Just In
- 46 min ago
ಎಲೆಕ್ಟ್ರಿಕ್ ಬಳಿಕ ಸಿಎನ್ಜಿ ಕಾರುಗಳ ವಿಭಾಗದಲ್ಲೂ ಪಾರುಪತ್ಯ ಸಾಧಿಸಲು ಸಜ್ಜಾಗುತ್ತಿದೆ ಟಾಟಾ
- 46 min ago
ಹೊಸ ಮಹೀಂದ್ರಾ ಎಲೆಕ್ಟ್ರಿಕ್ XUV700 ಟೀಸರ್ ಬಿಡುಗಡೆ... ಫೆ.10 ರಂದು BE ಸರಣಿ SUV ಗಳ ಪ್ರದರ್ಶನ
- 1 hr ago
ಭಾರತದಲ್ಲಿ ಬಿಡುಗಡೆಯಾಗಲಿವೆ ಹೋಂಡಾದ 3 ಕಾರುಗಳು: ಇವು ಬಂದ್ರೆ...!
- 2 hrs ago
ಬಿಡುಗಡೆಗೂ ಮುನ್ನವೇ ರಸ್ತೆಯಲ್ಲಿ ಕಾಣಿಸಿಕೊಂಡ ಮಾರುತಿ ಜಿಮ್ನಿ 5-ಡೋರ್ ವರ್ಷನ್
Don't Miss!
- News
ಮಾಜಿ ಡಿಸಿಎಂ ಪರಮೇಶ್ವರ್ ಜೊತೆಗೆ ಕೋಲಾರದಿಂದ ಪ್ರಜಾಧ್ವನಿ ಯಾತ್ರೆ ಆರಂಭಿಸಿದ ಡಿ.ಕೆ.ಶಿವಕುಮಾರ್
- Movies
ಬೆಂಗಳೂರಲ್ಲಿ 2ನೇ ವಾರಕ್ಕೆ 250 ಶೋ ಕಳೆದುಕೊಂಡ ಕ್ರಾಂತಿ, ಪಠಾಣ್ಗೆ ಹೆಚ್ಚು ಶೋ; ಕನ್ನಡಿಗರ ಆಕ್ರೋಶ!
- Sports
ಎಲ್ಲಾ ಮಾದರಿಯ ಕ್ರಿಕೆಟ್ಗೆ ವಿದಾಯ ಘೋಷಿಸಿದ 2007ರ ವಿಶ್ವಕಪ್ ಹೀರೋ ಜೋಗಿಂದರ್ ಶರ್ಮಾ
- Technology
ಅರ್ಧಕೋಟಿಗೂ ಅಧಿಕ ಬೆಲೆಯಲ್ಲಿ ಈ ಹಳೇ ಐಫೋನ್ ಮಾರಾಟ!..ಅದ್ಹೇಗೆ ಸಾಧ್ಯ ಅಂತೀರಾ!?
- Finance
ಅಮುಲ್ ಹಾಲಿನ ದರ ಮತ್ತೆ 3 ರೂ ಏರಿಕೆ, ನೂತನ ದರ ಪರಿಶೀಲಿಸಿ
- Lifestyle
Maha Shivratri 2023 : ಮಹಾಶಿವರಾತ್ರಿ ದಿನಾಂಕ, ಪೂಜಾ ಮುಹೂರ್ತ, ಮಹತ್ವ, ಆಚರಣೆ ಹಿನ್ನೆಲೆ ಏನು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವಧುವನ್ನು ಮನೆಗೆ ಕರೆದೊಯ್ಯಲು ತಂದೆಯ ಹಳೆಯ ಮಾರುತಿ 800 ಕಾರು ಬಳಿಸಿದ ಕೆನಡಾದ ಎನ್‌ಆರ್‌ಐ
ಸಿರಿವಂತರು ತಮ್ಮ ಮದುವೆಯನ್ನು ಬಹಳ ಅದ್ದೂರಿಯಾಗಿ ನಡೆಸುತ್ತಾರೆ. ಮದುವೆಗಾಗಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತಾರೆ. ಮದುವೆಗೆ ವಧು ವರರು ಐಷಾರಾಮಿ ಕಾರುಗಳಲ್ಲಿ ಬರಲು ಇಷ್ಟಪಡುತ್ತಾರೆ. ಇನ್ನು ಇತ್ತೀಚೆಗೆ ಕೆಲವು ಮದುವೆಗಳಲ್ಲಿ ವಧು ವರರು ಹೆಲಿಕಾಪ್ಟರ್ ಗಳಲ್ಲಿ ಬರುವುದು ಹೊಸ ಟ್ರೇಂಡ್ ಆಗಿದೆ.
ಆದರೆ ಇತ್ತೀಚೆಗೆ ಪಂಜಾಬ್ ನಲ್ಲಿ ಸಿರಿವಂತ ಮನೆಯ ವರ ತಮ್ಮ ತಂದೆಯ ಹಳೆಯ ಮಾರುತಿ 800 ಕಾರಿನಲ್ಲಿ ಬಂದು ಸುದ್ದಿಯಾಗಿದ್ದಾರೆ. ವರ ಹಳೆಯ ಕಾರಿನಲ್ಲಿ ಬರುವ ವೀಡಿಯೊವನ್ನು ಪಂಜಾಬ್ ನೇಷನ್ ಟಿವಿ ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಲಾಗಿದೆ. ಕೆನೆಡಾದಿಂದ ವರನು ಪಂಜಾಬ್ ನಲಿರುವ ತಮ್ಮ ಮನೆಗೆ ಆಗಮಿಸಿದ್ದಾನೆ. ವರನ ತಂದೆಯು ಹಳೆಯ ಮಾರುತಿ 800 ಕಾರನ್ನು ಹೊಂದಿದ್ದಾರೆ. ಆ ಕಾರು ವಧುವಿನ ತಂದೆಯ ಮೆಚ್ಚಿನ ಕಾರ್ ಆಗಿತ್ತು. ಅಲ್ಲದೇ ಈ ಕಾರಿನೊಂದಿಗೆ ಹಲವಾರು ನೆನಪುಗಳನ್ನು ಹೊಂದಿದ್ದಾರೆ.
ವಧುವನ್ನು ಮನೆಗೆ ಕರೆದುಕೊಂಡು ಹೋಗಲು ಐಷಾರಾಮಿ ಕಾರಿನ ಬದಲು ತಂದೆಯ ಮೆಚ್ಚಿನ ಮಾರುತಿ 800 ಕಾರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಕೆಲವರು ಮದುವೆಗೆ ವರು ವರನ್ನು ಕರೆದೊಯ್ಯಲು ಭಾಡಿಗೆಗೆ ಐಷಾರಾಮಿ ಕಾರು ಮಾಡುತ್ತಾರೆ. ಆದರೆ ಇವರು ತಮ್ಮ ತಂದೆಯ ಮೆಚ್ಚಿನ ಕಾರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಮದುವೆಯಲ್ಲಿ ವಧು ವರನು ಐಷಾರಾಮಿ ಕಾರನ್ನು ಬಳಿಸಿ ಶೀಮಂತಿಕೆಯನ್ನು ಪ್ರದರ್ಶಿಸುವಾಗ ಇವರು ಸಾಮಾನ್ಯ ಮಾರುತಿ 800 ಕಾರನ್ನು ಬಳಿಸಿ ಮಾದರಿಯಾಗಿದ್ದಾರೆ.
ಕೆಲವರು ಬಾಡಿಗೆಗೆ ಐಷಾರಾಮಿ ಕಾರುಗಳನ್ನು ಮಾಡಿ ಅನಗತ್ಯ ಖರ್ಚುಗಳನ್ನು ಮಾಡುತ್ತಾರೆ. ಅಂತಹವರಿಗೆ ಇವರು ಮಾದರಿಯಾಗಿದೆ. ಇನ್ನು ವಧು ವರರು ಬಳಿಸಿ ಮಾರುತಿ 800 ಕಾರಿನ ಬಗ್ಗೆ ಹೇಳುವುದಾದರೆ, ಮಾರುತಿ ಸುಜುಕಿ ಭಾರತದ ಬಹುದೊಡ್ಡ ಕಾರು ತಯಾರಕ ಕಂಪನಿಯಾಗಿದೆ. ಭಾರತದಲ್ಲಿ ಮಾರುತಿ ಸುಜುಕಿ ಕಾರುಗಳು ಬಹಳಷ್ಟು ಜನಪ್ರಿಯವಾಗಿವೆ. ಮಾರುತಿ ಸುಜುಕಿ ಪ್ರತಿವರ್ಷ ದೇಶದಲ್ಲಿ ಲಕ್ಷಾಂತರ ಕಾರುಗಳನ್ನು ಮಾರಾಟ ಮಾಡುತ್ತದೆ. ಮಾರುತಿ 800, ಮಾರುತಿ ಕಂಪನಿಯ ಜನಪ್ರಿಯ ಕಾರ್ ಆಗಿದೆ.
ಎರಡು ದಶಕಗಳಿಂದ ಮಾರುಕಟ್ಟೆಯಲ್ಲಿದ್ದ ಈ ಕಾರಿನ ಉತ್ಪಾದನೆಯನ್ನು ಈಗ ನಿಲ್ಲಿಸಲಾಗಿದೆ. ಇನ್ನು ಕೆಲವರು ಈ ಕಾರನ್ನು ಮಾಡಿಫೈಗೊಳಿಸುತ್ತಾರೆ. ಈ ಕಾರನ್ನು ಸ್ಪೋರ್ಟ್ಸ್ ಕಾರ್ ರೀತಿಯಲ್ಲಿ ಮಾಡಿಫೈ ಮಾಡಲಾಗಿದೆ. ಈ ಕಾರಿನ ರೂಫ್ ಅನ್ನು ಕನ್ವರ್ಟಿಬಲ್ ಮಾಡಲಾಗಿದೆ. ಮಾರುತಿ 800, 4 ಸೀಟುಗಳ ಕಾರು ಆಗಿದ್ದು, ಮಾಡಿಫೈಗೊಂಡ ಕಾರಿನ ಹಿಂಬದಿಯಲ್ಲಿದ್ದ ಎರಡು ಸೀಟುಗಳನ್ನು ತೆಗೆದುಹಾಕಲಾಗಿದೆ. ಕಾರಿನ ಮುಂಭಾಗದ ರಚನೆಯು ಮಾರುತಿ 800ನಂತಿದ್ದರೆ, ಹಿಂದಿನ ರಚನೆಯನ್ನು ಮತ್ತೊಂದು ಕಾರಿನಿಂದ ತೆಗೆದುಕೊಳ್ಳಲಾಗಿದೆ.
ಇನ್ನು ಮಾಡಿಫೈಗೊಂಡ ಕಾರು ಗಾಢ ಕೆಂಪು ಬಣ್ಣವನ್ನು ಹೊಂದಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಕಾರಿನ ಮುಂಭಾಗದ ಬಂಪರ್ ಅನ್ನು ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಲಾಗಿದೆ. ಮೂಲ ಹೆಡ್‌ಲೈಟ್ ಅನ್ನು 6 ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳೊಂದಿಗೆ ಬದಲಿಸಲಾಗಿದೆ. ಕಾರಿನ ಹಿಂಭಾಗವು ಸೆಡಾನ್ ಕಾರಿನಂತೆ ಕಾಣುತ್ತದೆ. ಸ್ಪೋರ್ಟಿ ಲುಕ್ ನೀಡಲು ಕಾರಿನ ಬೂಟ್ ಮೇಲೆ ಸ್ಪಾಯ್ಲರ್ ಅಳವಡಿಸಲಾಗಿದೆ. ಹಿಂಭಾಗದಲ್ಲಿರುವ ಎರಡು ಸೀಟುಗಳನ್ನು ತೆಗೆದುಹಾಕಿರುವುದರಿಂದ ಬೂಟ್‌ನಲ್ಲಿ ಲಗೇಜ್‌ಗಾಗಿ ಹೆಚ್ಚು ಸ್ಥಳವಕಾಶ ಸಿಗಲಿದೆ.
ಈ ಕಾರು ಹೊಸ ಬ್ಯಾಕ್ ವೀವ್ ಮಿರರ್ ಅನ್ನು ಹೊಂದಿದ್ದು ಐಷಾರಾಮಿಯಾಗಿ ಕಾಣುತ್ತದೆ. ಇದರ ಜೊತೆಗೆ ಹೊಸ ಅಲಾಯ್ ವ್ಹೀಲ್ ಹಾಗೂ ದೊಡ್ಡ ಟಯರ್‌ಗಳನ್ನು ಅಳವಡಿಸಲಾಗಿದೆ. ಈ ಕಾರಿನ ಮಾಡಿಫೈಗಾಗಿ ರೂ.2.5 ಲಕ್ಷ ಖರ್ಚು ಮಾಡಲಾಗಿದೆ. ಈ ಕಾರಿನ ಮಾಲೀಕರು ಕಾರುಗಳನ್ನು ಮಾಡಿಫೈಗೊಳಿಸುವುದನ್ನು ಇಷ್ಟಪಡುವುದಾಗಿ ಹೇಳಿದ್ದಾರೆ. ಇದೇ ರೀತಿ ಹಲವು ಕಾರುಗಳನ್ನು ಮಾಡಿಫೈಗೊಳಿಸಿರುವುದಾಗಿ ಹೇಳಿದ್ದಾರೆ. ಕಾರಿನ ಫಿನಿಷಿಂಗ್ ಸರಿಯಾಗಿ ಬಂದಿಲ್ಲವಾದರೂ,
ಈ ಕಾರು ರಸ್ತೆಗಿಳಿದರೆ ಜನರ ಗಮನವನ್ನು ತನ್ನತ್ತ ಸೆಳೆಯುತ್ತದೆ. ಇದೇ ರೀತಿ ಹಲವಾರು ಜನರು ತಮ್ಮ ಹಳೆಯ ಮಾರುತಿ 800 ಕಾರನ್ನು ಮಾಡಿಫೈಗೊಳಿಸುತ್ತಾರೆ. ಇನ್ನು ಈ ಹಳೆಯ ಕಾರಿನೊಂದಿಗೆ ಹಲವಾರು ಜನರು ಭಾವನತ್ಮಾಕ ಸಂಬಂಧವನ್ನು ಹೊಂದಿರುತ್ತಾರೆ. ಇದರಿಂದ ಹಲವಾರು ಜನರು ಮಾರಾಟ ಮಾಡದೆ ಅವರು ಇಟ್ಟುಕೊಳ್ಳುತ್ತಾರೆ. ವಧುವನ್ನು ಮನೆಗೆ ಕರೆದುಕೊಂಡು ಹೋಗಲು ಐಷಾರಾಮಿ ಕಾರಿನ ಬದಲು ಈ ಮಾರುತಿ 800 ಕಾರನ್ನು ಬಳಿಸಿ ಮಾದರಿಯಾಗಿದ್ದಾರೆ.