ಬೈಕ್‌ನಡಿ ಅಕ್ರಮ ಮದ್ಯ ಸಾಗಣೆ, ಕೊನೆಗೂ ಸಿಕ್ಕಿಬಿದ್ದ ಖದೀಮರು

ಗುಜರಾತ್‌ನಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಈ ಕಾರಣಕ್ಕೆ ಅಲ್ಲಿ ಕಳ್ಳಸಾಗಣೆ ಮೂಲಕ ಮದ್ಯ ಮಾರಾಟ ಮಾಡಲಾಗುತ್ತದೆ. ಇದೇ ರೀತಿ ಕಳ್ಳ ಸಾಗಣೆ ಮಾಡುವಾಗ ಸಿಕ್ಕಿ ಬಿದ್ದ ಘಟನೆ ಇತ್ತೀಚಿಗೆ ನಡೆದಿದೆ.

ಬೈಕ್‌ನಡಿ ಅಕ್ರಮ ಮದ್ಯ ಸಾಗಣೆ, ಕೊನೆಗೂ ಸಿಕ್ಕಿಬಿದ್ದ ಖದೀಮರು

ಈ ಘಟನೆಗೆ ಸಂಬಂಧಿಸಿದ ವೀಡಿಯೊವೊಂದು ವೈರಲ್ ಆಗಿದ್ದು, ಆ ವೀಡಿಯೊದಲ್ಲಿ ಹೀರೋ ಪ್ಯಾಶನ್ ಬೈಕ್‌ನಿಂದ 20ಕ್ಕೂ ಹೆಚ್ಚು ಮದ್ಯದ ಬಾಟಲಿಗಳನ್ನು ಹೊರ ತೆಗೆಯುತ್ತಿರುವುದನ್ನು ಕಾಣಬಹುದು. ಹೊರಗಿನಿಂದ ನೋಡುವವರಿಗೆ ಕಾಣುವುದಿಲ್ಲವೆಂಬ ಕಾರಣಕ್ಕೆ ಮದ್ಯ ಕಳ್ಳ ಸಾಗಣೆಗೆ ಕಾರು, ಸ್ಕೂಟರ್ ಅಥವಾ ಬೈಕ್ ಗಳನ್ನು ಬಳಸಲಾಗುತ್ತದೆ. ಈಗ ಸಿಕ್ಕಿಬಿದ್ದಿರುವ ವ್ಯಕ್ತಿಯು ತನ್ನ ಹೀರೋ ಪ್ಯಾಶನ್ ಬೈಕ್ ಅನ್ನು 20ಕ್ಕೂ ಹೆಚ್ಚು ಬಾಟಲಿಗಳನ್ನು ಇಡುವ ರೀತಿಯಲ್ಲಿ ಮಾಡಿಫೈಗೊಳಿಸಿದ್ದ.

ಬೈಕ್‌ನಡಿ ಅಕ್ರಮ ಮದ್ಯ ಸಾಗಣೆ, ಕೊನೆಗೂ ಸಿಕ್ಕಿಬಿದ್ದ ಖದೀಮರು

ಈ ಬೈಕ್‌ಗಳಲ್ಲಿ ಕಳ್ಳಸಾಗಣೆ ಮಾಡಿದರೆ ಪೊಲೀಸರಿಗೆ ಅನುಮಾನ ಬರುವುದಿಲ್ಲವೆಂಬ ಕಾರಣಕ್ಕೆ ಬೈಕುಗಳನ್ನು ಬಳಸುತ್ತಾರೆ. ಈ ವ್ಯಕ್ತಿ ಹೆಚ್ಚು ಬಾಟಲಿಗಳನ್ನಿಡಲು ತನ್ನ ಬೈಕಿನ ಫ್ಯೂಯಲ್ ಟ್ಯಾಂಕ್ ಅನ್ನು ಮಾಡಿಫೈಗೊಳಿಸಿದ್ದಾನೆ.

MOST READ:ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ಬೈಕ್‌ನಡಿ ಅಕ್ರಮ ಮದ್ಯ ಸಾಗಣೆ, ಕೊನೆಗೂ ಸಿಕ್ಕಿಬಿದ್ದ ಖದೀಮರು

ಫ್ಯೂಯಲ್ ಟ್ಯಾಂಕ್ ಕೆಳಗಿನ ಭಾಗವನ್ನು ತೆಗೆದುಹಾಕಿ ಜಾಗವನ್ನು ಖಾಲಿ ಬಿಡಲಾಗಿದೆ. ಸೀಟಿನ ಪಕ್ಕದ ಭಾಗಗಳಲ್ಲಿ ಬಾಟಲ್ ಗಳನ್ನು ಇಡಲಾಗಿದೆ. ಇವುಗಳ ಮೇಲೆ ಸೀಟನ್ನು ಇಟ್ಟರೆ ಬಾಟಲ್ ಗಳು ಕಣ್ಣಿಗೆ ಬೀಳುವುದಿಲ್ಲ.

ಬೈಕ್‌ನಡಿ ಅಕ್ರಮ ಮದ್ಯ ಸಾಗಣೆ, ಕೊನೆಗೂ ಸಿಕ್ಕಿಬಿದ್ದ ಖದೀಮರು

ಸಾಮಾನ್ಯವಾಗಿ ಹೀರೋ ಪ್ಯಾಶನ್ ಬೈಕುಗಳು ಸುಮಾರು 10 ಲೀಟರಿನ ಫ್ಯೂಯಲ್ ಟ್ಯಾಂಕ್ ಹೊಂದಿರುತ್ತವೆ. ಮದ್ಯದಂತಹ ವಸ್ತುಗಳನ್ನು ಕಳ್ಳಸಾಗಣೆ ಮಾಡಲು ಇಷ್ಟು ಜಾಗ ಸಾಕಾಗುತ್ತದೆ. ಈ ಬೈಕಿನಲ್ಲಿ ಅನೇಕ ಟ್ರಿಪ್‌ಗಳನ್ನು ಮಾಡುವ ಮೂಲಕ ಮದ್ಯ ಕಳ್ಳಸಾಗಣೆ ಮಾಡಬಹುದು.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಬೈಕ್‌ನಡಿ ಅಕ್ರಮ ಮದ್ಯ ಸಾಗಣೆ, ಕೊನೆಗೂ ಸಿಕ್ಕಿಬಿದ್ದ ಖದೀಮರು

ಈ ಬೈಕ್‌ ಮೂಲಕ ಕಳ್ಳಸಾಗಣೆ ಮಾಡುವವರು ಹೆಚ್ಚಿನ ಹಣದಾಸೆಗೆ ಈ ರೀತಿಯ ದುಷ್ಕೃತ್ಯಕ್ಕೆ ಕೈಹಾಕಿದ್ದಾರೆ ಎಂಬುದನ್ನು ಊಹಿಸಬಹುದು. ಈಗ ಸಿಕ್ಕಿ ಬಿದ್ದಿರುವುದು ಕೇವಲ ಒಂದು ಬೈಕ್‌. ಕಳ್ಳಸಾಗಣೆಗೆ ಈ ರೀತಿಯ ಅನೇಕ ಬೈಕ್‌ಗಳನ್ನು ಬಳಸಿರುವ ಸಾಧ್ಯತೆಗಳಿವೆ.

ಬೈಕ್‌ನಡಿ ಅಕ್ರಮ ಮದ್ಯ ಸಾಗಣೆ, ಕೊನೆಗೂ ಸಿಕ್ಕಿಬಿದ್ದ ಖದೀಮರು

ಫ್ಯೂಯಲ್ ಟ್ಯಾಂಕ್ ಜಾಗವನ್ನು ಖಾಲಿ ಮಾಡಿ, ಪೆಟ್ರೋಲ್ ಗಾಗಿ ಸೀಟಿನ ಕೆಳಗೆ ಪ್ರತ್ಯೇಕವಾದ ಗೋಳಾಕಾರದ 2 ಲೀಟರ್ ಸಾಮರ್ಥ್ಯದ ಪ್ಯೂಯಲ್ ಟ್ಯಾಂಕ್ ಅಳವಡಿಸಲಾಗಿದೆ. ಹೀರೋ ಪ್ಯಾಶನ್ ಬೈಕ್ ಪ್ರತಿ ಲೀಟರ್ ಪೆಟ್ರೋಲಿಗೆ ಸುಮಾರು 50 ಕಿ.ಮೀ ಮೈಲೇಜ್ ನೀಡುತ್ತದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಕಳ್ಳಸಾಗಣೆ ಮಾಡಲು ಇಷ್ಟು ಪ್ರಮಾಣದ ಫ್ಯೂಯಲ್ ಟ್ಯಾಂಕ್ ಸಾಕು. ಇಷ್ಟೆಲ್ಲಾ ಚಾಲಾಕಿತನ ತೋರಿದರೂ ಪೊಲೀಸರು ಈ ಕಳ್ಳಸಾಗಾಣಿಕೆದಾರನನ್ನು ಹಿಡಿದಿದ್ದಾರೆ. ವೀಡಿಯೊದಲ್ಲಿ 15ರಿಂದ 20 ಮದ್ಯದ ಬಾಟಲಿಗಳನ್ನು ವಶಪಡಿಸಿಕೊಳ್ಳುವುದನ್ನು ಕಾಣಬಹುದು.

ಬೈಕ್‌ನಡಿ ಅಕ್ರಮ ಮದ್ಯ ಸಾಗಣೆ, ಕೊನೆಗೂ ಸಿಕ್ಕಿಬಿದ್ದ ಖದೀಮರು

ಅಕ್ರಮ ಮದ್ಯ ಸಾಗಣೆ, ಅಕ್ರಮ ಬೈಕ್ ಮಾಡಿಫಿಕೇಶನ್ ಸೇರಿದಂತೆ ಆರೋಪಿಗಳ ವಿರುದ್ಧ ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿದೆ.

Article Published On: Tuesday, July 21, 2020, 18:35 [IST]
English summary
Gujarat police seizes modified hero passion bike used for smuggling alcohol. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+