ಅಂಗಿ ಬಿಚ್ಚಿದ ಅಣ್ಣನ ಆರ್ಭಟವನ್ನು ತಣ್ಣೀರೆರೆದು ತಣ್ಣಗಾಗಿಸಿದ ಆರಕ್ಷಕರು: ಅರೆಬೆತ್ತಲೆ ಕಥೆಯಿದು!
ಕಾರಿನಲ್ಲಿ ಸನ್‌ರೂಫ್‌ನ ಮುಖ್ಯ ಪ್ರಯೋಜನವೆಂದರೆ ಹೊರಗಿನಿಂದ ಹೆಚ್ಚಿನ ಬೆಳಕನ್ನು ನೀಡುತ್ತದೆ. ಜೊತೆಗೆ ಕ್ಯಾಬಿನ್ ಒಳಗೆ ಹೊಸ ಗಾಳಿ, ಐಷಾರಾಮಿ ಅನುಭವ, ಪ್ರಕೃತಿಯನ್ನು ಸವಿಯಬಹುದು. ಆದ್ರೆ ಭಾರತದಲ್ಲಿ ಇವೆಲ್ಲವನ್ನು ಬಿಟ್ಟು ಜನರು ಸನ್‌ರೂಫ್‌ಗಳನ್ನು ವಿವಿಧ ಕಾರಣಗಳಿಗಾಗಿ ಬಳಸಿ ಅದರ ಬಳಕೆಯ ಉದ್ದೇಶವನ್ನೇ ಬದಲಿಸಿಬಿಟ್ಟಿದ್ದಾರೆ.
ಇತ್ತೀಚೆಗೆ ಹ್ಯುಂಡೈ ವೆರ್ನಾದ ಸನ್‌ರೂಫ್‌ನಿಂದ ವ್ಯಕ್ತಿಯೊಬ್ಬ ಹೊರಗೆ ಬಂದು ಶರ್ಟ್ ಬಿಚ್ಚಿ ಕ್ಯಾಮೆರಾಗೆ ಪೋಸ್ ನೀಡುತ್ತಿರುವ ವೀಡಿಯೊ ವೈರಲ್ ಆಗಿದೆ. ಅನುಮತಿ ಪಡೆದು ಹೀಗೆ ಮಾಡಿದ್ದಾನೆ ಎಂಬುದಕ್ಕೆ ಇದೇನು ಸಿನಿಮಾವಲ್ಲ, ಬಿಟ್ಟಿ ಶೊಕಿಗಾಗಿ ನಡುರಸ್ತೆಯಲ್ಲಿ ಹೀಗೆ ಮಾಡುವುದು ಕಾನೂನು ಉಲ್ಲಂಘನೆಯಾಗಿದೆ. ಪೊಲೀಸರು ವಿಡಿಯೋ ನೋಡಿದ್ದೇ ತಡ ವ್ಯಕ್ತಿಯ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.

ವಿಡಿಯೋದಲ್ಲಿ ಏನಿದೆ: ವೈರಲ್ ಆಗಿರುವ ವೀಡಿಯೊದಲ್ಲಿ ಹ್ಯುಂಡೈ ವೆರ್ನಾ ಸನ್‌ರೂಫ್‌ನಿಂದ ವ್ಯಕ್ತಿ ಹೊರಬಂದು ಕಾರಿನ ಹಿಂಬದಿಯ ಕಡೆಗೆ ಮುಖಮಾಡಿದ್ದಾನೆ. ತಕ್ಷಣವೇ ತನ್ನ ಅಂಗಿಯನ್ನು ತೆಗೆದು ಕ್ಯಾಮರಾಗೆ ಪೋಸ್ ನೀಡಿದ್ದಾನೆ. ಮೂಲಗಳ ಪ್ರಕಾರ ತನ್ನ ಸೋಷಿಯಲ್ ಮೀಡಿಯಾಗಾಗಿ ರೀಲ್‌ಗಳನ್ನು ಮಾಡಲು ಹೀಗೆ ಮಾಡಿದ್ದಾನೆ ಎನ್ನಲಾಗಿದೆ. ಇದು ಅತ್ಯಂತ ಅಪಾಯಕಾರಿ ಕೃತ್ಯವಾಗಿರುವ ಕಾರಣದಿಂದಲೇ ಪೊಲೀಸರು ಕೂಡಲೇ ಕ್ರಮಕ್ಕೆ ಮುಂದಾಗಿದ್ದಾರೆ.
ಯಾವ ಸಾಮಾಜಿಕ ಜಾಲಾತಾಣಕ್ಕಾಗಿ ಈ ರೀಲ್ ಮಾಡಿದ್ದಾನೋ ಅದೇ ಸೋಷಿಯಲ್ ಮೀಡಿಯಾದಲ್ಲಿ ಜನರು ಆತನನ್ನು ಗಾಜಿಯಾಬಾದ್ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. ಅವರು ದೂರನ್ನು ಸಂಬಂಧಿತ ಇಲಾಖೆಗಳಿಗೆ ರವಾನಿಸಿದ್ದು, ಈಗಾಗಲೇ ಆತನ ಬಂಧನಕ್ಕೆ ಮುಂದಾಗಿರುವ ಪೊಲೀಸರು, ಕೆಲವೇ ದಿನಗಳಲ್ಲಿ ಆ ವ್ಯಕ್ತಿಯ ವಿರುದ್ಧ ಕ್ರಮ ಜರುಗಿಸುವ ಸಾಧ್ಯತೆ ಇದೆ.

ವಾಸ್ತವವಾಗಿ, ಭಾರತದಲ್ಲಿ ಎಲ್ಲಾ ಪ್ರಯಾಣಿಕರು ಚಲಿಸುವ ಕಾರಿನಲ್ಲಿ ಸೀಟ್ ಬೆಲ್ಟ್ ಧರಿಸುವುದೇ ಕಡ್ಡಾಯವಾಗಿದೆ. ಇನ್ನು ಅದರಲ್ಲಿ ಚಲಿಸುವ ಕಾರಿನ ಸನ್‌ರೂಫ್ ಅಥವಾ ಯಾವುದೇ ಕಿಟಕಿಯಿಂದ ಹೊರಬರುವ ಕ್ರಿಯೆಯನ್ನು ಸಾರ್ವಜನಿಕ ರಸ್ತೆಗಳಲ್ಲಿ ಸ್ಟಂಟ್ ಎಂದು ಪರಿಗಣಿಸಲಾಗುತ್ತದೆ. ಇದು ಕಾನೂನುಬಾಹಿರವಾಗಿದ್ದು ಪೊಲೀಸರಿಂದ ಭಾರಿ ದಂಡವನ್ನು ವಿಧಿಸಬಹುದು. ಈ ಹಿಂದೆಯೂ ಸನ್‌ರೂಫ್‌ನಿಂದ ಹೊರಬಂದಿದ್ದ ಹಲವರಿಗೆ ಪೊಲೀಸರು ದಂಡ ವಿಧಿಸಿದ ಉದಾಹರಣೆಗಳಿವೆ.
ಹೇಗೆ ಬಳಸಬೇಕು? ಸನ್‌ರೂಫ್‌ಗಳನ್ನು ಪ್ರಾಥಮಿಕವಾಗಿ ಹೆಚ್ಚಿನ ನೈಸರ್ಗಿಕ ಬೆಳಕು ಹಾಗೂ ಗಾಳಿಯ ಪ್ರಸರಣಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಹೆಚ್ಚಿನ ನಗರಗಳು ಹೆಚ್ಚು ಕಲುಷಿತವಾಗಿರುವ ಭಾರತದಲ್ಲಿ, ಸನ್‌ರೂಫ್‌ಗಳ ಬಳಕೆಗೆ ಯಾವುದೇ ಅರ್ಥವಿಲ್ಲ. ಆದರು ಜನರು ಇವುಗಳಿಂದ ಹೊರಬಂದು ತಮ್ಮ ಮುಖಕ್ಕೆ ಗಾಳಿಯು ಹೊಡೆಯುವುದನ್ನು ಫ್ಯಾಷನ್ ಎಂದು ಭಾವಿಸಿರುವುದು ವಿಪರ್ಯಾಸ.

ಹೆಚ್ಚಿನ ವೇಗದಲ್ಲಿ ಕಿಟಕಿಗಳನ್ನು ತೆರೆದಿಡುವುದರಿಂದ ಗಾಳಿಯು ನೇರವಾಗಿ ಕಣ್ಣುಗಳಿಗೆ ಹೊಡೆಯಬಹುದು, ಇದು ಸಮಸ್ಯೆಗಳನ್ನು ಉಂಟುಮಾಡಬಹುದು. ಹೆಚ್ಚಿನ ಗಾಳಿಯ ಅಡಚಣೆಯಿಲ್ಲದೆ ಗಾಳಿಯನ್ನು ಮರುಬಳಕೆ ಮಾಡಲು ಸನ್‌ರೂಫ್ ಅನ್ನು ವಿನ್ಯಾಸಗೊಳಿಸಲಾಗಿದೆ. ಅದೇನೇ ಇದ್ದರೂ, ಹೆಚ್ಚಿನ ಜನರು ವಾಹನದಿಂದ ಹೊರಗುಳಿಯಲು ಸನ್‌ರೂಫ್ ಅನ್ನು ಹೆಚ್ಚಾಗಿ ಬಳಸುತ್ತಿದ್ದಾರೆ.
ಇದು ಅತ್ಯಂತ ಅಪಾಯಕಾರಿಯಾಗಿದೆ, ವಿಶೇಷವಾಗಿ ಮಕ್ಕಳಿಗೆ, ಹಠಾತ್ ಬ್ರೇಕಿಂಗ್ ಹಾಕಿದಾಗ ವಾಹನಿಂದ ಹೊರಹಾಕಬಹುದು. ಜೊತೆಗೆ ಇತರ ವಾಹನಗಳಿಂದ ಸಣ್ಣ ಕಲ್ಲುಗಳಂತಹ ಅವಶೇಷಗಳು ಅವರಿಗೆ ಬಡಿದು ಗಾಯಗಳನ್ನು ಉಂಟುಮಾಡಬಹುದು. ರೂಫ್ ಹೊರಗೆ ನೇತಾಡುವ ಜನರಿಗೆ ಅತಿ ಮುಕ್ಯವಾಗಿ ವಿದ್ಯುತ್ ತಂತಿಗಳು ಗಂಭೀರ ಅಪಾಯವನ್ನು ಉಂಟುಮಾಡುತ್ತವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಶಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.


Click it and Unblock the Notifications