ಮತ್ತೆ ಬಹುಕೋಟಿ ಬೆಲೆಯ ಕಾರು ಖರೀದಿ: ಲೆಕ್ಕವಿಲ್ಲದಷ್ಟು ದುಬಾರಿ ಕಾರುಗಳ ಒಡೆಯ ಈ ಜೀಮ್ ಮಾಲೀಕ
ಸಿನಿಮಾ, ಕ್ರೀಡೆ ಸೇರಿದಂತೆ ಇನ್ನಿತರ ಕ್ಷೇತ್ರಗಳ ಸೆಲೆಬ್ರಿಟಿಗಳಂತೆ ಹಲವು ಉದ್ಯಮಿಗಳು ಕೂಡ ಕಾರು ಕ್ರೇಜ್ ಹೊಂದಿದ್ದಾರೆ. ಉದ್ಯಮಿಗಳು ಹೆಚ್ಚಾಗಿ ಐಷಾರಾಮಿ ಕಾರುಗಳಲ್ಲಿ ಓಡಾಡಲು ಇಷ್ಟ ಪಡುತ್ತಾರೆ. ಇದರಿಂದ ಆವರು ತಮ್ಮ ಮೆಚ್ಚಿನ ಬ್ರ್ಯಾಂಡ್‌ನ ಐಷಾರಾಮಿ ಕಾರುಗಳನ್ನು ಖರೀದಿಸುತ್ತಾರೆ. ಭಾರತದಲ್ಲಿ ಸೂಪರ್‌ಕಾರ್ ಸಂಸ್ಕೃತಿಯು ವೇಗವಾಗಿ ಬೆಳೆಯುತ್ತಿದೆ.
ಹಲವಾರು ಹೊಸ ಐಷಾರಾಮಿ ಕಾರುಗಳು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸುತ್ತಿವೆ. ಭಾರತಲ್ಲಿ ಲ್ಯಾಂಬೋರ್ಗಿನಿ, ಆಸ್ಟನ್ ಮಾರ್ಟಿನ್, ರೋಲ್ಸ್ ರಾಯ್ಸ್, ಫೆರಾರಿ ಮತ್ತು ಮೆಕ್ಲಾರೆನ್ ನಂತಹ ಜನಪ್ರಿಯ ಸೂಪರ್ ಕಾರುಗಳ ಮಾರಾಟವಾಗುತ್ತಿವೆ. ಮೆಕ್‌ಲಾರೆನ್ ಕಂಪನಿಯು ತನ್ನ ಮೆಕ್ಲಾರೆನ್ 720ಎಸ್, 720ಎಸ್ ಸ್ಪೈಡರ್ ಮತ್ತು ಆರ್ಟುರಾ ಮಾದರಿಗಳನ್ನು ಭಾರತೀಯ ಮಾರುಕಟ್ಟೆ ಮಾರಾಟ ಮಾಡುತ್ತಿದೆ. ವಿಶ್ವದ ಕೆಲವೇ ಕೆಲವು ಅತಿ ಜನಪ್ರಿಯ ಸೂಪರ್‌ಕಾರ್ ತಯಾರಕರಲ್ಲಿ ಮೆಕ್‌ಲಾರೆನ್ ಕೂಡ ಒಂದಾಗಿದೆ.

ಈ ಈ ಬ್ರ್ಯಾಂಡ್ ಈ ಹಿಂದೆ ಕೆಲವು ಅದ್ಭುತ ಸೂಪರ್‌ಕಾರ್‌ಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಮೆಕ್ಲಾರೆನ್ ಕಳೆದ ವರ್ಷ ಭಾರತದಲ್ಲಿ ಅಧಿಕೃತವಾಗಿ ಕಾರುಗಳನ್ನು ಮಾರಾಟ ಮಾಡಲು ಪ್ರಾರಂಭಿಸಿತು. ಜನಪ್ರಿಯ ಫ್ಯೂಷನ್ ಜಿಮ್‌ನ ಮಾಲೀಕ ಅಮಿತ್ ಸಿಂಗ್ ಇತ್ತೀಚೆಗೆ ಹೊಸ ಮೆಕ್ಲಾರೆನ್ 720S (McLaren 720S) ಸೂಪರ್‌ಕಾರ್ ಅನ್ನು ಖರೀದಿಸಿದ್ದಾರೆ. ಜನಪ್ರಿಯ ಫ್ಯೂಷನ್ ಜಿಮ್ ಮಾಲೀಕ ಅಮಿತ್ ಸಿಂಗ್ ಖರೀದಿಸಿದ McLaren 720S ಸಿಗ್ನೇಚರ್ ಆರೆಂಜ್ ಶೇಡ್‌ನಲ್ಲಿ ಬರುತ್ತದೆ.
ಹೊಸ ಮೆಕ್ಲಾರೆನ್ 720ಎಸ್ ಸ್ಪೋರ್ಟ್ಸ್ ಕಾರು 4.0-ಲೀಟರ್ V8 ಟ್ವಿನ್-ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ 720 ಬಿಹೆಚ್‍ಪಿ ಪವರ್ ಮತ್ತು 770 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ 7-ಸ್ಪೀಡ್ ಡ್ಯುಯಲ್-ಕ್ಲಚ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ. ಕಾರ್ಬನ್ ಫೈಬರ್ ಪ್ಯಾನಲ್ಗಳ ಬಳಕೆಗಳಿಂದ ಗಮನಾರ್ಹವಾಗಿ ಹಗುರವಾಗಿದೆ.

ಹೊಸ ಹೊಸ ಮೆಕ್ಲಾರೆನ್ 720ಎಸ್ ಸ್ಪೋರ್ಟ್ಸ್ ಕಾರು 2.8 ಸೆಕೆಂಡುಗಳಲ್ಲಿ ಗಂಟೆಗೆ 0 ರಿಂದ 100 ಕಿಮೀ ವೇಗವನ್ನು ಪಡೆದುಕೊಳ್ಳುತ್ತದೆ ಮತ್ತು ಗಂಟೆಗೆ 341 ಕಿಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಹೊಸ ಮೆಕ್ಲಾರೆನ್ 720ಎಸ್ ಸ್ಪೋರ್ಟ್ಸ್ ಕಾರು ಲೆದರ್ ಮತ್ತು ಅಲ್ಕಾಂಟರಾ ವಸ್ತುಗಳ ಸಂಯೋಜನೆಯನ್ನು ನೀಡುತ್ತದೆ. ಈ ಕಾರಿನಲ್ಲಿ ಕಾರ್ಬನ್ ಫೈಬರ್ ಅಂಶಗಳನ್ನು ಒಳಗೊಂಡಿವೆ.
ಮೆಕ್ಲಾರೆನ್ 720ಎಸ್ ಸ್ಪೋರ್ಟ್ಸ್ ಕಾರು ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.4.65 ಕೋಟಿಯಾಗಿದೆ. ಕಸ್ಟಮೈಸೇಶನ್‌ಗಳು ಮತ್ತು ಕಾರ್ಯಕ್ಷಮತೆಯ ಪ್ಯಾಕ್‌ಗಳನ್ನು ಅವಲಂಬಿಸಿ ಹೆಚ್ಚುವರಿ ವೆಚ್ಚಗಳು ಅನ್ವಯಿಸಬಹುದು. ಅಮಿತ್ ಸಿಂಗ್ ಮೆಕ್ಲಾರೆನ್ 720S ಅನ್ನು ಹೊಂದಿರುವ ಮೊದಲ ಭಾರತೀಯ ಬಿಲಿಯನೇರ್ ಉದ್ಯಮಿ ಅಲ್ಲ. ಭಾರತೀಯ ಮಾರುಕಟ್ಟೆಯಲ್ಲಿ ಬ್ರ್ಯಾಂಡ್ ಅಧಿಕೃತವಾಗಿ ಲಭ್ಯವಾಗುವ ಮೊದಲೇ, ಅನೇಕ ಜನರು ಮೆಕ್‌ಲಾರೆನ್‌ಗಳನ್ನು ಭಾರತಕ್ಕೆ ಆಮದು ಮಾಡಿಕೊಂಡಿದ್ದರು.
ಫ್ಯೂಷನ್ ಜಿಮ್‌ನ ಮಾಲೀಕ ಅಮಿತ್ ಸಿಂಗ್ ಅವರು ಹಲವಾರು ದುಬಾರಿ ಕಾರುಗಳನ್ನು ಹೊಂದಿದ್ದಾರೆ. ಅವರ ಬಳಿ ಮರ್ಸಿಡಿಸ್ AMG G63, ಮರ್ಸಿಡಿಸ್-ಮೇಬ್ಯಾಕ್ GLS600, ಒಂದು ಮೇಬ್ಯಾಕ್ S560, BMW Z4 M40i, ಫೆರಾರಿ 488 GTB, ಲ್ಯಾಂಬೊರ್ಗಿನ್ ಹ್ಯುರಾಕನ್ ಸ್ಪೈಡರ್, ಪೋರ್ಷೆ 718 Boxerzini Urs, ಒಂದು ಲ್ಯಾಂಬ್ರೆನ್ಜಿನಿ, ಒಂದು ಲ್ಯಾಂಬ್ರೆಝಿನಿ-6B ಬ್ರಬಸ್, BMW 3-ಸರಣಿ, ಮತ್ತು ಪೋರ್ಷೆ 718 ಕೇಮನ್ ನಂತಹ ಕಾರುಗಳಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications