ವೈದ್ಯ ವೃತ್ತಿ ಬಿಟ್ಟು ಆಟೋ ಡ್ರೈವರ್ ಆದ ಸರ್ಕಾರಿ ವೈದ್ಯ

ಕರೋನಾ ವೈರಸ್ ಸಮಸ್ಯೆಯಿಂದ ಹೆಚ್ಚು ಸಂಕಷ್ಟಕ್ಕೆ ಒಳಗಾದವರಲ್ಲಿ ಆಟೋ ಡ್ರೈವರ್‌ಗಳು ಸಹ ಸೇರಿದ್ದಾರೆ. ಲಾಕ್ ಡೌನ್ ಜಾರಿಗೆ ಬಂದ ನಂತರ ಭಾರತದಾದ್ಯಂತ ಆಟೋಗಳ ಕಾರ್ಯಚರಣೆಯನ್ನು ಸ್ಥಗಿತಗೊಳಿಸಲಾಯಿತು.

ವೈದ್ಯ ವೃತ್ತಿ ಬಿಟ್ಟು ಆಟೋ ಡ್ರೈವರ್ ಆದ ಸರ್ಕಾರಿ ವೈದ್ಯ

ಇದರಿಂದಾಗಿ ಆಟೋ ಚಾಲಕರು ತಮ್ಮ ಆದಾಯವನ್ನು ಕಳೆದುಕೊಳ್ಳುವಂತಾಯಿತು. ಲಾಕ್ ಡೌನ್ ನಲ್ಲಿ ವಿನಾಯಿತಿ ನೀಡಿದ ನಂತರ ಆಟೋಗಳ ಕಾರ್ಯಾಚರಣೆಗೆ ಅನುಮತಿ ನೀಡಲಾಯಿತಾದರೂ ಕರೋನಾ ವೈರಸ್ ಹರಡಬಹುದು ಎಂಬ ಭೀತಿಯಿಂದ ಜನರು ಆಟೋಗಳಲ್ಲಿ ಪ್ರಯಾಣಿಸಲು ಹಿಂದೇಟು ಹಾಕುತ್ತಿದ್ದಾರೆ. ಜನರು ತಮ್ಮ ಸ್ವಂತ ಕಾರು ಹಾಗೂ ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.

ವೈದ್ಯ ವೃತ್ತಿ ಬಿಟ್ಟು ಆಟೋ ಡ್ರೈವರ್ ಆದ ಸರ್ಕಾರಿ ವೈದ್ಯ

ಆಟೋ ಚಾಲಕರಿಗೆ ಇನ್ನೂ ಸರಿಯಾದ ಆದಾಯ ಬರುತ್ತಿಲ್ಲ. ಈ ಕಾರಣಕ್ಕೆ ಅನೇಕ ಆಟೋ ಚಾಲಕರು ಬೇರೆ ವೃತ್ತಿಗಳತ್ತ ಮುಖ ಮಾಡಿದ್ದಾರೆ. ಈ ಪರಿಸ್ಥಿತಿಯಲ್ಲಿ ಕರ್ನಾಟಕದ ಸರ್ಕಾರಿ ವೈದ್ಯರೊಬ್ಬರು, ವೈದ್ಯ ವೃತ್ತಿ ಬಿಟ್ಟು ಆಟೋ ಡ್ರೈವರ್ ಆಗಿದ್ದಾರೆ. ಈ ಘಟನೆ ರಾಜ್ಯದಲ್ಲಿ ಭಾರಿ ಕೋಲಾಹಲವನ್ನುಂಟು ಮಾಡಿದೆ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ವೈದ್ಯ ವೃತ್ತಿ ಬಿಟ್ಟು ಆಟೋ ಡ್ರೈವರ್ ಆದ ಸರ್ಕಾರಿ ವೈದ್ಯ

ಕರೋನಾ ವೈರಸ್, ಕರ್ನಾಟಕದಲ್ಲಿ ಬಹಳ ವೇಗವಾಗಿ ಹರಡುತ್ತಿದೆ. ಈ ಸಮಸ್ಯೆಯನ್ನು ಎದುರಿಸಲು ಆರೋಗ್ಯ ಕಾರ್ಯಕರ್ತರ ಕೊರತೆಯಿದೆ. ಆದರೆ 53 ವರ್ಷದ ಜಿಲ್ಲಾ ಸಂತಾನೋತ್ಪತ್ತಿ ಹಾಗೂ ಮಕ್ಕಳ ಆರೋಗ್ಯಾಧಿಕಾರಿಯೊಬ್ಬರು ಜೀವನ ನಿರ್ವಹಣೆಗಾಗಿ ಆಟೋ ಡ್ರೈವರ್ ಆಗಿ ಬದಲಾಗಿದ್ದಾರೆ.

ವೈದ್ಯ ವೃತ್ತಿ ಬಿಟ್ಟು ಆಟೋ ಡ್ರೈವರ್ ಆದ ಸರ್ಕಾರಿ ವೈದ್ಯ

ಡಾ.ರವೀಂದ್ರನಾಥ್ ಎಂ.ಹೆಚ್ ಎಂಬುವವರೇ ಸರ್ಕಾರಿ ವೈದ್ಯ ವೃತ್ತಿ ಬಿಟ್ಟು ಆಟೋ ಚಾಲಕರಾಗಿರುವವರು. ಅವರ ಸಂಬಳವನ್ನು 15 ತಿಂಗಳಿನಿಂದ ತಡೆಹಿಡಿದಿರುವ ಕಾರಣದಿಂದ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ವೈದ್ಯ ವೃತ್ತಿ ಬಿಟ್ಟು ಆಟೋ ಡ್ರೈವರ್ ಆದ ಸರ್ಕಾರಿ ವೈದ್ಯ

ಅವರು ಬಳ್ಳಾರಿಯಲ್ಲಿ 24 ವರ್ಷಗಳ ಕಾಲ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯಕ್ಕೆ ಅವರು ರಾಜ್ಯದ ದಾವಣಗೆರೆಯಲ್ಲಿ ಆಟೋ ಚಾಲನೆ ಮಾಡುತ್ತಿದ್ದಾರೆ.

ವೈದ್ಯ ವೃತ್ತಿ ಬಿಟ್ಟು ಆಟೋ ಡ್ರೈವರ್ ಆದ ಸರ್ಕಾರಿ ವೈದ್ಯ

2018ರಲ್ಲಿ ಐಎಎಸ್ ಅಧಿಕಾರಿಯೊಬ್ಬರ ಅಕ್ರಮಕ್ಕೆ ಸಹಾಯ ಮಾಡಲು ನಿರಾಕರಿಸಿದಾಗ ತಮಗೆ ಸಂಕಷ್ಟ ಎದುರಾಯಿತು ಎಂದು ಅವರು ಹೇಳಿದ್ದಾರೆ. ಆಗಿನ ಜಿಲ್ಲಾ ಪಂಚಾಯತ್ ಸಿಇಒ ನನಗೆ ಕಿರುಕುಳ ನೀಡಿದರು. ಹೊರಗಿನವರು ಮಾಡಿದ ತಪ್ಪಿಗೆ ನನ್ನನ್ನು ಹೊಣೆ ಮಾಡಿದರು. ಇದರಲ್ಲಿ ನನ್ನ ತಪ್ಪಿಲ್ಲ ಎಂಬುದನ್ನು ನಾನು ಸಾಬೀತುಪಡಿಸಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ವೈದ್ಯ ವೃತ್ತಿ ಬಿಟ್ಟು ಆಟೋ ಡ್ರೈವರ್ ಆದ ಸರ್ಕಾರಿ ವೈದ್ಯ

ಆದರೂ ಸಹ ಕಳೆದ ವರ್ಷ ಜೂನ್ 6 ರಂದು ನನ್ನನ್ನು ವಜಾ ಮಾಡಲಾಯಿತು. ಈ ಬಗ್ಗೆ ನಾನು ಕರ್ನಾಟಕ ಆಡಳಿತ ನ್ಯಾಯಮಂಡಳಿಯಲ್ಲಿ ಮೇಲ್ಮನವಿ ಸಲ್ಲಿಸಿದೆ. ಅಕ್ಟೋಬರ್‌ನಲ್ಲಿ ನನ್ನನ್ನು ಮತ್ತೆ ಅದೇ ಕೆಲಸದಲ್ಲಿ ನೇಮಿಸಿಕೊಳ್ಳಲು ಆದೇಶಿಸಲಾಯಿತು ಎಂದು ಅವರು ಹೇಳಿದರು.

ವೈದ್ಯ ವೃತ್ತಿ ಬಿಟ್ಟು ಆಟೋ ಡ್ರೈವರ್ ಆದ ಸರ್ಕಾರಿ ವೈದ್ಯ

2019ರ ಡಿಸೆಂಬರ್‌ನಲ್ಲಿ ಅವರನ್ನು ಕಲ್ಪುರ್ಗಿಯ ಸೇಡಂ ಜನರಲ್ ಆಸ್ಪತ್ರೆಯಲ್ಲಿ ಹಿರಿಯ ವೈದ್ಯಕೀಯ ಅಧಿಕಾರಿಯಾಗಿ ನೇಮಿಸಲಾಯಿತು. ಈ ಬಗ್ಗೆ ಮಾತನಾಡಿರುವ ಅವರು ನಾನು 17 ವರ್ಷಗಳಿಂದ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಿದ್ದೇನೆ. ಬಳ್ಳಾರಿ ಜಿಲ್ಲೆಯಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಿದ್ದಕ್ಕಾಗಿ ನನ್ನನ್ನು ಅಭಿನಂದಿಸಲಾಗಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ವೈದ್ಯ ವೃತ್ತಿ ಬಿಟ್ಟು ಆಟೋ ಡ್ರೈವರ್ ಆದ ಸರ್ಕಾರಿ ವೈದ್ಯ

ಆದರೆ ನನಗೆ ತಾಲ್ಲೂಕು ಮಟ್ಟದ ಕೆಲಸ ನೀಡಲಾಯಿತು. ನನ್ನನ್ನು ಜಿಲ್ಲಾ ಮಟ್ಟದ ಆಸ್ಪತ್ರೆಯಲ್ಲಿ ನೇಮಿಸಿಕೊಳ್ಳಲು ಆದೇಶ ನೀಡುವಂತೆ ಕೋರಿ ಕರ್ನಾಟಕ ಆಡಳಿತ ನ್ಯಾಯಮಂಡಳಿಯಲ್ಲಿ ಮೇಲ್ಮನವಿ ಸಲ್ಲಿಸಿದ್ದೆ.

ವೈದ್ಯ ವೃತ್ತಿ ಬಿಟ್ಟು ಆಟೋ ಡ್ರೈವರ್ ಆದ ಸರ್ಕಾರಿ ವೈದ್ಯ

ಈ ಬಗ್ಗೆ ವಿಚಾರಣೆ ನಡೆಸಿದ ಕರ್ನಾಟಕ ಆಡಳಿತ ನ್ಯಾಯಮಂಡಳಿಯು ಜನವರಿಯಲ್ಲಿ ಒಂದು ತಿಂಗಳೊಳಗೆ ಜಿಲ್ಲಾ ಮಟ್ಟದ ಆಸ್ಪತ್ರೆಗೆ ನೇಮಿಸುವಂತೆ ಆದೇಶ ನೀಡಿತು. ಆದರೆ ಇದುವರೆಗೂ ಕರ್ನಾಟಕ ಆಡಳಿತ ನ್ಯಾಯಮಂಡಳಿಯ ಆದೇಶದ ಪಾಲನೆಯಾಗಿಲ್ಲ ಎಂದು ಡಾ.ರವೀಂದ್ರನಾಥ್ ಹೇಳಿದರು.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ವೈದ್ಯ ವೃತ್ತಿ ಬಿಟ್ಟು ಆಟೋ ಡ್ರೈವರ್ ಆದ ಸರ್ಕಾರಿ ವೈದ್ಯ

ಕೆಲಸದ ಸ್ಥಳವನ್ನು ಬದಲಾಯಿಸುವಂತೆ ನಾನು ಪತ್ರ ಬರೆದಾಗ ಕೋವಿಡ್ -19 ಕಾರಣದಿಂದಾಗಿ ನನ್ನ ಉಪಸ್ಥಿತಿ ಅಗತ್ಯ ಎಂದು ಅಧಿಕಾರಿಗಳು ನನಗೆ ಮಾಹಿತಿ ನೀಡಿದರು. ಆದರೆ ಕರ್ನಾಟಕ ಆಡಳಿತ ನ್ಯಾಯಮಂಡಳಿ ಆದೇಶ ಹೊರಡಿಸಿದಾಗ ಕರೋನಾ ವೈರಸ್ ಸೋಂಕು ಇರಲಿಲ್ಲ.

ವೈದ್ಯ ವೃತ್ತಿ ಬಿಟ್ಟು ಆಟೋ ಡ್ರೈವರ್ ಆದ ಸರ್ಕಾರಿ ವೈದ್ಯ

ಈ ಅವಧಿಯಲ್ಲಿ ಆಸ್ಪತ್ರೆಯಲ್ಲಿದ್ದ ವೈದ್ಯರು ಸೇರಿದಂತೆ ನೂರಾರು ವೈದ್ಯಕೀಯ ಸಿಬ್ಬಂದಿಯನ್ನು ವರ್ಗಾಯಿಸಲಾಗಿದೆ. ಈ ಕಾರಣಕ್ಕೆ ನಾನು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದೇನೆ. ಈ ಅರ್ಜಿಯ ವಿಚಾರಣೆ ಸೆಪ್ಟೆಂಬರ್ 11ರಿಂದ ಆರಂಭವಾಗಲಿದೆ ಎಂದು ಅವರು ಹೇಳಿದರು.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ವೈದ್ಯ ವೃತ್ತಿ ಬಿಟ್ಟು ಆಟೋ ಡ್ರೈವರ್ ಆದ ಸರ್ಕಾರಿ ವೈದ್ಯ

ಇಂತಹ ಸಮಸ್ಯೆಗಳ ನಡುವೆ ಡಾ.ರವೀಂದ್ರನಾಥ್ ತಮ್ಮ ಸ್ವಂತ ಊರಾದ ದಾವಣಗೆರೆಗೆ ತೆರಳಲು ನಿರ್ಧರಿಸಿದರು. ಸದ್ಯಕ್ಕೆ ಅವರು ದಾವಣಗೆರೆಯಲ್ಲಿ ಆಟೋ ಓಡಿಸುತ್ತಿದ್ದಾರೆ. ವೈದ್ಯಕೀಯ ವೃತ್ತಿಯನ್ನು ಬಿಟ್ಟು ಆಟೋ ಡ್ರೈವರ್ ಆಗಿದ್ದು ಏಕೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಡಾ.ರವೀಂದ್ರನಾಥ್, ನಾನು ಕ್ಲಿನಿಕ್ ಆರಂಭಿಸಬೇಕಾದರೆ, ಪರವಾನಗಿ ಪಡೆಯಲು ಅದೇ ಅಧಿಕಾರಿಗಳ ಬಳಿಗೆ ಹೋಗಬೇಕು.

ವೈದ್ಯ ವೃತ್ತಿ ಬಿಟ್ಟು ಆಟೋ ಡ್ರೈವರ್ ಆದ ಸರ್ಕಾರಿ ವೈದ್ಯ

ಕ್ಲಿನಿಕ್ ಆರಂಭಿಸಲು ನನ್ನ ಬಳಿ ಸಾಕಷ್ಟು ಹಣವಿಲ್ಲ. ನಾನು ಸಾಲ ಪಡೆಯಲು ವಿವಿಧ ಬ್ಯಾಂಕುಗಳನ್ನು ಸಂಪರ್ಕಿಸಿದೆ. ಆದರೆ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡಿದವರಿಗೆ ಸಾಲ ನೀಡಲು ಬ್ಯಾಂಕುಗಳು ನಿರಾಕರಿಸಿದವು. ಅಂತಿಮವಾಗಿ ಒಂದು ಕಂಪನಿಯು ನನಗೆ ನಗದು ಸಹಾಯವನ್ನು ನೀಡಿದ ಕಾರಣಕ್ಕೆ ಆಟೋ ಚಾಲನೆ ಮಾಡುತ್ತಿದ್ದೇನೆ ಎಂದು ಹೇಳಿದರು. ರವೀಂದ್ರನಾಥ್ ರವರು ತಮ್ಮ ಆಟೋ ಮೇಲೆ ಐ‌ಎಎಸ್ ಅಧಿಕಾರಿಗಳಿಂದ ನೊಂದ ಜೀವ ಎಂದು ಬರೆದುಕೊಂಡಿದ್ದಾರೆ.

MOST READ:ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ವೈದ್ಯ ವೃತ್ತಿ ಬಿಟ್ಟು ಆಟೋ ಡ್ರೈವರ್ ಆದ ಸರ್ಕಾರಿ ವೈದ್ಯ

ಅನೇಕ ಆಟೋ ಚಾಲಕರ ಭವಿಷ್ಯವು ಪ್ರಶ್ನಾರ್ಹವಾಗಿರುವ ಈ ಪರಿಸ್ಥಿತಿಯಲ್ಲಿ ಡಾ.ರವೀಂದ್ರನಾಥ್ ಈ ವೃತ್ತಿಗೆ ಬಂದಿದ್ದಾರೆ. ಅವರ ಉನ್ನತ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸುತ್ತಿದ್ದು, ಮುಂದೇನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ. ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಟಿಸಿದೆ.

Most Read Articles

Kannada
English summary
Government Doctor in Karnataka turns Auto rickshaw driver. Read in Kannada.
Story first published: Wednesday, September 9, 2020, 12:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X