ಇವಿ ವಾಹನಗಳನ್ನು ಚಾರ್ಜ್ ಮಾಡಲು ಹಸಿರು ಶಕ್ತಿಯ ಪೂರೈಕೆ: ಸಚಿವ ನಿತಿನ್ ಗಡ್ಕರಿ

ವಿಶ್ವದಾದ್ಯಂತ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಬಹುತೇಕ ಸಾಂಪ್ರದಾಯಿಕ ಪೆಟ್ರೋಲ್, ಡೀಸಲ್ ವಾಹನಗಳೂ ಕಣ್ಮರೆಯಾಗಲಿವೆ. ಈ ನಿಟ್ಟಿನಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಕೇಂದ್ರವು ಹಸಿರು ಶಕ್ತಿಯನ್ನು (green power), ಅದರಲ್ಲೂ ವಿಶೇಷವಾಗಿ ಸೌರಶಕ್ತಿಯನ್ನು ಬಳಸುವುದಾಗಿ ನಿತಿನ್ ಗಡ್ಕರಿ ತಿಳಿಸಿದ್ದಾರೆ.

ಇವಿ ವಾಹನಗಳನ್ನು ಚಾರ್ಜ್ ಮಾಡಲು ಹಸಿರು ಶಕ್ತಿಯ ಪೂರೈಕೆ: ಸಚಿವ ನಿತಿನ್ ಗಡ್ಕರಿ

ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು (ಇವಿ) ಚಾರ್ಜ್ ಮಾಡಲು ಬಳಸುವ ಹಸಿರು ಶಕ್ತಿಯ ಉತ್ಪಾದನೆಗಾಗಿ ಸೌರ ಕೇಂದ್ರಗಳನ್ನು ದೊಡ್ಡ ಪ್ರಮಾಣದಲ್ಲಿ ಸ್ಥಾಪಿಸಲಾಗುತ್ತಿದೆ. ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟ ಹೆಚ್ಚಾಗುತ್ತಿದ್ದಂತೆ, ಈ ವಾಹನಗಳನ್ನು ಚಾರ್ಜ್ ಮಾಡಲು ಇಂಧನದ ಬೇಡಿಕೆಯೂ ಹೆಚ್ಚುತ್ತಿದೆ. ಇದಕ್ಕಾಗಿ ಶುದ್ಧ ಇಂಧನ ಮೂಲಗಳಿಂದ ಸಿದ್ಧಪಡಿಸಿದ ವಿದ್ಯುತ್ ಚಾರ್ಜಿಂಗ್ ಸ್ಟೇಷನ್‌ಗಳಿಗೆ ಪೂರೈಕೆ ಮಾಡುವ ನೀತಿಯನ್ನು ಸರ್ಕಾರ ಸಿದ್ಧಪಡಿಸಿದೆ ಎಂದು ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಗುರುವಾರ ರಾಜ್ಯಸಭೆಯಲ್ಲಿ ಹೇಳಿದರು.

ಇವಿ ವಾಹನಗಳನ್ನು ಚಾರ್ಜ್ ಮಾಡಲು ಹಸಿರು ಶಕ್ತಿಯ ಪೂರೈಕೆ: ಸಚಿವ ನಿತಿನ್ ಗಡ್ಕರಿ

ದೇಶದ ಎಲ್ಲಾ ಚಾರ್ಜಿಂಗ್ ಸ್ಟೇಷನ್‌ಗಳಿಗೆ ಶುದ್ಧ ಇಂಧನವನ್ನು ಬಳಸುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳ ಕುರಿತು ಗುಂಟೂರಿನ ತೆಲುಗು ದೇಶಂ ಪಕ್ಷದ ಸಂಸದ ಜಯದೇವ್ ಗಲ್ಲಾ ಅವರು ಕೇಳಿದ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿ, ಚಾರ್ಜಿಂಗ್ ಮೂಲಸೌಕರ್ಯ ತಂತ್ರಜ್ಞಾನವು ನಿರಂತರವಾಗಿ ಬದಲಾಗುತ್ತಿರುವುದರಿಂದ, EV ಸ್ಟಾರ್ಟ್-ಅಪ್‌ಗಳಿಂದ ಹೊಸ ಸಂಶೋಧನೆಗಳನ್ನು ಸ್ವಾಗತಿಸಲಾಗುತ್ತಿದೆ ಎಂದು ಗಡ್ಕರಿ ತಿಳಿಸಿದರು.

ಇವಿ ವಾಹನಗಳನ್ನು ಚಾರ್ಜ್ ಮಾಡಲು ಹಸಿರು ಶಕ್ತಿಯ ಪೂರೈಕೆ: ಸಚಿವ ನಿತಿನ್ ಗಡ್ಕರಿ

ಇವಿ ಚಾರ್ಜಿಂಗ್ ಮೂಲಸೌಕರ್ಯಕ್ಕಾಗಿ ಶುದ್ಧ ಇಂಧನ ಬಳಕೆಯ ಉದಾಹರಣೆಯನ್ನು ನೀಡಿದ ಗಡ್ಕರಿ, "ಸಚಿವಾಲಯವು ರಾಷ್ಟ್ರೀಯ ಹೆದ್ದಾರಿಗಳಲ್ಲಿ 650 ರಸ್ತೆ ಬದಿಯ ಇವಿ ಸ್ಟೇಷನ್‌ಗಳ ಸೌಕರ್ಯಗಳಿಗಾಗಿ ಕೆಲಸ ಮಾಡುತ್ತಿದೆ, ಇದರಲ್ಲಿ ಈಗಾಗಲೇ 40 ಸೌಲಭ್ಯಗಳನ್ನು ನೀಡಲಾಗುತ್ತಿದೆ. ಈ ಸೌಲಭ್ಯಗಳಲ್ಲಿ ಸೌರಶಕ್ತಿಯನ್ನು ಬಳಸಲಾಗುತ್ತಿದ್ದು, ಜೊತೆಗೆ ಗುಜರಾತ್ ಮತ್ತು ತಮಿಳುನಾಡಿನ ಕೆಲವು ಪ್ರದೇಶಗಳಲ್ಲಿ ಚಾರ್ಜಿಂಗ್ ಕೇಂದ್ರಗಳಿಗೆ ವಿದ್ಯುತ್ ಒದಗಿಸಲು ಪವನ ಶಕ್ತಿ (ವಿಂಡ್‌ ಪವರ್)ಯನ್ನು ಬಳಸಲಾಗುತ್ತಿದೆ.

ಇವಿ ವಾಹನಗಳನ್ನು ಚಾರ್ಜ್ ಮಾಡಲು ಹಸಿರು ಶಕ್ತಿಯ ಪೂರೈಕೆ: ಸಚಿವ ನಿತಿನ್ ಗಡ್ಕರಿ

ದೇಶದ ಮಹಾನಗರಗಳಲ್ಲಿ ಶುದ್ಧ ಇಂಧನ ಬಳಕೆಗಾಗಿ ಸರ್ಕಾರವು ಹಂತ ಹಂತವಾಗಿ ಯೋಜನೆಗಳನ್ನು ಪ್ರಾರಂಭಿಸುತ್ತಿದೆ. ಈ ಯೋಜನೆಗಳಲ್ಲಿ ಮುಂದಿನ 3-4 ವರ್ಷಗಳಲ್ಲಿ ದೇಶದ ಪ್ರಮುಖ ನಗರಗಳು, ರಾಜ್ಯಗಳ ರಾಜಧಾನಿಗಳು, ಕೇಂದ್ರಾಡಳಿತ ಪ್ರದೇಶಗಳ ಪ್ರಧಾನ ಕಚೇರಿಗಳನ್ನು ಶುದ್ಧ ಇಂಧನದೊಂದಿಗೆ ಚಲಿಸುವ ವಾಹನಗಳ ಕೇಂದ್ರಗಳನ್ನಾಗಿ ಆಯ್ಕೆ ಮಾಡಬಹುದು ಎಂದು ಗಡ್ಕರಿ ಹೇಳಿದರು.

ಇವಿ ವಾಹನಗಳನ್ನು ಚಾರ್ಜ್ ಮಾಡಲು ಹಸಿರು ಶಕ್ತಿಯ ಪೂರೈಕೆ: ಸಚಿವ ನಿತಿನ್ ಗಡ್ಕರಿ

ಬೃಹತ್ ಕೈಗಾರಿಕೆಗಳ ಸಚಿವಾಲಯದ ಭಾರತ ಹಂತ-2 (ಫೇಮ್ ಇಂಡಿಯಾ ಪೇಸ್‌ II) ನಲ್ಲಿ ವಿದ್ಯುತ್ ವಾಹನಗಳ ವೇಗದ ಅಳವಡಿಕೆ ಮತ್ತು ತಯಾರಿಕೆಯ ಯೋಜನೆಯ ಅಡಿಯಲ್ಲಿ 68 ನಗರಗಳಲ್ಲಿ 2,877 ಸಾರ್ವಜನಿಕ EV ಚಾರ್ಜಿಂಗ್ ಸ್ಟೇಷನ್‌ಗಳನ್ನು ಮಂಜೂರು ಮಾಡಲಾಗಿದೆ.

ಇವಿ ವಾಹನಗಳನ್ನು ಚಾರ್ಜ್ ಮಾಡಲು ಹಸಿರು ಶಕ್ತಿಯ ಪೂರೈಕೆ: ಸಚಿವ ನಿತಿನ್ ಗಡ್ಕರಿ

2011ರ ಜನಗಣತಿಯ ಪ್ರಕಾರ 4 ದಶಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಎಲ್ಲಾ ಮೆಗಾಸಿಟಿಗಳನ್ನು ಮುಂದಿನ 3 ವರ್ಷಗಳಲ್ಲಿ ಹಂತ 1ರಲ್ಲಿ, ಮೆಗಾಸಿಟಿಗಳಿಗೆ ಸಂಪರ್ಕಿಸುವ ಎಲ್ಲಾ ಅಸ್ತಿತ್ವದಲ್ಲಿರುವ ಎಕ್ಸ್‌ಪ್ರೆಸ್‌ವೇಗಳು ಮತ್ತು ಈ ಮೆಗಾಸಿಟಿಗಳೊಂದಿಗೆ ಸಂಪರ್ಕ ಹೊಂದುವ ಹೆದ್ದಾರಿಗಳನ್ನು ಕವರೇಜ್‌ಗೆ ತೆಗೆದುಕೊಳ್ಳಲಾಗುವುದು.

ಇವಿ ವಾಹನಗಳನ್ನು ಚಾರ್ಜ್ ಮಾಡಲು ಹಸಿರು ಶಕ್ತಿಯ ಪೂರೈಕೆ: ಸಚಿವ ನಿತಿನ್ ಗಡ್ಕರಿ

ಹಂತ 2 ರಲ್ಲಿ ರಾಜ್ಯ ರಾಜಧಾನಿಗಳು, UT ಪ್ರಧಾನ ಕಛೇರಿಗಳಂತಹ ದೊಡ್ಡ ನಗರಗಳು ಸಹ ವಿತರಣಾ ಮತ್ತು ಪ್ರದರ್ಶನದ ಪರಿಣಾಮಗಳಿಗೆ ಒಳಗೊಳ್ಳಬಹುದು. ಇದಲ್ಲದೆ ಈ ಪ್ರತಿಯೊಂದು ನಗರಗಳಿಗೆ ಸಂಪರ್ಕಗೊಂಡಿರುವ ಪ್ರಮುಖ ಹೆದ್ದಾರಿಗಳನ್ನು ವ್ಯಾಪ್ತಿಗೆ ತೆಗೆದುಕೊಳ್ಳಲಾಗುವುದು. ಹಂತ 4 ರಲ್ಲಿ EESL (ಎನರ್ಜಿ ಎಫಿಷಿಯನ್ಸಿ ಸರ್ವಿಸಸ್ ಲಿಮಿಟೆಡ್)ಗೆ 16 ರಾಷ್ಟ್ರೀಯ ಹೆದ್ದಾರಿ ಎಕ್ಸ್‌ಪ್ರೆಸ್‌ವೇಗಳ ಉದ್ದಕ್ಕೂ EV ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸುವ ಕೆಲಸವನ್ನು ನೀಡಲಾಗಿದೆ.

ಇವಿ ವಾಹನಗಳನ್ನು ಚಾರ್ಜ್ ಮಾಡಲು ಹಸಿರು ಶಕ್ತಿಯ ಪೂರೈಕೆ: ಸಚಿವ ನಿತಿನ್ ಗಡ್ಕರಿ

ಇತ್ತೀಚೆಗೆ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHI) EESLದೊಂದಿಗೆ ಒಂದು MoUಗೆ ಸಹಿ ಹಾಕಿದ್ದು ಅದರ ಪ್ರಕಾರ ಆದಾಯ ಹಂಚಿಕೆ ಮಾದರಿಯಲ್ಲಿ EV ಚಾರ್ಜರ್ ಘಟಕಗಳನ್ನು ಸ್ಥಾಪಿಸಲು ಟೋಲ್ ಪ್ಲಾಜಾಗಳ ಬಳಿ NHIಗೆ ಸ್ಥಳ, ಭೂಮಿ ಮತ್ತು ಅದರ ಕಟ್ಟಡಗಳನ್ನು ಒದಗಿಸಲಾಗುವುದು.

ಇವಿ ವಾಹನಗಳನ್ನು ಚಾರ್ಜ್ ಮಾಡಲು ಹಸಿರು ಶಕ್ತಿಯ ಪೂರೈಕೆ: ಸಚಿವ ನಿತಿನ್ ಗಡ್ಕರಿ

ವಾಹನ್ ಪೋರ್ಟಲ್‌ನ ಇತ್ತೀಚಿನ ಮಾಹಿತಿಯ ಪ್ರಕಾರ, ದೇಶದಲ್ಲಿ 10,76,42 ಎಲೆಕ್ಟ್ರಿಕ್ ವಾಹನಗಳು ನೋಂದಣಿಯಾಗಿವೆ. ಬ್ಯೂರೋ ಆಫ್ ಎನರ್ಜಿ ಎಫಿಷಿಯೆನ್ಸಿ (BEE) ಪ್ರಕಾರ, ಒಟ್ಟು 1,742 ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಎಲೆಕ್ಟ್ರಿಕ್ ವಾಹನಗಳಿಗಾಗಿ ಪ್ರಾರಂಭಿಸಲಾದ FAME ಯೋಜನೆಯಡಿ, ಮಾರ್ಚ್ 31, 2022ರ ವರೆಗೆ 3,01,247 ಎಲೆಕ್ಟ್ರಿಕ್ ವಾಹನಗಳಿಗೆ 1,119 ಕೋಟಿ ರೂ. ಸಬ್ಸಿಡಿ ನೀಡಲಾಗಿದೆ.

ಇವಿ ವಾಹನಗಳನ್ನು ಚಾರ್ಜ್ ಮಾಡಲು ಹಸಿರು ಶಕ್ತಿಯ ಪೂರೈಕೆ: ಸಚಿವ ನಿತಿನ್ ಗಡ್ಕರಿ

ಏಪ್ರಿಲ್ 1, 2019 ರಿಂದ ಪ್ರಾರಂಭವಾಗುವ FAME ಯೋಜನೆಯ ಎರಡನೇ ಹಂತಕ್ಕೆ ಕೇಂದ್ರ ಸರ್ಕಾರವು 10,000 ಕೋಟಿ ರೂ. ಒಟ್ಟು ಬಜೆಟ್ ಬೆಂಬಲದಲ್ಲಿ, ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆಯನ್ನು ಉತ್ಪಾದಿಸಲು ಬೇಡಿಕೆಯ ಪ್ರೋತ್ಸಾಹಕ್ಕಾಗಿ ಸುಮಾರು ಶೇ 86 ರಷ್ಟು ಮೊತ್ತವನ್ನು ನಿಗದಿಪಡಿಸಲಾಗಿದೆ ಎಂದರು.

Most Read Articles

Kannada
English summary
Government to supply green energy to ev harging stations
Story first published: Friday, April 1, 2022, 12:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X