ಎಲೆಕ್ಟ್ರಿಕ್ ಕಾರಾಗಿ ಬದಲಾದ 'ರಸ್ತೆಗಳ ರಾಜ' ಅಂಬಾಸಿಡರ್: ಪ್ರತಿ ಕಿಲೋಮೀಟರ್‌ಗೆ ಕೇವಲ 1 ರೂಪಾಯಿ ಖರ್ಚು

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳು ಮಾರುಕಟ್ಟೆಗೆ ಬಂದು ಹಲವು ವರ್ಷಗಳು ಕಳೆದಿವೆ. ಸದ್ಯ, ಟಾಟಾ ಮೋಟಾರ್ಸ್ ಈ ವಿಭಾಗದಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿಯುತ್ತಿದೆ. ಈಗಾಗಲೇ ಹಲವು ಇಂಧನ ಚಾಲಿತ ಕಾರುಗಳು, ಎಲೆಕ್ಟ್ರಿಕ್ ಪವರ್‌ಟ್ರೇನ್ ಪಡೆಯುತ್ತಿವೆ. ದೇಶದ ರಸ್ತೆಗಳ 'ರಾಜ' ಹಿಂದೂಸ್ತಾನ್ ಅಂಬಾಸಿಡರ್‌ನ್ನು ಇವಿಯಾಗಿ ಬದಲಾಯಿಸಲಾಗಿದೆ.

ಕೇರಳದ ಹೆ-ಮ್ಯಾನ್ ಆಟೋ ರೋಬೋಪಾರ್ಕ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆ ಅಂಬಾಸಿಡರ್‌ನ್ನು ಎಲೆಕ್ಟ್ರಿಕ್ ಕಾರಾಗಿ ಪರಿವರ್ತಿಸುವ ಸಾಹಸಕ್ಕೆ ಕೈ ಹಾಕಿದೆ. ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಕಾರಿನ ವಿನ್ಯಾಸದಲ್ಲಿ ಯಾವುದೇ ಪ್ರಮುಖ ಬದಲಾವಣೆಗಳನ್ನು ಮಾಡದೇ ಕೇವಲ ಎಂಜಿನ್ ತೆಗೆದು, ಎಲೆಕ್ಟ್ರಿಕ್ ಮೋಟಾರ್ ಹಾಕಿದೆ. ಒಟ್ಟು 22 ಲೀಡ್-ಆಸಿಡ್ ಬ್ಯಾಟರಿ ಪ್ಯಾಕ್ ಗಳನ್ನು ಕಾರಿನ ಬೂಟ್ ಹಾಗೂ ಬಾನೆಟ್ ನಲ್ಲಿ ಅಳವಡಿಸಿದೆ.

ಎಲೆಕ್ಟ್ರಿಕ್ ಕಾರಾಗಿ ಬದಲಾದ ರಸ್ತೆಗಳ ರಾಜ ಅಂಬಾಸಿಡರ್: ಪ್ರತಿ ಕಿಲೋಮೀಟರ್‌ಗೆ ಕೇವಲ 1 ರೂಪಾಯಿ ಖರ್ಚು

ಇವಿಯಾಗಿ ಬದಲಾಗಿರುವ ಅಂಬಾಸಿಡರ್ ಕಾರಿನ 20kW ಸಾಮರ್ಥ್ಯದ ಎಲೆಕ್ಟ್ರಿಕ್ ಮೋಟಾರ್ ಹೊಂದಿದ್ದು, 53 Bhp ಗರಿಷ್ಠ ಪವರ್, 275 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. 120 kmph ಟಾಪ್ ಸ್ವೀಡ್ ಹೊಂದಿದೆ. ಕೇವಲ 12 ಸೆಕೆಂಡುಗಳಲ್ಲಿ 0-60 kmph ವೇಗವನ್ನು ಪಡೆಯಲಿದ್ದು, ಈ ಕಾರು ಎಷ್ಟು ಪವರ್ ಪುಲ್ ಎಂದರೆ, 8 ಮೆಟ್ರಿಕ್ ಟನ್ ತೂಕ ಲೋಡ್ ಹೊಂದಿರುವ ಟ್ರಕ್ ಅನ್ನು ಲೀಲಾಜಾಲವಾಗಿ ಎಳೆದಿದೆ.

ಅಂಬಾಸಿಡರ್ ಕಾರಿನ ಬ್ಯಾಟರಿ ಪ್ಯಾಕ್, ಸಂಪೂರ್ಣ ಚಾರ್ಜಿನಲ್ಲಿ 100 km ರೇಂಜ್ ನೀಡಲಿದ್ದು, ಪ್ರತಿ ಕಿಲೋಮೀಟರ್ ಗೆ ಕೇವಲ 1 ರೂಪಾಯಿ ವ್ಯಯಿಸಬೇಕಾಗಿದೆ. ಪ್ರಸ್ತುತವಿರುವ ಪೆಟ್ರೋಲ್ ದರಕ್ಕೆ ಹೋಲಿಸಿದರೆ, ಎಷ್ಟೋ ಉತ್ತಮ. ಇದು ಫಾಸ್ಟ್ ಚಾರ್ಜಿಂಗ್ ಆಯ್ಕೆಯನ್ನು ಹೊಂದಿರದ ಕಾರಣ, ಮನೆಯ ವಿದ್ಯುತ್ ಬಳಕೆಯಲ್ಲಿ ಚಾರ್ಜ್ ಮಾಡಬೇಕಾಗಿದೆ. ಅಲ್ಲದೆ, ಮುಂಬರುವ ಮಾಡೆಲ್‌ಗಳಲ್ಲಿ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಬಳಕೆಗೂ ಈ ಕಾರನ್ನು ಇವಿಯಾಗಿ ಬದಲಾಯಿಸಿದ ತಂಡವೇ ಶ್ರಮಿಸುತ್ತಿದೆ.

ಎಲೆಕ್ಟ್ರಿಕ್ ಕಾರಾಗಿ ಬದಲಾದ ರಸ್ತೆಗಳ ರಾಜ ಅಂಬಾಸಿಡರ್: ಪ್ರತಿ ಕಿಲೋಮೀಟರ್‌ಗೆ ಕೇವಲ 1 ರೂಪಾಯಿ ಖರ್ಚು

ನೂತನ ಅಂಬಾಸಿಡರ್ ಇವಿಯ ಒಳಭಾಗದ ಕ್ಯಾಬಿನ್ ನಲ್ಲಿ ಅಷ್ಟಾಗಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಮೊದಲೇ ಇದು ಆರಾಮದಾಯಕ ಆಸನ ವ್ಯವಸ್ಥೆಯನ್ನು ಹೊಂದಿದೆ. ಪ್ರಮುಖವಾಗಿ ಹಳೆಯ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಬದಲಾಗಿ ಹೊಸದಾದ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ. ಇದರ ಸಹಾಯದಿಂದ ರೇಂಜ್ ಹಾಗೂ ಬ್ಯಾಟರಿ ಸ್ಟೇಟಸ್ ಸೇರಿದಂತೆ ಇನ್ನಿತರೇ ಹೆಚ್ಚಿನ ಮಾಹಿತಿ ಪಡೆಯಬಹುದು.

'ಹಿಂದೂಸ್ತಾನ್ ಮೋಟಾರ್' ಇಂಗ್ಲೆಂಡ್‌ನ ಮಾರಿಸ್ ಆಕ್ಸ್‌ಫೋರ್ಡ್ ಕಂಪನಿಯ ಈ ಅಂಬಾಸಿಡರ್‌ ಕಾರನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿತ್ತು. 1957 ರಿಂದ 2014ವರೆಗೆ ಮಾರಾಟ ಮಾಡಲಾಯಿತು. ಪ್ರಧಾನಿಗಳಿಂದ ಹಿಡಿದು ಸಾಮಾನ್ಯ ವ್ಯಕ್ತಿಗಳು ಕೂಡ ಈ ಕಾರನ್ನು ಬಳಕೆ ಮಾಡುತ್ತಿದ್ದರು. ಆದರೆ, ನವೀನ ವೈಶಿಷ್ಟ್ಯದ ಕಾರುಗಳ ಬಂದ ಮೇಲೆ ಅಂಬಾಸಿಡರ್‌ ಜನಪ್ರಿಯತೆ ದಿನದಿಂದ ದಿನಕ್ಕೆ ಕುಸಿಯುತ್ತಲೇ ಹೋಯಿತು. ಕಡೆಯದಾಗಿ ಬಿಡುಗಡೆಯಾದಾಗ ಅಂಬಾಸಿಡರ್‌ ಆರಂಭಿಕ ಬೆಲೆ ರೂ.4-6 ಲಕ್ಷ ಇತ್ತು.

ಪ್ರಸ್ತುತ ಅಂಬಾಸಿಡರ್ ಇವಿ ಪ್ರಾಯೋಗಿಕ ಹಂತದಲ್ಲಿದ್ದು, ಅದಕ್ಕಾಗಿ ಹೆ-ಮ್ಯಾನ್ ಆಟೋ ರೋಬೋಪಾರ್ಕ್ ಕಂಪನಿ ಸರಿ - ಸುಮಾರು ರೂ.6 ಲಕ್ಷವನ್ನು ಖರ್ಚು ಮಾಡಿದೆ. ಒಂದೊಮ್ಮೆ ಈ ಕಾರು, ಉತ್ಪಾದನೆಗೆ ಹೋದರೆ, ಮತ್ತಷ್ಟು ವೆಚ್ಚ ಕಡಿಮೆಯಾಗುವ ಸಾಧ್ಯತೆಯಿದೆ. ಹಳೆಯ ಕಾರುಗಳನ್ನು ಎಲೆಕ್ಟ್ರಿಕ್ ಕಾರುಗಳಾಗಿ ಈ ಹಿಂದೆಯು ವಿವಿಧ ಕಂಪನಿಗಳು ಪರಿವರ್ತಿಸಿವೆ. ಅದರಲ್ಲಿ ಕೆಲವೊಂದು ಯಶಸ್ಸನ್ನು ಸಹ ಕಂಡಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Saturday, April 1, 2023, 8:19 [IST]
English summary
Hindustan ambassador converted an electric car details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+