ರಿಷಬ್ ಪಂತ್ ಅವರನ್ನು ರಕ್ಷಿಸಿದ ಬಸ್ ಚಾಲಕ, ನಿರ್ವಾಕರಿಗೆ ಹರಿಯಾಣ ಸರ್ಕಾರದಿಂದ ಪುರಸ್ಕಾರ

ಭಾರತದ ಯುವ ಕ್ರಿಕೆಟ್ ಆಟಗಾರ ರಿಷಬ್ ಪಂತ್ 2022 ರ ಅಂತ್ಯದ ವೇಳೆಗೆ ಭೀಕರ ಕಾರು ಅಪಘಾತದಿಂದ ಬದುಕುಳಿದ ಸುದ್ದಿ ಅನೇಕರನ್ನು ಆಘಾತಕ್ಕೀಡು ಮಾಡಿದೆ. ಅಭಿಮಾನಿಗಳು ರಿಷಬ್ ಗಾಯಗಳಿಂದ ಶೀಘ್ರವಾಗಿ ಚೇತರಿಸಿಕೊಳ್ಳಲು ಪ್ರಾರ್ಥಿಸುತ್ತಿರುವ ಬೆನ್ನಲ್ಲೇ ಅವರನ್ನು ಅಪಘಾತದಿಂದ ರಕ್ಷಿಸಿದ ಬಸ್‌ ಚಾಲಕ ಮತ್ತು ಕಂಡಕ್ಟರ್ ಅವರನ್ನು ಗೌರವಿಸಿ ಪುರಸ್ಕರಿಸಲಾಗಿದೆ.

ಹರಿಯಾಣ ರೋಡ್‌ವೇಸ್ ಬಸ್ ಚಾಲಕ ಸುಶೀಲ್ ಕುಮಾರ್ ಮತ್ತು ಕಂಡಕ್ಟರ್ ಪರಮ್‌ಜೀತ್ ಅವರಿಂದಲೇ ರಿಷಬ್ ಬದುಕುಳಿದಿದ್ದಾರೆ. ಈ ಇಬ್ಬರೂ ಪಂತ್ ಅವರ ಜೀವ ಉಳಿಸಿದ ಕಾರಣ ಹರಿಯಾಣ ರೋಡ್‌ವೇಸ್‌ನಿಂದ ಗೌರವ ಮತ್ತು ಪುರಸ್ಕಾರ ಪಡೆದಿದ್ದಾರೆ. ಅವರ ಇತ್ತೀಚಿನ ಮಾಧ್ಯಮ ಸಂವಾದದಲ್ಲಿ, ತಮ್ಮ ಕರ್ತವ್ಯವನ್ನು ಮುಗಿಸಿ ಪಾಣಿಪತ್‌ಗೆ ಹಿಂತಿರುಗುವಾಗ ಸುಶೀಲ್ ಕುಮಾರ್ ಮತ್ತು ಪರಮ್‌ಜೀತ್ ಅವರಿಗೆ ಪ್ರಶಂಸಾ ಪತ್ರ ಮತ್ತು ಶೀಲ್ಡ್ ಅನ್ನು ಬಹುಮಾನವಾಗಿ ನೀಡಲಾಗಿದೆ ಎಂದು ಹೇಳಿದರು.

ಬಸ್ ಚಾಲಕ ಮತ್ತು ಕಂಡಕ್ಟರ್ ಅವರ ಪ್ರಯತ್ನಕ್ಕಾಗಿ ಹರಿಯಾಣ ಸಾರಿಗೆ ಸಚಿವ ಮೂಲಚಂದ್ ಶರ್ಮಾ ಕೂಡ ಶ್ಲಾಘಿಸಿದ್ದಾರೆ. ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಕ್ರಿಕೆಟಿಗನ ಐಷಾರಾಮಿ ಕಾರು ಡಿವೈಡರ್‌ಗೆ ಅಪ್ಪಳಿಸುವ ಮೊದಲು ಬೆಂಕಿಗೆ ಆಹುತಿಯಾದಾಗ ಸುಶೀಲ್ ಕುಮಾರ್ ಮತ್ತು ಪರಮ್‌ಜೀತ್ ರಿಷಬ್ ಪಂತ್‌ನ ಮೊದಲ ರಕ್ಷಕರಾಗಿದ್ದರು. ಹೆದ್ದಾರಿಯಲ್ಲಿ ಹರಿಯಾಣ ರೋಡ್‌ವೇಸ್ ಬಸ್ ಚಲಾಯಿಸುತ್ತಿದ್ದ ಕುಮಾರ್, ಭೀಕರ ಅಪಘಾತವನ್ನು ಕಂಡು ಪಂತ್‌ಗೆ ಸಹಾಯ ಮಾಡಲು ಪಕ್ಕಕ್ಕೆ ನಿಲ್ಲಿಸಿದ್ದರು.

ಅವರು ಮೊದಲಿಗೆ ಪಂತ್ ಅವರನ್ನು ಗುರುತಿಸದಿದ್ದರೂ, ಅವರು ಮತ್ತು ಅವರ ಕಂಡಕ್ಟರ್ ಪರಮ್ಜೀತ್ ಸಹಾಯ ಮಾಡಲು ಮುಂದಾದರು, ನಂತರ ಪರಮ್‌ಜೀತ್ ಪಂತ್ ಅವರನ್ನು ಗುರುತಿಸಿ ಅವರು ಭಾರತೀಯ ಕ್ರಿಕೆಟಿಗ ಎಂದು ಹೇಳಿದರು. ಆ ಸಮಯದಲ್ಲಿ ರಿಷಬ್ ತೀವ್ರ ಗಾಯಗಳಿಂದ ಬಳಲುತಿದ್ದ ಕಾರಣ ಅವರನ್ನು ಮೊದಲು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ ಎಂದು ತಿಳಿದುಬಂದಿದೆ. ಇದೀಗ ಈ ಇಬ್ಬರಿಂದಲೇ ರಿಷಬ್ ಆಸ್ಪತ್ರೆಗೆ ದಾಖಲಾಗಿ ಬದುಕುಳಿದಿದ್ದಾರೆ ಎಂಬ ಸುದ್ದಿ ಹೊರಬರುತ್ತಿದ್ದಂತೆ ಸಖತ್ ಫೇಮಸ್ ಆಗಿದ್ದಾರೆ.

ಉತ್ತರಾಖಂಡ ಸರ್ಕಾರವು ಸಹ ಸತ್ಕಾರ ಮಾಡಲು ಯೋಜಿಸಿದೆ
ಹರ್ಯಾಣ ಸರ್ಕಾರದ ಈ ಮೆಚ್ಚುಗೆಯ ಹೆಜ್ಜೆಯ ಜೊತೆಗೆ ಇದೀಗ ಉತ್ತರಾಖಂಡ ಸರ್ಕಾರ ಕೂಡ ಅದನ್ನೇ ಮಾಡಲು ಮುಂದಾಗಿದೆ. ಅಪಘಾತದ ಸ್ಥಳದಿಂದ ಆಸ್ಪತ್ರೆಗೆ ಪಂತ್ ಅವರನ್ನು ರಕ್ಷಿಸಲು ಸಹಾಯ ಮಾಡಿದ ಎಲ್ಲಾ ದಾರಿಹೋಕರಿಗೆ ರಸ್ತೆ ಸಾರಿಗೆ ಸಚಿವಾಲಯದ 'ಗುಡ್ ಸಮರಿಟನ್' ಯೋಜನೆಯಡಿ ಬಹುಮಾನ ನೀಡಲಾಗುವುದು ಎಂದು ಉತ್ತರಾಖಂಡ ಪೊಲೀಸ್ ಮಹಾನಿರ್ದೇಶಕ ಅಶೋಕ್ ಕುಮಾರ್ ಹೇಳಿದ್ದಾರೆ. ಹರ್ಯಾಣ ರೋಡ್‌ವೇಸ್‌ನ ಬಸ್ ಚಾಲಕ ಮತ್ತು ಕಂಡಕ್ಟರ್ ಇತರ ಸ್ಥಳೀಯ ಜನರನ್ನು ಸತ್ಕರಿಸಲು ಮುಂದಾಗಿದ್ದಾರೆ.

ರಿಷಬ್ ಪಂತ್ ಅವರ ಅತಿವೇಗದ ಅಪಘಾತ
2022 ರ ಡಿಸೆಂಬರ್ 30 ರ ಮುಂಜಾನೆ ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಿಂದ ರಿಷಬ್ ಪಂತ್ ಪಾರಾಗಿದ್ದಾರೆ. ಈ ಅಪಘಾತದಲ್ಲಿ, Mercedes-AMG GLE SUV ಅನ್ನು ರಿಷಬ್ ಪಂತ್ ಅವರು ಅತಿ ವೇಗದಲ್ಲಿ ಚಲಾಯಿಸುತ್ತಿದ್ದರು, ಅದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಘಟನೆ ಸಂಭವಿಸಿದೆ. ಈ ಅಪಘಾತದಲ್ಲಿ, GLE ಸಂಪೂರ್ಣವಾಗಿ ಸುಟ್ಟು ಬೂದಿಯಾಗುವ ಮೊದಲು, ಒಂದೆರಡು ಬಾರಿ ಉರುಳಿದೆ.

ಘರ್ಷಣೆ ಮತ್ತು ಕಾರು ಬೂದಿಯಾಗಿ ಸುಟ್ಟುಹೋದ ನಡುವಿನ ಸಮಯವು ಕೇವಲ 5-7 ಸೆಕೆಂಡುಗಳಿದ್ದು, ಅಷ್ಟರೊಳಗೆ ಪಂತ್ ವಿಂಡ್‌ಸ್ಕ್ರೀನ್ ಅನ್ನು ಒಡೆದು ಕಾರಿನಿಂದ ಹೊರಬರುವಲ್ಲಿ ಯಶಸ್ವಿಯಾದರು. ಸದ್ಯ ಪಂತ್ ಅವರು ತಮ್ಮ ಪ್ರಜ್ಞೆಗೆ ಮರಳಿದ್ದಾರೆ, ಆದರೆ ಅವರ ಬೆನ್ನು, ತಲೆ ಮತ್ತು ಪಾದಗಳಿಗೆ ಗಾಯಗಳಾಗಿವೆ. ಹಾಗಾಗಿ ಸದ್ಯ ರಿಷಬ್ ಪಂತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿಯುತ್ತಿದ್ದಾರೆ.

ನಮ್ಮ ಡ್ರೈವ್‌ಸ್ಪಾರ್ಕ್ ವೆಬ್ ತಾಣವು ಇಂತಹ ಪ್ರತಿಯೊಂದು ಸುದ್ದಿಯನ್ನು ಬಹಳ ಆಸಕ್ತಿದಾಯಕವಾಗಿ ವಿವರಿಸುತ್ತದೆ. ಕರ್ನಾಟಕದ ಬಹುತೇಕ ಆಟೋ ಪ್ರಿಯರು ನಮ್ಮ ಎಲ್ಲಾ ಸೋಷಿಯಲ್ ಮೀಡಿಯಾಗಳನ್ನು ಫಾಲೋ ಮಾಡುವ ಮೂಲಕ ಪ್ರೋತ್ಸಾಹಿಸುತ್ತಿದ್ದಾರೆ. ಇಂತಹ ಇನ್ನೂ ಹಲವು ಅಡ್ವೆಂಚರ್ ಕುರಿತ ಸುದ್ದಿಗಳನ್ನು ಓದಲು ನಿಮಗೆ ಆಸಕ್ತಿ ಇದ್ದಲ್ಲಿ ನಮ್ಮ ಸಾಮಾಜಿಕ ಜಾಲತಾಣ ಮಾಧ್ಯಮಗಳಲ್ಲಿ ನಮ್ಮ ಸುದ್ದಿಗಳಿಗೆ ಕಮೆಂಟ್ ಮಾಡಿ ತಿಳಿಸಿ. ಇಂತಹ ಇನ್ನು ಹಲವು ಸುದ್ದಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ.

Most Read Articles

Kannada
English summary
Haryana government awarded the bus driver who saved Rishabh Pant
Story first published: Monday, January 2, 2023, 13:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X