ಹಾಲಿವುಡ್ ನಟ ವಿಲ್ ಸ್ಮಿತ್ ಅವರ ಗ್ಯಾರೇಜ್‌ನಲ್ಲಿವೆ ವಿಶ್ವದ ಟಾಪ್ ಐಷಾರಾಮಿ ಕಾರುಗಳು!
ಮೆನ್ ಇನ್ ಬ್ಲ್ಯಾಕ್, ಬ್ಯಾಡ್ ಬಾಯ್, ಸುಸೈಡ್ ಸ್ಕ್ವಾಡ್ ನಂತಹ ಹಲವು ಹಾಲಿವುಡ್ ಬ್ಲಾಕ್ ಬಸ್ಟರ್ ಸಿನಿಮಾಗಳ ಮೂಲಕ ಹೆಸರು ಗಳಿಸಿರುವ ನಟ ವಿಲ್ ಸ್ಮಿತ್ ವಿದೇಶದಲ್ಲಿ ಮಾತ್ರವಲ್ಲದೆ ಭಾರತದಲ್ಲಿಯೂ ಸಖತ್ ಫೇಮಸ್ ಸೆಲೆಬ್ರಿಟಿ. ಇವರು ನಟನೆ ಮಾತ್ರವಲ್ಲದೆ ಸಿಂಗರ್ ಕೂಡ ಹಲವು ರ್ಯಾಪ್ ಸಾಂಗ್‌ಗಳನ್ನು ಕೂಡ ಹಾಡಿದ್ದಾರೆ.

ಈ ಹಾಲಿವುಡ್ ಸೂಪರ್‌ಸ್ಟಾರ್‌ಗೆ ಸಿನಿಮಾಗಳಷ್ಟೇ ಕಾರುಗಳೂ ಇಷ್ಟ. ಹಾಗಾಗಿಯೇ ಅವರ ಕಾರ್ ಗ್ಯಾರೇಜ್‌ನಲ್ಲಿ ಐಷಾರಾಮಿ ಕಾರುಗಳಿಂದ ಹಿಡಿದು ಸೂಪರ್ ಫಾಸ್ಟ್ ಕಾರುಗಳವರೆಗೆ ವಿಶ್ವದ ಅತ್ಯುತ್ತಮ ಕಾರುಗಳನ್ನು ಸಂಗ್ರಿಸಿಟ್ಟಿದ್ದಾರೆ. ಪ್ರಸ್ತುತ ಈ ಹಾಲಿವುಡ್ ಸ್ಟಾರ್ ನಟನ ಬಳಿ ಇರುವ ಕಾರುಗಳ ಬಗ್ಗೆ ಇಲ್ಲಿ ತಿಳಿಯಬಹುದು.

1. 1965 ಫೋರ್ಡ್ ಮುಸ್ತಾಂಗ್
1965 ಫೋರ್ಡ್ ಮುಸ್ತಾಂಗ್ ಹೊಂದಿರುವ ಕೆಲೆವೇ ನಟರಲ್ಲಿ ವಿಲ್ ಸ್ಮಿತ್ ಕೂಡ ಒಬ್ಬರು. ಈ ಕಾರು 1965-75ರ ನಡುವೆ ಯುವ ಜನತೆಗೆ ಹುಚ್ಚೆಬ್ಬಿಸಿದ್ದ ಮಾದರಿಯಾಗಿದೆ. ಇದರ ಲುಕ್, ಪರ್ಫಾಮೆನ್ಸ್ ಮತ್ತು ವೈಶಿಷ್ಟ್ಯಗಳಿಂದಲೇ ಭಾರೀ ಹೆಸರು ಮಾಡಿತ್ತು. ಈ ಐಕಾನಿಕ್ ಮಸಲ್ ಕಾರ್ 4.7-ಲೀಟರ್ V8 ಪೆಟ್ರೋಲ್ ನಿಂದ ಚಾಲಿತವಾಗಿದ್ದು, 270 Bhp ಪವರ್ ಅನ್ನು ಹೊರಹಾಕುತ್ತದೆ. ವಿಲ್ ಸ್ಮಿತ್ ತನ್ನ ಮುಸ್ತಾಂಗ್ ಅನ್ನು ಇನ್ನೂ ರೆಟ್ರೋ ಲುಕ್‌ನಲ್ಲೇ ಇರಿಸಿಕೊಂಡಿದ್ದಾರೆ, ಇದರಲ್ಲಿ ಕೆಂಪು ಬಣ್ಣದ ಪೇಂಟ್ ಸ್ಕೀಮ್ ಅನ್ನು ಬಳಸಲಾಗಿದೆ.

2. ಮೇಬ್ಯಾಕ್ 57S
ಮೇಬ್ಯಾಕ್ 57S ಕಾರು ಕಂಪನಿಯ ಮೊದಲ ಮಾದರಿಗಳಲ್ಲಿ ಒಂದಾಗಿದೆ, ಈ ಕಾರಿನ ಐಷಾರಾಮಿ ಗುಣಗಳಿಂದಲೇ ಇಂದಿಗೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಈ ಹಿಂದೆ ಕೆಲ ವರ್ಷಗಳ ಕಾಲ ಕಾರಿನ ಯಾವುದೇ ಮಾದರಿಗಳು ಹೊರ ಬಂದಿರಲಿಲ್ಲ. ಬಳಿಕ 2005 ರಲ್ಲಿ ಮೇಬ್ಯಾಕ್ 57S ಬ್ರ್ಯಾಂಡ್‌ನ ಹೊಸ ಆವೃತ್ತಿಯೊಂದಿಗೆ ರೂಪಾಂತರಗೊಂಡು ಮಾರುಕಟ್ಟೆಗೆ ಲಗ್ಗೆಯಿಟ್ಟಿತು. ಈ ಕಾರಿನಲ್ಲಿ 6-ಲೀಟರ್ V12 ಎಂಜಿನ್ ಅನ್ನು ಬಳಸಲಾಗಿದ್ದು, ಇದು 612 bhp ಪವರ್ ಮತ್ತು 1000 ನ್ಯೂಟನ್ ಮೀಟರ್ ಟಾರ್ಕ್ ಅನ್ನು ಒದಗಿಸುತ್ತದೆ.

3. ರೋಲ್ಸ್ ರಾಯ್ಸ್ ಘೋಸ್ಟ್
ಐಷಾರಾಮಿ ಎಂದಾಕ್ಷಣ ನೆನಪಾಗುವ ಕೆಲವೇ ಕಾರುಗಳಲ್ಲಿ ಅಗ್ರ ಸ್ಥಾನ ಪಡೆದಿರುವ ರೋಲ್ಸ್ ರಾಯ್ಸ್ ಬ್ರ್ಯಾಂಡ್‌ನ ಘೋಸ್ಟ್ ಮಾದರಿಯು ಉದ್ಯಮಿಗಳಿಂದ ಹಿಡಿದು ಸೆಲೆಬ್ರಿಟಿಗಳ ವರೆಗೆ ಫೇವರೆಟ್ ಕಾರೆಂದೇ ಹೇಳಬಹುದು. ಹಲವರು ಹಾಲಿವುಟ್ ನಟರಂತೆ ಈ ಐಷಾರಾಮಿ ಕಾರನ್ನು ಹೊಂದಿದ್ದಾರೆ ವಿಲ್‌ಸ್ಮಿತ್. ಈ ಕಾರು ಶಕ್ತಿಶಾಲಿ 6.75-ಲೀಟರ್ V12 ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ, ಇದು 563 Bhp ಶಕ್ತಿಯನ್ನು ಉತ್ಪಾದಿಸುತ್ತದೆ. ಆದರೆ ಈ ಕಾರಿನ ನಿಜವಾದ ವಿಶೇಷತೆ ಅದರ ಹಿಂದಿನ ಸೀಟಿನಲ್ಲಿದೆ. ಇದು ಪ್ರೀಮಿಯಂ ಐಷಾರಾಮಿ ವಿಮಾನದಂತಹ ಡ್ಯುಯಲ್ ಸ್ಕ್ರೀನ್ ಮತ್ತು ಲೆದರ್ ಸೀಟ್‌ಗಳನ್ನು ಒಳಗೊಂಡಿದೆ.

4. ಬೆಂಟ್ಲಿ ಅಜುರೆ
ಬೆಂಟ್ಲಿ ಅಜೂರೆ ವಿಲ್ ಸ್ಮಿತ್ ಅವರ ಸಂಗ್ರಹದಲ್ಲಿರುವ ಮತ್ತೊಂದು ಐಷಾರಾಮಿ ಕಾರಾಗಿದೆ. ಈ ಮಾದರಿಯು ವಿಶ್ವದ ಕೆಲವೇ ಟೆಕ್ ಹಾಗೂ ದಕ್ಷತೆ, ಲಕ್ಸೂರಿ ಗುಣಗಳನ್ನು ಹೊಂದಿರುವ ಕಾರುಗಳಲ್ಲಿ ಒಂದಾಗಿದೆ. ಈ ಕಾರು ಐಷಾರಾಮಿ ಸೆಡಾನ್ ಆಗಿದ್ದರೂ ಓಪನ್ ಟಾಪ್ ಥ್ರಿಲ್ ಅನ್ನು ಅನುಭವಿಸುವ ಸಾಮರ್ಥ್ಯ ಇದರ ವಿಶೇಷತೆಯಾಗಿದೆ. ಇದು 6.75-ಲೀಟರ್ ಟ್ವಿನ್-ಟರ್ಬೊ V8 ಎಂಜಿನ್‌ನಿಂದ ಚಾಲಿತವಾಗಿದ್ದು 456 bhp ಶಕ್ತಿಯನ್ನು ಉತ್ಪಾದಿಸಬಲ್ಲದು.

5. ಮೊದಲ ತಲೆಮಾರಿನ ಟೆಸ್ಲಾ ರೋಡ್‌ಸ್ಟರ್
ವಿಶ್ವ ಎಲೆಕ್ಟ್ರಿಕ್ ವಾಹನ ಕ್ರಾಂತಿಗೆ ಕಾರಣವಾಗಿರುವ ಟೆಸ್ಲಾ ಕಂಪನಿಯೂ ಆಟೋಮೊಬೈಲ್ ಕ್ಷೇತ್ರದಲ್ಲಿ ದೈತ್ಯ ಸಂಸ್ಥೆಯಾಗಿ ಬೆಳೆದು ನಿಂತಿದೆ. ಆದರೆ ಕೆಲ ವರ್ಷಗಳ ಹಿಂದೆ ಈ ಬ್ರ್ಯಾಂಡ್ ಕೆಲ ಸೀಮಿತ ಪ್ರದೇಶಗಳಲ್ಲಿ ಮಾತ್ರ ತನ್ನ ವ್ಯಾಪ್ತಿ ಹೊಂದಿತ್ತು. ಅಂತಹ ಸಮಯದಲ್ಲಿದ್ದ ಮೂಲ ಟೆಸ್ಲಾ ರೋಡ್‌ಸ್ಟರ್‌ನ ರೂಪದಲ್ಲಿದ್ದ ವೇಗವಾದ EV ಉತ್ಪನ್ನವನ್ನು ವಿಲ್ ಸ್ಮಿತ್ ಹೊಂದಿದ್ದಾರೆ. ಈ ಮಾದರಿಯು ಕೇವಲ ಕೆಲವರೇ ಸೆಲಬ್ರಿಟಿಗಳು ಹೊಂದಿದ್ದಾರೆ. ಈ ವಾಹನ ಲೋಟಸ್ ಎಲಿಸ್ ಚಾಸಿಸ್ ಅನ್ನು ಆಧರಿಸಿ, ಟೆಸ್ಲಾ ರೋಡ್‌ಸ್ಟರ್‌ನ ಎಲೆಕ್ಟ್ರಿಕ್ ಮೋಟಾರ್ 288 Bhp ಶಕ್ತಿಯನ್ನು ಉತ್ಪಾದಿಸುತ್ತದೆ.

6. BMW i8
ರೋಡ್‌ಸ್ಟರ್ EVಯ ಹೊರತಾಗಿ, ಹಾಲಿವುಡ್ ನಟ ವಿಲ್‌ಸ್ಮಿತ್ BMW i8 ರೂಪದಲ್ಲಿ ಪ್ಲಗ್-ಇನ್-ಹೈಬ್ರಿಡ್ ಕಾರನ್ನು ಸಹ ಹೊಂದಿದ್ದಾರೆ. ಇದು ಬಿಎಂಡಬ್ಲ್ಯು ಹೈ ಎಂಡ್ ಮಾಡಲ್‌ಗಳಲ್ಲಿ ಒಂದಾಗಿದ್ದು, ಹಲವು ಐಷಾರಾಮಿ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಫ್ಯೂಚರಿಸ್ಟಿಕ್ ಲುಕ್ ಸ್ಪೋರ್ಟ್ಸ್ ಕಾರು 1.5-ಲೀಟರ್ ಟರ್ಬೋಚಾರ್ಜ್ಡ್ ಇನ್‌ಲೈನ್ ಮೂರು ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದ್ದು, 369 bhp ಶಕ್ತಿಯನ್ನು ಉತ್ಪಾದಿಸುತ್ತದೆ ಮತ್ತು ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ ಜೋಡಿಸಲಾಗಿದೆ.

7. ಕ್ಯಾಡಿಲಾಕ್ ಎಸ್ಕಲೇಡ್ ESV
ಕ್ಯಾಡಿಲಾಕ್ ಕಾರನ್ನು ಹೊಂದಿರುವ ಕೆಲವೇ ಕೆಲವು ಹಾಲಿವುಡ್ ಸೆಲೆಬ್ರಿಟಿಗಳಲ್ಲಿ ವಿಲ್ ಸ್ಮಿತ್ ಒಬ್ಬರು. ಈ ಕಾರು ತನ್ನ ದೈತ್ಯ ಆಕಾರದಿಂದಲೇ ಎಲ್ಲರ ಗಮನಸೆಳೆಯುತ್ತದೆ. ಇದರಲ್ಲಿರುವ ತಂತ್ರಜ್ಞ್ಯಾನ ಮತ್ತು ಐಷಾರಾಮಿ ಫೀಚರ್‌ಗಳಿಂದಲೇ ದುಬಾರಿ ಕಾರು ಎಂದು ಖ್ಯಾತಿ ಪಡೆದುಕೊಂಡಿದೆ. ಇದು ಪ್ರಾಮಾಣಿಕ ಮತ್ತು ಬುಚ್ ನಿಲುವು ಹೊಂದಿರುವ ಸ್ಥಿತಿ ಸಂಕೇತದ ಕಾರಾಗಿದ್ದು, 5.3L LM7 ವೋರ್ಟೆಕ್ಸ್ V8 ಎಂಜಿನ್ ಅನ್ನು ಒಳಗೊಂಡಿದೆ, ಇದು 420 Bhp ಶಕ್ತಿಯನ್ನು ಉತ್ಪಾದಿಸಬಲ್ಲದು.


Click it and Unblock the Notifications








