ಪ್ರೇಮಿಗಳಂತೆ ಓಡಾಡುತ್ತಾರೆ ಅಜ್ಜಿ-ಮೊಮ್ಮೊಗ: ಕಲ್ಮಷವಿಲ್ಲದ ವೃದ್ಧೆಯ ಸಂತೋಷಕ್ಕಾಗಿ ಯುವಕನ ಪ್ರಯತ್ನ!
ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಜ್ಜಿ-ತಾತಂದಿರ ಪ್ರೀತಿಯನ್ನು ನೋಡಿರುತ್ತೀರ. ಅವರು ತಮ್ಮ ಜೀವನದುದ್ದಕ್ಕೂ ಹಲವು ಏಳು-ಬೀಳುಗಳನ್ನು ನೋಡಿರುತ್ತಾರೆ. ವಯಸ್ಸಾಗಿದೆ ಎಂದ ಮಾತ್ರಕ್ಕೆ ಅವರಿಗೆ ಆಸೆ-ಆಕಾಂಕ್ಷೆಗಳು ಇರುವುದಿಲ್ಲ ಎಂದುಕೊಂಡರೆ ತಪ್ಪು. ಅವರಿಗೂ ಸಣ್ಣಪುಟ್ಟ ಆಸೆಗಳಿರುತ್ತವೆ. ಆದ್ರೆ ನಮ್ಮಲ್ಲಿ ಹಲವರು ಆ ಬಗ್ಗೆ ಕೇಳುವುದೇ ಇಲ್ಲ, ಅವರು ಕೂಡ ಹೇಳುವುದಿಲ್ಲ.
ಪ್ರೇಮಿಗಳೆಂದಾಕ್ಷಣ ಕೆವಲ ಯುವತಿ-ಯುವಕರ ನಡುವೆ ಮಾತ್ರ ಇರುವುದಿಲ್ಲ. ಯಾವುದೇ ಬಂಧವಾಗಲಿ ಕಲ್ಮಷ, ಸ್ವಾರ್ಥವಿಲ್ಲದೆ ಪ್ರೀತಿಯನ್ನು ಹಂಚಿಕೊಂಡರೆ ಅದು ಪ್ರೀತಿಗಿಂತ ದೊಡ್ಡದಾಗಿರುತ್ತದೆ. ಇಲ್ಲೂ ಈ ಅಜ್ಜಿ-ಮೊಮ್ಮಗನ ನಡುವಿನ ಭಾಂದವ್ಯ ಅಂಥಹದ್ದೇ ಆಗಿದೆ. ತನ್ನ ಅಜ್ಜಿಯನ್ನು ಪ್ರತಿ 15 ದಿನಗಳಿಗೊಮ್ಮೆ ಕಾರಿನಲ್ಲಿ ನಗರವೆಲ್ಲಾ ಸುತ್ತಾಡಿಸುವ ಕುರಿತು ಮೊಮ್ಮೊಗ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ.

ವಿಡಿಯೋದಲ್ಲಿ ತನ್ನ ಅಜ್ಜಿಯ ಕುರಿತು ವಿವರಿಸಿ, ಕಾರಿನಲ್ಲಿ ಹೊರ ಹೋಗುವ ದಿನಕ್ಕಾಗಿ ತನ್ನ ಅಜ್ಜಿ ಕಾಯುವ ಆನಂದ ಕ್ಷಣಗಳನ್ನು ರೆಕಾರ್ಡ್ ಮಾಡಿದ್ದಾನೆ. ಈ ಸುಂದರವಾದ ಬಂಧದ ಬಗ್ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಈ ವೀಡಿಯೊವನ್ನು ಅಧಿಕೃತ ಹ್ಯೂಮನ್ಸ್ ಆಫ್ ಬಾಂಬೆ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ಸಣ್ಣ ವೀಡಿಯೊದಲ್ಲಿ, ಯುವಕ ತನ್ನ ಅಜ್ಜಿಯ ಮನೆಗೆ ತಲುಪಿ ಆಕೆಯನ್ನು ತನ್ನೊಂದಿಗೆ ಕಾರಿನಲ್ಲಿ ಕರೆದೊಯ್ಯುವುದನ್ನು ನೋಡಬಹುದು.
ಪ್ರತಿ ಬಾರಿ ಅಜ್ಜಿಯನ್ನು ಕರೆದೊಯ್ಯುವಾಗ, ಆಕೆ ಸಣ್ಣ ಹುಡುಗಿಯಂತೆ ಉತ್ಸುಕರಾಗಿರುತ್ತಾರೆ. ಆಕೆ ಬೆಳೆದ ತನ್ನ ಬೆಂಗಳೂರಿನ ಬಗ್ಗೆ ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ಪ್ರತಿ ಬಾರಿಯೂ ಒಂದೇ ರೀತಿಯ ಸಂಭಾಷಣೆಗಳನ್ನು ಹೊಂದಿದ್ದರೂ, ಪ್ರತಿ 15 ದಿನಗಳಿಗೊಮ್ಮೆ ನನ್ನ ಬರುವಿಕೆಗಾಗಿಯೇ ಕಾಯುತ್ತಿರುತ್ತಾರೆ. ಅದರ ಪ್ರತಿ ಕ್ಷಣವನ್ನು ಪ್ರೀತಿಸುತ್ತಾರೆ ಎಂದು ಯುವಕ ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ.

ಯುವಕ ತನ್ನ ಈ ಸಿಹಿ ಕ್ಷಣಗಳ ಹಿಂದಿನ ಕಾರಣಗಳನ್ನು ಕೂಡ ಹಂಚಿಕೊಂಡಿದ್ದಾನೆ. ಚಿಕ್ಕ ವಯಸ್ಸಿನಿಂದಲೂ, ತನ್ನ ಅಜ್ಜಿ ತನ್ನ ಜೀವನದಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ, ಮುಖ್ಯವಾಗಿ ತನ್ನ ಪೋಷಕರು ಕೆಲಸಕ್ಕೆ ಹೋದಾಗ ತನ್ನ ಹಾಗೂ ತನ್ನ ತಂಗಿಯನ್ನು ಬೆಳೆಸಿದ್ದಾರೆ. ಅವರಿಗೆ ಅಡುಗೆ ಮಾಡಲು ಮತ್ತು ಮನೆಕೆಲಸದಲ್ಲಿ ಅಜ್ಜಿ ಸಹಾಯ ಮಾಡಿದ್ದಾರೆ. ಈಗ ತನ್ನ ಕೆಲಸದ ಕಾರಣದಿಂದಾಗಿ ಆಕೆಯೊಂದಿಗೆ ವಾಸಿಸಲು ಸಾಧ್ಯವಾಗಿಲ್ಲ.
ಆದರೆ ಅವರ ಭಾವನಾತ್ಮಕ ಸಂಪರ್ಕವು ಫೋನ್ ಕರೆಗಳು ಮತ್ತು ಬೆಂಗಳೂರಿನಲ್ಲಿ ಅವರ ವಿಶೇಷ ಸಂಪ್ರದಾಯವಾಗಿಸಿಕೊಂಡಿರುವ ಪ್ರತಿ 15 ದಿನಗಳಿಗೊಮ್ಮೆ ಕಾರಿನಲ್ಲಿ ಸುತ್ತಾಡಿ ಆನಂದ ಕ್ಷಣಗಳನ್ನು ಕಳೆಯುವ ಮೂಲಕ ಬಲವಾಗಿ ಉಳಿದಿದೆ. ಅಜ್ಜಿಯ ಪಾತ್ರವನ್ನು ಮೀರಿ ತನ್ನ ಅನುಭವಗಳು ಮತ್ತು ಆಕೆಯ ವಿಭಿನ್ನ ವ್ಯಕ್ತಿತ್ವಗಳ ಬಗ್ಗೆ ಯುವಕ ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ.

ವಯಸ್ಸಾದವರನ್ನು ವೃದ್ಧಾಶ್ರಮದಲ್ಲಿ ಬಿಟ್ಟು ಬರುವ ಇಂದಿನ ಕಾಲದಲ್ಲಿ ಈ ಯುವಕ ತೋರುತ್ತಿರುವ ಈ ಪ್ರೀತಿಗೆ ಹಲವರು ಫಿದಾ ಆಗಿದ್ದಾರೆ. ಅವರಿಬ್ಬರ ಬಂಧವು ಹೊಸ ನೆನಪುಗಳನ್ನು ರಚಿಸಲು ಒಂದು ಸಾಧನವಾಗಿ ಕಾರ್ಯನಿರ್ವಹಿಸುತ್ತಿದೆ. ಮುಖ್ಯವಾಗಿ ಯುವಕ ಅಜ್ಜಿಯನ್ನು ತಮ್ಮ ಕೊನೆ ದಿನಗಳಲ್ಲಿ ಖುಷಿಯಾಗಿಡಬೇಕೆಂಬ ನಿರ್ಣಯವು ವೃದ್ಧೆಯ ಮುಖದಲ್ಲಿ ಎಲ್ಲಿಲ್ಲದ ಸಂತೋಷವನ್ನು ನೋಡುವಂತೆ ಮಾಡಿದೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications