ಅಲ್ಲು ಅರ್ಜುನ್ 'ಗ್ಲಾಮರ್'ಗೆ ಚೆಲುವೆಯರು ಫಿದಾ
ದಕ್ಷಿಣ ಭಾರತದ ಜನಪ್ರಿಯ ನಟ ಹಾಗೂ ತೆಲುಗು ಸೂಪರ್ ಸ್ಟಾರ್ ಅಲ್ಲು ಅರ್ಜುನ್ 'ಗ್ಲಾಮರ್'ಗೆ ಚೆಲುವೆಯರು ಫಿದಾ ಆಗಿ ಬಿಟ್ಟಿದ್ದಾರೆ.
ಅಷ್ಟಕ್ಕೂ ವಿಷಯ ಏನು ಗೊತ್ತೇ? ನೂತನ ಹೀರೊ ಗ್ಲಾಮರ್ 125 ಸಿಸಿ ಜಾಹೀರಾತಿನಲ್ಲಿ ಅಲ್ಲು ಅರ್ಜುನ್ ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ಬೈಕ್ ಪ್ರಚಾರಾರ್ಥ ಆಕರ್ಷಕ ವೀಡಿಯೋ ಸಹ ರಚಿಸಲಾಗಿದೆ. (ಕೊನೆಯಲ್ಲಿ ನೀಡಿರುವ ವೀಡಿಯೋ ನೋಡಲು ಮರೆಯದಿರಿ.)

ಸಾಮಾನ್ಯವಾಗಿ ಬಾಲಿವುಡ್ ನಟ ಅಥವಾ ನಟಿಯರನ್ನು ಬ್ರಾಂಡ್ ಪ್ರಚಾರಕ್ಕಾ ಬಳಸಲಾಗುತ್ತದೆ. ಆದರೆ ಇವೆಲ್ಲದಕ್ಕಿಂತಲೂ ವಿಭಿನ್ನವಾಗಿ ಚಿಂತನೆ ಮಾಡಿರುವ ಹೀರೊ ಮೊಟೊಕಾರ್ಪ್ ಪ್ರಾದೇಶಿಕ ನಟ ಅಲ್ಲು ಅರ್ಜುನ್ ಅವರನ್ನು ಹೀರೊ ಗ್ಲಾಮರ್ ಪ್ರಚಾರಕ್ಕಾಗಿ ಆಯ್ಕೆ ಮಾಡಿದ್ದಾರೆ.

ಈ ಎಲ್ಲದರ ಮುಖಾಂತರ ನೂತನ ಗ್ಲಾಮರ್ ಮಾರಾಟವನ್ನು ಸಂಸ್ಥೆ ಗುರಿಯಾಗಿರಿಸಿಕೊಂಡಿದೆ. ಇದೇ ಮೊದಲ ಬಾರಿಗೆ ಹೀರೊ ಸಂಸ್ಥೆಯು ಪ್ರಾದೇಶಿಕ ನಟರನ್ನು ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಿದೆ.

ಅಲ್ಲು ಅರ್ಜುನ್ ತವರೂರಾದ ಆಂಧ್ರ ಪ್ರದೇಶ ಸೇರಿದಂತೆ ಕರ್ನಾಟಕ ಹಾಗೂ ಕೇರಳದಲ್ಲೂ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಈ ಮೂಲಕ ದಕ್ಷಿಣ ಭಾರತದಲ್ಲಿ ಹೆಚ್ಚಿನ ಮಾರಾಟವನ್ನು ಗುರಿಯಿರಿಸಿಕೊಂಡಿದೆ.

ದೇಶದ ನಂ.1 ಹಾಗೂ ಅತಿ ಹೆಚ್ಚು ಮಾರಾಟದ 125 ಸಿಸಿ ಬೈಕ್ ಹೋಂಡಾ ಶೈನ್ ಪ್ರತಿಸ್ಪರ್ಧಿಯಾಗಿ ಗುರುತಿಸಿಕೊಂಡಿರುವ ಹೀರೊ ಗ್ಲಾಮರ್, ಆರು ವಿಭಿನ್ನ ಬಣ್ಣಗಳ ಆಯ್ಕೆಗಳಲ್ಲಿ ಆಗಮನವಾಗಿದೆ. ಇದು 9 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, 4 ಸ್ಪೀಡ್ ಗೇರ್ ಬಾಕ್ಸ್ ಸಹ ಇರಲಿದೆ.

ವೈಶಿಷ್ಟ್ಯ
ಡಿಜಿಟಲ್ ಅನಲಾಗ್ ಕೊಂಬೊ ಮೀಟರ್ ಕನ್ಸಾಲ್,
ಹೊಸ ಗ್ರಾಫಿಕ್ಸ್ ಮತ್ತು ಏರೋಡೈನಾಮಿಕ್ ಸ್ಕೂಪ್,
ಎಎಸ್‌ಎಫ್‌ಎಸ್ ಅಡ್ವಾನ್ಸಡ್ ಸ್ವಿರ್ಲ್ ಫ್ಲೊ ಇಂಡಕ್ಷನ್ ಸಿಸ್ಟಂ,

ಆಯಾಮ
ಉದ್ದ 2005 ಎಂಎಂ
ಅಗಲ 735 ಎಂಎಂ
ಎತ್ತರ 1070 ಎಂಎಂ
ಚಕ್ರಾಂತರ 1265 ಎಂಎಂ
ಗ್ರೌಂಡ್ ಕ್ಲಿಯರನ್ಸ್ 150 ಎಂಎಂ
ಇಂಧನ ಟ್ಯಾಂಕ್ ಸಾಮರ್ಥ್ಯ 13.6 ಲೀಟರ್
ರಿಸರ್ವ್ 1 ಲೀಟರ್
ಭಾರ 125 ಕೆ.ಜಿ (ಕಿಕ್) / 129 ಕೆ.ಜಿ (ಸೆಲ್ಪ್)

ಒಟ್ಟಿನಲ್ಲಿ ಅಲ್ಲು ಅರ್ಜುನ್ ಆಗಮನದೊಂದಿಗೆ ಹೀರೊ ಗ್ಲಾಮರ್ 125 ಸಿಸಿ ಮಾರಾಟಕ್ಕೆ ಹೇಗೆ ಉತ್ತೇಜನ ಸಿಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಅಲ್ಲು ಅರ್ಜುನ್ ಗ್ಲಾಮರಸ್ ಜಾಹೀರಾತು ವೀಕ್ಷಿಸಿ


Click it and Unblock the Notifications








