ಅಗ್ಗದ ಮಾರುತಿ ಕಾರು ಖರೀದಿಸಿದ ಪ್ರಮುಖ ನಟ.. ಬೆಲೆ ಎಷ್ಟು, ಏನೆಲ್ಲಾ ವಿಶೇಷತೆಗಳಿವೆ?

ಬಾಲಿವುಡ್ ಹಾಗೂ ಟಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಹರ್ಷವರ್ಧನ್ ರಾಣೆ (Harshvardhan Rane) ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ತಮ್ಮದೇಯಾದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. 2010ರಲ್ಲಿ ತೆಲುಗಿನಲ್ಲಿ ತೆರೆಕಂಡ 'ಥಕಿತಾ ಥಕಿತಾ' ಚಿತ್ರದ ಮೂಲಕ ಬೆಳ್ಳಿ ತೆರೆಗೆ ಎಂಟ್ರಿ ಕೊಟ್ಟಿದ್ದರು. ಇದರೊಂದಿಗೆ ರವಿ ತೇಜ ನಟನೆಯ ಬೆಂಗಾಲ್ ಟೈಗರ್ ಹಾಗೂ ನಯನತಾರಾ ಮುಖ್ಯ ಭೂಮಿಕೆಯಲ್ಲಿದ್ದ ಅನಾಮಿಕ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದರು. ಹಿಂದಿಯ ಪಲ್ಟನ್ ಚಿತ್ರ ಹರ್ಷವರ್ಧನ್ ಅವರಿಗೆ ದೊಡ್ಡ ಮಟ್ಟದ ಖ್ಯಾತಿಯನ್ನು ತಂದುಕೊಂಡಿತ್ತು.

ಇತ್ತೀಚೆಗೆ ನಟ ಹರ್ಷವರ್ಧನ್ ರಾಣೆ ಹೊಚ್ಚ ಹೊಸ ಮಾರುತಿ ಸುಜುಕಿ ಜಿಮ್ನಿ (Maruti Suzuki Jimny) ಆಫ್-ರೋಡ್ ಎಸ್‌ಯುವಿಯನ್ನು ಖರೀದಿ ಮಾಡಿದ್ದಾರೆ. ಈ ಕುರಿತಂತೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿಯೂ ಪೋಸ್ಟ್‌ ಮಾಡಿದ್ದಾರೆ. ಅದಕ್ಕೆ ಟೈರ್ ಛೋಟೇ, ಆಂಬಿಷನ್ ಬಡೇ (ಚಕ್ರಗಳು ಸಣ್ಣದು, ಮಹತ್ವಾಕಾಂಕ್ಷೆ ದೊಡ್ಡದು) ಎಂಬ ಶೀರ್ಷಿಕೆಯನ್ನು ಬರೆದಿದ್ದಾರೆ. ಇದೇ ಕಾರನ್ನು ತಮ್ಮ ಅಭಿರುಚಿಗೆ ತಕ್ಕಂತೆ ಮರುವಿನ್ಯಾಸ ಮಾಡಿಸಿಕೊಂಡಿದ್ದಾರೆ.

Harshvardhan Rane Buys Maruti Suzuki Jimny Details

ಮಾರುತಿ ಸುಜುಕಿ ಜಿಮ್ನಿ ವಿಶೇಷತೆಗಳೇನು:

ಸದ್ಯ ಜಿಮ್ನಿ ಎಸ್‌ಯುವಿಯು ಕನಿಷ್ಠ ರೂ.12.76 ಲಕ್ಷ ಹಾಗೂ ಗರಿಷ್ಠ ರೂ.15.05 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಕೇಂದ್ರ ಸರ್ಕಾರವು ಕಾರುಗಳ ಖರೀದಿ ಮೇಲೆ ವಿಧಿಸುತ್ತಿದ್ದ ಜಿಎಸ್‌ಟಿ ಪ್ರಮಾಣವನ್ನು 28% ರಿಂದ 18%ಗೆ ಇಳಿಸಿದೆ. ಹೊಸ ದರಗಳು ಸೆಪ್ಟೆಂಬರ್ 22 ರಿಂದ ಜಾರಿಯಾಗಲಿದೆ. ನಂತರದಲ್ಲಿ ಈ ಕಾರಿನ ಬೆಲೆಯೂ ಇನ್ನಷ್ಟು ಇಳಿಕೆಯಾಗಲಿದೆ.

ಇದು ಆಲ್ಫಾ & ಡೆಲ್ಟಾ ಎಂಬ 2 ಅತ್ಯಾಧುನಿಕ ರೂಪಾಂತರಗಳೊಂದಿಗೆ (ವೇರಿಯೆಂಟ್) ಮಾತ್ರ ಸಿಗುತ್ತದೆ. ಹೊರಭಾಗದಲ್ಲಿ ನೋಡುಗರ ಕಣ್ಣು ಕುಕ್ಕುವಂತಹ ವಿನ್ಯಾಸವನ್ನು ಹೊಂದಿದೆ. ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್ ಲ್ಯಾಂಪ್‌ಗಳು ಮತ್ತು ಅಲಾಯ್ ವೀಲ್‌ಗಳನ್ನು ಪಡೆದಿದೆ. ಬ್ಲ್ಯೂಯಿಸ್ ಬ್ಲ್ಯಾಕ್, ಗ್ರಾನೈಟ್ ಗ್ರೇ, ಸಿಜ್ಲಿಂಗ್ ರೆಡ್, ನೆಕ್ಸಾ ಬ್ಲ್ಯೂ & ಪರ್ಲ್ ಆರ್ಕ್ಟಿಕ್ ವೈಟ್ ಎಂಬ ಬಣ್ಣಗಳೊಂದಿಗೂ ಲಭ್ಯವಿದೆ.

ಈ ಕಾರು 3985 ಎಂಎಂ ಉದ್ದ, 1645 ಎಂಎಂ ಅಗಲ ಹಾಗೂ 1720 ಎಂಎಂ ಎತ್ತರವಿದೆ. 210 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2590 ಎಂಎಂ ವೀಲ್‌ಬೇಸ್‌ನ್ನು ಹೊಂದಿದೆ. 4 ಆಸನ ಆಯ್ಕೆ ವ್ಯವಸ್ಥೆಯನ್ನು ಪಡೆದಿದೆ. ಪ್ರಯಾಣಿಕರು ಆರಾಮದಾಯಕವಾಗಿ ಓಡಾಟ ನಡೆಸಬಹುದು. ದೂರದ ಊರುಗಳಿಗೆ ಹೋಗುವ ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು 208 ಲೀಟರ್‌ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ.

ನೂತನ ಜಿಮ್ನಿಯು ಹೆಚ್ಚು ಬಲಿಷ್ಠವಾದ ಪವರ್‌ಟ್ರೇನ್‌ನ್ನು ಪಡೆದಿದೆ. 1.5-ಲೀಟರ್ ಪೆಟ್ರೋಲ್ ಎಂಜಿನ್‌ನ್ನು ಹೊಂದಿದೆ. ರೂಪಾಂತರಗಳಿಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್/ 4-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಪಡೆದಿದೆ. 16 ರಿಂದ 17 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ. 40 ಲೀಟರ್‌ನಷ್ಟು ಫ್ಯುಯೆಲ್ ಟ್ಯಾಂಕ್‌ನ್ನು ತನ್ನದಾಗಿಸಿಕೊಂಡಿದೆ. 155 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ. ಕೇವಲ 4.5 ಸೆಕೆಂಡುಗಳಲ್ಲಿ 0 ರಿಂದ 60 ಕೆಎಂಪಿಹೆಚ್ ವೇಗವನ್ನು ಹೊಂದಲಿದೆ.

ಇದು ಹತ್ತಾರು ಅತ್ಯುತ್ತಮವಾದ ವೈಶಿಷ್ಟ್ಯಗಳನ್ನು ಪಡೆದಿದೆ. 9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಮಲ್ಟಿ ಫಂಕ್ಷನ್ ಸ್ಟೀರಿಂಗ್ ವೀಲ್, ಕ್ರೂಸ್ ಕಂಟ್ರೋಲ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್ ಹಾಗೂ ಮ್ಯಾನುವಲ್ ಏರ್ ಕಂಡೀಷನ್‌ನ್ನು ಒಳಗೊಂಡಿದೆ.

ಈ ಕಾರು ಪ್ರಯಾಣಿಕರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆ ಒದಗಿಸುತ್ತದೆ. ಅದಕ್ಕಾಗಿ 6 ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ರೇರ್ ಪಾರ್ಕಿಂಗ್ ಸೆನ್ಸರ್ಸ್, ಹಿಲ್ ಹೋಲ್ಡ್ ಕಂಟ್ರೋಲ್ ಮತ್ತು 3-ಪಾಯಿಂಟ್ ಸೀಟ್ ಬೆಲ್ಟ್‌ನಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಪಡೆದಿದೆ.

More from DriveSpark

Article Published On: Thursday, September 11, 2025, 15:38 [IST]
English summary
Harshvardhan rane buys maruti suzuki jimny details
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+