ನಾಗಪ್ಪನಿಗೆ ಉಳಿಯಲು ಜಾಗವೇ ಸಿಗಲಿಲ್ಲ ನೋಡಿ... ಸ್ಕೂಟರ್ ಮಾಲೀಕನಿಗೆ ತಿಳಿಯದೆ ಫುಲ್ ರೌಂಡಿಂಗ್ಸ್
ಚಲಿಸುವ ಕಾರಿನಲ್ಲಿ ಅಥವಾ ಮನೆಯ ಹೊರಗೆ ನಿಲ್ಲಿಸಿದ ವಾಹನದಲ್ಲಿ ಹಾವುಗಳು ಸೇರಿಕೊಂಡ ಹಲವಾರು ನಿದರ್ಶನಗಳನ್ನು ನಾವು ಈಗಾಗಲೇ ನೋಡಿದ್ದೇವೆ. ಹೆಚ್ಚಿನ ಸಂದರ್ಭಗಳಲ್ಲಿ ವಿಷಕಾರಿಯಲ್ಲದ ಹಾವುಗಳಿಂದ ಹಲವರು ಜೀವ ಉಳಿಸಿಕೊಂಡಿದ್ದಾರೆ. ಆದರೆ ನಾಗರಹಾವಿನಂತಹ ವಿಷಕಾರಿ ಹಾವುಗಳಿದ್ದರೆ ನಮ್ಮ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ.
ಇತ್ತೀಚೆಗೆ ಹೋಂಡಾ ಆಕ್ಟಿವಾದಲ್ಲಿ ಆಶ್ರಯ ಪಡೆದಿದ್ದ ನಾಗರಹಾವನ್ನು ಅದೃಷ್ಟವಶಾತ್ ಮಾಲೀಕ ಹಾನಿಗೊಳಿಸುವ ಮುನ್ನವೇ ಕಂಡುಕೊಂಡಿದ್ದಾರೆ. ಹಾವನ್ನು ಸೆರೆಹಿಡಿದು ರಕ್ಷಣೆ ಮಾಡಲಾಗಿದ್ದು, ಈ ಕುರಿತ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋವನ್ನು jobinkmani_jantm ಎಂಬುವರು ತಮ್ಮ Instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಕುರಿತ ಹೆಚ್ಚಿನ ವಿವರಗಳನ್ನು ಇಲ್ಲಿ ನೋಡೋಣ.

ಕೇರಳದಲ್ಲಿ ಘಟನೆ ನಡೆದಿದ್ದು, ಹೋಂಡಾ ಆಕ್ಟಿವಾವನ್ನು ಮನೆಯ ಹೊರಗೆ ನಿಲ್ಲಿಸಿದ್ದಾಗ ಹಾವು ಸ್ಕೂಟರ್‌ನಲ್ಲಿ ಸೇರಿಕೊಂಡಿದೆ ಎಂದು ತಿಳಿದುಬಂದಿದೆ. ಸ್ಕೂಟರ್ ಮುಂಭಾಗದ ಶೀಲ್ಡ್ ಕವರ್‌ನಿಂದ ಬಾಲ ಅಂಟಿಕೊಂಡಿರುವುದನ್ನು ಗಮನಿಸಿದ ಸ್ಕೂಟರ್ ಮಾಲೀಕರು ಹಾವು ಇದೆಯೆಂದು ಅರಿತುಕೊಂಡಿದ್ದಾರೆ. ಹೀಗೆ ಬಿಟ್ಟರೆ ಅಪಾಯ ಖಚಿತವೆಂದುಕೊಂಡ ಅವರು ಶೀಘ್ರ ಪರಿಣಿತ ಸರ್ಪ ರಕ್ಷಕರನ್ನು ಕರೆತಂದಿದ್ದಾರೆ.
ಕೂಡಲೇ ಸ್ಥಳಕ್ಕೆ ತಲುಪಿದ ಹಾವು ರಕ್ಷಕರು ಸ್ಕೂಟರ್‌ನ ಮುಂಭಾಗದ ಶೀಲ್ಡ್ ಕವರ್ ಅನ್ನು ಎಚ್ಚರಿಕೆಯಿಂದ ಬಿಚ್ಚಿದ್ದಾರೆ. ಕವರ್ ತೆಗೆಯುತ್ತಿದ್ದಂತೆ ಅದರೊಳಗೆ ಹಾವು ಭಯಾನಕ ರೀತಿಯಲ್ಲಿ ಸುತ್ತಿಕೊಂಡಿರುವುದು ಕಾಣಿಸಿದೆ. ಇದು ನಾಗರಹಾಗಿದ್ದು, ಅತ್ಯಂತ ವಿಷಕಾರಿ ಎಂದು ಹಾವು ಹಿಡಿಯುವವರು ವೀಡಿಯೊದಲ್ಲಿ ಹೇಳುವುದನ್ನು ನಾವು ಕೇಳಬಹುದು.

ಮೊದಲು ಬಾಲವನ್ನು ಹಿಡಿಯಲು ಪ್ರಯತ್ನಿಸಿದರಾದರು, ಹಾವು ಜಾರಿ ಅಲ್ಲಿಂದ ತ್ವರಿತವಾಗಿ ಚಲಿಸಿ ಫಲಕದೊಳಗೆ ಸುತ್ತಿಕೊಂಡಿತು. ನಂತರ ಹಾವಿನ ತಲೆಯನ್ನು ಪತ್ತೆಹಚ್ಚಿ ಎರಡನೇ ಪ್ರಯತ್ನದಲ್ಲಿ ಎಚ್ಚರಿಕೆಯಿಂದ ಹಾವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಹಾವು ಹಿಡಿಯುವವರ ಪ್ರಕಾರ ಸ್ಕೂಟರ್ ಮುಂಭಾಗದ ದೇಹದ ಕವರ್‌ನ ಕೆಳಗಿನ ಭಾಗದಲ್ಲಿರುವ ಅಂತರದ ಮೂಲಕ ಹಾವು ಪ್ರವೇಶಿಸಿದೆ. ಮಾಲೀಕರು ಆಗಾಗ್ಗೆ ಇದನ್ನು ಪರಿಶೀಲಿಸಬೇಕು ಎಂದು ಅವರು ಎಲ್ಲಾ ಸ್ಕೂಟರ್ ಮಾಲೀಕರಿಗೆ ಎಚ್ಚರಿಸಿದ್ದಾರೆ.
ಹಾವು ಹೊರಬರಲು ಪ್ರಾರಂಭಿಸಿದ ಬಳಿಕ ತಪ್ಪಿಸಿಕೊಳ್ಳಲು ಪ್ರಯತ್ನಿಸಿದೆ. ಶೀಘ್ರದಲ್ಲೇ ಸ್ಕೂಟರ್‌ನಿಂದ ತೆವಳುತ್ತಾ ಅಡಗಿಕೊಳ್ಳಲು ಮತ್ತೊಂದು ಸ್ಥಳವನ್ನು ಹುಡುಕಿದೆ. ಆದ್ರೆ ಸುರಕ್ಷಿತವಾಗಿ ಹಾವನ್ನು ಸೆರೆಹಿಡಿದು ಗೋಣಿಚೀಲಕ್ಕೆ ಬಿಟ್ಟಿದ್ದಾರೆ. ಸ್ಕೂಟರ್‌ನೊಳಗೆ ಹಾವು ಕಾಣಿಸಿಕೊಂಡಾಗ ಮಳೆ ಸುರಿಯುತ್ತಿರುವುದನ್ನು ನಾವು ನೋಡಬಹುದು. ಮಳೆಗಾಲದಲ್ಲಿ ಹಾವುಗಳು ಹೊರಬಂದು ಬೆಚ್ಚಗಿನ ಸ್ಥಳಗಳನ್ನು ಹುಡುಕಿಕೊಳ್ಳುವುದು ಎಲ್ಲರಿಗೂ ತಿಳಿದೆ ಇದೆ.

ಹಾವುಗಳು ಶೀತ-ರಕ್ತದ ಪ್ರಾಣಿಗಳು. ಪರಿಸರ ತಣ್ಣಗಾದಾಗ ದೇಹದ ಉಷ್ಣತೆಯನ್ನು ಕಾಯ್ದುಕೊಳ್ಳಲು ಆಗಾಗ್ಗೆ ಶಾಖವನ್ನು ಹುಡುಕಿಕೊಂಡು ಹೊರಬರುತ್ತವೆ. ಒಣ ಮತ್ತು ಬೆಚ್ಚಗಿನ ಸ್ಥಳವನ್ನು ಹುಡುಕಿಕೊಂಡು ಹಾವು ಸ್ಕೂಟರ್‌ಗೆ ಸೇರಿರುವ ಸಾಧ್ಯತೆಯಿದೆ. ನಿಮಗೂ ಇಂತಹ ಪರಿಸ್ಥಿತಿ ಎದುರಾದರೆ ಸ್ವತಃ ನೀವೇ ತೆಗೆದುಹಾಕಲು ಎಂದಿಗೂ ಪ್ರಯತ್ನಿಸಬೇಡಿ, ಏಕೆಂದರೆ ಅದು ಅಪಾಯಕಾರಿ.
ಯಾವಾಗಲೂ ವೃತ್ತಿಪರರಿಂದ ಸಹಾಯ ಪಡೆಯಿರಿ. ಅಲ್ಲದೆ, ಉದ್ದೇಶಪೂರ್ವಕವಾಗಿ ಈ ಜೀವಿಗಳಿಗೆ ಹಾನಿ ಮಾಡಲು ಅಥವಾ ಕೊಲ್ಲಲು ಪ್ರಯತ್ನಿಸಬೇಡಿ, ಏಕೆಂದರೆ ಅರಣ್ಯ ಇಲಾಖೆಯು ನಿಮ್ಮ ವಿರುದ್ಧ ಕಾನೂನು ಕ್ರಮವನ್ನು ತೆಗೆದುಕೊಳ್ಳಬಹುದು. ಜೊತೆಗೆ ಮಳೆಗಾಲದಲ್ಲಿ ತಮ್ಮ ವಾಹನಗಳನ್ನು ಆಗಾಗ್ಗೆ ಪರಿಶೀಲಿಸುವುದು ತುಂಬಾ ಮುಖ್ಯ. ಹಾಗೇ ಬಿಟ್ಟರೆ ಜೀವಕ್ಕೆ ಕುತ್ತು ಖಚಿತ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications