ಐಷಾರಾಮಿ ಕಾರಿಗೆ ತೆರಿಗೆ ವಿನಾಯಿತಿ ಕೋರಿದ ಮತ್ತೊಬ್ಬ ತಮಿಳು ನಟನಿಗೆ ಛೀಮಾರಿ ಹಾಕಿದ ಹೈಕೋರ್ಟ್‌

ಕೆಲವು ದಿನಗಳ ಹಿಂದೆ ತಮಿಳು ನಟ ದಳಪತಿ ವಿಜಯ್ ಅವರ ಐಷಾರಾಮಿ ರೋಲ್ಸ್ ರಾಯ್ಸ್ ಘೋಸ್ಟ್ ತೆರಿಗೆ ವಿಚಾರಕ್ಕೆ ಸಂಬಂಧಪಟ್ಟಂತೆ ಮದ್ರಾಸ್ ಹೈ ಕೋರ್ಟ್ ದಂಡ ವಿಧಿಸಿತ್ತು. ಇದೀಗ ತಮಿಳಿನ ಮತ್ತೊಮ್ಮ ಖ್ಯಾತ ನಟ ಧನುಷ್ ಅವರಗೂ ತೆರಿಗೆ ವಿಚಾರಕ್ಕೆ ಛೀಮಾರಿ ಹಾಕಿದ್ದಾರೆ.

ಐಷಾರಾಮಿ ಕಾರಿಗೆ ತೆರಿಗೆ ವಿನಾಯಿತಿ ಕೋರಿದ ಮತ್ತೊಬ್ಬ ತಮಿಳು ನಟನಿಗೆ ಛೀಮಾರಿ ಹಾಕಿದ ಹೈಕೋರ್ಟ್‌

2015ರಲ್ಲಿ ಖ್ಯಾತ ತಮಿಳು ನಟ ಧನುಷ್ ಇಂಗ್ಲೆಂಡಿನಿಂದ ರೂ.2.15 ಕೋಟಿ ಮೌಲ್ಯದ ರೋಲ್ಸ್ ರಾಯ್ಸ್ ಘೋಸ್ಟ್ ಕಾರನ್ನು ವಿದೇಶದಿಂದ ಆಮದು ಮಾಡಿಕೊಂಡಿದ್ದರು. ಈ ಪ್ರಾದೇಶಿಕ ಸಾರಿಗೆ ಅಧಿಕಾರಿಯು ಈ ಕಾರನ್ನು ನೋಂದಾಯಿಸುವ ಮೊದಲು ತೆರಿಗೆ ಇಲಾಖೆಯಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಪಡೆಯುವಂತೆ ಸೂಚಿಸಿದರು. ಎನ್ಒಸಿಗಾಗಿ ಧನುಷ್ ತೆರಿಗೆ ಇಲಾಖೆಯ ಮೊರೆ ಹೋದ ಬಳಿಕ ಇಲಾಖೆಯು ರೂ.60 ಲಕ್ಷ ರೂಪಾಯಿ ಎಂಟ್ರಿ ತೆರಿಗೆ ಪಾವತಿಸುವಂತೆ ಹೇಳಿತ್ತು.

ಐಷಾರಾಮಿ ಕಾರಿಗೆ ತೆರಿಗೆ ವಿನಾಯಿತಿ ಕೋರಿದ ಮತ್ತೊಬ್ಬ ತಮಿಳು ನಟನಿಗೆ ಛೀಮಾರಿ ಹಾಕಿದ ಹೈಕೋರ್ಟ್‌

ಧನುಷ್ ಅರ್ಧದಷ್ಟು ತೆರಿಗೆ ಪಾವತಿಸಿ ಉಳಿದಿದ್ದಕ್ಕೆ ವಿನಾಯಿತಿ ನೀಡುವಂತೆ ಕೋರಿದ್ದರು. ಈ ಅರ್ಜಿಯನ್ನು ಮದ್ರಾಸ್​ ಹೈಕೋರ್ಟ್​ನ ನ್ಯಾಯಮೂರ್ತಿ ಎಸ್​.ಎಂ. ಸುಬ್ರಮಣಿಯಮ್​ ಅವರು ವಿಚಾರಣೆ ನಡೆಸಿದ್ದಾರೆ. ಅಲ್ಲದೆ ತೆರಿಗೆ ವಿನಾಯಿತಿ ನೀಡೋಕೆ ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.

ಐಷಾರಾಮಿ ಕಾರಿಗೆ ತೆರಿಗೆ ವಿನಾಯಿತಿ ಕೋರಿದ ಮತ್ತೊಬ್ಬ ತಮಿಳು ನಟನಿಗೆ ಛೀಮಾರಿ ಹಾಕಿದ ಹೈಕೋರ್ಟ್‌

ನಟ ಧನುಷ್ ಸಲ್ಲಿಸಿದ ಅರ್ಜಿ ವಿಚಾರಣೆಗೆ ಬಂದಿದೆ. ಈ ವೇಳೆ ಮದ್ರಾಸ್ ಹೈಕೋರ್ಟ್​ಗೆ ಧನುಷ್ ಪರ ವಕೀಲರು ಶೇ.50 ತೆರಿಗೆಯನ್ನು ಕಟ್ಟಿದ್ದಾರೆ ಉಳಿದ ತೆರಿಗೆಯನ್ನು ಪಾವತಿಸೋಕೆ ಅವರು ಇಚ್ಛಿಸಿದ್ದಾರೆ. ಹೀಗಾಗಿ ಅರ್ಜಿ ಹಿಂಪದೆಯೋಕೆ ಅವಕಾಶ ನೀಡಬೇಕು ಎಂದು ವಕೀಲರು ಮನವಿ ಮಾಡಿದ್ದಾರೆ.

ಐಷಾರಾಮಿ ಕಾರಿಗೆ ತೆರಿಗೆ ವಿನಾಯಿತಿ ಕೋರಿದ ಮತ್ತೊಬ್ಬ ತಮಿಳು ನಟನಿಗೆ ಛೀಮಾರಿ ಹಾಕಿದ ಹೈಕೋರ್ಟ್‌

ಆದರೆ ನ್ಯಾಯಲಯ ಇದನ್ನು ನಿರಾಕರಿಸಿದೆ. ಅಲ್ಲದೇ ಈ ಅರ್ಜಿ ವಿಚಾರಣೆ ನಡೆಸಿ ತೀರ್ಪನ್ನು ಕೂಡ ನೀಡಿದೆ. ನಟ ಧನಷ್ ಅವರಿಗೆ ನಿಜವಾದ ಕಾಳಜಿ ಇದ್ದಿದ್ದರೆ ಈ ಹಿಂದೆ ತೆರಿಗೆಯನ್ನು ಕಟ್ಟಬಹುದಿತ್ತು. ನ್ಯಾಯಾಲಯದ ಮುಂದ್ ಅರ್ಜಿ ವಿಚಾರಣೆಗೆ ಬಂದ ಮೇಲೆ ಏಕೆ ವಾಪಸ್ ಪಡೆಯುವುದಕ್ಕೆ ತೀರ್ಮಾನಿದಿದ್ದೇರಿ ಎಂದು ಬ್ಯಾಯನೂರ್ತಿ ಎಸ್.ಎಂ ಸುಬ್ರಮಣಿಯಂ ಪ್ರಶ್ನಿಸಿದ್ದಾರೆ.

ಐಷಾರಾಮಿ ಕಾರಿಗೆ ತೆರಿಗೆ ವಿನಾಯಿತಿ ಕೋರಿದ ಮತ್ತೊಬ್ಬ ತಮಿಳು ನಟನಿಗೆ ಛೀಮಾರಿ ಹಾಕಿದ ಹೈಕೋರ್ಟ್‌

ಹಾಲು ಮಾರುವವರು, ದಿನಗೂಲಿ ಕಾರ್ಮಿಕರು ಕೂಡ ತೆರಿಗೆ ಪಾವತಿಸುತ್ತಾರೆ. ಈ ದೇಶದ ನಾಗರೀಕರು ತಾನು ಖರೀದಿಸುವ ಪ್ರತಿ ಲೀಟರ್ ಪೆಟ್ರೋಲ್'ಗೆ ತೆರಿಗೆ ಪಾವತಿಸುತ್ತಿದ್ದಾರೆ. ಆದರೆ ಅವರು ಯಾರು ಕೂಡ ತೆರಿಗೆ ವಿನ್ಯಾಯಿತಿ ಕೇಳಿಲ್ಲ.

ಐಷಾರಾಮಿ ಕಾರಿಗೆ ತೆರಿಗೆ ವಿನಾಯಿತಿ ಕೋರಿದ ಮತ್ತೊಬ್ಬ ತಮಿಳು ನಟನಿಗೆ ಛೀಮಾರಿ ಹಾಕಿದ ಹೈಕೋರ್ಟ್‌

ಆದರೆ ತೆರಿಗೆದಾರರ ಹಣದಲ್ಲಿ ನಿರ್ಮಿಸಲಾದ ರಸ್ತೆಗಳಲ್ಲಿ ನೀವು ಐಷಾರಾಮಿ ಕಾರುಗಳಲ್ಲಿ ಓಡಾಡುತಿದ್ದೀರಿ ಎಂದು ಛೀಮಾರಿ ಹಾಕಿದ್ದಾರೆ. ಶೀಘ್ರದಲ್ಲೇ ಉಳಿದ ತೆರಿಗೆ ಪಾವತಿಸುವಂತೆ ಸೂಚನೆ ನೀಡಿದೆ, ನಟ ಧನುಷ್ ಪರ ವಕೀಲರು ಆಗಸ್ಟ್ 9ರ ಒಳಗೆ ಬಾಕಿ ಇರುವ ತೆರಿಗೆ ಪಾವತಿಸುಸುತ್ತೇವೆ ಎಂದು ಕೋರ್ಟ್​​ಗೆ ಭರವಸೆ ನೀಡಿದ್ದಾರೆ.

ಐಷಾರಾಮಿ ಕಾರಿಗೆ ತೆರಿಗೆ ವಿನಾಯಿತಿ ಕೋರಿದ ಮತ್ತೊಬ್ಬ ತಮಿಳು ನಟನಿಗೆ ಛೀಮಾರಿ ಹಾಕಿದ ಹೈಕೋರ್ಟ್‌

ಈ ಹಿಂದೆಯೂ ತಮಿಳು ನಟ ದಳಪತಿ ವಿಜಯ್ ಆಮದು ಮಾಡಿದ ರೋಲ್ಸ್ ರಾಯ್ಸ್ ಘೋಸ್ಟ್ ಕಾರಿಗೆ ಎಂಟ್ರಿ ತೆರಿಗೆ ವಿನಾಯಿತಿ ಕೇಳಿ ಕೋರ್ಟ್ ಮೋರೆ ಹೋಗಿದ್ದರು. ಆಗ ಇದೇ ನ್ಯಾಯಮೂರ್ತಿಗಳು ನಟ ವಿಜಯ್‌ರನ್ನು ತರಾಟೆಗೆ ತೆಗೆದುಕೊಂಡಿದ್ದರು.

ಐಷಾರಾಮಿ ಕಾರಿಗೆ ತೆರಿಗೆ ವಿನಾಯಿತಿ ಕೋರಿದ ಮತ್ತೊಬ್ಬ ತಮಿಳು ನಟನಿಗೆ ಛೀಮಾರಿ ಹಾಕಿದ ಹೈಕೋರ್ಟ್‌

ಇನ್ನು ಈ ನಟರು ಖರಿದಿಸುವ ರೋಲ್ಸ್ ರಾಯ್ಸ್ ಘೋಸ್ಟ್ ಕಾರು ವಿಶ್ವದಲೇ ದುಬಾರಿ ಮತ್ತು ಐಷಾರಾಮಿ ಕಾರುಗಳಲ್ಲಿ ಒಂದಾಗಿದೆ. ಈ ಕಾರನ್ನು ಕಂಪನಿಯ ಅಲ್ಯೂಮಿನಿಯಂ ಸ್ಪೇಸ್‌ಫ್ರೇಮ್ ಆರ್ಕಿಟೆಕ್ಚರ್ ನಿಂದ ವಿನ್ಯಾಸಗೊಳಿಸಲಾಗಿದೆ. ಕಲಿನನ್ ಹಾಗೂ ಫ್ಯಾಂಟಮ್ ಕಾರುಗಳನ್ನು ಸಹ ಈ ಆರ್ಕಿಟೆಕ್ಚರ್ ಮೇಲೆ ನಿರ್ಮಿಸಲಾಗಿದೆ.

ಐಷಾರಾಮಿ ಕಾರಿಗೆ ತೆರಿಗೆ ವಿನಾಯಿತಿ ಕೋರಿದ ಮತ್ತೊಬ್ಬ ತಮಿಳು ನಟನಿಗೆ ಛೀಮಾರಿ ಹಾಕಿದ ಹೈಕೋರ್ಟ್‌

ರೋಲ್ಸ್ ರಾಯ್ಸ್ ಘೋಸ್ಟ್ ಕಾರು ವಿಷನ್ ಅಸಿಸ್ಟ್, ಡೇ-ನೈಟ್ ವಾರ್ನಿಂಗ್, ಪೆಡೆಸ್ಟ್ರಿಯನ್ ವಾರ್ನಿಂಗ್, ನಾಲ್ಕು ಕ್ಯಾಮೆರಾ, ವೈ-ಫೈ ಹಾಟ್ ಸ್ಪಾಟ್, ಸೆಲ್ಫ್ ಪಾರ್ಕ್ ಸೇರಿದಂತೆ ಹಲವು ಪ್ರಮುಖ ಫೀಚರ್ ಗಳನ್ನು ಹೊಂದಿದೆ.

ಐಷಾರಾಮಿ ಕಾರಿಗೆ ತೆರಿಗೆ ವಿನಾಯಿತಿ ಕೋರಿದ ಮತ್ತೊಬ್ಬ ತಮಿಳು ನಟನಿಗೆ ಛೀಮಾರಿ ಹಾಕಿದ ಹೈಕೋರ್ಟ್‌

ಹೊಸ ರೋಲ್ಸ್ ರಾಯ್ಸ್ ಘೋಸ್ಟ್ ಕಾರಿನಲ್ಲಿ 6.75-ಲೀಟರಿನ ಟ್ವಿನ್-ಟರ್ಬೋಚಾರ್ಜ್ಡ್ ವಿ 12 ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 570 ಬಿಹೆಚ್‌ಪಿ ಪವರ್ ಹಾಗೂ 850 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಕಾರು 4 ವ್ಹೀಲ್ ಡ್ರೈವ್ ಹೊಂದಿದ್ದು, ಎಲ್ಲಾ ವ್ಹೀಲ್ ಗಳು ಸ್ಟೀಯರಿಂಗ್ ಅನ್ನು ಹೊಂದಿವೆ. ರೋಲ್ಸ್ ರಾಯ್ಸ್ ಕಂಪನಿಯ 116 ವರ್ಷಗಳ ಇತಿಹಾಸದಲ್ಲಿ ಅತ್ಯಂತ ಯಶಸ್ವಿಯಾದ ಕಾರು ಆಗಿದೆ.

Most Read Articles

Kannada
English summary
High court orderd to actor dhanush to pay tax for imported rolls royce car details
Story first published: Friday, August 6, 2021, 18:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X