ಕರೋನಾ ವೈರಸ್ ಎಫೆಕ್ಟ್: ಸ್ಯಾಂಪಲ್‌ಗಳನ್ನು ಸಂಗ್ರಹಿಸಲಿವೆ ಸರ್ಕಾರಿ ಬಸ್‌ಗಳು

ಕರೋನಾ ಎಂಬ ಕಣ್ಣಿಗೆ ಕಾಣದ ವೈರಸ್, ಅಸಂಖ್ಯಾತ ಜನರ ಪ್ರಾಣವನ್ನು ಬಳಿ ಪಡೆದಿದೆ. ಸದ್ಯಕ್ಕೆ ಈ ಮಹಾಮಾರಿ ವೈರಸ್‌ಗೆ ಯಾವುದೇ ಲಸಿಕೆ ಇಲ್ಲದಿರುವ ಕಾರಣ ಮುನ್ನೆಚ್ಚರಿಕೆಯೊಂದೇ ಇದಕ್ಕಿರುವ ಮದ್ದು. ಈ ಕಾರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿವೆ.

ಕರೋನಾ ವೈರಸ್ ಎಫೆಕ್ಟ್: ಸ್ಯಾಂಪಲ್‌ಗಳನ್ನು ಸಂಗ್ರಹಿಸಲಿವೆ ಸರ್ಕಾರಿ ಬಸ್‌ಗಳು

ಲಾಕ್‌ಡೌನ್ ಜಾರಿಗೊಳಿಸಿ ಜನರನ್ನು ಮನೆಯಿಂದ ಹೊರಬಾರದಂತೆ ಸೂಚಿಸಲಾಗಿದೆ. ಅಭಿವೃದ್ಧಿ ಹೊಂದುತ್ತಿರುವ ಭಾರತದಂತಹ ದೇಶಕ್ಕೆ ಕರೋನಾ ವೈರಸ್‌ನ ಪ್ರಭಾವವು ದೊಡ್ಡದಾಗಿದೆ. ಭಾರತದ ಆರ್ಥಿಕ ವ್ಯವಸ್ಥೆಯು ತೀವ್ರವಾಗಿ ತತ್ತರಿಸಿದೆ. ಎಲ್ಲಾ ಕ್ಷೇತ್ರಗಳ ವಹಿವಾಟುಗಳು ಸ್ಥಗಿತಗೊಂಡಿರುವುದೇ ಮುಖ್ಯ ಕಾರಣ.

ಕರೋನಾ ವೈರಸ್ ಎಫೆಕ್ಟ್: ಸ್ಯಾಂಪಲ್‌ಗಳನ್ನು ಸಂಗ್ರಹಿಸಲಿವೆ ಸರ್ಕಾರಿ ಬಸ್‌ಗಳು

ಕರೋನಾ ವೈರಸ್‌ನಿಂದ ಸಾರ್ವಜನಿಕರನ್ನು ರಕ್ಷಿಸಲು ಯಾವ ರಾಜ್ಯ ಸರ್ಕಾರಗಳೂ ಹಿಂದೆ ಬಿದ್ದಿಲ್ಲ. ಎಲ್ಲಾ ರೀತಿಯ ಪ್ರಯತ್ನಗಳನ್ನು ಕೈಗೊಂಡಿವೆ. ಹರಿಯಾಣ ರಾಜ್ಯ ಸರ್ಕಾರವು ಯಾವುದೇ ರಾಜ್ಯ ಸರ್ಕಾರವು ಕೈಗೊಳ್ಳದ ಕ್ರಮಕ್ಕೆ ಮುಂದಾಗಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಕರೋನಾ ವೈರಸ್ ಎಫೆಕ್ಟ್: ಸ್ಯಾಂಪಲ್‌ಗಳನ್ನು ಸಂಗ್ರಹಿಸಲಿವೆ ಸರ್ಕಾರಿ ಬಸ್‌ಗಳು

ಕರೋನಾ ವೈರಸ್‌ ಶಂಕಿತರಿಂದ ಸ್ಯಾಂಪಲ್‌ಗಳನ್ನು ಸಂಗ್ರಹಿಸಲು ರಾಜ್ಯ ಸಾರಿಗೆ ನಿಗಮದ ಬಸ್‌ಗಳನ್ನು ಬಳಸಿಕೊಳ್ಳುತ್ತಿದೆ. ಹರಿಯಾಣ ಸರ್ಕಾರವು ಈ ಹಿಂದೆ ತನ್ನ ಬಸ್‌ಗಳನ್ನು ಪ್ರತ್ಯೇಕ ಚಿಕಿತ್ಸೆಗೆ ತಾತ್ಕಾಲಿಕ ವಾರ್ಡ್‌ಗಳಾಗಿ ಬದಲಿಸಿತ್ತು.

ಕರೋನಾ ವೈರಸ್ ಎಫೆಕ್ಟ್: ಸ್ಯಾಂಪಲ್‌ಗಳನ್ನು ಸಂಗ್ರಹಿಸಲಿವೆ ಸರ್ಕಾರಿ ಬಸ್‌ಗಳು

ಈಗ ಅದೇ ಬಸ್‌ಗಳನ್ನು ಬಳಸಿಕೊಂಡು ಸ್ಯಾಂಪಲ್‌ಗಳನ್ನು ಸಂಗ್ರಹಿಸಲು ಮುಂದಾಗಿದೆ. ಈ ಉದ್ದೇಶಕ್ಕಾಗಿ ಕೆಲವು ಬಸ್‌ಗಳನ್ನು ಸಹ ನಿಗದಿಪಡಿಸಲಾಗಿದೆ. ಈ ವಿಶಿಷ್ಟ ಯೋಜನೆಯನ್ನು ಗುರುಗ್ರಾಮದಲ್ಲಿ ಆರಂಭಿಸಲಾಗಿದೆ. ಈ ಹಿಂದೆ ಇದೇ ನಗರದಲ್ಲಿ ಐಸೊಲೇಷನ್ ವಾರ್ಡ್ ಸೌಲಭ್ಯವನ್ನು ಪರಿಚಯಿಸಲಾಗಿತ್ತು.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಕರೋನಾ ವೈರಸ್ ಎಫೆಕ್ಟ್: ಸ್ಯಾಂಪಲ್‌ಗಳನ್ನು ಸಂಗ್ರಹಿಸಲಿವೆ ಸರ್ಕಾರಿ ಬಸ್‌ಗಳು

ಸ್ಯಾಂಪಲ್‌ಗಳನ್ನು ಸಂಗ್ರಹಿಸಲಿರುವ ಈ ಬಸ್‌ಗಳನ್ನು ನಗರದ ಮೂರು ಪ್ರಮುಖ ಪ್ರದೇಶಗಳಲ್ಲಿ ನಿಲ್ಲಿಸಲಾಗುವುದು. ಮೂರು ಜನಪ್ರಿಯ ತಾಣಗಳಾದ ಲೀಜರ್ ವ್ಯಾಲಿ ಗ್ರೌಂಡ್, ದೌ ದೇವಿ ಲಾಲ್ ಸ್ಟೇಡಿಯಂ ಹಾಗೂ ಶೀತಲ ಮಾತಾ ದೇವಾಲಯಗಳ ಬಳಿ ಈ ಬಸ್ಸುಗಳು ಚಲಿಸಲಿವೆ.

ಕರೋನಾ ವೈರಸ್ ಎಫೆಕ್ಟ್: ಸ್ಯಾಂಪಲ್‌ಗಳನ್ನು ಸಂಗ್ರಹಿಸಲಿವೆ ಸರ್ಕಾರಿ ಬಸ್‌ಗಳು

ಈ ಯೋಜನೆಯಡಿಯಲ್ಲಿ ಶೀಘ್ರದಲ್ಲೇ ಮನೆ ಮನೆಗೆ ತೆರಳಿ, ಪರೀಕ್ಷೆ ನಡೆಸಿ ಸ್ಯಾಂಪಲ್‌ಗಳನ್ನು ಸಂಗ್ರಹಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೀಗೆ ಸಂಗ್ರಹಿಸಿದ ಸ್ಯಾಂಪಲ್‌ಗಳ ಫಲಿತಾಂಶಗಳನ್ನು ವೇಗವಾಗಿ ನೀಡುವ ಯೋಜನೆಯನ್ನು ಅಧಿಕಾರಿಗಳು ಹೊಂದಿದ್ದಾರೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಕರೋನಾ ವೈರಸ್ ಎಫೆಕ್ಟ್: ಸ್ಯಾಂಪಲ್‌ಗಳನ್ನು ಸಂಗ್ರಹಿಸಲಿವೆ ಸರ್ಕಾರಿ ಬಸ್‌ಗಳು

ಭಾರತದಲ್ಲಿ ಇದೇ ಮೊದಲ ಬಾರಿಗೆ ಬಸ್‌ಗಳನ್ನು ಐಸೊಲೇಷನ್ ವಾರ್ಡ್‌ಗಳಾಗಿ ಬದಲಿಸಿ ಸ್ಯಾಂಪಲ್‌ಗಳನ್ನು ಸಂಗ್ರಹಿಸಲು ಬಳಸಲಾಗುತ್ತಿದೆ. ಈ ಕಾರಣಕ್ಕೆ ಹರಿಯಾಣ ರಾಜ್ಯದತ್ತ ಎಲ್ಲಾ ರಾಜ್ಯಗಳ ನೋಟವು ತಿರುಗಿದೆ. ಕರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಕಾರಣಕ್ಕೆ ದೇಶಾದ್ಯಂತ ಆಸ್ಪತ್ರೆಗಳ ಕೊರತೆ ಎದುರಾಗುತ್ತಿದೆ.

ಕರೋನಾ ವೈರಸ್ ಎಫೆಕ್ಟ್: ಸ್ಯಾಂಪಲ್‌ಗಳನ್ನು ಸಂಗ್ರಹಿಸಲಿವೆ ಸರ್ಕಾರಿ ಬಸ್‌ಗಳು

ಹರಿಯಾಣ ಸರ್ಕಾರದ ಈ ಕ್ರಮಕ್ಕೆ ಜನರು ಸಹ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಈ ಬಸ್ಸುಗಳು ಜನರು ವಾಸಿಸುವ ಪ್ರದೇಶದಿಂದ ದೂರದಲ್ಲಿರುವ ಕಾರಣ ಸೋಂಕಿನ ಅಪಾಯ ಕಡಿಮೆ ಎಂದು ಹೇಳಲಾಗಿದೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಕರೋನಾ ವೈರಸ್ ಎಫೆಕ್ಟ್: ಸ್ಯಾಂಪಲ್‌ಗಳನ್ನು ಸಂಗ್ರಹಿಸಲಿವೆ ಸರ್ಕಾರಿ ಬಸ್‌ಗಳು

ಇದರ ಜೊತೆಗೆ ವೈರಸ್ ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ ಹರಡದಂತೆ ತಡೆಯಲು ಆಂಟಿಸೆಪ್ಟಿಕ್ಸ್‌ನೊಂದಿಗೆ ಈ ಬಸ್‌ಗಳನ್ನು ಸ್ವಚ್ವಗೊಳಿಸಲಾಗುತ್ತದೆ. ಸ್ಯಾಂಪಲ್ ಸಂಗ್ರಹಿಸುವ ಸಿಬ್ಬಂದಿಗೆ ಸೋಂಕು ತಗುಲದಂತೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗುವುದು.

Most Read Articles

Kannada
English summary
Gurugram to use bus fleet for coronavirus sample collection. Read in Kannada.
Story first published: Friday, April 24, 2020, 13:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X