ಪ್ರೇಕ್ಷಣೀಯ ಸ್ಥಳ ಜಪಾನ್‍ನ ಮಹಾ 'ಹಿಮಗೋಡೆ'
ನೀವು ಚೀನಾದ ಅತಿ ಪುರಾತನ ಹಾಗೂ ವಿಶ್ವ ಪ್ರಸಿದ್ಧ ಮಹಾ ಗೋಡೆ (Great Wall of China) ಬಗ್ಗೆ ಕೇಳಿರುವೀರಾ. ಮತ್ತೆ ಇದ್ಯಾವುದು ಮಹಾ ಹಿಮಗೋಡೆ ಅಂತ ಗಾಬರಿಯಾಗಬೇಡಿ. ಈ ಅನನ್ಯ ಹಾಗೂ ಅದ್ಭುತ ಹಿಮಗೋಡೆ ಉತ್ತರ ಜಪಾನ್ ನ ಆಲ್ಪ್ ಪರ್ವತ ಶಿಖರದಲ್ಲಿ ಹಾದು ಹೋಗುತ್ತಿದೆ.
ಸಾರಿಗೆ ಸಂಚಾರವನ್ನು ಸುಗಮಗೊಳಿಸಲು ಅತ್ಯಂತ ಮನೋಹರವಾಗಿ ಈ ಹಿಮ ಪರ್ವತವನ್ನು ಕೆತ್ತನೆ ಮಾಡಲಾಗಿದೆ. ಪ್ರಸ್ತುತ ವಿಶ್ವದಲ್ಲೇ ಅತ್ಯಂತ ಪ್ರೇಕ್ಷಣೀಯ ಪ್ರಕೃತಿ ರಮನೀಯ ಸಂಚಾರ ಪ್ರದೇಶಗಳಲ್ಲಿ ಇದು ಒಂದೆನಿಸಿಕೊಂಡಿದೆ.

ಇದುವೇ ಟಟೆಯಮಾ ಕುರೋಬ್ ಆಲ್ಪೈನ್ ರೂಟ್ (Tateyama Kurobe Alpine Route).ಕನ್ನಡಿಗರಾದ ನಮಗೆ ಈ ಜಪಾನ್ ಹೆಸರನ್ನು ಉಲ್ಲೇಖಿಸುವುದು ಸ್ವಲ್ಪ ಕಷ್ಟವೆನಿಸಬಹುದು.

ಎರಡು ಬದಿಗಳಿಂದ ಹಿಮದಿಂದ ಆವೃತ್ತವಾದ ಗೋಡೆಯಿಂದ ನಿರ್ಮಿಸಲ್ಪಟ್ಟಿರುವ ಇಲ್ಲಿ ಬಸ್ ಗಳ ಜೊತೆ ಇತರ ಸಣ್ಣ ವಾಹಗಳನ್ನು ಸಂಚಾರವನ್ನು ಹಮ್ಮಿಕೊಳ್ಳುತ್ತಿದೆ.

1971ನೇ ಇಸವಿಯಲ್ಲೇ ತೆರೆದುಕೊಂಡಿರುವ ಈ ಹಾದಿಯು ಟೊಯಾಮಾದ ನಗರಿಂದ (Toyama City) ಓಮಾಚಿ ನಗರವನ್ನು (Omachi Town) ಸಂಪರ್ಕಿಸುತ್ತದೆ.

ಆದರೆ ಹಿಮಪಾತ ತೀವ್ರವಾದ ಶೈತ್ಯಕಾಲದಲ್ಲಿ ಇಲ್ಲಿ ಸಂಚಾರವನ್ನು ಸಂಪೂರ್ಣವಾಗಿ ಮುಚ್ಚುಗಡೆಗೊಳಿಸಲಾಗುತ್ತದೆ. ಇನ್ನು ಕೆಲವು ಪ್ರದೇಶಗಳಲ್ಲಿ ಖಾಸಗಿ ವಾಹನಗಳಿಗೂ ನಿರ್ಬಂಧವನ್ನು ವಿಧಿಸಲಾಗುತ್ತದೆ.

ಈ ಹಿಮ ಗೋಡೆಯು 20 ಮೀಟರ್ ಗಳಷ್ಟು ಎತ್ತರವನ್ನು ಹೊಂದಿದೆ. ಇನ್ನು ಆಗಿಂದಾಗೇ ಸಣ್ಣ ಮಾತ್ರದ ಹಿಮಪಾತ ಸರ್ವೇ ಸಾಮಾನ್ಯವಾಗಿದ್ದು, ಸಂಚಾರಿಗಳಿಗೆ ಅದ್ಭುತ ಅನುಭವ ನೀಡುತ್ತದೆ.

ಇನ್ನು ಬೇಸಿಗೆ ಕಾಲದಲ್ಲಿ ಹೂ ಬಿಡುವ ಇಲ್ಲಿನ ಗಿಡ ಮರಗಳು ಇಲ್ಲಿನ ಪ್ರದೇಶವನ್ನು ಪ್ರಕೃತಿ ರಮಣೀಯವಾಗಿಸುತ್ತದೆ.

ಅಂತೆಯೇ ವಿನೋದ ಸಂಚಾರಿಗಳಿಗಾಗಿ ರೋಪ್ ವೇ ಸೇವೆಯನ್ನು ಇಲ್ಲಿ ನೀಡಲಾಗುತ್ತದೆ. ಇದು ಎತ್ತರದ ಪರ್ವತ ಶಿಖರಗಳ ನಡುವೆ ಸಮಗ್ರ ವೀಕ್ಷಣೆಯು ಪ್ರವಾಸಿಗರಿಗೆ ರೋಮಾಂಚನವನ್ನುಂಟು ಮಾಡುತ್ತದೆ.

ಪ್ರಮುಖ ಆಕರ್ಷಣೆಗಳು
ಹೈಲ್ಯಾಂಡ್ ಬಸ್, ಟಟೆಯಾಮಾ ಕೇಬಲ್ ಕಾರ್, ಟೊಯಾಮಾ ಚಿಹೋ ರೈಲ್ವೇ, ರೋಪ್ ವೇ, ಟಟೆಯಾಮಾ ಟ್ರಾಲಿ ಬಸ್, ಕುರೊಬ್ ಅಣೆಕಟ್ಟು ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ.

ಜಪಾನ್ ಹಿಮಗೋಡೆಯ ಮಗದೊಂದು ವರ್ಣಮಯ ನೋಟ

ಈಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ.


Click it and Unblock the Notifications








