ಟೈಟಾನಿಕ್ ಮರೆತುಬಿಡಿ; ಬಂದಿದೆ 4 ಫುಟ್ಬಾಲ್ ಮೈದಾನಕ್ಕಿಂತ ದೊಡ್ಡದಾದ 'ಸಾಗರದ ರಾಜ'

By Nagaraja

ಇತಿಹಾಸ ಪುಟ ತೆರೆದು ನೋಡಿದಾಗ 20ರ ದಶಕದ ಆರಂಭಿಕ ಕಾಲಘಟ್ಟದಲ್ಲಿ ನಡೆದ ವಿಶ್ವದ ಅತಿ ದೊಡ್ಡ ಟೈಟಾನಿಕ್ ಹಡಗು ಮಹಾ ದುರಂತದ ಕಹಿ ನೆನಪು ಈಗಲೂ ಮಾಸದೇ ಉಳಿದಿದೆ. ತದಾ ಬಳಿಕ ಸಾಗರಯಾನದಲ್ಲಿ ಹಡಗುಗಳ ಭದ್ರತೆಗೂ ಅತಿ ಹೆಚ್ಚಿನ ಪ್ರಾಮುಖ್ಯತೆ ಕೂಡಲಾಯಿತು. ಆಧುನಿಕ ಕಾಲಘಟ್ಟದಲ್ಲಿ ಇತರೆಲ್ಲ ಸಂಚಾರ ಮಾರ್ಗದಂತೆ ಸಾಗರಯಾನಕ್ಕೂ ಹೆಚ್ಚಿನ ಮಹತ್ವವಿದೆ.

ಏತನ್ಮಧ್ಯೆ ಸ್ಪರ್ದಾತ್ಮಕ ಮಾರುಕಟ್ಟೆಯಲ್ಲಿ ಹಡಗು ಸಂಸ್ಥೆಗಳ ನಡುವೆ ಭಾರಿ ಪೈಪೋಟಿಯೂ ಏರ್ಪಟ್ಟಿದೆ. ಈ ನಡುವೆ ವಿಶ್ವದ ಅತಿ ದೊಡ್ಡ ಹಡಗು 'ಹಾರ್ಮನಿ ಆಫ್ ದಿ ಸೀಸ್' ತನ್ನ ಚೊಚ್ಚಲ ಪಯಣವನ್ನು ಆರಂಭಿಸಲಿದ್ದು, ದಾಖಲೆ ಪುಟ ಸೇರಲಿದೆ.

ವಿಶ್ವದ ಅತಿ ದೊಡ್ಡ ಹಡಗು 'ಹಾರ್ಮನಿ ಆಫ್ ದಿ ಸೀಸ್'

ವಿಶ್ವದ ಅತಿ ದೊಡ್ಡ ಹಡಗೆಂಬ ಖ್ಯಾತಿಗೆ ರಾಯಲ್ ಕೆರೆಬಿಯನ್‌ಗೆ ಸೇರಿದ ಹಾರ್ಮನಿ ಆಫ್ ದಿ ಸೀಸ್ ಪಾತ್ರವಾಗಿದೆ. ವಿಶ್ವದ ಅತಿ ದೊಡ್ಡ ವಿಹಾರ ನೌಕೆಯು ಇಂಗ್ಲೆಂಡ್ ನ ಸೌಂಥಪ್ಟನ್ ನಿಂದ ಹಾಲೆಂಡ್ ನ ರೊಟೆರ್ ಡ್ಯಾಮ್ ಗೆ ಪಯಣ ಬೆಳೆಸಲಿದೆ.

ವಿಶ್ವದ ಅತಿ ದೊಡ್ಡ ಹಡಗು 'ಹಾರ್ಮನಿ ಆಫ್ ದಿ ಸೀಸ್'

ಫ್ರಾನ್ಸ್ ನಲ್ಲಿರುವ ವಿಶ್ವ ವಿಖ್ಯಾತ ಈಫಲ್ ಗೋಪರಗಿಂತಲೂ ದೊಡ್ಡದಾಗಿರುವ ಹಾರ್ಮನಿ ಆಫ್ ದಿ ಸೀಸ್ ಒಟ್ಟು 362 ಮೀಟರ್ ಗಳಷ್ಟು ಉದ್ದವನ್ನು ಹೊಂದಿದೆ. ಅಲ್ಲದೆ 16 ಡೆಕ್ ಸೌಲಭ್ಯಗಳು ಇದರಲ್ಲಿದೆ.

ವಿಶ್ವದ ಅತಿ ದೊಡ್ಡ ಹಡಗು 'ಹಾರ್ಮನಿ ಆಫ್ ದಿ ಸೀಸ್'

ವಿಶ್ವದ ಅತಿ ದೊಡ್ಡ ಹಡಗು ಹಾರ್ಮನಿ ಆಫ್ ದಿ ಸೀಸ್, ನಾಲ್ಕು ಫುಟ್ಬಾಲ್ ಮೈದಾನಕ್ಕಿಂತಲೂ ದೊಡ್ಡದಾಗಿದೆ. ಅಲ್ಲದೆ ಬೇಸಿಗೆ ರಜಾ ಸಮಯ ಕಳೆಯುವವರಿಗೆ ಪರಿಪೂರ್ಣ ಆನಂದವನ್ನು ಓದಗಿಸಲಿದೆ.

ವಿಶ್ವದ ಅತಿ ದೊಡ್ಡ ಹಡಗು 'ಹಾರ್ಮನಿ ಆಫ್ ದಿ ಸೀಸ್'

ಹಾರ್ಮನಿ ಆಫ್ ದಿ ಸೀಸ್ ನಿರ್ಮಾಣಕ್ಕೆ ಬರೋಬ್ಬರಿ 77,099,776,000 ರುಪಾಯಿಗಳನ್ನು (£800m) ವ್ಯಯ ಮಾಡಲಾಗಿದೆ. ಇದು ಸಹ ಮಗದೊಂದು ದಾಖಲೆಯಾಗಿದೆ.

ವಿಶ್ವದ ಅತಿ ದೊಡ್ಡ ಹಡಗು 'ಹಾರ್ಮನಿ ಆಫ್ ದಿ ಸೀಸ್'

6410 ಪ್ರಯಾಣಿಕರನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯವುಳ್ಳ ಜಗತ್ತಿನ ಬೃಹತ್ ಹಡಗಿನಲ್ಲಿ 5479 ಆತಿಥಿಗಳಿಗೆ ಪ್ರಯಾಣಿಸಬಹುದಾಗಿದೆ.

ವಿಶ್ವದ ಅತಿ ದೊಡ್ಡ ಹಡಗು 'ಹಾರ್ಮನಿ ಆಫ್ ದಿ ಸೀಸ್'

32 ತಿಂಗಳುಗಳ ಹಿಂದೆ ಅಂದರೆ 2013ರಲ್ಲಿ ಫ್ರಾನ್ಸ್‌ನ ಎಸ್‌ಟಿಎಕ್ಸ್ ನೌಕಾಂಗಣದಲ್ಲಿ 2500ದಷ್ಟು ನೌಕರರೊಂದಿಗೆ ಆರಂಭಿಸಿದ ಕೆಲಸವು 10 ಮಿಲಿಯನ್ ತಾಸುಗಳಷ್ಟು ಕ್ರಮಿಸಿದ ಬಳಿಕ ಆಕರ್ಷಕ ಹಡಗು ನಿರ್ಮಾಣಗೊಂಡಿದೆ.

ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

  • ಫ್ಲೊರೈಡರ್,
  • ಸ್ಪೋರ್ಟ್ಸ್ ಕೋರ್ಟ್,
  • ಸೂಟ್ಸ್,
  • ಯೂತ್ ಝೋನ್,
  • ಪೂಲ್ ಆಂಡ್ ವಾಟರ್ ಪಾರ್ಕ್,
  • ಅಕ್ವಾಥಿಯೇಟರ್,
  • ರೆಸ್ಟೋರೆಂಟ್ ಆಂಡ್ ಬಾರ್,
  • ಸೆಂಟ್ರಲ್ ಪಾರ್ಕ್,
  • ರಾಯಲ್ ಪ್ರೊಮಿನೇಡ್,
  • ಮೈನ್ ಥಿಯೇಟರ್,
  • ಜಿಮ್ ಆಂಡ್ ಸ್ಪಾ
  • ಸೌಲಭ್ಯಗಳು

    ಸೌಲಭ್ಯಗಳು

    • 2747 ಸ್ಟೇಟ್ ರೂಮ್ ಮತ್ತು ಸೂಟ್ಸ್,
    • ಪ್ರಯಾಣಿಕರಿಗೆ ಜಿಪಿಎಸ್ ಡಿವೈಸ್,
    • 10 ಅಂತಸ್ತು,
    • ತ್ರಿಡಿ ಮಂದಿರ,
    • ಡೈವಿಂಗ್ ಗಾಗಿ ಅಕ್ವಾ ಥಿಯೇಟರ್ ಸೆಂಟ್ರಲ್ ಪಾರ್ಕ್,
    • ಸೌಲಭ್ಯಗಳು

      ಸೌಲಭ್ಯಗಳು

      • ಬೋರ್ಡ್ ವಾಲ್ಕ್ ಬ್ರೋಡ್ ವೇ ಶೋ,
      • ಡ್ರೀಮ್ ವರ್ಕ್ಸ್ ಎಕ್ಸ್ ಪೀರಿಯನ್ಸ್,
      • ಬೂಟಿಕ್ ಶಾಪ್,
      • ರೋಬೋಟ್ ಪರಿಚಾರಕರು,
      • ಮನರಂಜನೆ,
      • ಸೌಲಭ್ಯಗಳು

        ಸೌಲಭ್ಯಗಳು

        • ನೈಟ್ ಕ್ಲಬ್,
        • ಪ್ಲೇ ಆರ್ಕೇಡ್,
        • ಬಾರ್, ಫಿಟ್ನೆಸ್ ಕೇಂದ್ರ,
        • ಯೂತ್ ವಲಯ,
        • ಪೂಲ್ ಮತ್ತು ಕ್ರೀಡಾ ಕೇಂದ್ರ, ಸೆಂಟ್ರಲ್ ಪಾರ್ಕ್,
        • ಸೌಲಭ್ಯಗಳು

          ಸೌಲಭ್ಯಗಳು

          • ಲಕ್ಕಿ ಕ್ಲೈಂಬರ್ ಪ್ಲೇ ಗ್ರೌಂಡ್,
          • ಅಡ್ವೆಂಚರ್ ಓಷಿಯನ್,
          • ಫ್ರೀ ಹೈ ಸ್ಪೀಡ್ ಇಂಟರ್ ನೆಟ್,
          • ವೈದ್ಯಕೀಯ ನೆರವು,
          • ಫರ್ಫೆಕ್ಟ್ ಸ್ಟ್ರೋಮ್ ವಾಟರ್ ಸ್ಲೈಡ್,
          • 10 ಸ್ಟೋರಿ ಡ್ಯುಯಲ್ ಡ್ರೈ ಸ್ಲೈಡ್ (Ultimate Abyss)
          • ವಿಶ್ವದ ಅತಿ ದೊಡ್ಡ ಹಡಗು 'ಹಾರ್ಮನಿ ಆಫ್ ದಿ ಸೀಸ್'

            ಬಾರ್ಸಿಲೋನಾ ಬಂದರಿನಿಂದ ಪಶ್ಚಿಮ ಮೆಡಿಟರೇನಿಯನ್ ಹಾದಿಯಾಗಿ ತೇಲಲಿದೆ. ಆತಿಥಿಗಳಿಗೆ 80 ರಾಷ್ಟ್ರೀಯತೆಗೆ ಸೇರಿದ 2100 ರಷ್ಟು ಸಿಬ್ಬಂದಿಗಳು ಸೇವೆ ಸಲ್ಲಿಸಲಿದ್ದಾರೆ.

            ವಿಶ್ವದ ಅತಿ ದೊಡ್ಡ ಹಡಗು 'ಹಾರ್ಮನಿ ಆಫ್ ದಿ ಸೀಸ್'

            7500 ಅಶ್ವಶಕ್ತಿ ಉತ್ಪಾದಿಸಬಲ್ಲ ನಾಲ್ಕು ಥ್ರಸ್ಟರ್ ಗಳು ಇದರಲ್ಲಿದ್ದು, ಒಟ್ಟಾರೆಯಾಗಿ ಬರೋಬ್ಬರಿ 30,000 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಲ್ಲದೆ ಗಂಟೆಗೆ 40.23 ಕೀ.ಮೀ.ವೇಗದಲ್ಲಿ (25 ಮೈಲು) ಸಂಚರಿಸಲಿದೆ.

            ವಿಶ್ವದ ಅತಿ ದೊಡ್ಡ ಹಡಗು 'ಹಾರ್ಮನಿ ಆಫ್ ದಿ ಸೀಸ್'

            ಹಡಗಿನೊಳಗೆ ಎಲ್ಲ ಐಷಾರಾಮಿ ಸೌಲಭ್ಯಗಳಿಗೆ ಆದ್ಯತೆ ಕೊಡಲಾಗಿದ್ದು, ಬೃಹತ್ತಾದ ಲಿವಿಂಗ್ ಪ್ರದೇಶ ಜೊತೆಗೆ ಕೃತಕ ಬಾಲ್ಕನಿ ವ್ಯವಸ್ಥೆಯೂ ಇರುತ್ತದೆ. ಇಂತಹ ವೈಶಿಷ್ಟ್ಯಗಳು ಕ್ವಾಟಂ ದರ್ಜೆಯ ವಿಹಾರ ನೌಕೆಗಳಲ್ಲಿ ಮಾತ್ರ ಕಾಣಸಿಗುತ್ತದೆ.

            ವಿಶ್ವದ ಅತಿ ದೊಡ್ಡ ಹಡಗು 'ಹಾರ್ಮನಿ ಆಫ್ ದಿ ಸೀಸ್'

            ಪರಿಸರ ಸ್ನೇಹಿ ಎನಿಸಿಕೊಳ್ಳಲಿರುವ ಹಾರ್ಮನಿ ಆಫ್ ದಿ ಸೀಸ್ ಹಡಗಿನಲ್ಲಿ 10,500ರಷ್ಟು ಸಸ್ಯಗಳನ್ನು ಮತ್ತು 52 ಮರಗಳನ್ನು ನೆಡಲಾಗಿದೆ.

            ವಿಶ್ವದ ಅತಿ ದೊಡ್ಡ ಹಡಗು 'ಹಾರ್ಮನಿ ಆಫ್ ದಿ ಸೀಸ್'

            23 ಈಜುಕೊಳ ಮತ್ತು ಇತರ ಜಲಾವೃತ ಆಕರ್ಷಣೆಗಳಿಗಾಗಿ ಐದು ಮಿಲಿಯನ್ ಪೌಂಡುಗಳಷ್ಟು ನೀರನ್ನು ಬಳಕೆ ಮಾಡಲಾಗಿದೆ.

            ವಿಶ್ವದ ಅತಿ ದೊಡ್ಡ ಹಡಗು 'ಹಾರ್ಮನಿ ಆಫ್ ದಿ ಸೀಸ್'

            ಅಷ್ಟಕ್ಕೂ 1108 ಅಡಿ ಉದ್ದದ ವಿಶ್ವದ ಅತಿ ದೊಡ್ಡ ಹಡಗು ಹಾರ್ಮನಿ ಆಫ್ ದಿ ಸೀಸ್ ಬರೋಬ್ಬರಿ 227000 ಲಕ್ಷ ಟನ್ ಗಳಷ್ಟು ಭಾರ ಹೊಂದಿದೆ.

More from DriveSpark

Article Published On: Thursday, May 19, 2016, 10:31 [IST]
English summary
Billion Dollar Boat Gets Ready For Its First Ever Cruise
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+