ಗುಪ್ತವಾಗಿ ಸಾಗುತ್ತಿದ್ದ ಅಕ್ರಮ ಮದ್ಯ ಪತ್ತೆ ಹಚ್ಚಿದ ಪೊಲೀಸರು

ಗುಜರಾತ್‌ನಲ್ಲಿ ಆಲ್ಕೋಹಾಲ್ ಸೇರಿದಂತೆ ಎಲ್ಲಾ ರೀತಿಯ ಮದ್ಯವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದರೆ ಕದ್ದು ಮುಚ್ಚಿ ಮದ್ಯ ಮಾರಾಟ ಮಾಡಲಾಗುತ್ತದೆ. ಪೊಲೀಸರ ಕಟ್ಟೆಚ್ಚರದ ನಡುವೆಯೂ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೇ ಸಾಗಿದೆ.

ಗುಪ್ತವಾಗಿ ಸಾಗುತ್ತಿದ್ದ ಅಕ್ರಮ ಮದ್ಯ ಪತ್ತೆ ಹಚ್ಚಿದ ಪೊಲೀಸರು

ತಮಿಳುನಾಡಿನಲ್ಲಿ ಗುಟ್ಕಾ ಹಾಗೂ ಪಾನ್ ಮಸಾಲಾ ಮಾರಾಟವನ್ನು ನಿಷೇಧಿಸಲಾಗಿದೆ. ಆದರೂ ಅವುಗಳ ಮಾರಾಟವು ವಿಪರೀತವಾಗಿದೆ. ಅದೇ ರೀತಿಯಲ್ಲಿ ಗುಜರಾತ್'ನಲ್ಲಿಯೂ ಮದ್ಯವನ್ನು ಆಕ್ರಮವಾಗಿ ಮಾರಾಟ ಮಾಡಲಾಗುತ್ತದೆ.

ಗುಪ್ತವಾಗಿ ಸಾಗುತ್ತಿದ್ದ ಅಕ್ರಮ ಮದ್ಯ ಪತ್ತೆ ಹಚ್ಚಿದ ಪೊಲೀಸರು

ಪೊಲೀಸರ ಕಟ್ಟು ನಿಟ್ಟಿನ ಕ್ರಮಗಳ ಹೊರತಾಗಿಯೂ ಕೆಲವರು ಮದ್ಯವನ್ನು ಕಳ್ಳಸಾಗಣೆ ಮಾಡುತ್ತಿದ್ದಾರೆ. ನಂತರ ಅದನ್ನು ಹೆಚ್ಚಿನ ಬೆಲೆಗೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಗುಪ್ತವಾಗಿ ಸಾಗುತ್ತಿದ್ದ ಅಕ್ರಮ ಮದ್ಯ ಪತ್ತೆ ಹಚ್ಚಿದ ಪೊಲೀಸರು

ವಾಹನಗಳ ತಪಾಸಣೆ ವೇಳೆ ಆಕ್ರಮವಾಗಿ ಮಾರಾಟ ಮಾಡಲು ಮಿನಿ ವ್ಯಾನ್‌ನಲ್ಲಿ ಕಳ್ಳಸಾಗಣೆ ಮಾಡಲಾಗುತ್ತಿದ್ದ ಮದ್ಯದ ಬಾಟಲಿಗಳನ್ನು ಗುಜರಾತ್ ಪೊಲೀಸರುವಶಪಡಿಸಿಕೊಂಡಿದ್ದಾರೆ.

ಗುಪ್ತವಾಗಿ ಸಾಗುತ್ತಿದ್ದ ಅಕ್ರಮ ಮದ್ಯ ಪತ್ತೆ ಹಚ್ಚಿದ ಪೊಲೀಸರು

ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯ ಅಧ್ಯಕ್ಷರಾದ ಆನಂದ್ ಮಹೀಂದ್ರಾ ಈ ಘಟನೆಗೆ ಸಂಬಂಧಿಸಿದ ವೀಡಿಯೊವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಮದ್ಯವನ್ನು ಕಳ್ಳಸಾಗಣೆ ಮಾಡಲು ಖದೀಮರು ಬಳಸಿದ ತಂತ್ರವು ಆನಂದ್ ಮಹೀಂದ್ರಾರವರಿಗೆ ಅಚ್ಚರಿಯನ್ನುಂಟು ಮಾಡಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಗುಪ್ತವಾಗಿ ಸಾಗುತ್ತಿದ್ದ ಅಕ್ರಮ ಮದ್ಯ ಪತ್ತೆ ಹಚ್ಚಿದ ಪೊಲೀಸರು

ಮದ್ಯವನ್ನು ಕಳ್ಳಸಾಗಣೆ ಮಾಡುತ್ತಿದ್ದವರು ಮಿನಿ ವ್ಯಾನ್‌ನ ಕೆಳಗಿನ ಪ್ರದೇಶವನ್ನು ಬಾಟಲಿಗಳನ್ನು ಸಾಗಿಸುವಂತೆ ಮಾಡಿಫೈ ಮಾಡಿದ್ದಾರೆ. ನಂತರ ಟೇಬಲ್‌ನಂತೆ ಮಾಡಿಫೈ ಮಾಡಿ ಬಾಟಲಿಗಳನ್ನು ಜೋಡಿಸಲಾಗಿದೆ.

ಗುಪ್ತವಾಗಿ ಸಾಗುತ್ತಿದ್ದ ಅಕ್ರಮ ಮದ್ಯ ಪತ್ತೆ ಹಚ್ಚಿದ ಪೊಲೀಸರು

ಹೀಗೆ ಯಾರಿಗೂ ಗೊತ್ತಾಗದ ರೀತಿಯಲ್ಲಿ ಮದ್ಯ ಸಾಗಿಸುತ್ತಿದ್ದರು. ಆದರೆ ವಾಹನ ತಪಾಸಣೆ ವೇಳೆ ಈ ಮಾಡಿಫಿಕೇಶನ್ ಪೊಲೀಸರ ಗಮನಕ್ಕೆ ಬಂದಿದೆ. ವಾಹನದ ಲೋಡಿಂಗ್ ಭಾಗವು ಬೇರೆ ರೀತಿಯಾಗಿರುವುದನ್ನು ಅರಿತ ಪೊಲೀಸರು ವಾಹನವನ್ನು ಮತ್ತಷ್ಟು ಪರಿಶೀಲಿಸಿದ್ದಾರೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಗುಪ್ತವಾಗಿ ಸಾಗುತ್ತಿದ್ದ ಅಕ್ರಮ ಮದ್ಯ ಪತ್ತೆ ಹಚ್ಚಿದ ಪೊಲೀಸರು

ಲೋಡಿಂಗ್ ಪ್ರದೇಶದ ಭಾಗವನ್ನು ಹೊರಗೆಳೆದ ನಂತರ ಅಲ್ಲಿ ನೂರಾರು ಬಾಟಲಿ ಮದ್ಯವನ್ನು ಅಡಗಿಸಿರುವುದು ಪತ್ತೆಯಾಗಿದೆ. ಅಕ್ರಮ ಮದ್ಯ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ವಾಹನ ಹಾಗೂ ಮದ್ಯದ ಬಾಟಲಿಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಗುಪ್ತವಾಗಿ ಸಾಗುತ್ತಿದ್ದ ಅಕ್ರಮ ಮದ್ಯ ಪತ್ತೆ ಹಚ್ಚಿದ ಪೊಲೀಸರು

ಈ ಹಿಂದೆಯೂ ಸಹ ಭಾರತದಲ್ಲಿ ಮದ್ಯದ ಬಾಟಲಿಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಪ್ರಕರಣಗಳು ವರದಿಯಾಗಿದ್ದವು. ಮದ್ಯವನ್ನು ಅಕ್ರಮವಾಗಿ ಸಾಗಿಸಲು ದ್ವಿಚಕ್ರ ವಾಹನಗಳಿಂದ ಹಿಡಿದು ಐಷಾರಾಮಿ ಕಾರುಗಳನ್ನು ಬಳಸಲಾಗುತ್ತದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಹೀಗೆ ಬಳಕೆಯಾಗುವ ವಾಹನಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗದ ರೀತಿಯಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂಬುದು ಗಮನಾರ್ಹ. ಇದೇ ರೀತಿಯಾಗಿ ಅಕ್ರಮವಾಗಿ ಮದ್ಯವನ್ನು ಕಳ್ಳಸಾಗಣೆ ಮಾಡುತ್ತಿದ್ದ ಮಿನಿ ವ್ಯಾನ್ ಅನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಗುಪ್ತವಾಗಿ ಸಾಗುತ್ತಿದ್ದ ಅಕ್ರಮ ಮದ್ಯ ಪತ್ತೆ ಹಚ್ಚಿದ ಪೊಲೀಸರು

ಅಕ್ರಮವಾಗಿ ಮದ್ಯ ಸಾಗಿಸಲು ಮಿನಿ ವ್ಯಾನ್ ಅನ್ನು ಮಾಡಿಫೈ ಮಾಡಿದ ವ್ಯಕ್ತಿಯನ್ನು ಆನಂದ್ ಮಹೀಂದ್ರಾ ಭಯಾನಕ ಬುದ್ಧಿವಂತ ಎಂದು ಬಣ್ಣಿಸಿದ್ದಾರೆ. ಜೊತೆಗೆ ಈ ರೀತಿಯ ವಿನ್ಯಾಸಗಳು ನಮ್ಮ ಕಂಪನಿಯಲ್ಲಿಲ್ಲ ಎಂದು ಹೇಳಿದ್ದಾರೆ.

Most Read Articles

Kannada
English summary
Gujarat police discovers alcohol bottles in min van. Read in Kannada.
Story first published: Saturday, March 20, 2021, 17:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X