ನಮ್ಮ ತಾಯಿ ಪ್ರೀತಿಯಿಂದ ಲೂನಾ ಕೊಡಿಸಿದ್ದರು... ಅದೇ ನನ್ನ ಮೊದಲ ವಾಹನ: ಸಚಿವ ನಿತಿನ್ ಗಡ್ಕರಿ

"ಹೈವೇ ಮ್ಯಾನ್ ಆಫ್ ಇಂಡಿಯಾ" ಎಂದು ಜನಪ್ರಿಯತೆ ಪಡೆದಿರುವ ಭಾರತದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ತಮ್ಮ ಮೊದಲ ವಾಹನವನ್ನು ಬಹಿರಂಗಪಡಿಸಿದರು. ಹೊಸ ಎಲೆಕ್ಟ್ರಿಕ್ ಮೊಪೆಡ್ ಕೈನೆಟಿಕ್ ಇ-ಲೂನಾ ಬಿಡುಗಡೆ ಸಮಾರಂಭದಲ್ಲಿ, ತಮ್ಮ ಮೊದಲ ವಾಹನ ಲೂನಾ ಎಂದು ಹೇಳಿದರು.

ತಮ್ಮ ಮೊದಲ ವಾಹನವನ್ನು ನೆನಪಿಸಿಕೊಂಡ ಗಡ್ಕರಿ, ನನ್ನ ತಾಯಿಯಿಂದ ನನಗೆ ಅಚ್ಚುಮೆಚ್ಚಿನ ಉಡುಗೊರೆಯಾಗಿ ಲೂನಾ ಸಿಕ್ಕಿತು, ನನ್ನ ಮೊದಲ ವಾಹನವಾಗಿ ನನ್ನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಪಡೆದಿದೆ. ಇಂದಿಗೂ, ನಾನು ಹಲವಾರು ಇತರ ವಾಹನಗಳನ್ನು ಹೊಂದಿದ್ದೇನೆ, ಆದರೂ ನನ್ನ ತಾಯಿ ಪ್ರಸ್ತುತಪಡಿಸಿದ ಲೂನಾಗೆ ಸಂಬಂಧಿಸಿದ ನೆನಪುಗಳು ನನ್ನ ಹೃದಯದಲ್ಲಿ ಹಾಗೇ ಇವೆ.

highway-man-of-india-nitin-gadkari-reveals-his-first-vehicle

ಕೈನೆಟಿಕ್ ಲೂನಾವನ್ನು ಮೊದಲ ಬಾರಿಗೆ 1972 ರಲ್ಲಿ ಕೈನೆಟಿಕ್ ಇಂಜಿನಿಯರಿಂಗ್ 50cc ಮೊಪೆಡ್ ಆಗಿ ಬಿಡುಗಡೆ ಮಾಡಿತು, ಇದು 90 ರ ದಶಕದ ಅಂತ್ಯದಲ್ಲಿ ಅಗಾಧವಾಗಿ ಜನಪ್ರಿಯವಾಯಿತು. 2024 ರಲ್ಲಿ ಎಲೆಕ್ಟ್ರಿಕ್ ವಾಹನ ಕ್ರಾಂತಿಯು ಪೂರ್ಣ ಸ್ವಿಂಗ್‌ನಲ್ಲಿದ್ದು, ದ್ವಿಚಕ್ರ ವಾಹನ ವಿಭಾಗದಲ್ಲಿ ಈಗ ಕೈನೆಟಿಕ್ ಗ್ರೀನ್ ಹೊಸ ಇ-ಲೂನಾವನ್ನು ಬಿಡುಗಡೆ ಮಾಡಿದೆ.

ಈ ಎಲೆಕ್ಟ್ರಿಕ್ ಮೊಪೆಡ್, ರೂ.69,990 (ಎಕ್ಸ್ ಶೋರೂಂ) ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಪುಣೆ ಮೂಲದ ಕೈನೆಟಿಕ್ ಗ್ರೀನ್ (Kinetic Green), ಲಾಂಚ್ ಮಾಡಿರುವ ಹೊಸ ಇ-ಲೂನಾ (E-Luna) ಮೊಪೆಡ್, ಎಕ್ಸ್1, ಎಕ್ಸ್2 ಎಂಬ ಎರಡು ರೂಪಾಂತರಗಳೊಂದಿಗೆ ದೊರೆಯುತ್ತದೆ. ಪೂರ್ತಿ ಚಾರ್ಜ್ ನಲ್ಲಿ 110 ಕಿ.ಮೀ ರೇಂಜ್ ನೀಡುತ್ತದೆ.

ಈ ಹೊಸ ಕೈನೆಟಿಕ್ ಇ-ಲೂನಾ ಬ್ಯಾಟರಿ ಪ್ಯಾಕ್, 4 ಗಂಟೆಗಳಲ್ಲಿ ಚಾರ್ಜ್ ಆಗಲಿದ್ದು, ವಿವಿಧ ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿ ಸಿಗುತ್ತದೆ. ಕಾಂಬಿ ಬ್ರೇಕಿಂಗ್ ಸಿಸ್ಟಮ್, 16 - ಇಂಚಿನ ವೀಲ್ಸ್, ಟೆಲಿಸ್ಕೊಪಿಕ್ ಫ್ರಂಟ್ ಸಸ್ಪೆನ್ಷನ್ ಸೆಟಪ್, ಡಿಜಿಟಲ್ ಮೀಟರ್, ಸ್ಯಾರಿ ಗಾರ್ಡ್, ಸೈಟ್ ಸ್ಟಾಂಡ್ ಸೆನ್ಸರ್, ಸೇಫ್ಟಿ ಲಾಕ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಈ ಹೊಸ ಕೈನೆಟಿಕ್ ಇ - ಲೂನಾ ಎಲೆಕ್ಟ್ರಿಕ್ ಸ್ಕೂಟರ್ ಡಿಜಿಟಲ್ ಮೀಟರ್, ಸೈಡ್ ಸ್ಟ್ಯಾಂಡ್ ಸೆನ್ಸಾರ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಸೀರೆ ಗಾರ್ಡ್, ಸುರಕ್ಷತಾ ಲಾಕ್, ಕಾಂಬಿ ಬ್ರೇಕಿಂಗ್ ಸಿಸ್ಟಮ್, ಬ್ಯಾಗ್ ಹುಕ್, ಡಿಟ್ಯಾಚೇಬಲ್ ರಿಯರ್ ಸೀಟ್ ಮತ್ತು ಫ್ರಂಟ್ ಲೆಗ್ ಗಾರ್ಡ್ ಎಂಬ ಫೀಚರ್ಸ್ ಗಳನ್ನು ಹೊಂದಿವೆ.

ಇ-ಲೂನಾ ಬಣ್ಣದ ಡ್ಯುಯಲ್-ಟ್ಯೂಬ್ಯುಲರ್ ಸ್ಟೀಲ್ ಚಾಸಿಸ್ ಅನ್ನು ಹೊಂದಿದ್ದು, 150 ಕೆಜಿಯಷ್ಟು ಪೇಲೋಡ್ ಸಾಮರ್ಥ್ಯವನ್ನು ಹೊಂದಿದೆ. ಇದರ ಎಲೆಕ್ಟ್ರಿಕ್ ಪ್ರೊಪಲ್ಷನ್ 2.0 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ, ಇದು ಪ್ರತಿ ಚಾರ್ಜ್‌ಗೆ 110 ಕಿ.ಮೀ ರೇಂಜ್ ನೀಡುತ್ತದೆ. ಈ ಮೊಪೆಡ್ 2.2 kW ಮೋಟಾರ್‌ ಹೊಂದಿದೆ. ಈ ಮೂಲಕ ಗಂಟೆಗೆ 50 ಕಿ.ಮೀ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Saturday, February 10, 2024, 17:33 [IST]
English summary
Highway man of india nitin gadkari reveals his first vehicle
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+