ಮದುವೆ ಮೆರವಣಿಗೆಗೆ ಬುಲ್ಡೋಜರ್ ಬಳಿಸಿದ ವರ: ಪೊಲೀಸರ ಅತಿಥಿಯಾದ ಚಾಲಕ

ಮದುವೆ ಸಮಾರಂಭದಲ್ಲಿ ಮದುಮಗನು ಕುದುರೆಯ ಮೇಲೆ ಕುಳಿತು ಮೆರವಣಿಗೆಯಲ್ಲಿ ಸಾಗುವುದು ವಾಡಿಕೆ. ಇನ್ನು ಕೆಲವರು ಬೆಂಜ್, ಆಡಿ ನಂತಹ ದುಬಾರಿ ಕಾರುಗಳನ್ನು ಅಲಂಕರಿಸಿ ಮೆರವಣಿಗೆಯಲ್ಲಿ ಬರುತ್ತಾರೆ. ಇದಕ್ಕಾಗಿ ದುಬಾರಿ ಐಷಾರಾಮಿ ಕಾರುಗಳನ್ನು ಬಾಡಿಗೆ ಪಡೆಯುವವರೂ ಇದ್ದಾರೆ. ಆದರೆ ಇಲ್ಲೊಬ್ಬ ಮೆರವಣಿಗೆಗಾಗಿ ಬುಲ್ಡೋಜರ್‌ ಬಾಡಿಗೆ ಪಡೆದಿದ್ದಾನೆ.

 ಮದುವೆ ಮೆರವಣಿಗೆಗೆ ಬುಲ್ಡೋಜರ್ ಬಳಿಸಿದ ವರ: ಪೊಲೀಸರ ಅಥಿತಿಯಾದ ಚಾಲಕ

ಮದುವೆಗೆ ವಿಭಿನ್ನವಾಗಿ ಮೆರೆವಣಿಗೆ ಮಾಡಬೇಕು ಎಂಬ ಉದ್ದೇಶದಿಂದ ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ ವರನು ಕುದುರೆ ಅಥವಾ ಅಲಂಕೃತ ವಾಹನಗಳ ಬದಲಿಗೆ ಬುಲ್ಡೋಜರ್‌ನಲ್ಲಿ ಕಲ್ಯಾಣ ಮಂಟಪಕ್ಕೆ ಆಗಮಿಸಿದ್ದಾನೆ. ಮದುವೆಯೇನೋ ಮುಗಿದಿದೆ ಆದರೆ ಇಲ್ಲಿ ಸಮಸ್ಯೆ ಎದುರಾಗಿರುವುದು ಬುಲ್ಡೋಜರ್ ಚಾಲಕನಿಗೆ.

ಮದುವೆ ಮೆರವಣಿಗೆಗೆ ಬುಲ್ಡೋಜರ್ ಬಳಿಸಿದ ವರ: ಪೊಲೀಸರ ಅಥಿತಿಯಾದ ಚಾಲಕ

ಸಿವಿಲ್ ಇಂಜಿನಿಯರ್ ಆಗಿರುವ ವರ ಆಂಗಸ್ ಜೈಸ್ವಾಲ್ ಎಂಬಾತ ಕುದುರೆಯ ಬದಲು ಮದುವೆ ಮೆರವಣಿಗೆಗೆ ಬುಲ್ಡೋಜರ್ ಬಳಸಿದ್ದಾನೆ. ಆಂಗಸ್ ಜೈಸ್ವಾಲ್ ಬುಲ್ಡೋಜರ್ ಮುಂಭಾಗದ 'ಲೋಡಿಂಗ್ ಬಕೆಟ್' ಪ್ರದೇಶವನ್ನು ಅಲಂಕರಿಸಿ ಅದರೊಳಗೆ ಕುಳಿತು ಮೆರವಣಿಗೆಯಲ್ಲಿ ಆಗಮಿಸಿದ್ದಾನೆ. ಇದೇ ವೇಳೆ ಲೋಡಿಂಗ್‌ ಬಕೆಟ್‌ನಲ್ಲಿ ಯಾವುದೇ ಸೇಫ್ಟಿ ಇಲ್ಲದೇ ಇನ್ನೂ ಕೆಲವರು ಕುಳಿತ್ತಿದ್ದರು.

ಮದುವೆ ಮೆರವಣಿಗೆಗೆ ಬುಲ್ಡೋಜರ್ ಬಳಿಸಿದ ವರ: ಪೊಲೀಸರ ಅಥಿತಿಯಾದ ಚಾಲಕ

ನನ್ನ ಮದುವೆಯನ್ನು ಸ್ಮರಣೀಯವಾಗಿಸುವ ಸಲುವಾಗಿ ನಾನು ಈ ರೀತಿ ಮದುವೆ ಮನೆಗೆ ಬರಲು ನಿರ್ಧರಿಸಿದೆ. ಬುಲ್ಡೋಜರ್‌ನ ಲೋಡರ್ ಬಕೆಟ್‌ನ್ನು ಮದುವೆ ಸಮಾರಂಭಕ್ಕೆ ತಕ್ಕಂತೆ ಅಲಂಕರಿಸಲಾಗಿತ್ತು. ನಾನು ಮದುವೆ ಮೆರವಣಿಗೆ ವೇಳೆ ಬುಲ್ಡೋಜರ್‌ನಲ್ಲಿ ಆರಾಮದಾಯಕವಾಗಿ ಕುಳಿತಿದ್ದೆ ಎಂದು ವರ ಹೇಳಿದ್ದಾನೆ.

ಮದುವೆ ಮೆರವಣಿಗೆಗೆ ಬುಲ್ಡೋಜರ್ ಬಳಿಸಿದ ವರ: ಪೊಲೀಸರ ಅಥಿತಿಯಾದ ಚಾಲಕ

ಮದುವೆಯ ಮೆರವಣಿಗೆ ಮುಗಿದ ನಂತರ ಅದರ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಫೋಟೋಗಳು ಮತ್ತು ವಿಡಿಯೋಗಳು ಸ್ಥಳೀಯ ಸರ್ಕಾರಿ ಅಧಿಕಾರಿಗಳಿಗೂ ತಲುಪಿವೆ. ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಪ್ರಸ್ತುತ ಕ್ರಮಕೈಗೊಂಡಿದ್ದಾರೆ.

ಮದುವೆ ಮೆರವಣಿಗೆಗೆ ಬುಲ್ಡೋಜರ್ ಬಳಿಸಿದ ವರ: ಪೊಲೀಸರ ಅಥಿತಿಯಾದ ಚಾಲಕ

ಮೋಟಾರು ವಾಹನ ಕಾನೂನಿನ ಪ್ರಕಾರ ಇಂತಹ ಸಮಾರಂಭಗಳಿಗೆ ಬುಲ್ಡೋಜರ್ ಅನ್ನು ಬಳಸುವುದು ಅಪರಾದವಾಗಿದ್ದು, ಮೆರವಣಿಗೆಗೆ ಬಳಸಿದ ಬುಲ್ಡೋಜರ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸುವಂತೆ ಉನ್ನತ ಪೊಲೀಸ್ ಅಧಿಕಾರಿಗಳು ಆದೇಶಿಸಿದ್ದಾರೆ. ಅದರಂತೆ ಅಧಿಕಾರಿಗಳು ಬುಲ್ಡೋಜರ್ ಚಾಲಕ ರವಿ ಪರಸ್ಕರ್‌ಗೆ ಕೌನ್ಸಿಲಿಂಗ್ ನೀಡಿ 5000 ರೂ. ದಂಡ ವಿಧಿಸಿದ್ದಾರೆ.

ಮದುವೆ ಮೆರವಣಿಗೆಗೆ ಬುಲ್ಡೋಜರ್ ಬಳಿಸಿದ ವರ: ಪೊಲೀಸರ ಅಥಿತಿಯಾದ ಚಾಲಕ

ಬುಲ್ಡೋಜರ್‌ಗಳಂತಹ ಭಾರೀ ವಾಹನಗಳನ್ನು ವಾಣಿಜ್ಯ ಬಳಕೆಗೆ ಮಾತ್ರ ಬಳಸಬೇಕು. ಅವುಗಳನ್ನು ಸಾರ್ವಜನಿಕ ಸಾರಿಗೆಯಂತೆ ಬಳಸುವಂತಿಲ್ಲ. ಇಂತಹ ವಾಹನಗಳನ್ನು ನುರಿತ ಚಾಲಕ ಹಾಗೂ ಎಂಜಿನಿಯರ್‌ಗಳ ಸಮಕ್ಷದಲ್ಲಿ ಬೃಹತ್‌ ಕಾಮಗರಿಗಳಿಗಾಗಿ ಬಳಸಲಾಗುತ್ತದೆ. ಅಲ್ಲದೇ ಭದ್ರತೆಗಾಗಿ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ.

ಮದುವೆ ಮೆರವಣಿಗೆಗೆ ಬುಲ್ಡೋಜರ್ ಬಳಿಸಿದ ವರ: ಪೊಲೀಸರ ಅಥಿತಿಯಾದ ಚಾಲಕ

ಆದರೆ ಮದುವೆಯಲ್ಲಿ ಯಾವುದೇ ಸುರಕ್ಷತೆಗಳನ್ನು ತೆಗೆದುಕೊಳ್ಳದೇ ಬುಲ್ಡೋಜರ್ ಲೋಡ್‌ ಬಕೆಟ್‌ನಲ್ಲಿ ಹಲವರನ್ನು ಕುಳ್ಳಿರಿಸಿ ಮೆರವಣಿಗೆ ಮಾಡಿ ಇದೀಗ ಪೊಲೀಸರ ಅಥಿತಿಗಳಾಗಿದ್ದಾರೆ. ಮೆರವಣಿಗೆಯಲ್ಲಿ ಬಂದ ವರನು ಸಿವಿಲ್ ಇಂಜಿನಿಯರ್ ಆಗಿದ್ದು, ಆತ ಈ ಹಿಂದೆ ನಿರ್ಮಾಣ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಅಂದಿನಿಂದ ಬುಲ್ಡೋಜರ್‌ಗಳ ಬಳಕೆ ಅವರ ದಿನಚರಿಯ ಭಾಗವಾಗಿದೆ.

ಮದುವೆ ಮೆರವಣಿಗೆಗೆ ಬುಲ್ಡೋಜರ್ ಬಳಿಸಿದ ವರ: ಪೊಲೀಸರ ಅಥಿತಿಯಾದ ಚಾಲಕ

ಇದಕ್ಕಾಗಿಯೇ ಆಂಗಸ್ ಜೈಸ್ವಾಲ್ ಸಾಂಪ್ರದಾಯಿಕ ಕುದುರೆಯ ಬದಲು ಬುಲ್ಡೋಜರ್‌ನಲ್ಲಿ ಮದುವೆ ಮೆರವಣಿಗೆ ನಡೆಸಿದ್ದಾರೆ. ಭಾರತದಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ಇದೇ ಮೊದಲೇನಲ್ಲ, ಈ ಹಿಂದೆಯೂ ದೇಶದಲ್ಲಿ ಇಂತಹ ಘಟನೆಗಳು ನಡೆದಿವೆ.

ಮದುವೆ ಮೆರವಣಿಗೆಗೆ ಬುಲ್ಡೋಜರ್ ಬಳಿಸಿದ ವರ: ಪೊಲೀಸರ ಅಥಿತಿಯಾದ ಚಾಲಕ

ಕೆಲವು ವರ್ಷಗಳ ಹಿಂದೆ ನಮ್ಮ ರಾಜ್ಯದಲ್ಲೂ ಇಂತಹದ್ದೇ ಘಟನೆ ನಡೆದಿತ್ತು. ಈ ಘಟನೆಯಲ್ಲಿ ವಧು-ವರರು ಬುಲ್ಡೋಜರ್ ಮುಂದೆ ಲೋಡಿಂಗ್ ಬಕೆಟ್‌ನಲ್ಲಿ ಕುಳಿತು ಮೆರವಣಿಗೆಯಲ್ಲಿ ಬಂದಿದ್ದರು. ಇವರಲ್ಲಿ ವರನೇ ಜೆಸಿಪಿ ಆಪರೇಟರ್ ಆಗಿದ್ದ ಕಾರಣ ಕೆಲಸದ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಲು ಮದುವೆಯ ಮೆರವಣಿಗೆಗೆ ಬುಲ್ಡೋಜರ್ ಬಳಸಿದ್ದನು.

ಮದುವೆ ಮೆರವಣಿಗೆಗೆ ಬುಲ್ಡೋಜರ್ ಬಳಿಸಿದ ವರ: ಪೊಲೀಸರ ಅಥಿತಿಯಾದ ಚಾಲಕ

ಇಂತಹ ವಿಭಿನ್ನ ಪ್ರಯತ್ನಗಳ ಮೂಲಕ ತಮ್ಮ ಹುಚ್ಚುತನವನ್ನು ತೋರಿಸಲು ಬಯಸುವವರು ಸುರಕ್ಷತೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಈ ರೀತಿಯ ಪ್ರಯತ್ನಗಳು ವಿಶೇಷವಾಗಿ ಸಾರ್ವಜನಿಕ ರಸ್ತೆಗಳಲ್ಲಿ ಅಪಾಯಕಾರಿಯಾಗಿರುತ್ತವೆ. ಪೊಲೀಸ್ ಅಧಿಕಾರಿಗಳೂ ಕ್ರಮ ಕೈಗೊಳ್ಳುವ ಅವಕಾಶಗಳಿರುವುದರಿಂದ ಎಚ್ಚರಿಕೆ ವಹಿಸುವುದು ಒಳಿತು.

ಮದುವೆ ಮೆರವಣಿಗೆಗೆ ಬುಲ್ಡೋಜರ್ ಬಳಿಸಿದ ವರ: ಪೊಲೀಸರ ಅಥಿತಿಯಾದ ಚಾಲಕ

ಉತ್ತರ ಭಾರತದಲ್ಲಿ ಇಂತಹ ಘಟನೆಗಳು ಹೆಚ್ಚಾಗಿ ವರದಿಯಾಗುತ್ತಿರುತ್ತವೆ. ಮದುವೆಗಾಗಿ ಯಾರೂ ಮಾಡದಂತಹ ವಿಭಿನ್ನ ಪ್ರಯತ್ನಗಳನ್ನು ಮಾಡಬೇಕು ಎಂಬ ಉದ್ದೇಶದಿಂದ ಹಲವರು ಸುರಕ್ಷತೆಯನ್ನು ಮರೆತು ಇಂತಹ ಕಾರ್ಯಗಳಿಗೆ ಕೈಹಾಕುತ್ತಾರೆ. ಇವು ಕೇವಲ ಅವರಿಗೆ ಮಾತ್ರವಲ್ಲದೇ ಅಕ್ಕ-ಪ್ಪಕದವರಿಗೂ ಕುತ್ತು ತರಬಹುದು.

ಮದುವೆ ಮೆರವಣಿಗೆಗೆ ಬುಲ್ಡೋಜರ್ ಬಳಿಸಿದ ವರ: ಪೊಲೀಸರ ಅಥಿತಿಯಾದ ಚಾಲಕ

ಇದೀಗ ಟ್ರೆಂಡ್ ಆಗಿ ಮಾರ್ಪಟ್ಟಿರುವ ಈ ವಿಭಿನ್ನ ಮೆರವಣಿಗೆಗಳು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿವೆ. ಸಾಕಷ್ಟು ಮಂದಿ ಕಾನೂನು ಏನು ಹೇಳುತ್ತದೆ ಎಂಬ ಪರಿಜ್ಞಾನವೇ ಇಲ್ಲದೇ ವಿಭಿನ್ನ ಮೆರವಣಿಗೆಗಳನ್ನು ಮಾಡುತ್ತಿದ್ದಾರೆ. ಇವುಗಳಿಗೆ ಬ್ರೇಕ್ ಹಾಕಲು ಪೊಲೀಸರು ಕೂಡ ಆಗಾಗ್ಗೆ ಇಂತಹ ಪ್ರಕರಣಗಳು ಕಂಡುಬಂದಾಗ ಪ್ರಕರಣ ದಾಖಲಿಸಿ ಎಚ್ಚರಿಕೆ ನೀಡುತ್ತಿದ್ದಾರೆ. ಆದರೂ ಇಂತಹ ಮೆರವಣಿಗೆಗಳು ನಿಂತಿಲ್ಲ.

ಮದುವೆ ಮೆರವಣಿಗೆಗೆ ಬುಲ್ಡೋಜರ್ ಬಳಿಸಿದ ವರ: ಪೊಲೀಸರ ಅಥಿತಿಯಾದ ಚಾಲಕ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಮದುವೆ ಸಮಾರಂಭಗಳು ಸಾಂಪ್ರದಾಯಿಕವಾಗಿ ನಡೆದರೆ ಸಾಕು, ಯಾರೋ ಮಾಡಿದರೆಂದು ನಾವು ಕೂಡ ವಿಭಿನ್ನ ಪ್ರಯತ್ನಗಳಿಗೆ ಕೈಹಾಕುವುದು ಒಳಿತಲ್ಲ. ಇಂತಹ ಪ್ರಯತ್ನಗಳು ಮಾಡಿದರು ಸಹ ಭದ್ರತೆ ಮುಖ್ಯ, ಅಲ್ಲದೇ ಆ ಪ್ರಯತ್ನಗಳಿಂದ ಕಾನೂನು ಉಲ್ಲಂಘನೆಯಾಗಲಿದೆಯೇ ಎಂಬುದನ್ನು ತಿಳಿದುಕೊಳ್ಳಬೇಕು. ಇಲ್ಲದಿದ್ದರೇ ಬುಲ್ಡೋಜರ್ ಚಾಲಕನಿಗೆ ಬಂದ ಪರಿಸ್ಥಿತಿಯೇ ನಿಮಗೂ ಬರಬಹುದು.

Most Read Articles

Kannada
English summary
Groom uses bulldozer for marriage procession in madhya pradesh
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X