ಒಂದೇ ವಾಹನ ಸ್ಕೂಟರ್ & ರಿಕ್ಷಾ ಮಾಡಬಹುದು: ಹೀರೋ 2 In 1 ಟೆಕ್ನಾಲಜಿಗೆ ಬೆಚ್ಚಿಬಿದ್ದ ವಿದೇಶಿಗರು
ಭಾರತದಲ್ಲಿ ಎಲೆಕ್ಟ್ರಿಕ್ ಕಂಪನಿಗಳು ದಿನಕ್ಕೆ ಒಂದರಂತೆ ಹೊರ ಬರುತ್ತಿದೆ. ಬೆಳೆಯುತ್ತಿರುವ ಇವಿ ಉದ್ಯಮದಲ್ಲಿ ತಮ್ಮ ಛಾಪನ್ನು ಮೂಡಿಸಲು ಹಲವು ಕಂಪನಿಗಳು ಹಲವಾರು ರೀತಿಯ ಕಸರತ್ತುಗಳನ್ನು ಮಡುತ್ತಿದೆ. ಅದರಲ್ಲಿ ಹಲವು ಕಂಪನಿಗಳು ಮುನ್ನೆಲೆಗೆ ಬಂದರೆ ಇನ್ನು ಹಲವು ಕಂಪನಿಗಳು ತೆರೆ ಮರೆಗೆ ಸರಿಯುತ್ತಿದೆ.
ಇದೀಗ ಹೊಸ ಸ್ಟಾರ್ಟ್‌ಅಪ್ ಒಂದು ತಮ್ಮ ಹೊಸ ವಾಹನದ ಕುರಿತಾಗಿ ಸುಳಿವೊಂದನ್ನಿ ನೀಡಿದೆ. ಇದನ್ನು ನೋಡಿ ಈಗಾಗಲೇ ಬೆರಗಾಗಿರುವ ಇವಿ ಲೋಕದ ಇತರ ಕಂಪನಿಗಳು ಈ ವಾಹನದ ಕುರಿತಾಗಿಯೇ ಚರ್ಚೆ ಮಾಡುತ್ತಿದೆ. ಹೌದು, ಹೀರೋ ಮೋಟೋಕಾರ್ಪ್ ಆಧೀನದಲ್ಲಿರುವ ಸರ್ಜ್ (Hero Surge) ಎನ್ನುವ ಸ್ಟಾರ್ಟ್‌ಅಪ್ ಹೊಸ ವಾಹನವೊಂದನ್ನು ರಿವೀಲ್ ಮಾಡಿದ್ದು ಇದನ್ನು ಎಸ್32 ಎಂದು ಹೆಸರಿಸಲಾಗಿದೆ.

ಈ ವಾಹನದ ವಿಶೇಷತೆ ಏನೆಂದರೆ ಇದು 2 ಇನ್ 1 ರಿಕ್ಷಾ ಕಮ್ ಎಲೆಕ್ಟ್ರಿಕ್ ಸ್ಕೂಟರ್ ಹೌದು. ಈ ವಾಹನವನ್ನು ನೀವು ಎಲೆಕ್ಟ್ರಿಕ್ ರಿಕ್ಷಾ ರೀತಿಯಲ್ಲಿಯೂ ಬಳಸಬಹುದು, ಇಲ್ಲವೇ ನಿಮಗೆ ಬೇಕಾದಾಗ ಇದನ್ನು ಎಲೆಕ್ಟ್ರಿಕ್ ಸ್ಕೂಟರ್ ಆಗಿಯೂ ಬಳಸಬಹುದು ಎಂದು ಕಂಪನಿ ತಿಳಿಸಿದ್ದು, ಇದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಇದರಲ್ಲಿ 3W ಎಲೆಕ್ಟ್ರಿಕ್ ಸ್ಕೂಟರ್ ಮತ್ತು 3W ಬ್ಯಾಟರಿ ಪವರ್ ಉಳ್ಳ ಗೂಡ್ಸ್ ವಾಹನ ಲಭ್ಯವಾಗಲಿದೆ.
ನೀವು ಎಂದಾದರೂ ಕ್ರಿಸ್ಟೋಫರ್ ನೋಲಾನ್‌ನ ಡಾರ್ಕ್ ನೈಟ್ ಎನ್ನುವ ಚಿತ್ರದಲ್ಲಿ ಈ ರೀತಿಯ ವಾಹನವೊಂದನ್ನು ಗಮನಿಸಿರುತ್ತೀರಿ. ಇದೀಗ ಆ ಕಾನ್ಸೆಪ್ಟ್ ನಿಜವಾಗಲಿದ್ದು, ಹೀರೋ ಮೋಟೋ ಕಾರ್ಪ್ ಇದಕ್ಕೆ ಮುಂದಾಳತ್ವವನ್ನು ನೀಡುತ್ತಿದೆ. ಇದು ಸೆಲ್ಫ್ ಎಂಪ್ಲಾಯ್‌ಮೆಂಟ್‌ಗಳಿಗೆ ಈ ವಾಹನ ಒಂದು ಹೆಚ್ಚಿನ ಸಪೋರ್ಟ್ ನಿಡಲಿದೆ ಎಂಬುದು ಎಲ್ಲರ ಅಭಿಪ್ರಾಯ.

ಸರ್ಜ್ ಈಗಾಗಗಲೇ ಈ ವಾಹನವನ್ನು ಅನಾವರಣಗೊಳಿಸಿದ್ದು, ಕ್ಲಾಸ್ ಶಿಫ್ಟಿಂಗ್ ವೆಹಿಕಲ್ ಎಂಬ ಕ್ಯಾಟಗರಿಗೆ ಇದನ್ನು ಸೇರಿಸಿದೆ. ಈ ವಾಹನವನ್ನು ಬಳಸಿಕೊಂಡು ಗೂಡ್ಸ್‌ಗಳನ್ನು ಸರಬರಾಜು ಮಾಡುವುದು ಮಾತ್ರವಲ್ಲದೇ ಇಷ್ಟ ಬಂದಾಗ ಇದರಲ್ಲಿನ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಹೊರ ತೆಗೆದು ನಮ್ಮ ಇಷ್ಟಕ್ಕೆ ಬಳಸಬಹುದಾಗಿದೆ.
ಈ ವಾಹನವನ್ನು ಖರೀದಿಸುವುದರಿಂದ ಎರಡು ಮಾದರಿಯ ವಾಹನವನ್ನು ಒಂದೇ ಪ್ಯಾಕೇಜ್‌ನಲ್ಲಿ ಪಡೆಯಬಹುದು. ಸರ್ಜ್ ಕಂಪನಿ ಕೊಟ್ಟಿರುವ ಮಾಹಿತಿಯ ಪ್ರಕಾರ ಈ ಎಲೆಕ್ಟ್ರಿಕ್ ಗೂಡ್ಸ್ ಸೆಟ್‌ಅಪ್‌ನಿಂದ ಸ್ಕೂಟರ್ ಅನ್ನು ಬೇರ್ಪಡಿಸಲು ಕೇವಲ ಮೂರು ನಿಮಿಷಗಳು ಸಾಕು ಎಂದು ತಿಳಿದು ಬಂದಿದೆ. ಇದರಿಂದ ಕಡಿಮೆ ಸಮಯದಲ್ಲಿ ಹೆಚ್ಚಿನ ಸಹಾಯವಿಲ್ಲದೇ ಸ್ಕೂಟರ್ ಮತ್ತು ರಿಕ್ಷಾವನ್ನು ಬೇರೆ ಬೇರೆ ಮಾಡಬಹುದು ಎಂದು ತಿಳಿದು ಬಂದಿದೆ.

ಇನ್ನು ಈ ವಾಹನದ ಇತರ ಫೀಚರ್‌ಗಳನ್ನು ನೋಡುವುದಾದರೆ ರಿಕ್ಷಾ 3W ಬ್ಯಾಟರಿಂದ ಚಾಲಿತವಾಗಿದ್ದು ಮುಂದೆ ಕೂರಲು ವಿಶಾಲವಾದ ವಿಂಡ್ ಸ್ಕ್ರೀನ್ ಅನ್ನು ನೀಡಿದೆ. ಇದರ ಜೊತೆಗೆ ಉತ್ತಮ ಪ್ರಕಾಶವುಳ್ಳ ಹೆಡ್‌ಲೈಟ್ ಮತ್ತು ಇಂಡಿಕೇಟರ್‌ಗಳನ್ನು ನೀಡಲಾಗಿದೆ ಎಂದು ಕಂಪನಿ ತಿಳಿಸಿದ್ದು, ಎಲ್ಲರ ಗಮನ ಇದರತ್ತ ಸೆಳೆದಿದೆ. ಈ ವಾಹನದ ಹೆಚ್ಚಿನ ವಿವರಗಳು ಕೆಲವೇ ದಿಗಳಲ್ಲಿ ಹೊರಬರಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications