ಭಾರಿ ಮಳೆ: ಅನಾರೋಗ್ಯದಿಂದ ಆಸ್ಪತ್ರೆಗೆ ತೆರಳಿ ರಸ್ತೆ ಕಾಣದೆ ಗುಂಡಿಗೆ ಬಿದ್ದ ದಂಪತಿ!

ದೇಶದ ಹಲವು ರಾಜ್ಯಗಳಲ್ಲಿ ಕಳೆದ ವಾರದಿಂದ ಭಾರೀ ಮಳೆಯಾಗುತ್ತಿದ್ದೆ, ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಕಳೆದ ನಾಲ್ಕೈದು ದಿನಗಳಿಂದ ಮಳೆ ಸುರಿಯುತ್ತಿದೆ. ಮುಂಬರುವ ದಿನಗಳಲ್ಲಿ ಜೋರು ಮಳೆಯಾಗಲಿದ್ದು, ಜನರು ಎಚ್ಚರಿಕೆ ವಹಿಸಬೇಕಿದೆ. ನಿನ್ನೆ (ಜೂನ್ 18) ಸುರಿದ ಭಾರೀ ಮಳೆಗೆ ರಸ್ತೆಗಳು ಜಾಲವೃತಗೊಂಡು ರಸ್ತೆ ಕಾಣದೆ ಗಂಡ-ಹೆಂಡತಿ ವಾಹನ ಸಮೇತ ಹಳಕ್ಕೆ ಬಿದ್ದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಭಾರಿ ಮಳೆ: ಅನಾರೋಗ್ಯದಿಂದ ಆಸ್ಪತ್ರೆಗೆ ತೆರಳಿ ರಸ್ತೆ ಕಾಣದೆ ಗುಂಡಿಗೆ ಬಿದ್ದ ದಂಪತಿ!

ದೇಶದ ಕೆಲವೆಡೆ ಬೇಸಿಗೆಯ ಬಿಸಿಲಿನ ಝಳ ಕಡಿಮೆಯಾಗುತ್ತಿದ್ದಂತೆ ಮಳೆಯ ಆರ್ಭಟ ಶುರುವಾಗಿದೆ. ಇದರಿಂದ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ನಿನ್ನೆ ರಾತ್ರಿ ಕೂಡ ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿತ್ತು. ರಸ್ತೆಗಳು ಜಲಾವೃತಗೊಂಡು ಕಚೇರಿಗಳಿಂದ ಮನೆ ಸೇರಬೇಕಿದ್ದ ಜನರು ಗಂಟೆಘಟ್ಟಲೇ ರಸ್ತೆಗಳಲ್ಲಿ ಪರದಾಡಬೇಕಾಯಿತು.

ಗುಂಡಿಗೆ ಬಿದ್ದ ದಂಪತಿ

ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ದೇಶದ ಹಲವು ಪ್ರದೇಶಗಳು ಹಾನಿಗೊಳಗಾಗಿವೆ. ಜೂನ್‌ 18-19 ರಂದು ಉತ್ತರ ಪ್ರದೇಶ ರಾಜ್ಯದ ಅಲಿಗಢದಲ್ಲಿ ಜೋರು ಮಳೆಯಾಗಿದೆ, ಎಡೆಬಿಡದೆ ಸುರಿದ ಮಳೆರಾಯನ ಆರ್ಭಟಕ್ಕೆ ಅಲಿಗಡ ತತ್ತರಿಸಿತ್ತು. ರಸ್ತೆಗಳು ಸಂಪೂರ್ಣ ಜಲಾವೃತಗೊಂಡು ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು.

ಭಾರಿ ಮಳೆ: ಅನಾರೋಗ್ಯದಿಂದ ಆಸ್ಪತ್ರೆಗೆ ತೆರಳಿ ರಸ್ತೆ ಕಾಣದೆ ಗುಂಡಿಗೆ ಬಿದ್ದ ದಂಪತಿ!

ಇಂತಹ ಸಂದರ್ಭದಲ್ಲಿ ಅನಾರೋಗ್ಯ ಕಾರಣ ಆಸ್ಪತ್ರೆಗೆ ತೆರಳಿದ್ದ ಪೊಲೀಸ್ ಪೇದೆ ಹಾಗೂ ಅವರ ಪತ್ನಿ ರಸ್ತೆ ಬದಿಯ ತೆರೆದ ಹಳ್ಳದಲ್ಲಿ ವಾಹನ ಸಮೇತ ಬಿದ್ದಿದ್ದಾರೆ. ಸ್ಕೂಟರ್‌ನಲ್ಲಿ ಪತಿ-ಪತ್ನಿ ಅನಿರೀಕ್ಷಿತವಾಗಿ ಕಾಲುವೆಗೆ ಬಿದ್ದಿರುವ ವಿಡಿಯೋ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ವೈರಲ್ ಆಗಿ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.

ಭಾರಿ ಮಳೆ: ಅನಾರೋಗ್ಯದಿಂದ ಆಸ್ಪತ್ರೆಗೆ ತೆರಳಿ ರಸ್ತೆ ಕಾಣದೆ ಗುಂಡಿಗೆ ಬಿದ್ದ ದಂಪತಿ!

ಅನಿರೀಕ್ಷಿತವಾಗಿ ನಡೆದ ಈ ಘಟನೆಯಲ್ಲಿ ಪತಿ-ಪತ್ನಿ ಇಬ್ಬರೂ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಸ್ಥಳದಲ್ಲಿದ್ದ ನಾಗರಿಕರು ಕೂಡಲೇ ಧಾವಿಸಿ ಇಬ್ಬರನ್ನು ರಕ್ಷಿಸಿದ್ದು, ದಂಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ನಡೆದ ದಿನ ಆರೋಗ್ಯ ಹದಗೆಟ್ಟ ಕಾರಣ ಇಬ್ಬರೂ ಆಸ್ಪತ್ರೆಗೆ ಆಗಮಿಸಿದ್ದರು. ತೆರೆದಿದ್ದ ಕಾಲುವೆಯಲ್ಲಿ ವಾಹನ ಸಮೇತ ಬಿದ್ದು ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾರಿ ಮಳೆ: ಅನಾರೋಗ್ಯದಿಂದ ಆಸ್ಪತ್ರೆಗೆ ತೆರಳಿ ರಸ್ತೆ ಕಾಣದೆ ಗುಂಡಿಗೆ ಬಿದ್ದ ದಂಪತಿ!

ಅಲಿಗಢವು ಮಳೆ ಬಂದಾಗಲೆಲ್ಲಾ ಜಲಾವೃತಗೊಳುತ್ತದೆ, ಮೊದಲಿನಿಂದಲೂ ಈ ನಗರ ಸಣ್ಣ ಮಳೆಗೂ ಹೆಚ್ಚು ಹಾನಿಗೊಳಗಾಗುತ್ತದೆ. ಮುಂದಿನ 2-3 ದಿನಗಳ ಕಾಲ ದೇಶದ ಉತ್ತರ, ಮಧ್ಯ ಮತ್ತು ಪೂರ್ವ ಭಾಗಗಳಲ್ಲಿ ಮಳೆಯಾಗಲಿದೆ. ಮುಂಬರುವ ಕೆಲ ದಿನಗಳು ತೀರ ಪ್ರದೇಶದ ಜನರು ಎಚ್ಚರ ವಹಿಸಬೇಕಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಭಾರಿ ಮಳೆ: ಅನಾರೋಗ್ಯದಿಂದ ಆಸ್ಪತ್ರೆಗೆ ತೆರಳಿ ರಸ್ತೆ ಕಾಣದೆ ಗುಂಡಿಗೆ ಬಿದ್ದ ದಂಪತಿ!

ನೆರೆಯ ರಾಜ್ಯ ಚೆನ್ನೈನಲ್ಲೂ ಭಾರೀ ಮಳೆಯಾಗುತ್ತಿದ್ದು, ಜೂನ್ 19ರಂದು ವಿಮಾನ ಸಂಚಾರಕ್ಕೆ ತೀವ್ರ ತೊಂದರೆಯಾಗಿತ್ತು. ಹವಾಮಾನ ವೈಪರೀತ್ಯದಿಂದಾಗಿ ವಿದೇಶದಿಂದ ಬರುವ ವಿಮಾನಗಳನ್ನು ದೇಶದ ಇತರೆ ನಗರಗಳಿಗೆ ತಿರುಗಿಸಲಾಯಿತು. ಅದೇ ರೀತಿ ಚೆನ್ನೈನಿಂದ ಹೊರಡಬೇಕಿದ್ದ ಕೆಲವು ಅಂತಾರಾಷ್ಟ್ರೀಯ ವಿಮಾನಗಳು ರದ್ದಾಗಿದ್ದವು.

ಭಾರಿ ಮಳೆ: ಅನಾರೋಗ್ಯದಿಂದ ಆಸ್ಪತ್ರೆಗೆ ತೆರಳಿ ರಸ್ತೆ ಕಾಣದೆ ಗುಂಡಿಗೆ ಬಿದ್ದ ದಂಪತಿ!

ಭಾರಿ ಮಳೆಯಲ್ಲಿ ಸುರಕ್ಷಿತವಾಗಿರುವುದು ಹೇಗೆ

ಭಾರೀ ಮಳೆಯಾದಾಗ ಜನರು ಮನೆಯಿಂದ ಹೊರಗೆ ಹೋಗದಿರುವುದು ಉತ್ತಮ. ಮುಖ್ಯವಾಗಿ ದ್ವಿಚಕ್ರ ವಾಹನಗಳಲ್ಲಿ ಸವಾರಿ ಮಾಡುವುದನ್ನು ಬಿಟ್ಟುಬಿಡಿ. ಏಕೆಂದರೆ ಮಳೆಗೆ ರಸ್ತೆಗಳಲ್ಲಿನ ಗುಂಡಿಗಳು ಕಾಣುವುದಿಲ್ಲ. ಇದಕ್ಕೆ ಉತ್ತಮ ಉದಾಹರಣೆ ಅಲಿಗಡ ಪೊಲೀಸ್ ಪೇದೆಯದ್ದಾಗಿದೆ. ಹಾಗಾಗಿ ಜೋರು ಮಳೆಯಾದರೆ ಮನೆಯಲ್ಲೇ ಉಳಿದುಕೊಳ್ಳಿ.

ಭಾರಿ ಮಳೆ: ಅನಾರೋಗ್ಯದಿಂದ ಆಸ್ಪತ್ರೆಗೆ ತೆರಳಿ ರಸ್ತೆ ಕಾಣದೆ ಗುಂಡಿಗೆ ಬಿದ್ದ ದಂಪತಿ!

ಒಂದು ವೇಳೆ ನೀವು ಹೊರಗೆ ಹೋದ ಸಂಧರ್ಭಗಳಲ್ಲಿ ಅನಿರೀಕ್ಷಿತವಾಗಿ ಜೋರು ಮಳೆಯಾಗಿ ರಸ್ತೆಗಳು ಜಲಾವೃತಗೊಂಡರೆ ವಾಹನಗಳನ್ನು ರಸ್ತೆ ಬದಿ ನಿಲ್ಲಿಸಿ. ಮಳೆ ನಿಲ್ಲುವ ತನಕ ಕಾದು ಆ ಬಳಿಕ ತೆರಳುವುದು ಉತ್ತಮ. ಅವಸರದಲ್ಲಿ ಮಳೆಯಲ್ಲೇ ಪ್ರಯಾಣಿಸುವುದು ಜೀವಕ್ಕೆ ಕುತ್ತು ತರಬಹುದು.

ಭಾರಿ ಮಳೆ: ಅನಾರೋಗ್ಯದಿಂದ ಆಸ್ಪತ್ರೆಗೆ ತೆರಳಿ ರಸ್ತೆ ಕಾಣದೆ ಗುಂಡಿಗೆ ಬಿದ್ದ ದಂಪತಿ!

ಈ ಹಿಂದೆಯು ಇಂತಹ ಹಲವು ಘಟನೆಗಳು ನಡೆದಿವೆ. ಸಾಮಾನ್ಯವಾಗಿ ಜನರು ಇಂತಹ ಸಂದರ್ಭಗಳಲ್ಲಿ ಸಣ್ಣ ಮಳೆಗೆ ಅಪಾಯವೇನು ಇಲ್ಲವೆಂದುಕೊಂಡು ಮುನ್ನುಗ್ಗುತ್ತಾರೆ. ಆದರೆ ಇಲ್ಲಿ ನೀವು ತಿಳಿದುಕೊಳ್ಳಬೇಕಾದ ಪ್ರಮುಖ ವಿಷಯವೇನೆಂದರೆ ಮಳೆನೀರಿನ ರಭಸವು ನದಿ ನೀರಿನಷ್ಟೇ ಅಪಾಯವನ್ನು ತಂದೊಡ್ಡಬಹುದು.

ಭಾರಿ ಮಳೆ: ಅನಾರೋಗ್ಯದಿಂದ ಆಸ್ಪತ್ರೆಗೆ ತೆರಳಿ ರಸ್ತೆ ಕಾಣದೆ ಗುಂಡಿಗೆ ಬಿದ್ದ ದಂಪತಿ!

ಭಾರೀ ಮಳೆಯಿಂದ ರಸ್ತೆಗಳು ಜಲಾವೃತಗೊಂಡಾಗ ಪ್ರಯಾಣಿಸುವುದರಿಂದ ವಾಹನಗಳಲ್ಲಿ ಅನಗತ್ಯ ಯಾಂತ್ರಿಕ ಸಮಸ್ಯೆಗಳು ಸಹ ಎದುರಾಗಬಹುದು. ಇದು ಎಂಜಿನ್‌‌ಗೆ ನೀರು ಹೋಗುವ ಮೂಲಕ ನಿಮಗೆ ದುಬಾರಿ ವೆಚ್ಚಗಳಿಗೆ ಆಹ್ವಾನ ನೀಡಬಹುದು. ಹಾಗಾಗಿ ಮಳೆಗಾಲದಲ್ಲಿ ಅನಗತ್ಯ ಪ್ರವಾಸಗಳನ್ನು ಮಾಡದಿರುವುದು ಉತ್ತಮ.

ಭಾರಿ ಮಳೆ: ಅನಾರೋಗ್ಯದಿಂದ ಆಸ್ಪತ್ರೆಗೆ ತೆರಳಿ ರಸ್ತೆ ಕಾಣದೆ ಗುಂಡಿಗೆ ಬಿದ್ದ ದಂಪತಿ!

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಮಳೆ ಬಿದ್ದಾಗ ರಸ್ತೆಯ ಮಧ್ಯದಲ್ಲಿ ಅಡೆತಡೆಗಳು ಹೆಚ್ಚಾಗಿರುತ್ತವೆ. ಮರದ ಕೊಂಬೆಗಳು ಉರುಳುವುದು, ಗುಂಡಿಗಳು ನೀರು ತುಂಬಿ ಕಾಣದಿರುವುದು, ಕರೆಂಟ್ ವೈರ್‌ಗಳು ನೀರಿಗೆ ಬೀಳುವುದು, ಕರೆಂಟ್ ಪೋಲ್‌ಗಳು ರಸ್ತೆಗೆ ಉರುಳುವುದು, ರಸ್ತೆ ಕುಸಿತದಂತಹ ಹಲವು ಸಮಸ್ಯೆಗಳು ಅನಿರೀಕ್ಷಿತವಾಗಿ ಎದುರಾಗುತ್ತವೆ. ಇಂತಹ ಗಂಡಾಂತರಗಳನ್ನು ನಾವು ಮೊದಲೇ ಊಹಿಸಲು ಸಹ ಆಗುವುದಿಲ್ಲ. ಹಾಗಾಗಿ ಮಳೆ ಬಿದ್ದಾಗ ಸಂಚರಿಸಬೇಕಾದರೆ ಎಚ್ಚರಿಕೆಯಿಂದಿರಬೇಕು. ಮಳೆ ನಿಂತ ಬಳಿಕವೂ ವಾಹನದಲ್ಲಿ ಸಂಚಿರಸಬೇಕಾದಾರೆ ಹದಗೆಟ್ಟ ರಸ್ತೆಯನ್ನು ತಪ್ಪಿಸಿ ಸ್ವಲ್ಪ ದೂರವಾದರು ಸಹ ಅಪಾಯವಿಲ್ಲದ ರಸ್ತೆಯಲ್ಲಿ ಸಂಚರಿಸುವುದು ಉತ್ತಮ.

Most Read Articles

Kannada
English summary
Heavy Rain A couple who fell into a pothole without seeing the road
Story first published: Tuesday, June 21, 2022, 11:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X