ಹೀರೋ ಕಂಪನಿಯಿಂದ ಮತ್ತೊಂದು ಬ್ರಹ್ಮಾಸ್ತ್ರ: ಸ್ಪೋರ್ಟಿ ಲುಕ್ ಜೊತೆ ಮೈಲೇಜ್ ಕಾ ಬಾಪ್
ಭಾರತದಲ್ಲಿ ಮೋಟಾರ್‌ಸೈಕಲ್ ಕ್ಷೇತ್ರ ದಿನದಿಂದ ದಿನಕ್ಕೆ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿದೆ. ಇದಕ್ಕೆ ಪ್ರಮುಖ ಸಾಕ್ಷಿಗಳೆಂಬಂತೆ ಹಲವು ಪ್ರೀಮಿಯಂ ಮೋಟಾರ್ ಸೈಕಲ್ ಕಂಪನಿಗಳು ಭಾರತೀಯ ಮಿಡ್ ಸೆಗ್ಮೆಂಟ್‌ನಲ್ಲಿ ತನ್ನ ಬೈಕ್‌ಗಳನ್ನು ಲಾಂಚ್ ಮಾಡಿ ಮಧ್ಯಮ ವರ್ಗದವರ ಗಮನವನ್ನೂ ತನ್ನತ್ತ ಸೆಳೆದಿದೆ. ಇದಕ್ಕೆ ಟ್ರಯಂಫ್ ಮತ್ತು ಹಾರ್ಲೆ ಡೇವಿಡ್‌ಸನ್ ಬೈಕ್ ಕಂಪನಿಗಳೇ ಸಾಕ್ಷಿ.
ಹೀರೋ ಕಂಪನಿ ಜನವರಿ ೨೩ ರಂದು ಮಾರ್ವಿಕ್ ೪೪೦ ಎಂಬ ಬೈಕ್ ಒಂದನ್ನು ಲಾಂಚ್ ಮಾಡುವ ಮೂಲಕ ಈ ಹೊಸ ವರ್ಷವನ್ನು ಆರಂಭಿಸಲಿದೆ. ಇದರೊಂದಿಗೆ ಇತ್ತೀಚೆಗೆ ಬಂದಿರುವ ಹೊಸ ಮಾಹಿತಿಯ ಪ್ರಕಾರ ಮತ್ತೊಂದು ಹೊಸ ಬೈಕ್ ಅನ್ನು ಭಾರತೀಯ ಮಾರುಕಟ್ಟೆಗೆ ಇದೇ ವರ್ಷ ಲಾಂಚ್ ಮಾಡಲಿದ್ದು, ಇದು ಪಲ್ಸರ್ 125 ಮತ್ತು ಟಿವಿಎಸ್ ರೇಡಾನ್ ಬೈಕ್‌ಗಳಿಗೆ ಸ್ಪರ್ಧೆ ನೀಡಲಿದೆ ಎಂದು ತಿಳಿದು ಬಂದಿದೆ.

ಹೌದು, ದೊರೆತಿರುವ ಮಾಹಿತಿಗಳ ಪ್ರಕಾರ ಹೀರೋ ಕಂಪನಿಯು ಭಾರತೀಯ ಮಾರುಕಟ್ಟೆಗೆ ಹೀರೋ Xtreme 125R ಎಂಬ ಬೈಕ್ ಅನ್ನು ಲಾಂಚ್ ಮಾಡಲಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಎಕ್ಸ್‌ಟ್ರೀಂ 160R ಮಾರುಕಟ್ಟೆಯಲ್ಲಿದ್ದು, ಇದರ ಸಣ್ಣ ವೇರಿಯಂಟ್ ಇದಾಗಿರಲಿದೆ. ಈ ಮೂಲಕ 125 ಸಿಸಿ ಸಗ್ಮೆಂಟ್‌ನಲ್ಲಿ ಮಾರುಕಟ್ಟೆಯಲ್ಲಿರುವ ಹಲವು ಬೈಕ್‌ಗಳಿಗೆ ಪೈಪೋಟಿ ನೀಡುವುದು ಮಾತ್ರವಲ್ಲದೇ ಬಳಕೆದಾರರಿಗೆ ಹಲವು ಆಯ್ಕೆಗಳನ್ನು ನೀಡಲಿದೆ.
ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಈ ಬೈಕ್‌ನ ಚಿತ್ರಗಳು ಲೀಕ್ ಆಗಿದ್ದು ಬಹಳಷ್ಟು ಸ್ಪೋರ್ಟಿ ಲುಕ್‌ನಿಂದ ಕೂಡಿದೆ. ಬೈಕ್‌ನ ಆರಂಭದಿಂದ ಕೊನೆಯವರೆಗೂ ಶಾರ್ಪ್ ಎಡ್ಜಸ್‌ಗಳನ್ನು ಈ ಬೈಕ್ ಹೊಂದಿದ್ದು, ಚಿತ್ರಗಳು ಆಟೋಮೊಬೈಲ್ ತಮಿಳನ್ ಎಂಬ ವೆಬ್‌ಸೈಟ್‌ನಲ್ಲಿ ಹೊರ ಬಂದಿದೆ. ಈ ಬೈಕ್‌ನ ಹೊರಬಿದ್ದಿರುವ ಚಿತ್ರಗಳ ಪ್ರಕಾರ ಸಂಪೂರ್ಣ ಎಲ್‌ಇಡಿ ಲೈಟ್ ಸೆಟ್‌ಅಪ್ ಅನ್ನು ಹೊಂದಿರುವುದು ಕಂಡು ಬರುತ್ತದೆ.

ಇನ್ನು ಈಗಿರುವ ಹೀರೋ Xtreme 160R ವೇರಿಯೆಂಟ್ ಗೆ ತಕ್ಕಂತೆ ಸದ್ಯ, ರೂ.1,17,786 ದಿಂದ ರೂ.1,28,608 ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದರಲ್ಲಿ 163 ಸಿಸಿ ಎಂಜಿನ್ ಬಳಕೆ ಮಾಡಲಾಗಿದ್ದು, 15.2 PS ಗರಿಷ್ಠ ಪವರ್ ಹಾಗೂ 14 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 55.47 kmpl ಮೈಲೇಜ್ ನೀಡಲಿದ್ದು, ಡಿಸ್ಕ್ ಬ್ರೇಕ್ ಆಯ್ಕೆಯನ್ನು ಹೊಂದಿದೆ.
ಹೀರೋ Xtreme 160R 4V ಬೈಕ್ ಸಸ್ಪೆನ್ಷನ್ ಸೆಟಪ್ ಬಗ್ಗೆ ಮಾತನಾಡುವುದಾದರೆ, ಫ್ರಂಟ್ 37 ಎಂಎಂ ಅಪ್-ಸೈಡ್ ಡೌನ್ ಫೋರ್ಕ್, ರೇರ್ 7-ಸ್ಟೇಜ್ ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಬ್ರೇಕಿಂಗ್ ವಿಚಾರಕ್ಕೆ ಬರುವುದಾದರೆ, ಈ ಬೈಕ್, ಫ್ರಂಟ್ 276 ಎಂಎಂ, ರೇರ್ 220 ಎಂಎಂ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಪಡೆದಿದೆ.
ಹೊಸ ಹೀರೋ Xtreme 160R 4V ಬೈಕ್ ಗೆ ಟಿವಿಎಸ್ ಅಪಾಚೆ RTR 160 4V, ಬಜಾಜ್ ಪಲ್ಸರ್ ಎನ್160 ಮತ್ತು ಬಜಾಜ್ ಪಲ್ಸರ್ NS160 ಪ್ರತಿಸ್ಪರ್ಧಿಯಾಗಿವೆ. ಇನ್ನು, ಈ ಬೈಕ್‌ಗೆ ಇಎಂಐ ಆಯ್ಕೆ ತುಂಬಾ ಕಡಿಮೆ ಇರುವುದರಿಂದ ಆಸಕ್ತ ಗ್ರಾಹಕರು ಖರೀದಿಸಬಹುದಾಗಿದೆ. ಮುಂಬರುವ ದಿನಗಳಲ್ಲಿ 'Xtreme' ಬೈಕ್ ಭಾರತದ ಮಾರುಕಟ್ಟೆಯಲ್ಲಿ ಹೇಗೆ ಕಮಲ್ ಮಾಡಲಿದೆ ಎಂಬುದನ್ನು ಕಾದುನೋಡಬೇಕಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications