ಕಾರಿಗೆ ಆ್ಯಸಿಡ್ ಎರಚಿದ ಆರೋಪ: ಮಹಿಳೆ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿದ ಹೈಕೋರ್ಟ್

ಬೆಂಗಳೂರಿನ ಅಪಾರ್ಟ್‌ಮೆಂಟ್‌ವೊಂದರ ಬೇಸ್‌ಮೆಂಟ್‌ನಲ್ಲಿ ನಿಲ್ಲಿಸಿದ್ದ ಕಾರಿಗೆ ಆ್ಯಸಿಡ್ ಎರಚಿ ಹಾನಿ ಮಾಡಿದ್ದ ಆರೋಪದಡಿ 37 ವರ್ಷದ ಮಹಿಳೆಯ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.

ಕಾರಿಗೆ ಆ್ಯಸಿಡ್ ಎರಚಿದ ಆರೋಪ: ಮಹಿಳೆ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿದ ಹೈಕೋರ್ಟ್

ಕೆಲವರ ಮನಃಸ್ಥಿತಿಯೇ ಹಾಗೆ, ಇನ್ನೂ ಕೆಲವರು ಬೇಕಂತಲೇ ಮಾಡುತ್ತಾರೆ. ಆದರೆ ಇಂತಹ ಕೃತ್ಯಗಳು ಎಸಗಿದಾಗ ಆರೋಪಿಗಳ ವಿರುದ್ಧ ಸಾಕ್ಷ್ಯಾಧಾರಗಳು ಇಲ್ಲದಿದ್ದರೆ ಸಂತ್ರಸ್ತರಿಗೆ ನಷ್ಟವಾಗುತ್ತದೆ ಎಂದು ಮತ್ತೊಮ್ಮೆ ಸಾಭೀತಾಗಿದೆ. 2017ರಲ್ಲಿ ಬೆಂಗಳೂರಿನ ಶಿವಾನಂದ ನಗರದ ಆದಿತ್ಯ ಸ್ವಾಯೆ ಅಪಾರ್ಟ್‌ಮೆಂಟ್‌ನ ನಿವಾಸಿಯಾದ ರಿಚಾ ಸಿಂಗ್ ಚಿತ್ರಾಂಶಿ ಎಂಬುವರು ವಸತಿಗೃಹದ ನೆಲಮಾಳಿಗೆಯಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಹಾನಿಗೊಳಿಸುತ್ತಿದ್ದರು ಎನ್ನಲಾಗಿದೆ.

ಕಾರಿಗೆ ಆ್ಯಸಿಡ್ ಎರಚಿದ ಆರೋಪ: ಮಹಿಳೆ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿದ ಹೈಕೋರ್ಟ್

ಅಪಾರ್ಟ್‌ಮೆಂಟ್‌ನ 306ನೇ ಸಂಖ್ಯೆಯ ಫ್ಲ್ಯಾಟ್‌ನಲ್ಲಿ ವಾಸವಿದ್ದ ರಿಚಾ ಸಿಂಗ್‌ ಚಿತ್ರಾಂಶಿ ವಿರುದ್ಧ ಅಪಾರ್ಟ್‌ಮೆಂಟ್‌ ನಿವಾಸಿಗಳ ಸಂಘದ ಅಧ್ಯಕ್ಷ ಸಂತೋಷಿ ಪ್ರಸಾದ್‌ ಪೊಲೀಸರಿಗೆ ದೂರು ನೀಡಿದ್ದರು. ಬೇಸ್ ಮೆಂಟ್ ನಲ್ಲಿ ನಿಲ್ಲಿಸಿದ್ದ ನನ್ನ ವಾಹನದ ಮೇಲೆ ಆ್ಯಸಿಡ್ ಎರಚಿ ಹಾನಿಗೊಳಿಸಿದ್ದಾರೆಂದು ಆರೋಪಿಸಿದ್ದರು.

ಕಾರಿಗೆ ಆ್ಯಸಿಡ್ ಎರಚಿದ ಆರೋಪ: ಮಹಿಳೆ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿದ ಹೈಕೋರ್ಟ್

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಮಾರತ್‌ಹಳ್ಳಿ ಉಪ ವಿಭಾಗದ ಪೊಲೀಸರು ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯ ರಿಚಾ ಸಿಂಗ್ ಅವರಿಗೆ ಸಮನ್ಸ್‌ ಜಾರಿಗೊಳಿಸಲು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ರಿಚಾ ಸಿಂಗ್ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಕಾರಿಗೆ ಆ್ಯಸಿಡ್ ಎರಚಿದ ಆರೋಪ: ಮಹಿಳೆ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿದ ಹೈಕೋರ್ಟ್

ಬಚಾವ್ ಆದ ಮಹಿಳೆ

ಚಿತ್ರಾಂಶಿ ವಿರುದ್ಧ ಐಪಿಸಿ ಸೆಕ್ಷನ್ 427 ರ ಅಡಿಯಲ್ಲಿ ಆರೋಪ ಹೊರಿಸಲಾಗಿತ್ತು. ಯಾರು ಇಂತಹ ದುಷ್ಕೃತ್ಯವನ್ನು ಎಸಗುವರೋ ಮತ್ತು 50 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತಕ್ಕೆ ನಷ್ಟ ಅಥವಾ ಹಾನಿಯನ್ನು ಉಂಟುಮಾಡಿದರೆ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ಎರಡನ್ನೂ ವಿಧಿಸಲಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಚಿಂತ್ರಾಂಶಿ ಅವರು ಬಚಾವ್ ಆಗಿದ್ದಾರೆ.

ಕಾರಿಗೆ ಆ್ಯಸಿಡ್ ಎರಚಿದ ಆರೋಪ: ಮಹಿಳೆ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿದ ಹೈಕೋರ್ಟ್

ಹೈಕೋರ್ಟ್ ನ್ಯಾಯಮೂರ್ತಿ ಹೇಮಂತ ಚಂದನಗೌಡರ ಅವರಿದ್ದ ಏಕಸದಸ್ಯಪೀಠ ಜೂನ್ 13 ರಂದು ತಮ್ಮ ತೀರ್ಪಿನಲ್ಲಿ, "ಅರ್ಜಿದಾರರು ಆಸಿಡ್ ಎಸೆದು ಹಾನಿ ಮಾಡಿದ್ದಾರೆ ಎಂಬ ಆರೋಪವನ್ನು ಪುಷ್ಟೀಕರಿಸಲು ಪೊಲೀಸರ ತನಿಖೆಯಲ್ಲಿ ದೂರನ್ನು ಪುಷ್ಟೀಕರಿಸುವ ಯಾವುದೇ ಬಲವಾದ ಸಾಕ್ಷ್ಯಗಳಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಕಾರಿಗೆ ಆ್ಯಸಿಡ್ ಎರಚಿದ ಆರೋಪ: ಮಹಿಳೆ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿದ ಹೈಕೋರ್ಟ್

ಅಲ್ಲದೆ, ಕೇವಲ ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆ ಮತ್ತು ದೂರುದಾರರ ಫಿರ್ಯಾದು ಅನುಸರಿಸಿ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಮೇಲ್ನೋಟಕ್ಕೆ ಪ್ರಕರಣದಲ್ಲಿ ಸಾಕ್ಷ್ಯಗಳು ಇಲ್ಲದ ಕಾರಣ ಮೆಯೊಹಾಲ್‌ನ 43ನೇ ಎಸಿಸಿಎಂ ಕೋರ್ಟ್‌ನಲ್ಲಿ ದಾಖಲಾಗಿರುವ ಪ್ರಕರಣದ ವಿಚಾರಣೆ ರದ್ದುಗೊಳಿಸಲಾಗುವುದು ಎಂದು ನ್ಯಾಯಪೀಠ ಆದೇಶಿಸಿದೆ.

ಕಾರಿಗೆ ಆ್ಯಸಿಡ್ ಎರಚಿದ ಆರೋಪ: ಮಹಿಳೆ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿದ ಹೈಕೋರ್ಟ್

ಪಾರ್ಕಿಂಗ್ ಮಾಡುವ ಜಾಗದಲ್ಲಿ ಸೇಫ್ಟಿ ಮುಖ್ಯ

ನಗರದ ಹಲವು ಸಣ್ಣಪುಟ್ಟ ಅಪಾರ್ಟ್‌ಮೆಂಟ್‌ಗಳಲ್ಲಿ ಇಂದಿಗೂ ಸರಿಯಾದ ಸಿಸಿ ಕ್ಯಾಮರಾ ವ್ಯವಸ್ಥೆ ಇಲ್ಲ. ಇದ್ದರೂ ಕೆಲಸ ಮಾಡದೇ ಕೆಟ್ಟುನಿಂತಿರುತ್ತವೆ. ಇವು ಕಳ್ಳರು ಹಾಗೂ ಪುಂಡರಿಗೆ ವಾಹನ ಕಳುವು ಮಾಡಲು ಅವಕಾಶ ಮಾಡಿಕೊಡುತ್ತದೆ. ಏಕೆಂದರೆ ಅಪಾರ್ಟ್‌ಮೆಂಟ್‌ಗಳಲ್ಲಿನ ಭದ್ರತಾ ಸಿಬ್ಬಂದಿ ಎಲ್ಲಾ ವೇಳೆಯಲ್ಲೂ ಎಚ್ಚರವಾಗಿರುವುದಿಲ್ಲ.

ಕಾರಿಗೆ ಆ್ಯಸಿಡ್ ಎರಚಿದ ಆರೋಪ: ಮಹಿಳೆ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿದ ಹೈಕೋರ್ಟ್

ವಾಹನಗಳನ್ನು ನಿಲ್ಲಿಸಿದ ಬಳಿಕ ಒಮ್ಮೆ ಡೋರ್‌ಗಳನ್ನು ಸರಿಯಾಗಿ ಲಾಕ್ ಮಾಡಲಾಗಿದೆಯೇ ಎಂದು ಪರೀಕ್ಷಿಸಿಕೊಳ್ಳುವುದು ಉತ್ತಮ. ಬೇಸ್‌ಮೆಂಟ್‌ನಲ್ಲಿದೆ ನಮ್ಮ ಅಪಾರ್ಟ್‌ಮೆಂಟ್‌ನೊಳಗೇ ಇದೆ, ಯಾವುದೇ ಭಯವಿಲ್ಲವೆಂದು ನಿರ್ಲಕ್ಷ್ಯ ತೋರುವುದು ಸರಿಯಲ್ಲ.

ಕಾರಿಗೆ ಆ್ಯಸಿಡ್ ಎರಚಿದ ಆರೋಪ: ಮಹಿಳೆ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿದ ಹೈಕೋರ್ಟ್

ಇನ್ನು ವಾಹನಗಳ ಸಂಖ್ಯೆ ನಿತ್ಯ ಹೆಚ್ಚಾಗುತ್ತಿರುವುದರಿಂದ ಜಾಗವಿಲ್ಲದೇ ಕಾರುಗಳನ್ನು ರಸ್ತೆಗಳಲ್ಲಿ ನಿಲ್ಲಿಸುವ ಪರಿಸ್ಥಿತಿ ಬಂದೊದಗಿದೆ. ಬೆಂಗಳೂರು ನಗರವೊಂದರಲ್ಲೇ ಈಗಾಗಲೇ ಒಂದು ಅಂದಾಜಿನ ಪ್ರಕಾರ ಸುಮಾರು 90 ಲಕ್ಷಕ್ಕೂ ಅಧಿಕ ವಾಹನಗಳಿದ್ದು, ಆರ್‌ಟಿಒ ಮಾಹಿತಿಗಳ ಪ್ರಕಾರ ಬೆಂಗಳೂರಿನಲ್ಲಿ ಪ್ರತಿ ದಿನ ಕನಿಷ್ಠ ಒಂದು ಸಾವಿರದಿಂದ ಒಂದೂವರೆ ಸಾವಿರದಷ್ಟು ಹೊಸ ವಾಹನಗಳು ನೋಂದಣಿಯಾತ್ತಿವೆ.

ಕಾರಿಗೆ ಆ್ಯಸಿಡ್ ಎರಚಿದ ಆರೋಪ: ಮಹಿಳೆ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿದ ಹೈಕೋರ್ಟ್

ಅಂದರೆ ಬೆಂಗಳೂರಿನಲ್ಲಿ ಪ್ರತಿ ತಿಂಗಳು ಕನಿಷ್ಠ 30 ಸಾವಿರ ವಾಹನಗಳು ರಸ್ತೆಗಿಳಿಯುತ್ತಿದ್ದು, ಹೊಸದಾಗಿ ರಸ್ತೆಗಿಳಿಯುವ ವಾಹನಗಳಿಂದ ಟ್ರಾಫಿಕ್ ದಟ್ಟಣೆ ಹೆಚ್ಚಿತ್ತಿರುವುದಲ್ಲದೆ ಪಾರ್ಕಿಂಗ್ ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ.

ಕಾರಿಗೆ ಆ್ಯಸಿಡ್ ಎರಚಿದ ಆರೋಪ: ಮಹಿಳೆ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿದ ಹೈಕೋರ್ಟ್

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಈ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳು ಇಲ್ಲದೇ ಕೇಸ್ ಕ್ಲೋಸ್ ಆಗಿದೆ. ಒಂದು ವೇಳೆ ಮಹಿಳೆ ನಿಜವಾಗಿಯೇ ಕಾರನ್ನು ಹಾನಿಗೊಳಿಸಿದ್ದರೆ ದೂರುದಾರನಿಗೆ ಇದು ನಷ್ಟವೆಂದೇ ಹೇಳಬಹುದು. ಹಾಗಾಗಿ ಇಂತಹ ಘಟನೆಗಳು ನಡೆಯದಂತೆ ವಾಹನ ಮಾಲೀಕರು ಎಚ್ಚರ ವಹಿಸುವುದು ಮುಖ್ಯ. ಒಂದು ವೇಳೆ ಇಂತಹ ಕೃತ್ಯ ಎಸಗಿದರು ಸಾಕ್ಷ್ಯಾಧಾರಗಳು ಇರಬೇಕಾದ್ದರಿಂದ ಸಿಸಿ ಕ್ಯಾಮರಾಗಳ ಅಳವಡಿಕೆ ನಿರ್ಣಾಯಕವಾಗಿರುತ್ತದೆ. ಈ ನಿಟ್ಟಿನಲ್ಲಿ ನಿಮ್ಮ ವಾಹನಗಳನ್ನು ಪಾರ್ಕ್ ಮಾಡುವ ಜಾಗದಲ್ಲಿ ಎಲ್ಲಾ ರೀತಿಯ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಿಕೊಳ್ಳುವುದು ಉತ್ತಮ.

Most Read Articles

Kannada
English summary
HC quashes case against woman for allegedly throwing acid in car
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X