4 ಲಕ್ಷ ಖರ್ಚು ಮಾಡಿ ಅದೃಷ್ಟದ 'ಮಾರುತಿ ವ್ಯಾಗನ್ಆರ್'ಗೆ ಅಂತ್ಯ ಸಂಸ್ಕಾರ ಮಾಡಿದ ಮಹಾನುಭಾವ.. ಸಾವಿರರು ಜನ ಭಾಗಿ!
ಹೊಸ ಕಾರು ಖರೀದಿ ಮಾಡಬೇಕು ಎಂಬುದು ಪ್ರತಿಯೊಬ್ಬರ ಕನಸು.. ಬಹುತೇಕರು ತಾವು ತೆಗೆದುಕೊಂಡ ಮೊದಲ ಕಾರನ್ನು ಕುಟುಂಬ ಸದಸ್ಯರಂತೆ ನೋಡಿಕೊಳ್ಳುತ್ತಾರೆ. ಎಷ್ಟೋ ಮಂದಿಯ ಜೀವನವನ್ನು ಇದೇ ಕಾರುಗಳು ಬದಲಾವಣೆ ಮಾಡಿರುವ ಹಲವು ಉದಾಹರಣೆಗಳನ್ನು ಕೂಡ ನೋಡಿದ್ದೇವೆ. ಇತ್ತೀಚೆಗೆ, ಗುಜರಾತ್‌ನಲ್ಲಿ ವ್ಯಕ್ತಿಯೊಬ್ಬ ತನ್ನ ಏಳಿಗೆಗೆ ನೆರವಾಗಿರುವ ಕಾರಿಗೆ ಸಂಪ್ರದಾಯ ಬದ್ದವಾಗಿ ಅಂತ್ಯ ಸಂಸ್ಕಾರ ಮಾಡಿ, ಭಾವಪೂರ್ವವಾಗಿ ವಿದಾಯ ಹೇಳಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ನೆಟ್ಟಿಗರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.
ಗುಜರಾತ್‌ನ ಅಮ್ರೇಲಿಯಲ್ಲಿ ಉದ್ಯಮಿ ಸಂಜಯ್ ಪೋಲಾರ ಅವರು, 12 ವರ್ಷಗಳ ಕಾಲ ತಮ್ಮ ಕುಟುಂಬದ ಏಳಿಗೆಗೆ ನೇರವಾದ ಮಾರುತಿ ಸುಜುಕಿ ವ್ಯಾಗನ್ಆರ್ (Maruti Suzuki WagonR) ಕಾರಿಗೆ ರೂ.4 ಲಕ್ಷ ಖರ್ಚು ಮಾಡಿ ಅಂತ್ಯ ಸಂಸ್ಕಾರ ಮಾಡಿದ್ದಾರೆ. ಹೂವಿನಿಂದ ಅಲಂಕೃತಗೊಂಡ ಕಾರನ್ನು ಮೆರವಣಿಗೆ ಮೂಲಕ ತಂದು, ತಮ್ಮದೇ ಕೃಷಿ ಜಮೀನಿನಲ್ಲಿ ಸಂಪ್ರದಾಯ ಬದ್ದವಾಗಿ ಪೂಜೆ ಸಲ್ಲಿಸಿ, ಸಾಮಾನ್ಯರ ರೀತಿಯಲ್ಲಿ ಮಣ್ಣು ಮಾಡಿದ್ದಾರೆ.

ಈ ವೇಳೆ ಕುಟುಂಬ ಸದಸ್ಯರು ಹಾಗೂ ಗ್ರಾಮಸ್ಥರು ಸೇರಿದಂತೆ 1,500ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. 'ವ್ಯಾಗನ್ಆರ್' ಕುರಿತಂತೆ ಸಂಜಯ್ ಪೋಲಾರ ಅವರು, ಭಾವನಾತ್ಮಕವಾಗಿ ಮಾತನಾಡಿದ್ದು, 'ಈ ಕಾರು ನಮ್ಮ ಕುಟುಂಬದ ಯಶಸ್ಸಿನ ಭಾಗವಾಗಿತ್ತು. ಅದನ್ನು ಮಾರಲು ಮನಸಾಗಲಿಲ್ಲ. ಹೀಗಾಗಿ ಗೌರವದಿಂದ ವಿದಾಯ ಹೇಳಲು ತೀರ್ಮಾನ ಮಾಡಿದೆವು' ಎಂದು ಹೇಳಿದ್ದಾರೆ.
ದೇಶೀಯ ಮಾರುಕಟ್ಟೆಯಲ್ಲಿ ಮೊದಲ ಮಾರುತಿ ಸುಜುಕಿ ವ್ಯಾಗನ್ಆರ್ ಹ್ಯಾಚ್‌ಬ್ಯಾಕ್‌ನ್ನು ಡಿಸೆಂಬರ್ 18, 1999 ರಂದು ಬಿಡುಗಡೆಯಾಗಿತ್ತು. ಸತತ ಎರಡು ದಶಕಗಳಿಂದ ಮಾರಾಟವಾಗುತ್ತಿರುವ ಈ ಕಾರು, ಲಕ್ಷಾಂತರ ಜನರ ಮನಸ್ಸನ್ನು ಗೆದ್ದಿದೆ. ಜನ ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೂ ಖರೀದಿ ಮಾಡಿದ್ದಾರೆ. ಇಂದಿಗೂ ದೊಡ್ಡ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ.

ಸದ್ಯ ಹೊಚ್ಚ ಹೊಸ ಮಾರುತಿ ಸುಜುಕಿ ವ್ಯಾಗನ್ಆರ್ ಕಾರು, ಕನಿಷ್ಠ ರೂ.5.54 ಹಾಗೂ ಗರಿಷ್ಠ ರೂ.7.33 ಲಕ್ಷ (ಎಕ್ಸ್ ಶೋರೂಂ - ಬೆಂಗಳೂರು) ಬೆಲೆಯನ್ನು ಒಳಗೊಂಡಿದೆ. ಎಲ್ಎಕ್ಸ್ಐ, ವಿಎಕ್ಸ್ಐ ಮತ್ತು ಜಡ್ಎಕ್ಸ್ಐ ಸೇರಿದಂತೆ ವಿವಿಧ ರೂಪಾಂತರಗಳ (ವೇರಿಯೆಂಟ್) ಆಯ್ಕೆಯನ್ನು ಹೊಂದಿದೆ. ಗ್ಯಾಲಂಟ್ ರೆಡ್, ಪೂಲ್‌ಸೈಡ್ ಬ್ಲೂ, ಸಾಲಿಡ್ ವೈಟ್ ಹಾಗೂ ಸಿಲ್ಕಿ ಸಿಲ್ವರ್ ಒಳಗೊಂಡಂತೆ ಹಲವು ಬಣ್ಣಗಳೊಂದಿಗೂ ಸಿಗುತ್ತದೆ.
ಈ ಕಾರು 1-ಲೀಟರ್ ಸಾಮರ್ಥ್ಯದ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್‌ನ್ನು ಹೊಂದಿದೆ. 5-ಸ್ಪೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಪಡೆದಿದೆ. ಪೆಟ್ರೋಲ್ ರೂಪಾಂತರಗಳು, 23.56 ರಿಂದ 25.19 ಕೆಎಂಪಿಎಲ್ ಹಾಗೂ ಸಿಎನ್‌ಜಿ ರೂಪಾಂತರಗಳು 33.48 ಕೆಎಂ/ಕೆಜಿ ವರೆಗೆ ಮೈಲೇಜ್ ನೀಡುತ್ತವೆ. ಇದರಲ್ಲಿ 5-ಮಂದಿ ಓಡಾಟ ನಡೆಬಹುದು.

ನೂತನ ವ್ಯಾಗನ್ಆರ್ ಹ್ಯಾಚ್‌ಬ್ಯಾಕ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್‌ಪ್ಲೇ (7-ಇಂಚು), 4-ಸ್ಪೀಕರ್ ಮ್ಯೂಸಿಕ್ ಸಿಸ್ಟಮ್, ಸ್ಟೀರಿಂಗ್-ಮೌಂಟೆಡ್ ಆಡಿಯೋ ಮತ್ತು ಫೋನ್ ಕಂಟ್ರೋಲ್ಸ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಯಾಣಿಕರ ರಕ್ಷಣೆಗಾಗಿ ಡುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಮತ್ತು ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್) ಅನ್ನು ಒಳಗೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications