Hero Splendor: ಅರೆರೆ.. ಎಟಿಎಂ ಆದ ಹೀರೋ ಸ್ಪ್ಲೆಂಡರ್.. ಅಯ್ಯೋ ಜ್ಯೂಸ್ ಬರುತ್ತೆ, ವಿಡಿಯೋ ಫುಲ್ ವೈರಲ್!

ಭಾರತದಲ್ಲಿ ಕಾರು ಹಾಗೂ ಬೈಕ್‌ಗಳು ಸೇರಿದಂತೆ ಇತರೆ ವಾಹನಗಳನ್ನು ಚಿತ್ರ - ವಿಚಿತ್ರವಾಗಿ ಮಾಡಿಫೈ ಮಾಡಿರುವ ಅದೆಷ್ಟೋ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ನಾವು - ನೀವು ನೋಡಿದ್ದೇವೆ. ಅವು ಭಾರೀ ವೈರಲ್ ಸಹ ಆಗುತ್ತಿರುತ್ತವೆ. ಇತ್ತೀಚೆಗೆ ಯುವಕನೊಬ್ಬ ಶ್ರೀಸಾಮಾನ್ಯರು ಮುಗುಬಿದ್ದು ಖರೀದಿ ಮಾಡುವ ಹೀರೋ ಸ್ಪ್ಲೆಂಡರ್ (Hero Splendor) ಮೋಟಾರ್‌ಸೈಕಲ್‌ನ್ನು ನವೀನ ರೀತಿಯಲ್ಲಿ ಬದಲಾಯಿಸಿದ್ದಾನೆ. ಅದು ಸಖತ್ ಹಲ್‌ಚಲ್ ಸೃಷ್ಟಿಸುತ್ತಿದೆ. ನೆಟ್ಟಿಗರು ಆತನ ಟ್ಯಾಲೆಂಟ್ ಮೆಚ್ಚಿದ್ದು, ಶಹಬಾಸ್ ಗಿರಿ ನೀಡುತ್ತಿದ್ದಾರೆ.

'ಸಿರ್ಸ್ವಾಲ್.ಸಂಜಯ್' ಎಂಬ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೀರೋ ಸ್ಪ್ಲೆಂಡರ್ ಬೈಕ್‌ನ್ನು ವಿಭಿನ್ನ ರೀತಿಯಲ್ಲಿ ಮಾಡಿಫೈಗೊಳಿಸಿರುವ ಹಲವು ವಿಡಿಯೋಗಳನ್ನು ಹಂಚಿಕೊಳ್ಳಲಾಗಿದೆ. ಅದರಲ್ಲಿ ಈ ಮೋಟಾರ್‌ಸೈಕಲ್‌ 'ವೆಂಡಿಂಗ್ ಮೆಷಿನ್' ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಈ ಯುವಕ ಸ್ಪ್ಲೆಂಡರ್‌ನ ಹೈಡ್‌ಲೈಟ್‌ಯಿರುವ ಒಂದು ಭಾಗದಲ್ಲಿ ಎಟಿಎಂ ಕಾರ್ಡ್ ಹಾಕಿ, ವಿಂಡ್‌ಶೀಲ್ಡ್‌ ಮೇಲೆ ನಮೂದಿಸಿರುವ ನಂಬರ್‌ನ್ನು ಒತ್ತಿ, ಮುಂಭಾಗದಲ್ಲಿ ಗ್ಲಾಸ್‌ನ್ನು ಹಿಡಿದರೆ ಜ್ಯೂಸ್ ಬರುವುದನ್ನು ಕಾಣಬಹುದು.

Hero Splendor Bike Convert As A ATM Machine Details

ಈ ವಿಡಿಯೋ ಲಕ್ಷಗಟ್ಟಲೆ ವೀಕ್ಷಣೆ ಪಡೆದುಕೊಂಡಿದ್ದು, 3 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ನೂರಾರು ಜನರು ಕಾಮೆಂಟ್ ಕೂಡ ಮಾಡಿದ್ದು, ನೆಟ್ಟಿಗನೊಬ್ಬ 'ಬಿಹಾರದಲ್ಲಿ ಏನು ಬೇಕಾದರೂ ಆಗಬಹುದು' ಎಂದಿದ್ದಾರೆ. ಮತ್ತೊಬ್ಬರು 'ದೇಶವು ಒಬ್ಬರ ನಂತರ, ಒಬ್ಬರು ಕಲಾವಿದರಿಂದ ತುಂಬಿದೆ' ಎಂದು ಹೇಳಿದ್ದಾರೆ.

ಇದೇ ಯುವಕನ ಇನ್ನೊಂದು ವಿಡಿಯೋದಲ್ಲಿ ವಿಂಡ್‌ಶೀಲ್ಡ್‌ ಮೇಲಿರುವ ಕ್ಯೂಆರ್ ಕೋಡ್ ಸ್ಯಾನ್ ಮಾಡಿ, ಮೊಬೈಲ್‌ನಲ್ಲಿ ಆತನಿಗೆ ಬೇಕಿರುವ ಮೊತ್ತವನ್ನು ನಮೂದಿಸಿದರೆ, ಹೈಡ್‌ಲೈಟ್‌ಯಿರುವ ಜಾಗದಿಂದ ಹಣ ಬರುವುದನ್ನು ಕಾಣಬಹುದು. ಇದಿಷ್ಟೇ ಅಲ್ಲದೆ, ಮತ್ತೊಂದು ವಿಡಿಯೋದಲ್ಲಿ ಈ ಯುವಕ ಬೈಕ್‌ಗೆ 'ಸೈಕಲ್ ಬೆಲ್' ಅಳವಡಿಕೆ ಮಾಡಿ, ರಸ್ತೆಯಲ್ಲಿ ಓಡಿಸುತ್ತಿರುವುದನ್ನು ಸಹ ನೋಡಬಹುದು.

Hero Splendor Bike Convert As A ATM Machine Details

ಹೊಸ ಹೀರೋ ಸ್ಪ್ಲೆಂಡರ್ ವಿಶೇಷತೆಗಳೇನು: ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ಈ ನೂತನ ಬೈಕ್ ವಿವಿಧ ರೂಪದಲ್ಲಿ ಗ್ರಾಹಕರಿಗೆ ಸಿಗುತ್ತದೆ. ಇದರ ಸ್ಪ್ಲೆಂಡರ್ ಪ್ಲಸ್ (Splendor Plus) ಮಾಡೆಲ್, ರೂ.77,000 ರಿಂದ 79,000 ವರೆಗೆ ಎಕ್ಸ್ ಶೋರೂಂ ಬೆಲೆಯನ್ನು ಒಳಗೊಂಡಿದೆ. 97.2 ಸಿಸಿ ಸಿಂಗಲ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಪಡೆದಿದ್ದು, 70 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.

ಹೀರೋ ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್ (Hero Splendor Plus Xtec) ಮಾಡೆಲ್, ರೂ.81,000 ರಿಂದ 84,000 ವರೆಗೆ (ಎಕ್ಸ್ ಶೋರೂಂ) ದರವನ್ನು ಹೊಂದಿದೆ. 97.2 ಸಿಸಿ ಪೆಟ್ರೋಲ್ ಎಂಜಿನ್ ಮತ್ತು 4-ಸ್ಪೀಡ್ ಗೇರ್‌ಬಾಕ್ಸ್‌ನ್ನು ಪಡೆದಿದೆ. ಇದು ಸಹ 70 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಜೊತೆಗೆ ಮುಂಭಾಗ (ಫ್ರಂಟ್) & ಹಿಂಭಾಗ (ರೇರ್) ಡ್ರಮ್ ಬ್ರೇಕ್‌ಗಳನ್ನು ಒಳಗೊಂಡಿದೆ.

ನೂತನ ಹೀರೋ ಸೂಪರ್ ಸ್ಪ್ಲೆಂಡರ್ (Hero Super Splendor) ಮಾಡೆಲ್ ಕೂಡ ಖರೀದಿಗೆ ಲಭ್ಯವಿದೆ. ಈ ಬೈಕ್ ರೂ.82,000 ರಿಂದ 86,000 ವರೆಗೆ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ. 124.7 ಸಿಸಿ ಪೆಟ್ರೋಲ್ ಎಂಜಿನ್ ಹಾಗೂ 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 60 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಸವಾರರ ರಕ್ಷಣೆಗಾಗಿ ಡ್ರಮ್ ಬ್ರೇಕ್‌ಗಳನ್ನು ತನ್ನದಾಗಿಸಿಕೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, January 9, 2025, 13:05 [IST]
English summary
Hero splendor bike convert as a atm machine details
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+