Hardik Pandya: ವಿಮಾನ ಇಳಿದು ದುಬಾರಿ ಎಸ್‌ಯುವಿನಲ್ಲಿ ಹೊರಟ ಹಾರ್ದಿಕ್ ಪಾಂಡ್ಯ!

ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ಆಟಗಾರ ಹಾರ್ದಿಕ್ ಪಾಂಡ್ಯ ಅವರು ಐಷಾರಾಮಿ ಜೀವನ ಹಾಗೂ ಕಾರುಗಳಿಗೆ ಭಾರೀ ಜನಪ್ರಿಯತೆ ಪಡೆದಿದ್ದಾರೆ. ಮಾರುಕಟ್ಟೆಗೆ ಬರುವ ಹೊಸ ಸ್ಪೋರ್ಟಿ ಕಾರುಗಳ ಮೇಲೆ ಸಖತ್ ಒಲವನ್ನು ಹೊಂದಿದ್ದಾರೆ. ಕಳೆದ ತಿಂಗಳು ಖರೀದಿಸಿದ ತಮ್ಮ ಇತ್ತೀಚಿನ ಎಸ್‌ಯುವಿ ರೇಂಜ್ ರೋವರ್ ಸ್ಪೋರ್ಟ್ ಅನ್ನು ಇನ್ನೂ ಸ್ಟೈಲಿಷ್ ಆಗಿ ಮಾಡಿಫೈಗೊಳಿಸಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಈ ರೇಂಜ್ ರೋವರ್ ಎಸ್‌ಯುವಿ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.2.36 ಕೋಟಿಯಿಂದ ರೂ.4.98 ಕೋಟಿಗಳಾಗಿದೆ.

ಇತ್ತೀಚೆಗೆ ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ್ದ ಹಾರ್ದಿಕ್ ಪಾಂಡ್ಯ ತಮ್ಮ ಹೊಸ ರೇಂಜ್ ರೋವರ್‌ನಲ್ಲಿ ಮುಂಬೈ ವಿಮಾನ ನಿಲ್ದಾಣದಿಂದ ಹೊರಬಂದು ಹೊಸ ರೇಂಜ್ ರೋವರ್ ಸ್ಪೋರ್ಟ್ ಕಾರಿಗೆ ಏರುತ್ತಾ ಕಾಣಿಸಿಕೊಂಡರು. ಇದೇ ವೇಳೆ ಆ ಕಾರು ಮಾಡಿಫೈಗೊಂಡಿರುವುದು ಕಂಡುಬಂದಿದೆ. ಹಾರ್ದಿಕ್ ಪಾಂಡ್ಯ ತಮ್ಮ ಹೊಸ ರೇಂಜ್ ರೋವರ್ ಸ್ಪೋರ್ಟ್ ಅನ್ನು ಬೋಲ್ಡ್ ಮ್ಯಾಟ್ ರೆಡ್ ಬಣ್ಣಕ್ಕೆ ಮಾಡಿಫೈಗೊಳಿಸಿದ್ದಾರೆ.

hardik-pandya-customized-his-range-rover-sport-with-matt-red

ಈ ಹಿಂದೆ ಇದೇ ಕಾರು ಕ್ಲಾಸಿ ಸ್ಯಾಂಟೋರಿನಿ ಬ್ಲ್ಯಾಕ್ ಬಣ್ಣದಲ್ಲಿತ್ತು, ಈಗ ಅದು ರೆಡ್ ಮ್ಯಾಟ್‌ನೊಂದಿಗೆ ಮತ್ತಷ್ಟು ಆಕರ್ಷಕ ಲುಕ್ ಪಡೆದುಕೊಂಡಿದೆ. ಇದು ರೇಂಜ್ ರೋವರ್ ಸ್ಪೋರ್ಟ್‌ನ ಸಾಮಾನ್ಯ ವೇರಿಯೆಂಟ್ ಅಲ್ಲ, ಬದಲಿಗೆ ಇದು ಹೊಸ ತಲೆಮಾರಿನ ಎಸ್ಇ ಡೈನಾಮಿಕ್ ವೇರಿಯೆಂಟ್ ಆಗಿದೆ. 22 ಇಂಚಿನ ಅಲಾಯ್ ವ್ಹೀಲ್ ಮತ್ತು ಬ್ಲ್ಯಾಕ್ ಔಟ್ ಗ್ರಿಲ್‌ನೊಂದಿಗೆ ಹೆಚ್ಚು ಸ್ಪೋರ್ಟಿಯಾಗಿ ಕಾಣುತ್ತದೆ.

ಕಾರಿನ ಇಂಟೀರಿಯರ್ ವಿಶೇಷತೆಗಳು: 13.2-ಇಂಚಿನ ದೊಡ್ಡ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಡಿಸ್ಪ್ಲೇ, ಡಿಜಿಟಲ್ ಆಡಿಯೊ ಬ್ರಾಡ್ ಕಾಸ್ಟ್ (ಡಿಎಬಿ), ವೈರ್ಲೆಸ್ ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ಡಿಜಿಟಲ್ ಡ್ರೈವರ್ ಇನ್ಸ್‌ಟ್ರೂಮೆಂಟ್ ಕ್ಲಸ್ಟರ್, ಹೆಡ್-ಅಪ್ ಡಿಸ್ಪ್ಲೇ, 4-ಝೋನ್ ಆಟೋ ಕ್ಲೈಮೆಟ್ ಕಂಟ್ರೋಲ್, ಪ್ರೀಮಿಯಂ ಮೆರಿಡಿಯನ್ ಸೌಂಡ್ ಸಿಸ್ಟಮ್, ಮಸಾಜ್ ಫಂಕ್ಷನ್‌ನೊಂದಿಗೆ 24-ವೇ ಹೀಟೆಡ್ ಮತ್ತು ಕೂಲ್ಡ್ ಫ್ರಂಟ್ ಸೀಟುಗಳಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

hardik-pandya-customized-his-range-rover-sport-with-matt-red

3.0-ಲೀಟರ್ ಪಿ 400 ಇಂಜಿನಿಯಂ ಟರ್ಬೋಚಾರ್ಜ್ಡ್ ಇನ್ಲೈನ್ - 6 ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹೊಂದಿರುವ ವೇರಿಯೆಂಟ್ ಅನ್ನು ಪಾಂಡ್ಯ ಖರೀದಿಸಿದ್ದಾರೆ ಎಂದು ಹೇಳಲಾಗುತ್ತದೆ. 100 ಕಿ.ಮೀ ವೇಗವನ್ನು ಕೇವಲ 5.9 ಸೆಕೆಂಡುಗಳಲ್ಲಿ ತಲುಪುವ ಸಾಮರ್ಥ್ಯವನ್ನು ಹೊಂದಿದೆ. ಇದು 394 ಬಿಹೆಚ್ ಪವರ್ ಮತ್ತು 550 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್‌ನೊಂದಿಗೆ ಈ ಕಾರನ್ನು ನೀಡಲಾಗುತ್ತದೆ.

"1234" ವಿಐಪಿ ಪ್ಲೇಟ್: ಹಾರ್ದಿಕ್ ಅವರ ರೇಂಜ್ ರೋವರ್ ಐಕಾನಿಕ್ "1234" ನಂಬರ್ ಪ್ಲೇಟ್ ಅನ್ನು ಹೊಂದಿದೆ. ಈ ಸಂಖ್ಯೆಯನ್ನು ಅವರು ತಮ್ಮ ಮರ್ಸಿಡಿಸ್ ಬೆಂಝ್ ಜಿ63 ಎಎಂಜಿಗಾಗಿ ಈ ಹಿಂದೆ ಆಯ್ಕೆ ಮಾಡಿದ್ದಾರೆ. ಇದೀಗ ಇದೇ ನಂಬರ್ ಅವರ ಹೊಸದಾಗಿ ಮಾಡಿಫೈಗೊಂಡಿರುವ ರೇಂಜ್ ರೋವರ್ ಸ್ಪೋರ್ಟ್ ಎಸ್‌ಯುವಿನಲ್ಲೂ ಕಾಣಿಸಿಕೊಂಡಿರುವುದು ವಿಶೇಷ.

ಕೇವಲ ರೇಂಜ್ ರೋವರ್ ಸ್ಪೋರ್ಟ್ ಮಾತ್ರವಲ್ಲದೇ ತಮ್ಮ ಗ್ಯಾರೇಜ್‌ನಲ್ಲಿ ಲೆಕ್ಸಸ್ ಎಲ್ಎಂ 350 ಹೆಚ್ ಅಲ್ಟ್ರಾ ಐಷಾರಾಮಿ ಎಂಪಿವಿಯನ್ನು ಸಹ ಹೊಂದಿದ್ದಾರೆ. ಜೊತೆಗೆ ಮರ್ಸಿಡಿಸ್ ಬೆಂಝ್ ಜಿ 63 ಎಎಂಜಿ ಎಸ್‌ಯುವಿ ಮತ್ತು ಲ್ಯಾಂಬೊರ್ಗಿನಿ ಹುರಾಕನ್ ಇವೊ ಹೊಂದಿದ್ದು, ಇದು ಅರಾನ್ಸಿಯೋ ಆರ್ಗೋಸ್ ಎಂಬ ದುಬಾರಿ ಬೆಲೆಯ ಬಣ್ಣದಲ್ಲಿ ಅಲಂಕರಿಸಲ್ಪಟ್ಟಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, November 18, 2024, 15:56 [IST]
English summary
Hardik pandya customized his range rover sport with matt red
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+