ಪೊಲೀಸರ ಚಟುವಟಿಕೆ ಮೇಲೆ ನಿಗಾ ವಹಿಸಲು ಬರಲಿವೆ ಹೊಸ ಸಾಧನಗಳು

ಗುರುಗ್ರಾಮ ಪೊಲೀಸರು ತಮ್ಮ ಎಲ್ಲಾ ಪಿಸಿಆರ್ ವಾಹನಗಳಲ್ಲಿ ಜಿಪಿಎಸ್ ಹಾಗೂ ಜಿಯೋ ಫೆನ್ಸಿಂಗ್ ಗಳನ್ನು ಅಳವಡಿಸಲಿದ್ದಾರೆ ಎಂದು ವರದಿಯಾಗಿದೆ. ಪೊಲೀಸರು ಬಳಸುವ ವಾಹನಗಳಲ್ಲಿ ಈ ಸಾಧನಗಳನ್ನು ಅಳವಡಿಸುವ ಮೂಲಕ ಪೊಲೀಸರ ಎಲ್ಲಾ ಚಟುವಟಿಕೆಗಳ ಮೇಲೆ ನಿಗಾ ಇಡಲಾಗುವುದು ಎಂದು ಹೇಳಲಾಗಿದೆ.

ಪೊಲೀಸರ ಚಟುವಟಿಕೆ ಮೇಲೆ ನಿಗಾ ವಹಿಸಲು ಬರಲಿವೆ ಹೊಸ ಸಾಧನಗಳು

ಪೊಲೀಸರ ಮೇಲ್ವಿಚಾರಣೆ ಮಾಡಲು ಅಳವಡಿಸಲಾಗುವ ಈ ಸಾಧನಗಳು, ಅವುಗಳ ವ್ಯಾಪ್ತಿ, ಕರೆಗಳನ್ನು ಸ್ವೀಕರಿಸಲು ಎಷ್ಟು ಸಮಯ ತೆಗೆದುಕೊಳ್ಳಲಾಗುತ್ತದೆ ಸೇರಿದಂತೆ ಎಲ್ಲಾ ಮಾಹಿತಿಯನ್ನು ಪಡೆಯುತ್ತವೆ. ಇದರ ಜೊತೆಗೆ ಪೊಲೀಸರು ಬಳಸುವ ಎಲ್ಲಾ ವಾಹನಗಳಲ್ಲಿ ಡಿಜಿಟಲ್ ರೆಕಾರ್ಡ್ ಸಾಧನಗಳನ್ನು ಅಳವಡಿಸಲಾಗುವುದು. ಪೊಲೀಸರ ಎಲ್ಲಾ ಕ್ರಮಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಈ ಸಾಧನಗಳು ನೆರವಾಗಲಿವೆ.

ಪೊಲೀಸರ ಚಟುವಟಿಕೆ ಮೇಲೆ ನಿಗಾ ವಹಿಸಲು ಬರಲಿವೆ ಹೊಸ ಸಾಧನಗಳು

ಈ ಹೊಸ ಸಾಧನಗಳು, ಪಿಸಿಆರ್ ವಾಹನಗಳು ನಿಗದಿತ ಮಿತಿಯನ್ನು ಹೇಗೆ ದಾಟಬೇಕು. ದೀರ್ಘಕಾಲದವರೆಗೆ ಒಂದೇ ಸ್ಥಳದಲ್ಲಿ ಉಳಿಯುವುದು ಹೇಗೆ ಎಂದು ತಿಳಿಯಲು ಸಹಾಯ ಮಾಡುತ್ತವೆ. 100ನಂತಹ ತುರ್ತು ಕರೆ ಹಾಗೂ ಸಿಸಿಟಿವಿ ಕ್ಯಾಮೆರಾಗಳನ್ನು ಮೇಲ್ವಿಚಾರಣೆ ಮಾಡುವ ನಿಯಂತ್ರಣ ಕೊಠಡಿಯಲ್ಲಿ ಎಲ್ಲಾ ಪೊಲೀಸ್ ಕಾರ್ಯಾಚರಣೆಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಪೊಲೀಸರ ಚಟುವಟಿಕೆ ಮೇಲೆ ನಿಗಾ ವಹಿಸಲು ಬರಲಿವೆ ಹೊಸ ಸಾಧನಗಳು

24x7 ಕಣ್ಗಾವಲು ನಡೆಸಲಾಗುವುದರಿಂದ ಪೊಲೀಸರು ಇನ್ನು ಮುಂದೆ ಒಂದೇ ಸ್ಥಳದಲ್ಲಿ ನಿಲ್ಲಲು ಸಾಧ್ಯವಿಲ್ಲ. ನಿಯಮ ಉಲ್ಲಂಘಿಸಿದರೆ ಈ ಸಾಧನಗಳು ಎಲ್ಲಾ ಮಾಹಿತಿಯನ್ನು ಸಂಗ್ರಹಿಸುತ್ತವೆ. ಇದರಿಂದ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗೆ ತೊಂದರೆಯುಂಟಾಗಬಹುದು.

ಪೊಲೀಸರ ಚಟುವಟಿಕೆ ಮೇಲೆ ನಿಗಾ ವಹಿಸಲು ಬರಲಿವೆ ಹೊಸ ಸಾಧನಗಳು

ಹೆಚ್ಚುತ್ತಿರುವ ಅಪರಾಧ ಪ್ರಮಾಣವನ್ನು ಕಡಿಮೆ ಮಾಡಲು ಪೊಲೀಸರ ಮೇಲೆ ಒತ್ತಡ ಉಂಟಾಗಿದೆ. ಕರ್ತವ್ಯ ನಿರ್ವಹಿಸುವಾಗ ಪೊಲೀಸರು ಒಂದೇ ಸ್ಥಳದಲ್ಲಿರುತ್ತಾರೆ. ಇದರಿಂದಾಗಿ ಅಪರಾಧಗಳು ಸಂಭವಿಸುತ್ತಿವೆ ಎಂದು ಹೇಳಲಾಗಿದೆ. ಕೆಲ ಪೊಲೀಸರು ನಡೆಸುವ ಈ ಕೃತ್ಯದಿಂದ ಎಲ್ಲಾ ಪೊಲೀಸರಿಗೆ ತೊಂದರೆಯಾಗುತ್ತಿದೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಪೊಲೀಸರ ಚಟುವಟಿಕೆ ಮೇಲೆ ನಿಗಾ ವಹಿಸಲು ಬರಲಿವೆ ಹೊಸ ಸಾಧನಗಳು

ಇದನ್ನು ತಡೆಗಟ್ಟುವುದಕ್ಕಾಗಿ ಪೊಲೀಸರು ಗಸ್ತು ತಿರುಗುವ ವಾಹನಗಳಲ್ಲಿ ಜಿಯೋ-ಫೆನ್ಸಿಂಗ್ ಹಾಗೂ ಜಿಪಿಎಸ್ ಕಣ್ಗಾವಲು ಉಪಕರಣಗಳನ್ನು ಅಳವಡಿಸಲಾಗುತ್ತಿದೆ. ಇದರಿಂದಾಗಿ ಅಪರಾಧ ಪ್ರಮಾಣವು ಗಮನಾರ್ಹವಾಗಿ ಕಡಿಮೆಯಾಗುತ್ತದೆ ಎಂದು ಹೇಳಲಾಗಿದೆ.

ಪೊಲೀಸರ ಚಟುವಟಿಕೆ ಮೇಲೆ ನಿಗಾ ವಹಿಸಲು ಬರಲಿವೆ ಹೊಸ ಸಾಧನಗಳು

ಈ ಕಾರಣಕ್ಕಾಗಿಯೇ ಗುರುಗ್ರಾಮ ಪೊಲೀಸರು, ಪಿಸಿಆರ್ ವಾಹನಗಳಲ್ಲಿ ಹೊಸ ತಾಂತ್ರಿಕ ಸಾಧನಗಳನ್ನು ಅಳವಡಿಸುವ ಕಾರ್ಯವನ್ನು ಆರಂಭಿಸಿದ್ದಾರೆ. ಈ ಉಪಕರಣಗಳು ಪೊಲೀಸರನ್ನು ಸಕ್ರಿಯಗೊಳಿಸುತ್ತವೆ ಎನ್ನಲಾಗಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಪೊಲೀಸರ ಚಟುವಟಿಕೆ ಮೇಲೆ ನಿಗಾ ವಹಿಸಲು ಬರಲಿವೆ ಹೊಸ ಸಾಧನಗಳು

ಪ್ರತಿ ವಾಹನದಲ್ಲಿ ಜೋಡಿಸಲಾದ ಜಿಪಿಎಸ್ ಉಪಕರಣವು ವಾಹನವಿರುವ ಸ್ಥಳವನ್ನು ಗುರುತಿಸುತ್ತದೆ. ಯಾವುದೇ ವಾಹನ ನಿಗದಿಪಡಿಸಿರುವ ಡಿಜಿಟಲ್ ಮಿತಿಯನ್ನು ಮೀರಿದರೆ ತಕ್ಷಣವೇ ನಿಯಂತ್ರಣ ಕೊಠಡಿಗೆ ಸಂದೇಶ ತಲುಪುತ್ತದೆ ಎಂದು ಗುರುಗ್ರಾಮದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪೊಲೀಸರ ಚಟುವಟಿಕೆ ಮೇಲೆ ನಿಗಾ ವಹಿಸಲು ಬರಲಿವೆ ಹೊಸ ಸಾಧನಗಳು

ವಾಹನಗಳನ್ನು ಯಾವಾಗಲೂ ಮೇಲ್ವಿಚಾರಣೆ ಮಾಡುವುದರಿಂದ ಅವುಗಳು ಸಕ್ರಿಯವಾಗಿರುವಂತೆ ಮಾಡಬಹುದು ಎಂದೂ ಅವರು ಹೇಳಿದರು. ಅನೇಕ ಪಿಸಿಆರ್ ವ್ಯಾನ್‌ಗಳು ಹಾಗೂ ಬೈಕ್‌ಗಳು ಗಸ್ತು ತಿರುಗದೇ ನಿಂತಲ್ಲೆ ನಿಂತಿವೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಪೊಲೀಸರ ಚಟುವಟಿಕೆ ಮೇಲೆ ನಿಗಾ ವಹಿಸಲು ಬರಲಿವೆ ಹೊಸ ಸಾಧನಗಳು

ನಗರದಲ್ಲಿ ಗಸ್ತು ತಿರುಗುತ್ತಿರುವ ಪೊಲೀಸರ ಸಂಖ್ಯೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಕೊಲೆ, ಕೊಲೆ ಯತ್ನದಂತಹ ಅಪರಾಧಗಳು ಹಿಂದಿಗಿಂತ ಗಮನಾರ್ಹವಾಗಿ ಕಡಿಮೆಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪೊಲೀಸರ ಚಟುವಟಿಕೆ ಮೇಲೆ ನಿಗಾ ವಹಿಸಲು ಬರಲಿವೆ ಹೊಸ ಸಾಧನಗಳು

ಕಳೆದ ವರ್ಷದ ಆಗಸ್ಟ್ ತಿಂಗಳಿಗೆ ಹೋಲಿಸಿದರೆ, ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ ಅಪರಾಧ ಪ್ರಮಾಣವು 23.4%ನಷ್ಟು ಕುಸಿತ ಕಂಡಿದೆ. 2019ರ ಆಗಸ್ಟ್ ತಿಂಗಳಿನಲ್ಲಿ 78 ಕೊಲೆ ಪ್ರಕರಣಗಳು ವರದಿಯಾಗಿದ್ದರೆ, ಈ ವರ್ಷ ಈ ಸಂಖ್ಯೆ 58ಕ್ಕೆ ಇಳಿದಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಪೊಲೀಸರ ಚಟುವಟಿಕೆ ಮೇಲೆ ನಿಗಾ ವಹಿಸಲು ಬರಲಿವೆ ಹೊಸ ಸಾಧನಗಳು

ದರೋಡೆ ಪ್ರಕರಣಗಳ ಸಂಖ್ಯೆ 48.3%ರಷ್ಟು ಕುಸಿದಿದೆ. ವಾಹನ ಕಳ್ಳತನ 61.9%ರಷ್ಟು ಕಡಿಮೆಯಾಗಿದೆ. ಅಕ್ರಮ ಶಸ್ತ್ರಾಸ್ತ್ರ ಪ್ರಕರಣಗಳ ಸಂಖ್ಯೆ 11%ರಷ್ಟು ಕುಸಿದಿದೆ. ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸಲು ಗುರುಗ್ರಾಮವನ್ನು ಪೂರ್ವ, ಪಶ್ಚಿಮ, ದಕ್ಷಿಣ ಹಾಗೂ ಮನೇಸರ್ ಗಳೆಂದು ನಾಲ್ಕು ವಲಯಗಳಾಗಿ ವಿಂಗಡಿಸಲಾಗಿದೆ.

ಪೊಲೀಸರ ಚಟುವಟಿಕೆ ಮೇಲೆ ನಿಗಾ ವಹಿಸಲು ಬರಲಿವೆ ಹೊಸ ಸಾಧನಗಳು

ಹೆಚ್ಚಿನ ಪಿಸಿಆರ್ ವ್ಯಾನ್‌ಗಳು ಹಾಗೂ ಬೈಕ್‌ಗಳು ಅಪರಾಧ ಪ್ರಕರಣಗಳು ಹೆಚ್ಚಾಗಿರುವ ಪ್ರದೇಶದಲ್ಲಿ ಗಸ್ತು ತಿರುಗುತ್ತಿವೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರು ಪ್ರಮುಖ ಪಾತ್ರ ವಹಿಸುತ್ತಾರೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಪೊಲೀಸರ ಚಟುವಟಿಕೆ ಮೇಲೆ ನಿಗಾ ವಹಿಸಲು ಬರಲಿವೆ ಹೊಸ ಸಾಧನಗಳು

ಗುರುಗ್ರಾಮ ಪೊಲೀಸರ ಈ ಕ್ರಮದಿಂದಾಗಿ ಸಾರ್ವಜನಿಕರಿಗೆ ಪೊಲೀಸರ ಬಗ್ಗೆ ವಿಶ್ವಾಸ ಮೂಡಲು ಸಹಾಯವಾಗುತ್ತದೆ ಎಂದು ಹೇಳಲಾಗಿದೆ.

Most Read Articles

Kannada
English summary
Gurugram police to use GPS Geo fencing technologies in PCR vehicles. Read in Kannada.
Story first published: Tuesday, September 22, 2020, 19:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X