ಟಿಕ್ ಟಾಕ್ ವೀಡಿಯೊ ಮಾಡಲು ಹೋಗಿ ತಗ್ಲಾಕಿಕೊಂಡ ಯುವಕ
ಇತ್ತೀಚಿಗೆ ಜನರು ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯರಾಗುವ ಕಾರಣಕ್ಕೆ ಮಾಡದೇ ಇರುವ ಕೆಲಸಗಳಿಲ್ಲ. ಭಾರತದಲ್ಲಿ ಇನ್‌ಸ್ಟಾಗ್ರಾಮ್ ಹಾಗೂ ಟಿಕ್ ಟಾಕ್‌ಗಳನ್ನು ಬಿಡುಗಡೆಗೊಳಿಸಿದ ನಂತರ ತಮ್ಮ ಫಾಲೊವರ್ಸ್‌ಗಳನ್ನು ಸಂಖ್ಯೆಯನ್ನು ಹೆಚ್ಚಿಸಿ ಕೊಳ್ಳಲು ಪೈಪೋಟಿಗಿಳಿದಿದ್ದಾರೆ. ಈ ಕಾರಣಕ್ಕೆ ಆಕ್ಷೇಪಾರ್ಹವಾದ ಹಾಗೂ ಅನಗತ್ಯವಾದ ಮಾರ್ಗಗಳನ್ನು ಹಿಡಿಯುತ್ತಿದ್ದಾರೆ.

ಆಕ್ಷೇಪಾರ್ಹ ಫೋಟೋಗಳನ್ನು, ವೀಡಿಯೊಗಳನ್ನು ಶೇರ್ ಮಾಡಿ ಜೈಲು ಪಾಲಾಗುತ್ತಿದ್ದಾರೆ. ಇದೇ ರೀತಿಯ ಮತ್ತೊಂದು ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಟಿಕ್ ಟಾಕ್‌ನಲ್ಲಿ ವೀಡಿಯೊ ಮಾಡಲು ತನ್ನ ತಂದೆಯ ಫೋಕ್ಸ್‌ವ್ಯಾಗನ್ ಕಾರಿನಲ್ಲಿ ಕೆಂಪು ದೀಪ ಅಳವಡಿಸಿಕೊಂಡು ತಿರುಗಾಡುತ್ತಿದ್ದ 17 ವರ್ಷದ ಯುವಕ ಸಿಕ್ಕಿ ಬಿದ್ದಿದ್ದಾನೆ. ಈ ಕೆಂಪು ದೀಪವನ್ನು ಕಾರಿನ ಬಿಡಿಭಾಗಗಳ ಅಂಗಡಿಯಲ್ಲಿ ಅಳವಡಿಸಿಕೊಂಡಿದ್ದ.

ಯುವಕನು ಈ ಕಾರಿನಲ್ಲಿ ಗುರುಗ್ರಾಮದ ಅತುಲ್ ಕಟಾರಿಯಾ ಚೌಕ್ ಕಡೆಗೆ ಬಂದಾಗ ಅಲ್ಲಿದ್ದ ಪೊಲೀಸರ ಕಣ್ಣಿಗೆ ಬಿದ್ದಿದ್ದಾನೆ. ಕಾರಿನ ಮೇಲೆ ಕೆಂಪು ದೀಪ ಇರುವುದನ್ನು ಪೊಲೀಸರು ಗಮನಿಸಿದ್ದಾರೆ. ಯಾವುದೇ ವಾಹನದ ಮೇಲೆ ಕೆಂಪು ದೀಪವನ್ನು ಅಳವಡಿಸುವುದನ್ನು ನಿಷೇಧಿಸಲಾಗಿದೆ. ಈ ಕಾರಣಕ್ಕೆ ಪೊಲೀಸರಿಗೆ ಅನುಮಾನ ಬಂದಿದೆ.
MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಪೊಲೀಸರು ಅನುಮಾನದ ಆಧಾರದ ಮೇಲೆ ತನಿಖೆಗಾಗಿ ವಾಹನವನ್ನು ನಿಲ್ಲಿಸಿದಾಗ ಅದರಲ್ಲಿದ್ದ ಯುವಕ ತನ್ನ ಸ್ಮಾರ್ಟ್‌ಫೋನ್‌ನಲ್ಲಿ ವೀಡಿಯೊ ರೆಕಾರ್ಡ್ ಮಾಡುತ್ತಿದ್ದ. ಪೊಲೀಸರು ಪ್ರಶ್ನಿಸಿದಾಗ, ಯುವಕನು ಟಿಕ್ ಟಾಕ್ ವೀಡಿಯೊ ಮಾಡಲು ತಂದೆಯ ಕಾರಿನ ಮೇಲೆ ಕೆಂಪು ದೀಪ ಅಳವಡಿಸಿ ತಿರುಗಾಡುತ್ತಿರುವುದಾಗಿ ತಿಳಿಸಿದ್ದಾನೆ.

ಪೊಲೀಸರ ಕೈಗೆ ಸಿಕ್ಕಿಬಿದ್ದಾಗ, ಲಾಲ್ ಬಟ್ಟಿ ಗಾಡಿ ಕೆ ಸಪ್ನೆ ಥಾ ಮೇರೆ ಹಾಡಿಗಾಗಿ ವೀಡಿಯೊ ಶೂಟ್ ಮಾಡುತ್ತಿದ್ದ. ಪೊಲೀಸರು ಆತನನ್ನು ತಡೆದಾಗ ಅರ್ಧ ಭಾಗ ರೆಕಾರ್ಡಿಂಗ್ ಮಾಡಿದ್ದ. ಪೊಲೀಸರು ತಪಾಸಣೆಗಾಗಿ ಕಾರನ್ನು ನಿಲ್ಲಿಸಲು ಪ್ರಯತ್ನಿಸಿದಾಗ, ಭಯಗೊಂಡು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಆದರೆ ಅಂತಿಮವಾಗಿ ಪೊಲೀಸರು ಕಾರನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಪೊಲೀಸರು ಬಾಲಕನನ್ನು ವಶಕ್ಕೆ ಪಡೆದು ಆತನ ಪೋಷಕರನ್ನು ಕರೆಸಿದ್ದಾರೆ. ಅಪ್ರಾಪ್ತ ವಯಸ್ಕ ವಾಹನ ಚಲಾಯಿಸಿದ ಕಾರಣಕ್ಕೆ ಹಾಗೂ ಹೆಚ್ಚಿನ ವೇಗದಲ್ಲಿ ವಾಹನ ಚಲಾಯಿಸಿದ ಕಾರಣಕ್ಕೆ ಪೊಲೀಸರು ಆತನ ಪೋಷಕರಿಗೆ ರೂ.7,500 ದಂಡ ವಿಧಿಸಿದ್ದಾರೆ. ನಂತರ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

ಭಾರತದಲ್ಲಿ ವಿಐಪಿ ಸಂಸ್ಕೃತಿಯನ್ನು ಕೊನೆಗೊಳಿಸಲು ತುರ್ತು ಸೇವೆಗಳ ವಾಹನಗಳಾದ ಆಂಬುಲೆನ್ಸ್, ಅಗ್ನಿಶಾಮಕ ದಳ, ಪೊಲೀಸ್ ವಾಹನಗಳನ್ನು ಹೊರತುಪಡಿಸಿ ಬೇರೆ ವಾಹನಗಳಲ್ಲಿ ಕೆಂಪು ದೀಪಗಳನ್ನು ಅಳವಡಿಸುವುದನ್ನು ಕೇಂದ್ರ ಸರ್ಕಾರವು ನಿಷೇಧಿಸಿದೆ.


Click it and Unblock the Notifications