Car Accident: ರಣ ಭಯಂಕರ ವೇಗದಲ್ಲಿ ಮಹೀಂದ್ರಾ ಬೊಲೆರೊಗೆ ಡಿಕ್ಕಿ ಹೊಡೆದ ಹೋಂಡಾ ಸಿಟಿ.. ಮುಂದೇನಾಯ್ತು?
ಭಾರತದಲ್ಲಿ ಅಜಾಗರೂಕ ಚಾಲನೆಯಿಂದ ಪ್ರತಿದಿನ ಒಂದಿಲ್ಲೊಂದು ಅಪಘಾತಗಳು ವರದಿಯಾಗುತ್ತಿರುತ್ತದೆ. ಇಂತಹ ಘಟನೆಗಳಲ್ಲಿ ಎಷ್ಟೋ ಮಂದಿ ಅಮಾಯಕರೂ ಬೇರೆಯವರ ತಪ್ಪಿನಿಂದ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಜೊತೆಗೆ ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾಗಿರುವ ಹಲವು ಉದಾಹರಣೆಯನ್ನು ನಾವು ನೋಡಿದ್ದೇವೆ. ಅಂತಹದ್ದೇ ಭೀಕರ ಆಕ್ಸಿಡೆಂಟ್ ಉತ್ತರ ಪ್ರದೇಶದಲ್ಲಿ ನಡೆದಿದೆ.
ಇಲ್ಲಿನ ಸಹರಾನ್‌ಪುರ ಎಂಬಲ್ಲಿ ಮಹೀಂದ್ರಾ ಬೊಲೆರೊಗೆ ಹೋಂಡಾ ಸಿಟಿ ಕಾರೊಂದು ಭಾರೀ ವೇಗದಲ್ಲಿ ಬಂದು ಗುದ್ದಿರುವ ಸಿಸಿಟಿವಿ ದೃಶ್ಯಾವಳಿ ವಿಡಿಯೋವನ್ನು ಯೂಟ್ಯೂಬ್ ವಾಹಿನಿಯೊಂದರಲ್ಲಿ ಹಂಚಿಕೊಳ್ಳಲಾಗಿದೆ. ಸದ್ಯ, ಎಲ್ಲೆಡೆ ವೈರಲ್ ಆಗಿದೆ. ಈ ದೃಶ್ಯಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಮಹೀಂದ್ರಾ ಬೊಲೆರೊ ಸರ್ಕಾರಿ ವಾಹನವೆಂದು ಗೊತ್ತಾಗುತ್ತದೆ. ನಿಧಾನವಾಗಿ ಕಚೇರಿ ಆವರಣವನ್ನು ಪ್ರವೇಶಿಸಬೇಕಾದರೆ, ಹೋಂಡಾ ಸಿಟಿ ಕಾರು ಡಿಕ್ಕಿ ಹೊಡೆದಿದೆ.

ಪರಿಣಾಮ, ಬೊಲೆರೊ ಸೀದಾ ಕಚೇರಿಗೆ ಆವರಣದ ಗೇಟ್‌ಗೆ ಅಪ್ಪಲಿದ್ದು, ಅದರ ಸೈಡ್ ಫ್ರೋಫೈಲ್ ಸಂಪೂರ್ಣ ಜಖಂಗೊಂಡಿದೆ. ಅಲ್ಲದೆ, ವೇಗವಾಗಿ ಗುದ್ದಿದ ರಭಸಕ್ಕೆ ಹೋಂಡಾ ಸಿಟಿ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಬೊಲೆರೊದಲ್ಲಿದ್ದ ಸರ್ಕಾರಿ ಅಧಿಕಾರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೊಂಡಾ ಸಿಟಿ ಚಾಲಕ ಕಾರನ್ನು ಅಪಘಾತ ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ.
ನಗರ ಪ್ರದೇಶದಲ್ಲಿ ನಿರ್ಧಿಷ್ಟ ಮಿತಿಯಲ್ಲಿ ವಾಹನ ಚಲಾಯಿಸಬೇಕೆಂಬ ನಿಯಮವಿರುತ್ತದೆ. ಹೋಂಡಾ ಸಿಟಿ ಚಾಲಕ ಅದನ್ನು ಪಾಲಿಸಿದ್ದರೆ ಈ ಅಪಘಾತವನ್ನು ತಪ್ಪಿಸಬಹುದಿತ್ತು. ಆ ಬಗ್ಗೆ ಆತನನಿಗೆ ಪರಿವೇ ಇಲ್ಲವೆಂಬಂತೆ ಕಾರನ್ನು ಓಡಿಸಿದ್ದಾನೆ. ಅಲ್ಲದೆ, ಮದ್ಯದ ಅಮಲಿನಲ್ಲಿದ್ದಾನೆಯೇ, ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ. ಇಲ್ಲಿ ಕಾರುಗಳ ಸುರಕ್ಷತೆ ವಿಚಾರ ಪ್ರಶ್ನೆಯಾವಾವುದಿಲ್ಲ. ಬದಲಾಗಿ ವಿಡಿಯೋ ನೋಡಿದಾಗ ಬಹುತೇಕ ಕಾರಿನ ಚಾಲಕನ ಅಜಾಗರೂಕತೆ ಎಂಬುದು ತಿಳಿಯುತ್ತದೆ.
ಅಧ್ಯಯನವೊಂದರ ವರದಿ ಪ್ರಕಾರ, ಭಾರತವು ಅತ್ಯಂತ ಕೆಟ್ಟ ಚಾಲಕರನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ದೇಶದಲ್ಲಿ ಅಧಿಕ ಅಪಘಾತವಾಗುವ ಬೃಹತ್ ನಗರಗಳ ಪಟ್ಟಿಯಲ್ಲಿ ನವದೆಹಲಿ ಮೊದಲ ಸ್ಥಾನದಲ್ಲಿದ್ದು, ನಂತರ, ಮುಂಬೈ, ಬೆಂಗಳೂರು, ಚೆನ್ನೈ ಹಾಗೂ ಹೈದರಾಬಾದ್ ನಗರಗಳಿವೆ. ಬೆಂಗಳೂರಿನಲ್ಲಿ ಕಡಿಮೆ ಸಂಖ್ಯೆಯಲ್ಲಿ ಅಪಘಾತ ಪ್ರಕರಣಗಳು ವರದಿಯಾಗುತ್ತವೆ ಎಂಬುದೇನೋ ನಿಜ. ಆದರೆ, ಸಂಚಾರ ದಟ್ಟಣೆ ಇಲ್ಲಿನ ಜನರಿಗೆ ತಲೆನೋವು ತಂದಿದೆ.
ಅಪಘಾತ ತಡೆಯಲು ಮುನ್ನೆಚ್ಚರಿಕೆಗಳೇನು: ಸಂಚಾರಿ ನಿಯಮಗಳನ್ನು ಪಾಲಿಸಿಸುವ ಮೂಲಕ ದೊಡ್ಡ ಮಟ್ಟದ ಅಪಘಾತಗಳನ್ನು ತಪ್ಪಿಬಹುದು. ಟ್ರಾಫಿಕ್ ರೋಲ್ಸ್ ಪಾಲನೆಯೆಂದರೆ ಕೇವಲ ಸಿಗ್ನಲ್ ಗಳಲ್ಲಿ ನಿಲ್ಲುವುದು ಮಾತ್ರವಷ್ಟೇ ಅಲ್ಲ. ರಸ್ತೆಗಳಲ್ಲಿ ನಿಗದಿಪಡಿಸಿರುವ ವೇಗ ಮಿತಿಯಲ್ಲಿ ವಾಹನ ಚಲಾಯಿಸುವುದು. ಕಾರುಗಳಲ್ಲಿ ಪ್ರಯಾಣಿಸುವಾಗ ಕಡ್ಡಾಯವಾಗಿ ಸೀಟ್‌ಬೆಲ್ಟ್ ಧರಿಸುವುದು. ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವಾಗ ಹೆಲ್ಮೆಟ್ ಹಾಕುವುದು.
ಇದಿಷ್ಟೇ ಅಲ್ಲದೆ, ವಾಹನವನ್ನು ನಿಮ್ಮ ಮೋಜಿಗಾಗಿ ವೇಗವಾಗಿ ಓಡಿಸಬೇಡಿ.ಮದ್ಯಪಾನ ಮಾಡಿ, ಎಂದಿಗೂ ವಾಹನ ಚಲಾಯಿಸಬೇಡಿ. ಜೊತೆಗೆ ಡ್ರೈವ್ ಮಾಡುವಾಗ ಮೊಬೈಲ್ ಏರ್ ಫೋನ್ ಬಳಕೆ ಮಾಡದಿರಿ. ಮುಖ್ಯವಾಗಿ, ನಿಮ್ಮ ವಾಹನದಲ್ಲಿರುವ ಎಲ್ಲ ಸುರಕ್ಷಿತ ಸಾಧನಗಳು ಸರಿಯಾಗಿ ಕೆಲಸ ಮಾಡುತ್ತವೆಯೇ ಎಂದು ಪರಿಶೀಲಿಸಿ. ಜೊತೆಗೆ ಪ್ರತಿಯೊಬ್ಬರ ಜೀವವು ಅಮೂಲ್ಯವೆಂಬುದನ್ನು ತಿಳಿದು ವಾಹನ ಚಲಿಯಿಸಿ. ಯಾವುದಕ್ಕೂ ನಿಮ್ಮ ಎಚ್ಚರಿಕೆಯಲ್ಲಿ ಇರಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications