ವಿಮಾನಗಳಿಂದ ಸಾಧ್ಯವಾಗದ ಹೆಲಿಕಾಪ್ಟರ್‌ಗಳಿಂದ ಮಾತ್ರವೇ ಸಾಧ್ಯವಾಗುವ ಕಾರ್ಯಗಳಿವು

ವಿಮಾನಗಳಿಗೆ ಹೋಲಿಸಿದರೆ ಹೆಲಿಕಾಪ್ಟರ್‌ಗಳು ಭಿನ್ನವಾಗಿರುತ್ತವೆ. ಎರಡೂ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತವೆ. ಈ ಎರಡನ್ನು ಒಂದಕ್ಕೊಂದು ಹೋಲಿಸಿದರೆ ಒಂದು, ವಿವಿಧ ವಿಷಯಗಳಲ್ಲಿ ಇನ್ನೊಂದಕ್ಕಿಂತ ಉತ್ತಮವಾಗಿರುತ್ತದೆ.

ವಿಮಾನಗಳಿಂದ ಸಾಧ್ಯವಾಗದ ಹೆಲಿಕಾಪ್ಟರ್‌ಗಳಿಂದ ಮಾತ್ರವೇ ಸಾಧ್ಯವಾಗುವ ಕಾರ್ಯಗಳಿವು

ಕೆಲ ಸಂದರ್ಭಗಳಲ್ಲಿ ಹೆಲಿಕಾಪ್ಟರ್‌ಗಳಿಂದ ವಿಶೇಷ ಪ್ರಯೋಜನಗಳಿವೆ. ಕೆಲವರು ಹೆಲಿಕಾಪ್ಟರ್‌ಗಳ ಅಗತ್ಯವೇ ಇಲ್ಲ ಎಂದು ವಾದಿಸುತ್ತಾರೆ. ವಿಮಾನಗಳಿಂದ ಹಲವಾರು ಪ್ರಯೋಜನಗಳಿದ್ದರೂ ಹಲವಾರು ನ್ಯೂನತೆಗಳಿವೆ. ಹೆಲಿಕಾಪ್ಟರ್‌ಗಳಲ್ಲಿಯೂ ಅನುಕೂಲದ ಜೊತೆಗೆ ಅನಾನುಕೂಲಗಳಿವೆ. ಈ ಎರಡೂ ವಾಹನಗಳು ವಿಭಿನ್ನವಾದ ರೀತಿಯಲ್ಲಿ ಸೇವೆ ಸಲ್ಲಿಸುತ್ತವೆ. ಈ ಲೇಖನದಲ್ಲಿ ಹೆಲಿಕಾಪ್ಟರ್‌ಗಳಿಂದ ಇರುವ ಪ್ರಯೋಜನಗಳೇನು ಎಂಬುದನ್ನು ನೋಡೋಣ.

ವಿಮಾನಗಳಿಂದ ಸಾಧ್ಯವಾಗದ ಹೆಲಿಕಾಪ್ಟರ್‌ಗಳಿಂದ ಮಾತ್ರವೇ ಸಾಧ್ಯವಾಗುವ ಕಾರ್ಯಗಳಿವು

ಹೆಲಿಕಾಪ್ಟರ್‌ಗಳಿಂದ ಮಾಡಬಹುದಾದ ಕೆಲಸಗಳು, ವಿಮಾನಗಳಿಂದ ಮಾಡಲಾಗದ ಕೆಲಸಗಳು:

ಹೆಲಿಕಾಪ್ಟರ್‌ಗಳ ಹೆಚ್ಚಿನ ಪ್ರಯೋಜನಗಳು ಅವುಗಳ ಸಣ್ಣ ಗಾತ್ರದ ಮೂಲಕ ಲಭ್ಯವಾಗುತ್ತವೆ. ಹೆಲಿಕಾಪ್ಟರ್‌ಗಳು ಗಾಳಿಯಲ್ಲಿ ಒಂದೇ ಸ್ಥಳದಲ್ಲಿರಬಹುದು. ಇದನ್ನು ಇಂಗ್ಲಿಷ್ ನಲ್ಲಿ ಹೂವರ್ ಎಂದು ಕರೆಯಲಾಗುತ್ತದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ವಿಮಾನಗಳಿಂದ ಸಾಧ್ಯವಾಗದ ಹೆಲಿಕಾಪ್ಟರ್‌ಗಳಿಂದ ಮಾತ್ರವೇ ಸಾಧ್ಯವಾಗುವ ಕಾರ್ಯಗಳಿವು

ಹೆಲಿಕಾಪ್ಟರ್‌ಗಳು ಲಂಬವಾಗಿ ಕೆಳಕ್ಕೆ ಇಳಿಯಲೂಬಹುದು, ಮೇಲಕ್ಕೆ ಏರಲೂಬಹುದು. ವಿಮಾನಗಳು ಲಂಬವಾಗಿ ಇಳಿಯಲು ಅಥವಾ ಏರಲು ಸಾಧ್ಯವಿಲ್ಲ. ವಿಮಾನಗಳು ಮೇಲಕ್ಕೇರಲು ಅಥವಾ ಕೆಳಕ್ಕಿಳಿಯಲು ರನ್ ವೇಗಳ ಅಗತ್ಯವಿದೆ. ರನ್ ವೇಗಳಲ್ಲಿ ಸ್ವಲ್ಪ ದೂರ ಸಾಗಿದ ನಂತರವೇ ವಿಮಾನಗಳು ಮೇಲಕ್ಕೇರುತ್ತವೆ.

ವಿಮಾನಗಳಿಂದ ಸಾಧ್ಯವಾಗದ ಹೆಲಿಕಾಪ್ಟರ್‌ಗಳಿಂದ ಮಾತ್ರವೇ ಸಾಧ್ಯವಾಗುವ ಕಾರ್ಯಗಳಿವು

ಲ್ಯಾಂಡಿಂಗ್ ಸಮಯದಲ್ಲಿಯೂ ರನ್ ವೇಯಲ್ಲಿ ನಿರ್ದಿಷ್ಟ ದೂರ ಚಲಿಸಿದ ನಂತರವೇ ವಿಮಾನಗಳು ನಿಲ್ಲುತ್ತವೆ. ಆದರೆ ಹೆಲಿಕಾಪ್ಟರ್‌ಗಳು ಇರುವ ಸ್ಥಳದಲ್ಲಿಯೇ ಲಂಬವಾಗಿ ಕೆಳಕ್ಕೆ ಇಳಿಯುತ್ತವೆ. ಹೆಲಿಕಾಪ್ಟರ್‌ಗಳು ವಿಮಾನಗಳಿಂದ ಪ್ರವೇಶಿಸಲಾಗದ ಸಣ್ಣ ಸ್ಥಳಗಳನ್ನು ಸುಲಭವಾಗಿ ತಲುಪುತ್ತವೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ವಿಮಾನಗಳಿಂದ ಸಾಧ್ಯವಾಗದ ಹೆಲಿಕಾಪ್ಟರ್‌ಗಳಿಂದ ಮಾತ್ರವೇ ಸಾಧ್ಯವಾಗುವ ಕಾರ್ಯಗಳಿವು

ಹೆಲಿಕಾಪ್ಟರ್‌ಗಳು, ಕಾರುಗಳು ರಿವರ್ಸ್ ಗೇರ್ ನಲ್ಲಿ ಚಲಿಸುವಂತೆ ಆಕಾಶದಲ್ಲಿ ಹಿಮ್ಮುಖವಾಗಿ ಚಲಿಸುತ್ತವೆ. ಹೆಲಿಕಾಪ್ಟರ್‌ಗಳು ಯಾವುದೇ ವಸ್ತುಗಳ ಸಮೀಪಕ್ಕೆ ಚಲಿಸುತ್ತವೆ. ಗಗನಚುಂಬಿ ಕಟ್ಟಡಗಳ ಮಧ್ಯೆಯೂ ಚಲಿಸುತ್ತವೆ. ಇದು ವಿಮಾನಗಳಿಗೆ ಸಾಧ್ಯವಾಗದ ಮಾತು.

ವಿಮಾನಗಳಿಂದ ಸಾಧ್ಯವಾಗದ ಹೆಲಿಕಾಪ್ಟರ್‌ಗಳಿಂದ ಮಾತ್ರವೇ ಸಾಧ್ಯವಾಗುವ ಕಾರ್ಯಗಳಿವು

ಮಿಲಿಟರಿ ಹಾಗೂ ಖಾಸಗಿ ವಲಯಗಳಲ್ಲಿ ವಿವಿಧ ಉದ್ದೇಶಗಳಿಗಾಗಿ ಜನರು ಹೆಲಿಕಾಪ್ಟರ್‌ಗಳನ್ನು ಬಳಸುತ್ತಾರೆ. ಎತ್ತರದ ಕಟ್ಟಡಗಳ ಮೇಲೆ ಏರ್ ಕಂಡಿಶನ್ ಯುನಿಟ್, ರೇಡಿಯೋ ಟ್ರಾನ್ಸ್ ಮಿಷನ್ ಟವರ್ ಗಳನ್ನು ಅಳವಡಿಸಲು ಹೆಲಿಕಾಪ್ಟರ್‌ಗಳು ನೆರವಾಗುತ್ತವೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ವಿಮಾನಗಳಿಂದ ಸಾಧ್ಯವಾಗದ ಹೆಲಿಕಾಪ್ಟರ್‌ಗಳಿಂದ ಮಾತ್ರವೇ ಸಾಧ್ಯವಾಗುವ ಕಾರ್ಯಗಳಿವು

ಪ್ರವಾಹದಂತಹ ನೈಸರ್ಗಿಕ ವಿಪತ್ತುಗಳ ಸಂದರ್ಭದಲ್ಲಿ ಜನರನ್ನು ರಕ್ಷಿಸಲು ಹೆಲಿಕಾಪ್ಟರ್‌ಗಳು ನೆರವಾಗುತ್ತವೆ. ಪ್ರವಾಸೋದ್ಯಮದಲ್ಲಿಯೂ ಹೆಲಿಕಾಪ್ಟರ್‌ಗಳನ್ನು ಬಳಸಲಾಗುತ್ತದೆ. ಪ್ರವಾಸಿಗರು ಪ್ರೇಕ್ಷಣೀಯ ಸ್ಥಳಗಳಿಗೆ ಹೆಲಿಕಾಪ್ಟರ್‌ಗಳ ಮೂಲಕ ಭೇಟಿ ನೀಡಬಹುದು.

ವಿಮಾನಗಳಿಂದ ಸಾಧ್ಯವಾಗದ ಹೆಲಿಕಾಪ್ಟರ್‌ಗಳಿಂದ ಮಾತ್ರವೇ ಸಾಧ್ಯವಾಗುವ ಕಾರ್ಯಗಳಿವು

ವೈದ್ಯಕೀಯ ಉಪಕರಣಗಳ ಸಾಗಾಣಿಕೆಗೆ ಹಾಗೂ ರೋಗಿಗಳನ್ನು ತ್ವರಿತವಾಗಿ ಆಸ್ಪತ್ರೆಗೆ ಸಾಗಿಸಲು ಹೆಲಿಕಾಪ್ಟರ್‌ಗಳನ್ನು ಬಳಸಲಾಗುತ್ತದೆ. ಟ್ರಾಫಿಕ್ ಜಾಮ್ ಕಿರಿಕಿರಿಯಿಲ್ಲದೇ ಮಾನವನ ಅಂಗಾಂಗಗಳನ್ನು ಸಾಗಿಸಲು ಹೆಲಿಕಾಪ್ಟರ್ ಗಳು ಅತ್ಯುತ್ತಮ ಆಯ್ಕೆಯಾಗಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ವಿಮಾನಗಳಿಂದ ಸಾಧ್ಯವಾಗದ ಹೆಲಿಕಾಪ್ಟರ್‌ಗಳಿಂದ ಮಾತ್ರವೇ ಸಾಧ್ಯವಾಗುವ ಕಾರ್ಯಗಳಿವು

ಕಾಡ್ಗಿಚ್ಚನ್ನು ನಿಯಂತ್ರಿಸಲು ಹೆಲಿಕಾಪ್ಟರ್‌ಗಳು ಮಹತ್ತರ ಪಾತ್ರವನ್ನು ವಹಿಸುತ್ತವೆ. ಮಿಲಿಟರಿ ಉಪಕರಣಗಳನ್ನು ತಕ್ಷಣವೇ ಯುದ್ಧಭೂಮಿಗೆ ತಲುಪಿಸಲು ಹೆಲಿಕಾಪ್ಟರ್‌ಗಳು ನೆರವಾಗುತ್ತವೆ.

ವಿಮಾನಗಳಿಂದ ಸಾಧ್ಯವಾಗದ ಹೆಲಿಕಾಪ್ಟರ್‌ಗಳಿಂದ ಮಾತ್ರವೇ ಸಾಧ್ಯವಾಗುವ ಕಾರ್ಯಗಳಿವು

ವಿಮಾನಗಳು ಇಳಿಯಲು ಸಾಧ್ಯವಾಗದ ಸ್ಥಳಗಳನ್ನು ಸುಲಭವಾಗಿ ತಲುಪಬಹುದು ಎಂಬ ಕಾರಣಕ್ಕೆ ಮಿಲಿಟರಿಯಲ್ಲಿ ಹೆಲಿಕಾಪ್ಟರ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸಲಾಗುತ್ತದೆ. ಯಾವುದೇ ಯುದ್ಧದಲ್ಲಿ ಹೆಲಿಕಾಪ್ಟರ್‌ಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ.

Most Read Articles

Kannada
English summary
Helicopters are better than aeroplanes in some matters. Read in Kannada.
Story first published: Wednesday, September 2, 2020, 17:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X