಅರ್ಹರಾಗಿರುವವರು 18 ರಿಂದ 75 ವರ್ಷ ವಯಸ್ಸಿನ ಆರೋಗ್ಯವಂತ ವ್ಯಕ್ತಿಗಳಾಗಿರಬೇಕು ಮತ್ತು 55 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಆರಂಭಿಕ ಹಂತದಲ್ಲಿ ಆದ್ಯತೆ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ. ಯಾತ್ರಾರ್ಥಿಗಳನ್ನು ಆಯ್ಕೆ ಮಾಡಲು ಜಿಲ್ಲಾಧಿಕಾರಿಗಳ ಅಡಿಯಲ್ಲಿ ಸಮಿತಿಯನ್ನು ರಚಿಸಲಾಗಿರುವುದರಿಂದ ಭಕ್ತರು ಈ ಯೋಜನೆಯನ್ನು ಈಗಲೇ ಪಡೆಯಲು ಸಾಧ್ಯವಿಲ್ಲ.

ಕರ್ನಾಟಕದಿಂದ ಅಯೋಧ್ಯೆಗೆ 11 ವಿಶೇಷ ರೈಲುಗಳು: ಕರ್ನಾಟಕವು ಫೆಬ್ರವರಿಯಿಂದ ಅಯೋಧ್ಯೆಗೆ 11 ವಿಶೇಷ ರೈಲುಗಳನ್ನು ಪಡೆಯುವ ಸಾಧ್ಯತೆಯಿದೆ. ಇದರಲ್ಲಿ ಮೂರು ರೈಲುಗಳು ಬೆಂಗಳೂರಿನಿಂದ, ಹುಬ್ಬಳ್ಳಿ, ಮೈಸೂರು, ಮಂಗಳೂರಿನಿಂದ ತಲಾ ಎರಡು ಸೇರಿದಂತೆ ಶಿವಮೊಗ್ಗ ಮತ್ತು ಬೆಳಗಾವಿಯಿಂದ ಒಂದೊಂದು ರೈಲುಗಳು ಹೊರಡಲಿವೆ ಎಂದು ನೈಋತ್ಯ ರೈಲ್ವೆಯ ಮೂಲಗಳು ತಿಳಿಸಿವೆ.

chhattisgarh-government-has-announced-free-train-to-ayodhya-details

ರೈಲುಗಳನ್ನು IRCTC ನಡೆಸಲಿದ್ದು, ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಕಾಯ್ದಿರಿಸಬೇಕಾಗುತ್ತದೆ. ಇವು ಸಾಮಾನ್ಯ ರೈಲುಗಳಾಗಿರುವುದಿಲ್ಲ, ಕೌಂಟರ್‌ನಲ್ಲಿ ಯಾವುದೇ ಟಿಕೆಟ್‌ಗಳನ್ನು ನೀಡಲಾಗುವುದಿಲ್ಲ. ಹಾಗೆಯೇ ಯಾವುದೇ ಕೊನೆಯ ನಿಮಿಷದ ಬುಕಿಂಗ್‌ಗಳು ಇರುವುದಿಲ್ಲ. ದರಗಳು, ಮಾರ್ಗಗಳು ಮತ್ತು ವೇಳಾಪಟ್ಟಿಯ ವಿವರಗಳನ್ನು ಇನ್ನೂ ರೂಪಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಇನ್ನು ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

Article Published On: Thursday, January 11, 2024, 18:49 [IST]
English summary
Chhattisgarh government has announced free train to ayodhya details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+