ಬಿಎಂಡಬ್ಲ್ಯು, ಬೆಂಝ್ ನಾಚುವಂತೆ ಅಂಬಾಸಿಡರ್ ಮಾಡಿಫೈ! ಇಂಟೀರಿಯರ್‌ಗೆ ಫಿದಾ ಆಗ್ತೀರಾ...
ಭಾರತೀಯ ವಾಹನ ಇತಿಹಾಸದಲ್ಲಿ ಅಚ್ಚಳಿಯದ ಪುಟವೊಂದನ್ನು ತನಗಾಗಿ ರೂಪಿಸಿಕೊಂಡಿರುವ ಹಿಂದೂಸ್ತಾನ್ ಅಂಬಾಸಿಡರ್, ಒಂದು ಕಾಲದಲ್ಲಿ ಅನೇಕ ಭಾರತೀಯ ಕುಟುಂಬಗಳ ಸ್ಥಿತಿ ಸಂಕೇತವಾಗಿತ್ತು. ಇದು ಮಹತ್ವಾಕಾಂಕ್ಷೆಯ ಉತ್ಪನ್ನವೂ ಹೌದು. ಕಾರಣಾಂತರಗಳಿಂದ 2014 ರಲ್ಲಿ ಈ ಕಾರು ಸಂಪೂರ್ಣ ಸ್ಥಗಿತಗೊಂಡ ಬಳಿಕ ನಿಧಾನವಾಗಿ ಕಣ್ಮರೆಯಾಯಿತು.
ಆದರೆ ಇಂದಿಗೂ ಇಂತಹ ಐಕಾನಿಕ್ ಕಾರುಗಳನ್ನು ಕಣ್ಮರೆಯಾಗಲು ಬಿಡದೇ ಹೊಸ ಲುಕ್ ನೀಡಿ ಬಳಸುವವರು ಬಹುತೇಕರಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿ ಈ ಸೆಡಾನ್‌ನ ಹಲವಾರು ಮಾಡಿಫೈಗೊಳಿಸಿದ ಉದಾಹರಣೆಗಳನ್ನು ನೋಡಿದ್ದೇವೆ. ಇಲ್ಲಿಯೂ ಅಂತಹ ಒಂದು ವೀಡಿಯೊವನ್ನು ಹೊಂದಿದ್ದೇವೆ, ಹಳೆಯ ಅಂಬಾಸಿಡರ್ ಅನ್ನು ಅಂದವಾಗಿ ಮತ್ತು ಪ್ರೀಮಿಯಂ ಆಗಿ ಕಾಣುವಂತೆ ಮಾರ್ಪಡಿಸಲಾಗಿದೆ.

ವಿಡಿಯೋದಲ್ಲಿರುವ ಅಂಬಾಸಿಡರ್ ವಿಶೇಷತೆಗಳ ಬಗ್ಗೆ ಹೇಳುವುದಾದರೆ, ಇದು ಸಂಪೂರ್ಣ ಆಫ್ಟರ್‌ಮಾರ್ಕೆಟ್ ಮಾಡಿಫಿಕೇಷನ್ ಆಗಿದೆ. ಹೆಡ್‌ಲ್ಯಾಂಪ್, ರಿಂಗ್-ಟೈಪ್ ಡ್ಯುಯಲ್-ಫಂಕ್ಷನ್ LED DRL ಗಳೊಂದಿಗೆ ಪ್ರೊಜೆಕ್ಟರ್ LED ಲೈಟ್‌ಳನ್ನು ನೀಡಲಾಗಿದೆ. ಮೂಲ ಕ್ರೋಮ್ ಗ್ರಿಲ್ ಅನ್ನು ಕಪ್ಪಾಗಿಸಿ, ಗ್ರಿಲ್ ಅನ್ನು ಎರಡು ಅಡ್ಡಲಾಗಿ ವಿಭಜಿಸುವ ಬಾಡಿ ಕಲರ್ಡ್ ಪ್ಲಾಸ್ಟಿಕ್ ಪ್ಯಾನಲ್‌ಗಳನ್ನು ನೀಡಲಾಗಿದೆ.
ಅಂಬಾಸಿಡರ್ ಬಂಪರ್ ಕಸ್ಟಮೈಸೇಶನ್ ಅನ್ನು ಸಹ ಪಡೆದಿದೆ. ಕ್ರೋಮ್ ಅನ್ನು ತೆಗೆದುಹಾಕಿ ಬಾಡಿ ಕಲರ್ ಅನ್ನು ನೀಡಿ ಪ್ರೀಮಿಯಂ ಆಗಿ ಕಾಣುವಂತೆ ಮಾಡಿದ್ದಾರೆ. ಹೆಡ್‌ಲ್ಯಾಂಪ್‌ಗಳು, ಬ್ಲೈಂಡ್ ಸ್ಪಾಟ್ ಮಿರರ್ ಮತ್ತು ಬಾನೆಟ್ ಸುತ್ತಲೂ ಕ್ರೋಮ್ ಅನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಸೈಡ್ ಪ್ರೊಫೈಲ್‌ಗೆ ಬಂದರೆ, ಫೆಂಡರ್ ಅನ್ನು ಕಸ್ಟಮೈಸ್ ಮಾಡಲಾಗಿದೆ.

ಅಂದರೆ ರೇಂಜ್ ರೋವರ್ ಇವೊಕ್‌ನಿಂದ ತೆಗೆದುಕೊಳ್ಳಲಾದ ಏರ್ ವೆಂಟ್‌ನೊಂದಿಗೆ ಬರುತ್ತದೆ. ಇದು ಸ್ಟಿಕ್-ಆನ್ ಅಲ್ಲ, ಬದಲಿಗೆ ಉದ್ದೇಶಪೂರ್ವಕವಾಗಿ ಫೆಂಡರ್ ಅನ್ನು ಕತ್ತರಿಸಲಾಗಿದೆ. ಸೈಡ್ ಪ್ರೊಫೈಲ್‌ನಲ್ಲಿನ ಇತರ ಆಕರ್ಷಣೆಯೆಂದರೆ ವೀಲ್‌ಗಳು. ಕಾರಿಗೆ ಪ್ಲಾಟಿ ಕಂಪನಿಯಿಂದ 16-ಇಂಚಿನ ಆಫ್ಟರ್ ಮಾರ್ಕೆಟ್ ಅಲಾಯ್ ವೀಲ್‌ಗಳನ್ನು ಅಳವಡಿಸಲಾಗಿದೆ.
ಇದನ್ನು ಹೊರತುಪಡಿಸಿ ಮಿಕ್ಕೆಲ್ಲವೂ ಬಹುತೇಕ ಒಂದೇ ಆಗಿದೆ. ಸಿಗ್ನೇಚರ್ ವೈಟ್ ಶೇಡ್‌ನಲ್ಲಿ ಇಡೀ ಕಾರಿಗೆ ಪುನಃ ಬಣ್ಣ ಬಳಿಯಲಾಗಿದೆ. ಅಂಬಾಸಿಡರ್ ಸೆಡಾನ್‌ನ ಬೂಟ್ ದೊಡ್ಡದಾಗಿದ್ದು ಅದರಲ್ಲಿ ಈಗ ಸಬ್-ವೂಫರ್ ಅನ್ನು ಸ್ಥಾಪಿಸಿದ್ದಾರೆ. ಸಬ್-ವೂಫರ್ ಒಳಗಡೆ ಇದ್ದರೂ, ಬೂಟ್ ಒಳಗೆ ಸಾಕಷ್ಟು ಸ್ಥಳಾವಕಾಶವಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಇಂಟೀರಿಯರ್ ವಿಷಯಕ್ಕೆ ಬಂದರೆ ಬೀಜ್ ಶೇಡ್‌ನಲ್ಲಿ ಕ್ಯಾಬಿನ್ ಅನ್ನು ಸಂಪೂರ್ಣವಾಗಿ ಕಸ್ಟಮೈಸ್ ಮಾಡಲಾಗಿದೆ. ಸೀಟ್ ಕವರ್‌ಗಳನ್ನು ಲೆಥ್ರೆಟ್ ಅಪ್ಹೋಲ್ಸ್ಟರಿಯೊಂದಿಗೆ ಕಸ್ಟಮೈಸ್ ಮಾಡಲಾಗಿದೆ. ಡ್ಯಾಶ್‌ಬೋರ್ಡ್‌ನಲ್ಲೂ ಅದೇ ಬಣ್ಣವಿದ್ದು, ಕಾರಿನಲ್ಲಿ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಎಸಿ ವೆಂಟ್‌ಗಳು ಮತ್ತು ಸೆಂಟರ್ ಕನ್ಸೋಲ್‌ನ ಸುತ್ತಲೂ ಫಾಕ್ಸ್ ವುಡ್ ಇಂಟೇಕ್‌ಗಳೊಂದಿಗೆ ಡಿಸೈನ್ ಮಾಡಲಾಗಿದೆ.
ಈ ಕಾರಿನ ಕಂಟ್ರೋಲ್‌ಗಳು ಮತ್ತು ಇನ್‌ಸ್ಟ್ರೂಮೆಂಟ್ ಕ್ಲಸ್ಟರ್ ಸ್ಟಾಕ್ ಆಗಿದ್ದು, ಸೆಂಟರ್ ಕನ್ಸೋಲ್‌ನಲ್ಲಿ ಇರಿಸಲಾದ ಎಲ್ಲಾ ನಾಲ್ಕು ಬಾಗಿಲುಗಳಿಗೆ ಪವರ್ ವಿಂಡೋ ಬಟನ್‌ಗಳಿವೆ. ಉಳಿದಂತೆ ರೂಫ್ ಲೈನರ್ ಅನ್ನು ಬೀಜ್ ಶೇಡ್‌ನಲ್ಲಿ ಮುಗಿಸಲಾಗಿದ್ದು, ಕಾರು ಡೋರ್ ಪ್ಯಾಡ್‌ಗಳ ಮೇಲೆ ಲೆದರ್ ಹೊದಿಕೆಯನ್ನು ಪಡೆದಿದೆ, ನೆಲಕ್ಕೆ 7D ಮ್ಯಾಟ್‌ಗಳು, ಅಪ್‌ಗ್ರೇಡ್ ಮಾಡಿದ ಮ್ಯೂಸಿಕ್ ಸಿಸ್ಟಮ್ ಇದೆ.

ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್, ಸೆಂಟರ್ ಆರ್ಮ್‌ರೆಸ್ಟ್‌ನೊಂದಿಗೆ ಆರಾಮದಾಯಕ ಹಿಂಭಾಗದ ಸೀಟುಗಳು ಪ್ರೀಮಿಯಂ ಅನುಭವ ನೀಡುತ್ತವೆ. ಇಲ್ಲಿ ಕಾಣುವ ಬಟ್ಟೆಯ ಫಿಟ್ ಆಂಡ್ ಫಿನಿಶ್ ಉತ್ತಮವಾಗಿ ಕಾಣುತ್ತದೆ. ಸಿದ್ಧಪಡಿಸಿದ ಕಾರು ಯಾವುದೇ ಲಕ್ಷುರಿ ಕಾರುಗಳಿಗೆ ಕಡಿಮೆಯಿಲ್ಲ ಎಂಬಂತಿದೆ. ಒಟ್ಟಾರೆ ಒಳಗೆ ಮತ್ತು ಹೊರಗೆ ಎರಡೂ ಪ್ರೀಮಿಯಂ ಆಗಿ ಕಾಣುತ್ತದೆ. ಈ ಕಾರಿನ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








