ಪ್ರಧಾನಿ ನಿವಾಸದ ಬಳಿಯೇ ಕಾರ್ ಸ್ಟಂಟ್ - ಕೊನೆಗೂ ಸಿಕ್ಕಿಬಿದ್ದ ಮಿನಿಸ್ಟರ್ ಸಂಬಂಧಿ..!

ದೆಹಲಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ, ನವದೆಹಲಿಯ ಅತಿ ಸೂಕ್ಷ್ಮ ಪ್ರದೇಶದಲ್ಲಿ ಶನಿವಾರ ಸ್ಟಂಟ್‍‍ಗಳನ್ನು ಮಾಡಿದ್ದ ನಿಸ್ಸಾನ್ ಜಿ‍‍ಟಿ ಆರ್ ಕಾರಿನ ಚಾಲಕನನ್ನು ಬಂಧಿಸಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ವರದಿಗಳ ಪ್ರಕಾರ, ಪೊಲೀಸರು ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಾಡಿಫೈಗೊಂಡಿದ್ದ ನಿಸ್ಸಾನ್ ಕಾರ್ ಅನ್ನು ವಶಕ್ಕೆ ಪಡೆದು, ಚಾಲಕನನ್ನು ಬಂಧಿಸಿದ್ದಾರೆ. ಬಂಧಿತ ಚಾಲಕನು ದೆಹಲಿಯ ಅತಿ ಸೂಕ್ಷ್ಮ ಪ್ರದೇಶವಾದ ವಿಜಯ್ ಚೌಕ್‍‍ನಲ್ಲಿ ತನ್ನ ನಿಸ್ಸಾನ್ ಜಿಟಿ ಕಾರಿನಲ್ಲಿ ಸ್ಟಂಟ್ ಮಾಡಿದ್ದ.

ಪ್ರಧಾನಿ ನಿವಾಸದ ಬಳಿಯೇ ಕಾರ್ ಸ್ಟಂಟ್ - ಕೊನೆಗೂ ಸಿಕ್ಕಿಬಿದ್ದ ಮಿನಿಸ್ಟರ್ ಸಂಬಂಧಿ..!

ಬಂಧಿತನು ತನ್ನ ನಿಸ್ಸಾನ್ ಜಿಟಿ ಆರ್ ಕಾರಿನಲ್ಲಿ ಶನಿವಾರ ಬೆಳಗಿನ ಜಾವ 4:30ರ ಸುಮಾರಿಗೆ ವಿಜಯ್ ಚೌಕ್ ಪ್ರದೇಶದಲ್ಲಿ ಡ್ರಿಫ್ಟಿಂಗ್ ಹಾಗೂ ಡೊನಟ್ಸ್ ನಂತಹ ಸ್ಟಂಟ್‍‍ಗಳನ್ನು ಮಾಡಿದ್ದ. ಈ ಪ್ರದೇಶವು ಏಕಾಂತವಾಗಿ ಇರುವುದಾದರೂ, ಈ ಪ್ರದೇಶದಲ್ಲಿ ದಿನದ 24 ಗಂಟೆಗಳ ಕಾಲವೂ ಪೊಲೀಸ್ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಾರೆ. ನಿಸ್ಸಾನ್ ಜಿಟಿ ಆರ್ ವೇಗವಾಗಿ ಬಂದು ಹಲವು ಸ್ಟಂಟ್‍‍ಗಳನ್ನು ಮಾಡಿದ್ದರ ಜೊತೆಗೆ ದೊಡ್ಡ ಶಬ್ದವನ್ನುಂಟು ಮಾಡಿದೆ.

ಇದರಿಂದ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು ಹಾಗೂ ಪತ್ರಕರ್ತರು ಕೆಲಕಾಲ ಗಾಬರಿಗೊಳಗಾಗಿದ್ದರು. ಇದಾದರ ನಂತರ ನಿಸ್ಸಾನ್ ಜಿಟಿ ಆರ್ ಚಾಲಕನು ಅಲ್ಲಿಂದ ಜಾಗ ಖಾಲಿ ಮಾಡಿದರೂ ಸಂಪೂರ್ಣ ಘಟನೆಯು ಅಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆಯ ನಂತರ ದೆಹಲಿ ಪೊಲೀಸರು ಆರೋಪಿ ಚಾಲಕ ಹಾಗೂ ಆತನ ಕಾರನ್ನು ಪತ್ತೆಹಚ್ಚಲು ವಿಶೇಷ ಕಾರ್ಯಾಚರಣೆಯನ್ನು ಆರಂಭಿಸಿದರು.

ಪ್ರಧಾನಿ ನಿವಾಸದ ಬಳಿಯೇ ಕಾರ್ ಸ್ಟಂಟ್ - ಕೊನೆಗೂ ಸಿಕ್ಕಿಬಿದ್ದ ಮಿನಿಸ್ಟರ್ ಸಂಬಂಧಿ..!

ತನಿಖೆಯ ನಂತರ ಕಾರಿನ ಮಾಲೀಕನೇ ಈ ಕಾರನ್ನು ಚಾಲನೆ ಮಾಡುತ್ತಿದ್ದ ಎಂದು ತಿಳಿದು ಬಂತು. ವರದಿಗಳ ಪ್ರಕಾರ, ಆತನನ್ನು ಬಿಜೆಪಿ ಮುಖಂಡ ಹಾಗೂ ಹರಿಯಾಣದ ಹಣಕಾಸು ಸಚಿವ ಕ್ಯಾಪ್ಟನ್ ಅಭಿಮನ್ಯು ಅವರ ಸೋದರಳಿಯ ಸರ್ವೇಶ್ ಸಂಧು ಎಂದು ಗುರುತಿಸಲಾಗಿದೆ. ವರದಿಗಳ ಪ್ರಕಾರ, ನಿಸ್ಸಾನ್ ಜಿಟಿ ಆರ್ ಕಾರಿನ ಶಬ್ದವು ಎಷ್ಟು ಜೋರಾಗಿತ್ತು ಎಂದರೆ ಸ್ಥಳದಲ್ಲಿದ್ದ ಪತ್ರಕರ್ತರು ರಕ್ಷಣೆಗಾಗಿ ಓಡಿಹೋದರು.

ಪ್ರಧಾನಿ ನಿವಾಸದ ಬಳಿಯೇ ಕಾರ್ ಸ್ಟಂಟ್ - ಕೊನೆಗೂ ಸಿಕ್ಕಿಬಿದ್ದ ಮಿನಿಸ್ಟರ್ ಸಂಬಂಧಿ..!

ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳ ಪ್ರಕಾರ ಕಾರು ಕರ್ಕಶವಾಗಿ ಶಬ್ದ ಮಾಡಿದ್ದು, ಕಾರಿನಿಂದ ಜ್ವಾಲೆ ಹೊರಬಂದಿದೆ. ಸುತ್ತಮುತ್ತಲಿನ ಎಲ್ಲಾ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ ನಂತರ ನಿಸ್ಸಾನ್ ಜಿಟಿ ಆರ್ ಕಾರನ್ನು ಪತ್ತೆಹಚ್ಚಲಾಗಿದೆ. ತನ್ನ ಕಾರಿನ ವೀಡಿಯೊ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದ್ದಂತೆಯೇ, ಕಾರನ್ನು ಚಲಾಯಿಸುತ್ತಿದ್ದ, ಸರ್ವೇಶ್ ತನ್ನ ಕಾರನ್ನು ಕಪಶೇರಾದ ತೋಟದ ಮನೆಯೊಂದರಲ್ಲಿ ಅಡಗಿಸಿಟ್ಟಿದ್ದಾನೆ.

ಪ್ರಧಾನಿ ನಿವಾಸದ ಬಳಿಯೇ ಕಾರ್ ಸ್ಟಂಟ್ - ಕೊನೆಗೂ ಸಿಕ್ಕಿಬಿದ್ದ ಮಿನಿಸ್ಟರ್ ಸಂಬಂಧಿ..!

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಪೊಲೀಸರು ಸರ್ವೇಶ್‍‍ನನ್ನು ಬಂಧಿಸಿ, ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರದೇಶವು ಖಾಲಿಯಾಗಿದ್ದರಿಂದ ತನ್ನ ಕಾರಿನಿಂದ ಈ ರೀತಿಯ ಸ್ಟಂಟ್‍‍ಗಳನ್ನು ಮಾಡಿದ್ದಾಗಿ ಸರ್ವೇಶ್ ವಿಚಾರಣೆಯ ವೇಳೆ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ. ಸಾರ್ವಜನಿಕ ರಸ್ತೆಗಳಲ್ಲಿ ಈ ರೀತಿಯಾಗಿ ಸ್ಟಂಟ್‍‍ಗಳನ್ನು ಮಾಡುವುದು ಕಾನೂನುಬಾಹಿರವಾಗಿದ್ದು, ಸ್ಟಂಟ್ ಮಾಡಲು ಬಳಸುವ ವಾಹನವನ್ನು ವಶಪಡಿಸಿಕೊಳ್ಳಬಹುದೆಂಬುದನ್ನು ಗಮನಿಸಬೇಕು.

ಪ್ರಧಾನಿ ನಿವಾಸದ ಬಳಿಯೇ ಕಾರ್ ಸ್ಟಂಟ್ - ಕೊನೆಗೂ ಸಿಕ್ಕಿಬಿದ್ದ ಮಿನಿಸ್ಟರ್ ಸಂಬಂಧಿ..!

ರಾಷ್ಟ್ರಪತಿ ಭವನ ಹಾಗೂ ಭಾರತದ ಸಂಸತ್ ಭವನದ ಪಕ್ಕದಲ್ಲಿರುವ ಐತಿಹಾಸಿಕ ಹಿನ್ನೆಲೆಯ ವಿಜಯ್ ಚೌಕ್ ಪ್ರದೇಶವು ಪ್ರವಾಸಿ ತಾಣವಾಗಿದೆ. ಈ ಪ್ರದೇಶದಲ್ಲಿಯೇ ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯ ದಿನದ ಮೆರವಣಿಗೆಗಳು ನಡೆಯುತ್ತವೆ. ಪ್ರಮುಖ ಕಟ್ಟಡಗಳು ಹಾಗೂ ಪ್ರಧಾನ ಮಂತ್ರಿಗಳ ನಿವಾಸವು ಹತ್ತಿರದಲ್ಲಿಯೇ ಇರುವ ಕಾರಣ ಪೊಲೀಸರು ದಿನದ 24 ಗಂಟೆಯು ಈ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಾರೆ.

ಪ್ರಧಾನಿ ನಿವಾಸದ ಬಳಿಯೇ ಕಾರ್ ಸ್ಟಂಟ್ - ಕೊನೆಗೂ ಸಿಕ್ಕಿಬಿದ್ದ ಮಿನಿಸ್ಟರ್ ಸಂಬಂಧಿ..!

ವೀಡಿಯೊದಲ್ಲಿರುವ ನಿಸ್ಸಾನ್ ಜಿಟಿ ಆರ್ ಕಾರು, ವಿಐಪಿ ನಂಬರ್‌ಪ್ಲೇಟ್ ಹೊಂದಿದೆ. ಬಹುಶಃ ಹಳೆಯ ಕಾರಿನಲ್ಲಿದ್ದ ನಂಬರ್ ಪ್ಲೇಟ್ ಅನ್ನು ಈ ಕಾರಿಗೆ ವರ್ಗಾಯಿಸಿರಬಹುದು. ಇದೇ ನಿಸ್ಸಾನ್ ಜಿಟಿ ಆರ್ ಕಾರು ವಿವಿಧೆಡೆ ಇದೇ ರೀತಿಯಲ್ಲಿ ಜ್ವಾಲೆಗಳನ್ನು ಬಿಡುಗಡೆಗೊಳಿಸುತ್ತಿರುವ ಅನೇಕ ವೀಡಿಯೊಗಳನ್ನು ಯೂಟ್ಯೂಬ್‍‍ನಲ್ಲಿ ಕಾಣಬಹುದು. ವರದಿಗಳ ಪ್ರಕಾರ, ಈ ಕಾರ್ ಅನ್ನು ಮಾಡಿಫೈಗೊಳಿಸಲಾಗಿದ್ದು, 800 ಬಿಎಚ್‌ಪಿಗಿಂತ ಹೆಚ್ಚಿನ ಪವರ್ ಉತ್ಪಾದಿಸುತ್ತದೆ.

Source: TOI

Most Read Articles

Kannada
English summary
Haryana minister’s nephew stunts near PM’s house: Nissan GT-R supercar SEIZED, driver arrested - Read in kannada
Story first published: Tuesday, July 16, 2019, 12:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more