ಮಾರ್ಚ್ 30ರಿಂದ ಮಾರಾಟವಾಗಲಿದೆ ಹರ್ಬಲ್ ಪೆಟ್ರೋಲ್..!
ತಮಿಳುನಾಡಿನ ರಾಮರ್ ಪಿಳ್ಳೈರವರು ನಿರಂತರವಾಗಿ ಸುದ್ದಿಯಲ್ಲಿದ್ದಾರೆ. ಇವರು ಗಿಡಮೂಲಿಕೆಗಳಿಂದ ಪೆಟ್ರೋಲ್ ತಯಾರಿಸಿರುವುದಾಗಿ ಹೇಳಿಕೊಂಡಿದ್ದರು. ಇವರ ಈ ಹೇಳಿಕೆಯು ತಮಿಳುನಾಡಿನ ವಾಹನ ಸವಾರರಲ್ಲಿ ಹೆಚ್ಚು ನಿರೀಕ್ಷೆಯನ್ನು ಜೊತೆಗೆ ವಿವಾದವನ್ನು ಹುಟ್ಟಿ ಹಾಕಿದೆ.

ತಮಿಳುನಾಡಿನಲ್ಲಿ ಈ ಹರ್ಬಲ್ ಪೆಟ್ರೋಲ್ ಕುರಿತು ವಿಭಿನ್ನ ಅಭಿಪ್ರಾಯಗಳಿವೆ. ಕೆಲವರು ಹರ್ಬಲ್ ಪೆಟ್ರೋಲ್ ಅನ್ನು ಸ್ವಾಗತಿಸಿದರೆ, ಇನ್ನೂ ಕೆಲವರು ಇದನ್ನು ಟೀಕಿಸುತ್ತಿದ್ದಾರೆ. ಈಗ ರಾಮರ್ ಪಿಳ್ಳೈರವರು ನೀಡಿರುವ ಹೇಳಿಕೆಯು ಜನರ ಗಮನವನ್ನು ಅವರತ್ತ ಸೆಳೆದಿದೆ.

ಸುಪ್ರೀಂ ಕೋರ್ಟ್ ಆದೇಶದ ನಂತರ ರಾಮರ್ ಪಿಳ್ಳೈರವರು ಈ ಹರ್ಬಲ್ ಪೆಟ್ರೋಲ್ ಮಾರಾಟವನ್ನು ಆರಂಭಿಸಿದ್ದಾರೆ. ಈ ಹರ್ಬಲ್ ಪೆಟ್ರೋಲ್ ಅನ್ನು ಈಗಾಗಲೇ ಚೆನ್ನೈನಲ್ಲಿ ಮಾರಾಟ ಮಾಡಲಾಗುತ್ತಿದೆ. ಜನವರಿ 29ರಿಂದ ಈ ಗಿಡಮೂಲಿಕೆ ಪೆಟ್ರೋಲ್ ಅನ್ನು ಮಾರಾಟ ಮಾಡಲಾಗುತ್ತಿದೆ.

ಆದರೆ ದಿನಕ್ಕೇ ಕೇವಲ 150 ಲೀಟರ್ ಪೆಟ್ರೋಲ್ ಅನ್ನು ಮಾತ್ರ ಮಾರಾಟ ಮಾಡಲಾಗುತ್ತಿದೆ. ಈ ಹರ್ಬಲ್ ಪೆಟ್ರೋಲ್‍ನ ಬೆಲೆ ಪ್ರತಿ ಲೀಟರಿಗೆ ರೂ.30ಗಳಾಗಿದೆ. ಈ ಮಾರಾಟದ ಯಶಸ್ಸಿನಿಂದ ಉತ್ತೇಜಿತರಾಗಿರುವ ರಾಮರ್ ಪಿಳ್ಳೈರವರು ತಮಿಳುನಾಡಿನಾದ್ಯಂತ ಈ ಹರ್ಬಲ್ ಪೆಟ್ರೋಲ್ ಅನ್ನು ಮಾರಾಟ ಮಾಡಲು ಮುಂದಾಗಿದ್ದಾರೆ.

ಫೆಬ್ರವರಿ 27ರಿಂದ ವಿರುದ್ದನಗರ್, ಥೆಣಿ, ಮಧುರೈ ಹಾಗೂ ತೆಂಕಣಿಗಳಲ್ಲಿ ಈ ಹರ್ಬಲ್ ಪೆಟ್ರೋಲ್ ಮಾರಾಟವನ್ನು ಆರಂಭಿಸಲಾಗುವುದು. ಹರ್ಬಲ್ ಪೆಟ್ರೋಲ್ ಅನ್ನು ಮಾರಾಟ ಮಾಡಲು ಏಜೆಂಟರುಗಳನ್ನು ನೇಮಿಸಲಾಗಿದೆ.

ರಾಜಪಲೈನಲ್ಲಿ ನಡೆದ ಸಮಾರಂಭದಲ್ಲಿ ಏಜೆಂಟರುಗಳನ್ನು ನೇಮಿಸಲಾಗಿದೆ. ಈ ಸಮಾರಂಭದಲ್ಲಿ ರಾಮರ್ ಪಿಳ್ಳೈರವರು ಸಹ ಭಾಗವಹಿಸಿದ್ದರು. ಸಮಾರಂಭದ ನಂತರ ಮಾತನಾಡಿದ ರಾಮರ್ ಪಿಳ್ಳೈರವರು ಅನೇಕ ಸಂಗತಿಗಳ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ.

ಹರ್ಬಲ್ ಪೆಟ್ರೋಲ್ ಅನ್ನು ಮಾರಾಟ ಮಾಡದಂತೆ ಯಾರೂ ತಡೆಯುವಂತಿಲ್ಲವೆಂದು ಕೋರ್ಟ್ ಆದೇಶ ನೀಡಿದೆ ಎಂದು ಅವರು ಹೇಳಿದರು. ಈ ಗಿಡಮೂಲಿಕೆಯ ಪೆಟ್ರೋಲ್‍ನಿಂದ ವಾಹನಗಳ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ.

ಈ ಪೆಟ್ರೋಲ್‍ನಿಂದ ಚಲಿಸುವ ದ್ವಿ ಚಕ್ರ ವಾಹನಗಳು ಪ್ರತಿ ಲೀಟರಿಗೆ 80 ಕಿ.ಮೀ ಮೈಲೇಜ್ ನೀಡುತ್ತವೆ. ಕನ್ಯಾಕುಮಾರಿಯಲ್ಲಿ ಪ್ರತಿದಿನ 15,000 ಲೀಟರ್ ಹರ್ಬಲ್ ಪೆಟ್ರೋಲ್ ಉತ್ಪಾದಿಸಲು ದೊಡ್ಡ ಉತ್ಪಾದನಾ ಘಟಕವನ್ನು ಆರಂಭಿಸಲಾಗಿದೆ.

ತಮಿಳುನಾಡಿನಾದ್ಯಂತ ಈ ಪೆಟ್ರೋಲ್ ಮಾರಾಟ ಮಾಡಲು ಎಲ್ಲಾ ಸಿದ್ದತೆಗಳನ್ನು ಮಾಡಲಾಗಿದ್ದು, ಮಾರ್ಚ್ 30ರಿಂದ ತಮಿಳುನಾಡಿನಾದ್ಯಂತ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಈ ಹರ್ಬಲ್ ಪೆಟ್ರೋಲ್‍ನ ಬೆಲೆ ಪ್ರತಿ ಲೀಟರಿಗೆ ರೂ.30ಗಳಾದರೆ, ಪ್ರತಿ ಲೀಟರ್ ಡೀಸೆಲ್‍ನ ಬೆಲೆ ರೂ.24ಗಳಾಗಲಿದೆ ಎಂದು ರಾಮರ್ ಪಿಳ್ಳೈರವರು ಹೇಳಿದರು.


Click it and Unblock the Notifications