3 ತಾಸು ವಿಳಂಬ; ಗುರಿ ಮುಟ್ಟವಲ್ಲಿ ಟಾಲ್ಗೊ ರೈಲು ವಿಫಲ: ಕಾರಣ ಏನು?
ಭಾರತದಲ್ಲಿ ಪರೀಕ್ಷಾರ್ಥ ಸಂಚಾರ ಚಾಲನೆಯನ್ನು ನಡೆಸುತ್ತಿರುವ ಸ್ಪೇನ್‌ನ ಬಹುನಿರೀಕ್ಷಿತ ಟಾಲ್ಗೊ ರೈಲು, ತನ್ನ ಕೊನೆಯ ಹಂತದ ಪರೀಕ್ಷೆಯ ಮೊದಲ ಸುತ್ತಿನ ಪ್ರಯಾಣದಲ್ಲೇ ವೈಫಲ್ಯವನ್ನು ಅನುಭವಿಸಿದೆ.
ದೇಶದ ಎರಡು ಪ್ರಮುಖ ನಗರಗಳಾದ ರಾಷ್ಟ್ರ ರಾಜಧಾನಿ ನವದೆಹಲಿಯಿಂದ ವಾಣಿಜ್ಯ ನಗರಿ ಮುಂಬೈಗೆ ತಲುಪುವಲ್ಲಿ ಟಾಲ್ಗೊ ರೈಲು ಮೂರು ತಾಸುಗಳಷ್ಟು ವಿಳಂಬವಾಗಿದೆ. ಇದು ಪ್ರಾರಂಭದಲ್ಲಿ ಟಾಲ್ಗೊ ರೈಲು ನಿಖರತೆ ಬಗ್ಗೆ ಸಂಶಯ ಮೂಡಿಸಿದರೂ ಬಳಿಕ ಅಧಿಕೃತರು ನೀಡಿರುವ ಸ್ಪಷ್ಟನೆಯ ಬಳಿಕ ಎದ್ದಿರುವ ವಿವಾದಗಳಿಗೆ ತೆರೆ ಎಳೆದಿದ್ದಾರೆ.

ಟಾಲ್ಗೊ ಸೆಮಿ ಹೈ ಸ್ಪೀಡ್ ರೈಲು ದೆಹಲಿಯಿಂದ ಮುಂಬೈ ವರೆಗಿನ 1,384 ಕೀ.ಮೀ. ದೂರವನ್ನು ಕ್ರಮಿಸಬೇಕಾಗಿತ್ತು. ಇದರಂತೆ ರಾತ್ರಿ ಹೊತ್ತು 7.55 ರ ವೇಳೆಗೆ ಪ್ರಯಾಣವನ್ನು ಆರಂಭಿಸಿತ್ತು.

ದೆಹಲಿಯಿಂದ ಮುಂಬೈಗೆ ಹಾದು ಹೋಗುವ ರಾಜಧಾನಿ ಎಕ್ಸೆಪ್ರೆಸ್ (ನಂ. 12952) ಹಾದಿಯನ್ನೇ ಟಾಲ್ಗೊ ರೈಲು ಹಿಂಬಾಲಿಸಿತ್ತು. ಹಾಗೆಯೇ ರಾಜಧಾನಿ ಎಕ್ಸ್ ಪ್ರೆಸ್ ಅನುಸರಿಸುತ್ತಿರುವ ಶಾಶ್ವತ ಹಾಗೂ ತಾತ್ಕಾಲಿಕ ವೇಗ ಮಿತಿ ನಿಯಮಗಳನ್ನು ಪಾಲಿಸುತ್ತಾ ಮುಂದುವರಿದಿತ್ತು.

ಈಗ ಚಾಲ್ತಿಯಲ್ಲಿರುವ ರಾಜಧಾನಿ ಎಕ್ಸ್ ಪ್ರೆಸ್ ನವದೆಹಲಿಯಿಂದ ಮುಂಬೈಗೆ ತಲುಪಲು 15.50 ತಾಸುಗಳಷ್ಟು ಸಮಯ ತಗಲುತ್ತದೆ.

ಮಥುರಾ ಜಂಕ್ಷನ್ ನ್ಲಲಿ ಎದುರಾದ ಭಾರಿ ಮಳೆ ಹಾಗೂ ರೈಲ್ವೆ ಹಳಿ ಪಾಯಿಂಟ್ ವೈಫಲ್ಯದಿಂದಾಗಿ ಟಾಲ್ಗೊ ರೈಲು ಮುಂಬೈ ನಿಲ್ದಾಣವನ್ನು ಬೆಳಗ್ಗೆ 11.36 ಸಮಯಕ್ಕೆ ತಲುಪಿತ್ತು. ತನ್ಮೂಲಕ 15.41 ತಾಸುಗಳ ಪ್ರಯಾಣ ಹಮ್ಮಿಕೊಂಡಿತ್ತು.

ಸೂರತ್ ಆಚೆಗೆ ಉಡ್ವಾಡಾ-ವಾಪಿ-ಬಿಲಾಡ್ ಪ್ರದೇಶಗಳಲ್ಲಿ ಹಳಿಯಲ್ಲಿ ನೀರು ಕಟ್ಟಿ ನಿಂತಿರುವುದರಿಂದ ಸುರಕ್ಷತಾ ದೃಷ್ಟಿಕೋನದಲ್ಲಿ ರೈಲಿನ ವೇಗವನ್ನು ಗಣನೀಯವಾಗಿ ಕಡಿಮೆ ಮಾಡಲಾಗಿತ್ತು.

ಭಾರಿ ಮಳೆಯಿಂದಾಗಿ ಪ್ರತಿಕೂಲ ಪರಿಸ್ಥಿತಿಯಲ್ಲಿ ಕೈಮೀರಿ ಹೋಗಿರುವುದರಿಂದ ಸೂರತ್ ಬಳಿಕ ಟಾಲ್ಗೊ ರೈಲಿಗೆ ಪ್ರಯೋಗ ಪ್ರಯಾಣ ವೇಗಮಿತಿ ಜಾರಿಗೊಳಿಸಲಾಗಿರಲಿಲ್ಲ.

ದೆಹಲಿಯಿಂದ ಸೂರತ್ ವರೆಗಿನ ದೂರವನ್ನು ರಾಜಧಾನಿ ಎಕ್ಸ್ ಪ್ರೆಸ್ ಗೆ ಹೋಲಿಸಿದಾಗ ಟಾಲ್ಗೊ ರೈಲು ಎರಡು ತಾಸುಗಳಷ್ಟು ಕಡಿಮೆ ಅವಧಿಯಲ್ಲಿ ಕ್ರಮಿಸಿತ್ತು.

ಒಟ್ಟಾರೆಯಾಗಿ ಮೂರು ತಾಸುಗಳಷ್ಟು ವಿಳಂಬವಾದರೂ ನವದಹೆಲಿಯಿಂದ ಮುಂಬೈ ವರೆಗಿನ ಯಾತ್ರೆಯು ಸಂಪೂರ್ಣ ಯಶಸ್ವಿಯಾಗಿದೆ ಎಂದು ರೈಲ್ವೆ ಅಧಿಕೃತರು ತಿಳಿಸಿದ್ದಾರೆ.

ಟಾಲ್ಗೊ ರೈಲು ನಿಗದಿತ ಸಮಯಕ್ಕಿಂತಲೂ ಮೂರು ತಾಸು ವಿಳಂಬವಾದರೂ ರಾಜಧಾನಿ ರೈಲಿಗಿಂತಲೂ ಮುಂಚಿತವಾಗಿ ಗಮ್ಯಸ್ಥಾನ ತಲುಪುವಲ್ಲಿ ಯಶ ಕಂಡಿದೆ. ಹಾಗೊಂದು ವೇಳೆ ಹವಾಮಾನ ವೈಪರೀತ್ಯದ ತೊಂದರೆ ಇಲ್ಲವಾದ್ದಲ್ಲಿ 12 ತಾಸು 47 ನಿಮಿಷಗಳಲ್ಲಿ ಗುರಿ ಮುಟ್ಟುತ್ತಿತ್ತು.

ನವದೆಹಲಿಯಿಂದ ಸೂರತ್ ವರೆಗೆ ರಾಜಧಾನಿ ಎಕ್ಸ್ ಪ್ರೆಸ್ ಪ್ರತಿ ಗಂಟೆಗೆ ಸರಾಸರಿ 89.76 ಕೀ.ಮೀ. ವೇಗವನ್ನು ಕಾಪಾಡಿಕೊಂಡಿದ್ದರೆ ಟಾಲ್ಗೊ ರೈಲು ಪ್ರತಿ ಗಂಟೆಗೆ 106.52 ಕೀ.ಮೀ. ವೇಗದಲ್ಲಿ ಸಂಚರಿಸಿತ್ತು.


Click it and Unblock the Notifications








