ಪೆಟ್ರೋಲ್ ಬಂಕ್'ನಲ್ಲಿ ಬ್ಯಾಟರಿ ವಿನಿಮಯ ಕೇಂದ್ರವನ್ನಾರಂಭಿಸಿದ ಹೆಚ್‌ಪಿ

ಎಲೆಕ್ಟ್ರಿಕ್ ವಾಹನ ಸವಾರರಿಗೆ ನೆರವು ನೀಡುವ ಸಲುವಾಗಿ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಸನ್ ಮೊಬಿಲಿಟಿ ಜೊತೆಗೂಡಿ ಸ್ವಾಪಬಲ್ ಬ್ಯಾಟರಿ ಸ್ಟೇಷನ್'ಗಳನ್ನು ಆರಂಭಿಸಿದೆ.

ಪೆಟ್ರೋಲ್ ಬಂಕ್'ನಲ್ಲಿ ಬ್ಯಾಟರಿ ವಿನಿಮಯ ಕೇಂದ್ರವನ್ನಾರಂಭಿಸಿದ ಹೆಚ್‌ಪಿ

ಐಒಸಿ ಮೊದಲಿಗೆ ಚಂಡೀಗಢ ರಾಜ್ಯದಲ್ಲಿ ಈ ಸೇವೆಯನ್ನು ಆರಂಭಿಸಿತು.ಶೀಘ್ರದಲ್ಲಿಯೇ ಈ ರೀತಿಯ ಬ್ಯಾಟರಿ ಸ್ಟೇಷನ್'ಗಳನ್ನು ಬೆಂಗಳೂರು, ನವದೆಹಲಿ, ಗುರುಗ್ರಾಮ ಹಾಗೂ ಅಮೃತಸರಗಳಲ್ಲಿಯೂ ಶುರು ಮಾಡುವುದಾಗಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ತಿಳಿಸಿದೆ.

ಪೆಟ್ರೋಲ್ ಬಂಕ್'ನಲ್ಲಿ ಬ್ಯಾಟರಿ ವಿನಿಮಯ ಕೇಂದ್ರವನ್ನಾರಂಭಿಸಿದ ಹೆಚ್‌ಪಿ

ಈಗ ದೇಶದ ಮತ್ತೊಂದು ಪ್ರಮುಖ ತೈಲ ಕಂಪನಿಯಾದ ಹಿಂದೂಸ್ತಾನ್ ಪೆಟ್ರೋಲಿಯಂ ಐಒಸಿ ರೀತಿಯಲ್ಲಿಯೇ ಎಲೆಕ್ಟ್ರಿಕ್ ವಾಹನಗಳಿಗಾಗಿ ಸ್ವಾಪಬಲ್ ಬ್ಯಾಟರಿ ಸ್ಟೇಷನ್ ಅನ್ನು ಆರಂಭಿಸಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಪೆಟ್ರೋಲ್ ಬಂಕ್'ನಲ್ಲಿ ಬ್ಯಾಟರಿ ವಿನಿಮಯ ಕೇಂದ್ರವನ್ನಾರಂಭಿಸಿದ ಹೆಚ್‌ಪಿ

ಈ ಬ್ಯಾಟರಿ ಸ್ಟೇಷನ್ ಗಳನ್ನು ತೆರೆಯಲು ಹೆಚ್‌ಪಿ ವೋಲ್ಟ್ ಅಪ್ ಎಂಬ ಕಂಪನಿಯೊಂದಿಗೆ ಸಹಭಾಗಿತ್ವವನ್ನು ಮಾಡಿಕೊಂಡಿದೆ. ಹಿಂದೂಸ್ತಾನ್ ಪೆಟ್ರೋಲಿಯಂ, ತನ್ನ ಪೆಟ್ರೋಲ್ ಬಂಕ್ ಗಳಲ್ಲಿ ದ್ವಿ ಹಾಗೂ ತ್ರಿಚಕ್ರ ಎಲೆಕ್ಟ್ರಿಕ್ ವಾಹನಗಳಿಗಾಗಿ ಚಾರ್ಜ್ ಆಗಿರುವ ಬ್ಯಾಟರಿಗಳನ್ನು ಪೂರೈಸುವ ವಿನಿಮಯ ಕೇಂದ್ರಗಳನ್ನು ಸಹ ನಿರ್ಮಿಸುತ್ತಿದೆ.

ಪೆಟ್ರೋಲ್ ಬಂಕ್'ನಲ್ಲಿ ಬ್ಯಾಟರಿ ವಿನಿಮಯ ಕೇಂದ್ರವನ್ನಾರಂಭಿಸಿದ ಹೆಚ್‌ಪಿ

ಈ ಸಹಭಾಗಿತ್ವದಲ್ಲಿ ಮೊದಲ ಬಾರಿಗೆ ವೋಲ್ಟ್-ಅಪ್ ಜೈಪುರದಲ್ಲಿ ಎರಡು ಬ್ಯಾಟರಿ ವಿನಿಮಯ ಕೇಂದ್ರಗಳನ್ನು ತೆರೆದಿದೆ. ಈ ಸೇವೆಯನ್ನು ಶೀಘ್ರದಲ್ಲೇ ದೇಶಾದ್ಯಂತ ವಿಸ್ತರಿಸಲು ಎರಡೂ ಕಂಪನಿಗಳು ಮುಂದಾಗಿವೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಪೆಟ್ರೋಲ್ ಬಂಕ್'ನಲ್ಲಿ ಬ್ಯಾಟರಿ ವಿನಿಮಯ ಕೇಂದ್ರವನ್ನಾರಂಭಿಸಿದ ಹೆಚ್‌ಪಿ

ಎಲೆಕ್ಟ್ರಿಕ್ ವಾಹನಗಳ ಮಾರಾಟವು ಭಾರತದಲ್ಲಿ ನಿಧಾನವಾಗಿ ಏರಿಕೆಯಾಗುತ್ತಿದೆ. ಪೆಟ್ರೋಲ್, ಡೀಸೆಲ್ ವಾಹನಗಳ ಮಾರಾಟಕ್ಕೆ ಹೋಲಿಸಿದರೆ ಎಲೆಕ್ಟ್ರಿಕ್ ವಾಹನಗಳ ಮಾರಾಟವು ಇನ್ನೂ ಶೈಶವಾವಸ್ಥೆಯಲ್ಲಿದೆ.

ಪೆಟ್ರೋಲ್ ಬಂಕ್'ನಲ್ಲಿ ಬ್ಯಾಟರಿ ವಿನಿಮಯ ಕೇಂದ್ರವನ್ನಾರಂಭಿಸಿದ ಹೆಚ್‌ಪಿ

ಚಾರ್ಜಿಂಗ್ ಸ್ಟೇಷನ್ ಹಾಗೂ ಮೂಲಸೌಕರ್ಯಗಳ ಕೊರತೆಯಿಂದಾಗಿ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟವು ಕಡಿಮೆಯಾಗಿದೆ. ಹೆಚ್‌ಪಿ ಹಾಗೂ ವೋಲ್ಟ್ ಅಪ್ ಸಹಭಾಗಿತ್ವದ ನಂತರ ಈ ಪರಿಸ್ಥಿತಿ ಬದಲಾಗುವ ನಿರೀಕ್ಷೆಗಳಿವೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಪೆಟ್ರೋಲ್ ಬಂಕ್'ನಲ್ಲಿ ಬ್ಯಾಟರಿ ವಿನಿಮಯ ಕೇಂದ್ರವನ್ನಾರಂಭಿಸಿದ ಹೆಚ್‌ಪಿ

ಭವಿಷ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಹೆಚ್ಚಾದ ನಂತರ ಸದ್ಯಕ್ಕೆ ಕಾರ್ಯಾಚರಣೆಯಲ್ಲಿರುವ ಪೆಟ್ರೋಲ್ ಬಂಕ್'ಗಳು ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್'ಗಳಾಗಿ ಬದಲಾಗುವ ಸಾಧ್ಯತೆಗಳಿವೆ.

ಪೆಟ್ರೋಲ್ ಬಂಕ್'ನಲ್ಲಿ ಬ್ಯಾಟರಿ ವಿನಿಮಯ ಕೇಂದ್ರವನ್ನಾರಂಭಿಸಿದ ಹೆಚ್‌ಪಿ

ಬ್ಯಾಟರಿ ವಿನಿಮಯ ಮಾಡಬಹುದಾದ ಕೇಂದ್ರಗಳು ಎಲೆಕ್ಟ್ರಿಕ್ ವಾಹನಗಳಿಗೆ ಅವಶ್ಯಕತೆಯಿರುವ ಬ್ಯಾಟರಿಯನ್ನು ಪೂರ್ತಿ ಚಾರ್ಜ್‌ನೊಂದಿಗೆ ಒದಗಿಸಲಿವೆ. ಇದರಿಂದಾಗಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಸಾಧ್ಯವಾಗಲಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಪೆಟ್ರೋಲ್ ಬಂಕ್'ನಲ್ಲಿ ಬ್ಯಾಟರಿ ವಿನಿಮಯ ಕೇಂದ್ರವನ್ನಾರಂಭಿಸಿದ ಹೆಚ್‌ಪಿ

ಈ ರೀತಿಯ ಸ್ವಾಪಬಲ್ ಬ್ಯಾಟರಿ ಕೇಂದ್ರಗಳಿಂದಾಗಿ ಜನರು ಎಲೆಕ್ಟ್ರಿಕ್ ವಾಹನವನ್ನು ಚಾರ್ಜ್ ಮಾಡಲು ಗಂಟೆಗಟ್ಟಲೇ ಕಾಯುವುದು ತಪ್ಪುತ್ತದೆ. ಈ ಕೇಂದ್ರಗಳಲ್ಲಿ ಸಂಪೂರ್ಣವಾಗಿ ಖಾಲಿಯಾಗಿರುವ ಬ್ಯಾಟರಿಗಳನ್ನು ನೀಡಿ, ಪೂರ್ತಿಯಾಗಿ ಚಾರ್ಜ್ ಆಗಿರುವ ಬ್ಯಾಟರಿಗಳನ್ನು ಪಡೆಯಬಹುದು.

Article Published On: Tuesday, December 29, 2020, 16:46 [IST]
English summary
Hindustan Petroleum partners with Volt Up to start battery swapping centers. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+