ದುಬಾರಿ ಬೆಲೆಯ ಸೂಪರ್‌ಕಾರ್ ಹೊಂದಿರುವ ಭಾರತದ 7 ಮಹಿಳೆಯರು

ಭಾರತದಲ್ಲಿ ನಮ್ಮ ದೇಶೀಯ ಕಾರುಗಳನ್ನು ಹೊರತುಪಡಿಸಿ, ಸಾಕಷ್ಟು ವಿದೇಶಿ ಮೂಲದ ಕಾರುಗಳನ್ನು ನೋಡಬಹುದು. ಭಾರತದಲ್ಲಿರುವ ಕೆಲವೊಂದು ಶ್ರೀಮಂತರು ಮತ್ತು ಸೆಲಬ್ರಿಟಿಗಳ ಬಳಿ ನಾವು ಹೆಚ್ಚಾಗಿ ಈ ರೀತಿಯ ಕಾರುಗಳನ್ನು ನೋಡಬಹುದಾಗಿದೆ.

ದುಬಾರಿ ಬೆಲೆಯ ಸೂಪರ್‌ಕಾರ್ ಹೊಂದಿರುವ ಭಾರತದ 7 ಮಹಿಳೆಯರು

ಇತ್ತೀಚಿನ ವರ್ಷಗಳಲ್ಲಿ ಉದ್ಯಮಿಗಳು, ರಾಜಕಾರಣಗಳು ಮತ್ತು ಸೆಲಬ್ರಿಟಿಗಳಿಗೆ ಸೂಪರ್‌ ಕಾರುಗಳ ಕ್ರೇಜ್ ಹೊಂದಿದ್ದಾರೆ. ಭಾರತದಲ್ಲಿ ಹಲವರು ಸೂಪರ್‌ ಕಾರ್ ಅನ್ನು ಹೊಂದಿದ್ದಾರೆ. ಸ್ಪೋರ್ಟ್ಸ್ ಸೂಪರ್‌ಕಾರ್ ಹೆಚ್ಚಾಗಿ ಪುರಷರು ಬಳಸುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ, ಮಹಿಳೆಯರು ಕೂಡ ಸೂಪರ್‌ಕಾರ್ ಅನ್ನು ಹೊಂದಿದ್ದಾರೆ. ಮಹಿಳೆಯರು ಕೂಡ ಸೂಪರ್ ಕಾರ್ ಕ್ರೇಜ್ ಅನ್ನು ಹೊಂದಿದ್ದಾರೆ. ಭಾರತದಲ್ಲಿ ದುಬಾರಿ ಬೆಲೆಯ ಸೂಪರ್‌ಕಾರ್ ಹೊಂದಿರುವ ಭಾರತದ 7 ಮಹಿಳೆಯರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ,

ದುಬಾರಿ ಬೆಲೆಯ ಸೂಪರ್‌ಕಾರ್ ಹೊಂದಿರುವ ಭಾರತದ 7 ಮಹಿಳೆಯರು

ಮಮತಾ ಮೋಹನ್‌ದಾಸ್‌ - ಪೋರ್ಷೆ 911 ಕ್ಯಾರೆರಾ ಎಸ್

ಇತ್ತೀಚೆಗೆ ಮಲಯಾಳಂ ಚಿತ್ರರಂಗದ ನಟಿ ಮಮತಾ ಮೋಹನ್‌ದಾಸ್‌ ಹೊಚ್ಚ ಹೊಸ ಪೋರ್ಷೆ 911 ಕ್ಯಾರೆರಾ ಎಸ್(Porsche 911 Carrera S) ಸ್ಪೋರ್ಟ್ಸ್ ಕಾರನ್ನು ಖರೀದಿಸಿದ್ದಾರೆ. ಪೋರ್ಷೆ ಐಷಾರಾಮಿ ಸ್ಪೋರ್ಟ್ಸ್ ಕಾರುಗಳ ಜನಪ್ರಿಯ ಬ್ರಾಂಡ್ ಆಗಿದೆ, ಈ ಬ್ರಾಂಡ್ ಭಾರತೀಯ ಸೆಲೆಬ್ರಿಟಿಗಳಲ್ಲಿ ಸಾಕಷ್ಟು ಜನಪ್ರಿಯವಾಗಿದೆ.

ದುಬಾರಿ ಬೆಲೆಯ ಸೂಪರ್‌ಕಾರ್ ಹೊಂದಿರುವ ಭಾರತದ 7 ಮಹಿಳೆಯರು

ನಟಿ ಪೋರ್ಷೆ 911 ಕ್ಯಾರೆರಾ ಎಸ್ ಅನ್ನು ರೇಸಿಂಗ್ ಯೆಲ್ಲೋ ಬಣ್ಣವನ್ನು ಹೊಂದಿದೆ. ಈ ಬಣ್ಣದಲ್ಲಿ ಕಾರು ಅತ್ಯಂತ ಚೆನ್ನಾಗಿ ಮತ್ತು ಸ್ಪೋರ್ಟಿಯಾಗಿ ಕಾಣುತ್ತದೆ. ನಟಿ ಮಮತಾ ಮೋಹನ್ ದಾಸ್ ಒಡೆತನದ ಪೋರ್ಷೆ ಹೊಚ್ಚ ಹೊಸ 992 ತಲೆಮಾರಿನ ಪೋರ್ಷೆ 911 ಕ್ಯಾರೆರಾ ಎಸ್ ಆಗಿದ್ದು, ಇದು ಕೆಲವು ವರ್ಷಗಳ ಹಿಂದೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಯಿತು. ಕ್ಯಾರೆರಾ ಎಸ್ ವೇಗದ ಕಾರ್ ಆಗಿದ್ದು, 3.0 ಲೀಟರ್ ಟ್ವಿನ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹಿಂಭಾಗದಲ್ಲಿ ಇರಿಸಲಾಗಿದೆ.

ದುಬಾರಿ ಬೆಲೆಯ ಸೂಪರ್‌ಕಾರ್ ಹೊಂದಿರುವ ಭಾರತದ 7 ಮಹಿಳೆಯರು

ಈ ಎಂಜಿನ್ ಬಿಎಚ್‌ಪಿ ಪವರ್ ಮತ್ತು 530 ಎನ್ಎಂ ಗರಿಷ್ಠ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 8-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ. ಇದು ಇದರ ಹಿಂದಿನ ವ್ಹೀಲ್ ಗಳಿಗೆ ಪವರ್ ಅನ್ನು ಕಳುಹಿಸಲಾಗುತ್ತದೆ. ಈ ಪೋರ್ಷೆ 911 ಕ್ಯಾರೆರಾ ಎಸ್ ವೇಗದ ಕಾರ್ ಆಗಿದ್ದು ಕೇವಲ 3.5 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ

ದುಬಾರಿ ಬೆಲೆಯ ಸೂಪರ್‌ಕಾರ್ ಹೊಂದಿರುವ ಭಾರತದ 7 ಮಹಿಳೆಯರು

ಸುಮನ್ ಮೆಹ್ತಾ - ಲ್ಯಾಂಬೊರ್ಗಿನಿ ಹುರಾಕನ್

ಬಿಜೆಪಿಯ ಖ್ಯಾತ ರಾಜಕಾರಣಿಯಾಗಿರುವ ಸುಮನ್ ಮೆಹ್ತಾ ಅವರ ಪತಿ ಈ ಸ್ಪೋರ್ಟ್ಸ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಸುಮನ್ ಮೆಹ್ತಾ ಹೊಚ್ಚ ಹೊಸ ಲ್ಯಾಂಬೊರ್ಗಿನಿ ಹುರಾಕನ್ ಆಟೋ-ರಿಕ್ಷಾದೊಂದಿಗೆ ಅಪಘಾತಕ್ಕೀಡಾಗಿತ್ತು. ಈ ಸಂದರ್ಭದಲ್ಲಿ ಸಾಕಷ್ಟು ವಿವಾದಗಳು ಆಗಿತ್ತು. ಈ ವೇಳೆ ಸೋಷಿಯಲ್ ಮೀಡಿಯಾಗಳಲ್ಲಿ ಸುಮನ್ ಮೆಹ್ತಾ ಹೆಸರು ಜನಪ್ರಿಯವಾಗಿತ್ತು.

ದುಬಾರಿ ಬೆಲೆಯ ಸೂಪರ್‌ಕಾರ್ ಹೊಂದಿರುವ ಭಾರತದ 7 ಮಹಿಳೆಯರು

ಮಲ್ಲಿಕಾ ಶೆರಾವತ್ -ಲ್ಯಾಂಬೊರ್ಗಿನಿ ಅವೆಂಟಡಾರ್

ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್ ಜನಪ್ರಿಯ ಲ್ಯಾಂಬೊರ್ಗಿನಿ ಅವೆಂಟಡಾರ್ ಸೂಪರ್ ಕಾರ್ ಅನ್ನು ಹೊಂದಿದ್ದಾರೆ. ಇದು ಲ್ಯಾಂಬೊರ್ಗಿನಿಯ ಪ್ರಮುಖವಾದ ಅವೆಂಟಡಾರ್ ಆಗಿದೆ. ಅವೆಂಟಡಾರ್ ಕೊನೆಯ ಓಲ್ಡ್ ಸ್ಕೂಲ್ ಸೂಪರ್‌ಕಾರ್‌ಗಳಲ್ಲಿ ಒಂದಾಗಿದೆ ಎಂದು ಕರೆಯಲಾಗುತ್ತದೆ.

ದುಬಾರಿ ಬೆಲೆಯ ಸೂಪರ್‌ಕಾರ್ ಹೊಂದಿರುವ ಭಾರತದ 7 ಮಹಿಳೆಯರು

ಈ ಲ್ಯಾಂಬೊರ್ಗಿನಿ ಅವೆಂಟಡಾರ್ ಸೂಪರ್ ಕಾರಿನಲ್ಲಿ 6.5-ಲೀಟರ್, ನ್ಯಾಚುರಲ್ ಪೆಟ್ರೋಲ್ ಎಂಜಿನ್‌ ಅನ್ನು ಹೊಂದಿದೆ. ಇದನ್ನು ಸಿಂಗಲ್-ಕ್ಲಚ್ 7-ಸ್ಪೀಡ್ ಸ್ವಯಂಚಾಲಿತ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಈ ಎಂಜಿನ್ 740 ಬಿಹೆಚ್‍ಪಿ ಪವರ್ ಮತ್ತು 690 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಗಂಟೆಗೆ 350 ಕಿಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಈ ಕಾರು ಕೇವಲ 2.8 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ.

ದುಬಾರಿ ಬೆಲೆಯ ಸೂಪರ್‌ಕಾರ್ ಹೊಂದಿರುವ ಭಾರತದ 7 ಮಹಿಳೆಯರು

ಶೀತಲ್ ದುಗ್ಗರ್ - ಲ್ಯಾಂಬೊರ್ಗಿನಿ ಹುರಾಕನ್

ಶೀತಲ್ ದುಗ್ಗರ್ ಅವರು ಲ್ಯಾಂಬೊರ್ಗಿನಿ ಹುರಾಕನ್ ಸೂಪರ್ ಕಾರಿನ ಮಾಲೀಕರಾದ ಮೊದಲ ಮಹಿಳೆ. ಉದ್ಯಮಿಯಾಗಿರುವ ಪತಿ ಅವರಿಗೆ ಸ್ಪೋರ್ಟ್ಸ್ ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಹುರಾಕನ್ ಪ್ರಸ್ತುತ ಖರೀದಿಸಬಹುದಾದ ಕೈಗೆಟುಕುವ ಲಂಬೋರ್ಗಿನಿ.

ದುಬಾರಿ ಬೆಲೆಯ ಸೂಪರ್‌ಕಾರ್ ಹೊಂದಿರುವ ಭಾರತದ 7 ಮಹಿಳೆಯರು

ಈ ಕಾರಿನಲ್ಲಿ ನ್ಯಾಚುರಲ್ ವಿ10 ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 610 ಬಿಹೆಚ್‌ಪಿ ಪವರ್ ಮತ್ತು 560 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಈ ಕಾರು 325 ಟಾಪ್ ಸ್ಪೀಡ್ ಅನು ಹೊಂದಿದೆ. ಈ ಕಾರು ಕೇವಲ 3.2 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ.

ದುಬಾರಿ ಬೆಲೆಯ ಸೂಪರ್‌ಕಾರ್ ಹೊಂದಿರುವ ಭಾರತದ 7 ಮಹಿಳೆಯರು

ಹರ್ಡ್ ಕೌರ್ - ಫೆರಾರಿ 458

ತರಣ್ ಕೌರ್ ಧಿಲ್ಲೋನ್ ಅಕಾ ಹರ್ಡ್ ಕೌರ್ ಒಬ್ಬ ಪ್ರಸಿದ್ಧ ಭಾರತೀಯ ರಾಪರ್. ಇವರು ಅತ್ಯಂತ ಸುಂದರವಾದ ಫೆರಾರಿ 458 ಇಟಾಲಿಯಾವನ್ನು ಹೊಂದಿದ್ದಾರೆ. ಇವರು ಈ ಸೂಪರ್ ಕಾರನ್ನು ಬಿಗ್ ಬಾಯ್ ಟಾಯ್ಜ್ ಮೂಲಕ ಖರೀದಿಸಿದಳು. 458 ಇಟಾಲಿಯಾ ಫೆರಾರಿ ನಿರ್ಮಿಸಿದ ಕೊನೆಯ ನ್ಯಾಚುರಲ್ ಆಕಾಂಕ್ಷೆಯ V8 ಎಂಜಿನ್‌ನೊಂದಿಗೆ ಬರುತ್ತದೆ.

ದುಬಾರಿ ಬೆಲೆಯ ಸೂಪರ್‌ಕಾರ್ ಹೊಂದಿರುವ ಭಾರತದ 7 ಮಹಿಳೆಯರು

ಆಟೋಮೊಬೈಲ್ ಉದ್ಯಮದಲ್ಲಿ ಇದು ಅತ್ಯುತ್ತಮ ಧ್ವನಿ ಎಂಜಿನ್‌ಗಳಲ್ಲಿ ಒಂದಾಗಿದೆ. ಈ ಎಂಜಿನ್ 568 ಬಿಹೆಚ್‍ಪಿ ಪವರ್ ಮತ್ತು 540 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು 8,00 ಆರ್ಪಿಎಂನ ರೆಡ್‌ಲೈನ್ ಅನ್ನು ಹೊಂದಿದೆ.

ದುಬಾರಿ ಬೆಲೆಯ ಸೂಪರ್‌ಕಾರ್ ಹೊಂದಿರುವ ಭಾರತದ 7 ಮಹಿಳೆಯರು

ಸ್ವಾತಿ ಬಗ್ಗಾ - ಫೆರಾರಿ ಕ್ಯಾಲಿಫೋರ್ನಿಯಾ ಟಿ

ಸ್ವಾತಿ ಬಗ್ಗಾ ಅವರು ಫೆರಾರಿ ಕ್ಯಾಲಿಫೋರ್ನಿಯಾ ಟಿ ಸೂಪರ್ ಕಾರನ್ನು ಅನ್ನು ಹೊಂದಿದ್ದಾರೆ. ಈ ಸ್ಪೋರ್ಟ್ಸ್ ಕಾರನ್ನು ಫೆರಾರಿಯ ಐಕಾನಿಕ್ ಕೆಂಪು ಬಣ್ಣವನ್ನು ಹೊಂದಿದೆ, ಈ ಸೂಪರ್ ಕಾರಿನಲ್ಲಿ ಟ್ವಿನ್-ಟರ್ಬೋಚಾರ್ಜ್ಡ್ V8 ಎಂಜಿನ್ ಅನ್ನು ಹೊಂದಿದೆ.

ದುಬಾರಿ ಬೆಲೆಯ ಸೂಪರ್‌ಕಾರ್ ಹೊಂದಿರುವ ಭಾರತದ 7 ಮಹಿಳೆಯರು

ಈ ಎಂಜಿನ್ 553 ಬಿಹೆಚಿಪಿ ಪವರ್ ಮತ್ತು 755 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನ್ ಸ್ವಾತಿ ಬಗ್ಗಾ ಅವರ ಬಳಿ ಇತರ ಫೆರಾರಿಗಳಾದ ಎಫ್430 ಸ್ಪೈಡರ್ ಮತ್ತು 458 ಇಟಾಲಿಯಾವನ್ನು ಸಹ ಹೊಂದಿದ್ದಾರೆ. ಇದಲ್ಲದೆ, ಅವರು ಬಿಎಂಡಬ್ಲ್ಯು ಝ4 ಮತ್ತು ಜಾಗ್ವಾರ್ ಎಫ್-ಟೈಪ್ V6S ಅನ್ನು ಸಹ ಹೊಂದಿದ್ದಾರೆ.

ದುಬಾರಿ ಬೆಲೆಯ ಸೂಪರ್‌ಕಾರ್ ಹೊಂದಿರುವ ಭಾರತದ 7 ಮಹಿಳೆಯರು

ಶಿಲ್ಪಾ ಶೆಟ್ಟಿ - ಬಿಎಂಡಬ್ಲ್ಯು ಐ8

ಜನಪ್ರಿಯ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಬಿಎಂಡಬ್ಲ್ಯು ಐ8 ಸೂಪರ್ ಕಾರನ್ನು ಹೊಂದಿದ್ದಾರೆ. ಇದು ದಲ ಹೈಬ್ರಿಡ್ ಸ್ಪೋರ್ಟ್ಸ್ ಕಾರುಗಳಲ್ಲಿ ಒಂದಾಗಿದೆ. ಈ ಕಾರಿನಲ್ಲಿ 1.5-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದ್ದು ಎರಡು ಎಲೆಕ್ಟ್ರಿಕ್ ಮೋಟರ್‌ಗಳೊಂದಿಗೆ ಜೋಡಿಸಲಾಗಿದೆ. ಸಂಯೋಜಿತವಾಗಿ, ಇವು 357 ಬಿಹೆಚ್‍ಪಿ ಪವರ್ ಮತ್ತು 570 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ದುಬಾರಿ ಬೆಲೆಯ ಸೂಪರ್‌ಕಾರ್ ಹೊಂದಿರುವ ಭಾರತದ 7 ಮಹಿಳೆಯರು

ಈ ಬಿಎಂಡಬ್ಲ್ಯು ಐ8 ಕಾರು 250 ಟಾಪ್ ಸ್ಪೀಡ್ ಅನ್ನು ಹೊಂದಿದೆ. ಇನ್ನು ಈ ಕಾರು 4.4 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ನಟಿ ಶಿಲ್ಪಾ ಶೆಟ್ಟಿ ಅವರು ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್, ಲ್ಯಾಂಡ್ ರೋವರ್ ರೇಂಜ್ ರೋವರ್ ಸೇರಿದಂತೆ ವಿವಿಧ ದುಬಾರಿ ಬೆಲೆಯ ಕಾರುಗಳನ್ನು ಹೊಂದಿದ್ದಾರೆ

Most Read Articles

Kannada
English summary
Here is list of 7 women supercar owners in india details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X