ಇವರಂತ ಮಾಲೀಕರಿದ್ದರೆ ಎಷ್ಟು ಚೆಂದ: ಪ್ಯೂನ್ ಸೇರಿ 12 ನೌಕರರಿಗೆ ಟಾಟಾ ಪಂಚ್ ಗಿಫ್ಟ್, ಕೆಲವರಿಗೆ ಡ್ರೈವಿಂಗ್ ಬರಲ್ಲ!

ಹರಿಯಾಣದ ಪಂಚಕುಲದಲ್ಲಿರುವ ಫಾರ್ಮಾ ಕಂಪನಿಯೊಂದು ತನ್ನ 12 ಉದ್ಯೋಗಿಗಳಿಗೆ ಟಾಟಾ ಪಂಚ್ (Tata Punch) ಕಾರನ್ನು ದೀಪಾವಳಿ (Diwali) ಉಡುಗೊರೆಯಾಗಿ ನೀಡಿದೆ. ಈ ಗಿಫ್ಟ್ ಪಡೆದವರಲ್ಲಿ ಆಫೀಸ್ ಬಾಯ್ (office boy) ಕೂಡ ಸೇರಿರುವುದು ಮತ್ತೊಂದು ವಿಶೇಷವಾಗಿದ್ದು, ಅದರಲ್ಲಿ ಕೆಲವರಿಗೆ ಕಾರು ಚಲಾಯಿಸುವುದೇ ಹೇಗೆ ಎಂಬುದೇ ಗೊತ್ತಿಲ್ಲ.

ಮಿಸ್ಟ್‌ಕಾರ್ಟ್ (MitsKart) ಎಂಬ ಕಂಪನಿ ಮಾಲೀಕರು, ತಮ್ಮೊಂದಿಗೆ ಆರಂಭದಿಂದ ಜೊತೆಗಿದ್ದು, ಸಂಸ್ಥೆಯ ಬೆಳವಣಿಗೆಗೆ ಸಹಕರಿಸಿದ ಉದ್ಯೋಗಿಗಳಿಗೆ ಈ ಗಿಫ್ಟ್ ನೀಡಿದ್ದಾರೆ. ಕಂಪನಿ ಕಾರನ್ನು ಉಡುಗೊರೆಯಾಗಿ ನೀಡುತ್ತದೆ ಎಂದು ಯಾವ ನೌಕರರು ಕನಸಿನಲ್ಲಿಯೂ ಊಹಿಸಿರಲಿಲ್ಲವೇನೋ?.. ಆದರೆ, ಟಾಟಾ ಪಂಚ್ ಕಾರನ್ನು ಗಿಫ್ಟ್ ಪಡೆದು, ಅವರಲ್ಲ ಕೆಲ ಕ್ಷಣ ಆಶ್ಚರ್ಯಚಕಿತರಾದರು.

ಇವರಂತ ಮಾಲೀಕರಿದ್ದರೆ ಎಷ್ಟು ಚೆಂದ: ಪ್ಯೂನ್ ಸೇರಿ 12 ನೌಕರರಿಗೆ ಟಾಟಾ ಪಂಚ್ ಗಿಫ್ಟ್.. ಕೆಲವರಿಗೆ ಡ್ರೈವಿಂಗ್ ಬರಲ್ಲ!

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಿಸ್ಟ್‌ಕಾರ್ಟ್ ಫಾರ್ಮಾ ನಿರ್ದೇಶಕ ಎಂ.ಕೆ.ಭಾಟಿಯಾ ಅವರು, 'ಕಂಪನಿಯನ್ನು ಕೆಲವು ವರ್ಷಗಳ ಹಿಂದೆ ಶುರು ಮಾಡಲಾಯಿತು. ಈ ಉದ್ಯೋಗಿಗಳು ಶ್ರಮವಹಿಸಿ ಕೆಲಸ ಮಾಡಿದ್ದಾರೆ. ಅವರನ್ನು ನಾನು ಎಂದಿಗೂ ಸಿಬ್ಬಂದಿಗಳೆಂದು ಕರೆಯುವುದಿಲ್ಲ. ಸೆಲೆಬ್ರಿಟಿ ಎಂದು ಹೇಳುತ್ತಾನೆ. ಹಲವು ಕನಸಿನೊಂದಿಗೆ ಚಂಡೀಗಢಕ್ಕೆ ಬಂದೆ. ಅದನ್ನು ನನಸು ಮಾಡುವಲ್ಲಿ ಇವರ ಪಾತ್ರ ದೊಡ್ಡದು' ಎಂದು ಹೇಳಿದ್ದಾರೆ.

ಪ್ಯೂನ್ ಮೋಹಿತ್‌ಗೆ ಕೂಡ ಕಂಪನಿಯು ಟಾಟಾ ಪಂಚ್ ಕಾರನ್ನು ಗಿಫ್ಟ್ ನೀಡಿದೆ. 'ಆತ ಮೊದಲಿನಿಂದ ಸಂಸ್ಥೆಯಲ್ಲಿ ಕಷ್ಟಪಟ್ಟು ದುಡಿದಿದ್ದಾನೆ' ಎಂದು ಭಾಟಿಯಾ ಹೇಳುತ್ತಾರೆ. ಕಾರನ್ನು ಉಡುಗೊರೆಯಾಗಿ ಪಡೆದ ಮಹಿಳಾ ಉದ್ಯೋಗಿಯೊಬ್ಬರು, 'ಕಂಪನಿ ಗಿಫ್ಟ್ ನೀಡಿರುವುದು ಸಂತೋಷ ತಂದಿದೆ. ಆದರೆ, ಕಾರನ್ನು ಡ್ರೈವಿಂಗ್ ಮಾಡಲು ಬರುವುದಿಲ್ಲ. ಸದ್ಯ ಕಲಿಯುತ್ತಿದ್ದೇನೆ' ಎನ್ನುತ್ತಾರೆ.

ಇವರಂತ ಮಾಲೀಕರಿದ್ದರೆ ಎಷ್ಟು ಚೆಂದ: ಪ್ಯೂನ್ ಸೇರಿ 12 ನೌಕರರಿಗೆ ಟಾಟಾ ಪಂಚ್ ಗಿಫ್ಟ್.. ಕೆಲವರಿಗೆ ಡ್ರೈವಿಂಗ್ ಬರಲ್ಲ!

ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಟಾಟಾ ಪಂಚ್, ರೂ. 6 ಲಕ್ಷದಿಂದ ರೂ.10.10 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. ಪೆಟ್ರೋಲ್ ರೂಪಾಂತರ 1.2 - ಲೀಟರ್, 3 - ಸಿಲಿಂಡರ್ ಎಂಜಿನ್‌ ಹೊಂದಿದ್ದು, 85 bhp ಪವರ್, 113 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆ ಪಡೆದಿದೆ. 18.8 - 20.09 kmpl ಮೈಲೇಜ್ ನೀಡುತ್ತದೆ.

ಟಾಟಾ ಪಂಚ್ ಸಿಎನ್‌ಜಿ ಮಾದರಿ, 1.2 - ಲೀಟರ್, 3 - ಸಿಲಿಂಡರ್ ಎಂಜಿನ್ ಹೊಂದಿದ್ದು, ಪೆಟ್ರೋಲ್ ಕಾರಿಗೆ ಹೋಲಿಕೆ ಮಾಡಿದರೆ ಕೊಂಚ ಕಡಿಮೆ ಅಂದರೆ 74 bhp ಗರಿಷ್ಠ ಪವರ್ ಹಾಗೂ 95 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 5-ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗಲಿದ್ದು, 26.9 km/kg ಇಂಧನ ದಕ್ಷತೆ ಒಳಗೊಂಡಿದೆ.

ಇವರಂತ ಮಾಲೀಕರಿದ್ದರೆ ಎಷ್ಟು ಚೆಂದ: ಪ್ಯೂನ್ ಸೇರಿ 12 ನೌಕರರಿಗೆ ಟಾಟಾ ಪಂಚ್ ಗಿಫ್ಟ್.. ಕೆಲವರಿಗೆ ಡ್ರೈವಿಂಗ್ ಬರಲ್ಲ!

ಈ ಕಾರು, ಯುವ ಗ್ರಾಹಕರನ್ನು ಆಕರ್ಷಿಸುವ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. 7 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ ಸಾಕಷ್ಟು ಅತ್ಯಾಧುನಿಕವಾಗಿದ್ದು, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌, ರೇರ್ ಪಾರ್ಕಿಂಗ್ ಸೆನ್ಸರ್‌, ರೇರ್ ವ್ಯೂ ಕ್ಯಾಮೆರಾವನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, November 3, 2023, 22:38 [IST]
English summary
Haryana pharma company give tata punch gift to 12 employees including peons
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+