ಕರೋನಾ ವೈರಸ್ ಎಫೆಕ್ಟ್: ವಿಮಾನ ಪ್ರಯಾಣಕ್ಕೂ ಮುನ್ನ ಪ್ರಯಾಣಿಕರನ್ನು ಪರೀಕ್ಷಿಸಲಿದೆ ಈ ಆಂಟಿಸೆಪ್ಟಿಕ್‌ ರೋಬೊಟ್

ಕರೋನಾ ವೈರಸ್ ಇಡೀ ಮಾನವ ಜನಾಂಗವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಆರಂಭದಲ್ಲಿ ಸುರಕ್ಷಾ ಕ್ರಮಗಳನ್ನು ಕೈಗೊಳ್ಳದ ದೇಶಗಳು ಹೆಚ್ಚು ಹಾನಿಯನ್ನು ಅನುಭವಿಸಿವೆ. ಈ ದೇಶಗಳಲ್ಲಿ ಬೇರೆ ದೇಶಗಳಿಗೆ ಹೊಲಿಸಿದರೆ ಹೆಚ್ಚಿನ ಪ್ರಮಾಣದ ಜೀವ ಹಾನಿಯಾಗಿದೆ.

ಕರೋನಾ ವೈರಸ್ ಎಫೆಕ್ಟ್: ವಿಮಾನ ಪ್ರಯಾಣಕ್ಕೂ ಮುನ್ನ ಪ್ರಯಾಣಿಕರನ್ನು ಪರೀಕ್ಷಿಸಲಿದೆ ಈ ಆಂಟಿಸೆಪ್ಟಿಕ್‌ ರೋಬೊಟ್

ಆರಂಭದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಂಡ ದೇಶಗಳಲ್ಲಿ ಹೆಚ್ಚಿನ ಪ್ರಮಾಣದ ಹಾನಿಯಾಗಿಲ್ಲ. ಹಾಂಗ್ ಕಾಂಗ್ ವಿಮಾನ ನಿಲ್ದಾಣದಲ್ಲಿಯೂ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕರೋನಾ ವೈರಸ್ ಆರಂಭದಲ್ಲಿ ಚೀನಾದ ವುಹಾನ್‌ ನಗರದಲ್ಲಿ ಕಂಡು ಬಂತು. ನಂತರ ಪ್ರಪಂಚದಾದ್ಯಂತ ಹರಡಿತು. ಈ ರೀತಿ ಹರಡಲು ವಿಮಾನಗಳು ಮುಖ್ಯ ಕಾರಣವಾಗಿವೆ.

ಕರೋನಾ ವೈರಸ್ ಎಫೆಕ್ಟ್: ವಿಮಾನ ಪ್ರಯಾಣಕ್ಕೂ ಮುನ್ನ ಪ್ರಯಾಣಿಕರನ್ನು ಪರೀಕ್ಷಿಸಲಿದೆ ಈ ಆಂಟಿಸೆಪ್ಟಿಕ್‌ ರೋಬೊಟ್

ಈ ಹಿಂದೆ ಯಾವುದೇ ವೈರಸ್ ಆಗಲಿ, ಬ್ಯಾಕ್ಟೀರಿಯ ಆಗಲಿ ಅಥವಾ ಸೂಕ್ಷ್ಮಾಣುಜೀವಿಗಳಾಗಲಿ ನಿರ್ದಿಷ್ಟ ಸಮುದಾಯಗಳ ನಡುವೆ ಮಾತ್ರ ಹರಡುತ್ತಿದ್ದವು. ಆದರೆ ಕರೋನಾ ವೈರಸ್ ಪ್ರಪಂಚದಾದ್ಯಂತ ಹರಡುತ್ತಿದೆ. ವಿಮಾನಗಳು ಇದಕ್ಕೆ ಕಾರಣವಾಗಿವೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಕರೋನಾ ವೈರಸ್ ಎಫೆಕ್ಟ್: ವಿಮಾನ ಪ್ರಯಾಣಕ್ಕೂ ಮುನ್ನ ಪ್ರಯಾಣಿಕರನ್ನು ಪರೀಕ್ಷಿಸಲಿದೆ ಈ ಆಂಟಿಸೆಪ್ಟಿಕ್‌ ರೋಬೊಟ್

ಆಧುನಿಕ ಯುಗದಲ್ಲಿ ಮನುಷ್ಯನು ಕೆಲವೇ ತಾಸುಗಳಲ್ಲಿ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಪ್ರಯಾಣ ಬೆಳೆಸುತ್ತಾನೆ. ಈ ಕ್ಷಿಪ್ರ ಬೆಳವಣಿಗೆಯೇ ಕರೋನಾ ವೈರಸ್ ವೇಗವಾಗಿ ಹರಡಲು ಕಾರಣವಾಗಿದೆ. ವೈರಸ್ ಹರಡದಂತೆ ತಡೆಯಲು, ಹಾಂಗ್ ಕಾಂಗ್ ವಿಮಾನ ನಿಲ್ದಾಣದಲ್ಲಿ ಆಟೋಮ್ಯಾಟಿಕ್ ಆಂಟಿಸೆಪ್ಟಿಕ್ ಸೆಂಟರ್‌ಗಳನ್ನು ತೆರೆಯಲಾಗಿದೆ.

ಕರೋನಾ ವೈರಸ್ ಎಫೆಕ್ಟ್: ವಿಮಾನ ಪ್ರಯಾಣಕ್ಕೂ ಮುನ್ನ ಪ್ರಯಾಣಿಕರನ್ನು ಪರೀಕ್ಷಿಸಲಿದೆ ಈ ಆಂಟಿಸೆಪ್ಟಿಕ್‌ ರೋಬೊಟ್

ಈ ಸೆಂಟರ್‌ಗಳಲ್ಲಿ ವಿದೇಶಗಳಿಂದ ಬರುವ ಜನರನ್ನು ಕೂಲಂಕಷವಾಗಿ ಪರೀಕ್ಷಿಸಿ ವೈರಸ್‌ಗಳಿದ್ದರೆ ನಿರ್ಮೂಲನೆ ಮಾಡಲು ಸಹಾಯ ಮಾಡಲಾಗುತ್ತದೆ. ಇದು ಕೆಮಿಕಲ್ ಸ್ನಾನವಾಗಿದೆ. ವಾಹನಗಳನ್ನು ಸ್ವಚ್ವಗೊಳಿಸುವಂತೆ ಈ ರೋಬೋಟ್ ಯಂತ್ರವು ಮನುಷ್ಯರನ್ನು ಆಂಟಿಸೆಪ್ಟಿಕ್‌ಗಳಿಂದ ಸ್ವಚ್ವಗೊಳಿಸುತ್ತದೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಕರೋನಾ ವೈರಸ್ ಎಫೆಕ್ಟ್: ವಿಮಾನ ಪ್ರಯಾಣಕ್ಕೂ ಮುನ್ನ ಪ್ರಯಾಣಿಕರನ್ನು ಪರೀಕ್ಷಿಸಲಿದೆ ಈ ಆಂಟಿಸೆಪ್ಟಿಕ್‌ ರೋಬೊಟ್

ಕೇವಲ 40 ಸೆಕೆಂಡುಗಳಲ್ಲಿ ಮನುಷ್ಯರನ್ನು ಸ್ವಚ್ವಗೊಳಿಸುವುದರಿಂದ ಹೆಚ್ಚು ಹೊತ್ತು ಕಾಯುವ ಅಗತ್ಯವಿಲ್ಲ. ಹಾಂಗ್ ಕಾಂಗ್ ವಿಮಾನ ನಿಲ್ದಾಣದ ಅಧಿಕಾರಿಗಳು ವೈರಸ್ ಹೆಚ್ಚಾಗಿ ಹರಡುತ್ತಿರುವುದರಿಂದ ಈ ಆಂಟಿಸೆಪ್ಟಿಕ್‌ ಉಪಕರಣಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಅಳವಡಿಸಲು ಯೋಜಿಸುತ್ತಿದ್ದಾರೆ.

ಕರೋನಾ ವೈರಸ್ ಎಫೆಕ್ಟ್: ವಿಮಾನ ಪ್ರಯಾಣಕ್ಕೂ ಮುನ್ನ ಪ್ರಯಾಣಿಕರನ್ನು ಪರೀಕ್ಷಿಸಲಿದೆ ಈ ಆಂಟಿಸೆಪ್ಟಿಕ್‌ ರೋಬೊಟ್

ಆಂಟಿಸೆಪ್ಟಿಕ್‌ ಮಿಷಿನ್‌ಗಳನ್ನು ಅಳವಡಿಸುವುದು ಟೆಲಿಫೋನ್ ಬೂತ್‌ಗಳನ್ನು ಅಳವಡಿಸುವುದಕ್ಕಿಂತ ಸುಲಭದ ಕೆಲಸವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಈ ರೀತಿಯ ಮಿಷಿನ್‌ಗಳ ಅಗತ್ಯವಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಕರೋನಾ ವೈರಸ್ ಎಫೆಕ್ಟ್: ವಿಮಾನ ಪ್ರಯಾಣಕ್ಕೂ ಮುನ್ನ ಪ್ರಯಾಣಿಕರನ್ನು ಪರೀಕ್ಷಿಸಲಿದೆ ಈ ಆಂಟಿಸೆಪ್ಟಿಕ್‌ ರೋಬೊಟ್

ಮಿಷಿನ್‌ಗಳ ಒಳ ಭಾಗದಲ್ಲಿರುವ ಆಂಟಿ-ಮೈಕ್ರೊಬಿಯಲ್ ಕೋಟಿಂಗ್ ವೈರಸ್‌ ಹಾಗೂ ಬ್ಯಾಕ್ಟೀರಿಯಾಗಳನ್ನು ಆಟೋಮ್ಯಾಟಿಕ್ ಆಗಿ ನಾಶಪಡಿಸುತ್ತದೆ. ಕ್ಯಾಟಲಿಸ್ಟ್ ಹಾಗೂ ನ್ಯಾನೊ ನೀಡಲ್ ಟೆಕ್ನಾಲಜಿಗಳಿಂದ ಈ ಮಿಷಿನ್‌ಗಳು ಮಾನವ ದೇಹ ಹಾಗೂ ಬಟ್ಟೆಗಳನ್ನು ಸೋಂಕಿನಿಂದ ಮುಕ್ತಗೊಳಿಸುತ್ತವೆ.

ಕರೋನಾ ವೈರಸ್ ಎಫೆಕ್ಟ್: ವಿಮಾನ ಪ್ರಯಾಣಕ್ಕೂ ಮುನ್ನ ಪ್ರಯಾಣಿಕರನ್ನು ಪರೀಕ್ಷಿಸಲಿದೆ ಈ ಆಂಟಿಸೆಪ್ಟಿಕ್‌ ರೋಬೊಟ್

ಪ್ರಪಂಚದಲ್ಲಿಯೇ ಮೊದಲ ಬಾರಿಗೆ ವಿಮಾನ ನಿಲ್ದಾಣಗಳಲ್ಲಿ ಈ ಸೌಲಭ್ಯವನ್ನು ತರಲಾಗಿದೆ. ಈ ಕಾರಣಕ್ಕೆ ಪ್ರಪಂಚದ ಬಹುತೇಕ ದೇಶಗಳು ಹಾಂಗ್ ಕಾಂಗ್ ವಿಮಾನ ನಿಲ್ದಾಣದತ್ತ ಗಮನ ಹರಿಸಿವೆ. ಈ ಯಂತ್ರಗಳನ್ನು ಪ್ರಯಾಣಿಕರ ಸುರಕ್ಷತೆಗಾಗಿ ಬಳಸಲಾಗುತ್ತದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಉದ್ಯೋಗಿಗಳು ಕೆಲಸದ ಅವಧಿಯಲ್ಲಿ ಫೇಸ್ ಶೀಲ್ಡ್‌ಗಳನ್ನು ಧರಿಸುತ್ತಾರೆ. ಆದರೆ ಹೊರಗೆ ವೈರಸ್‌ ಸೋಂಕಿಗೆ ಒಳಗಾಗುತ್ತಾರೆ. ಆದ್ದರಿಂದ, ಈ ಆಂಟಿಸೆಪ್ಟಿಕ್‌ ಮಿಷಿನ್‌ಗಳನ್ನು ನೌಕರರಿಗೂ ಸಹ ಬಳಸಲಾಗುತ್ತದೆ.

ಕರೋನಾ ವೈರಸ್ ಎಫೆಕ್ಟ್: ವಿಮಾನ ಪ್ರಯಾಣಕ್ಕೂ ಮುನ್ನ ಪ್ರಯಾಣಿಕರನ್ನು ಪರೀಕ್ಷಿಸಲಿದೆ ಈ ಆಂಟಿಸೆಪ್ಟಿಕ್‌ ರೋಬೊಟ್

ಯಂತ್ರದ ಒಳ ಭಾಗವು ಗಡಿಯಾರದಂತಿದೆ. ಈ ಕಾರಣಕ್ಕೆ 99.99%ನಷ್ಟು ಸ್ಟರಿಲೈಜ್ ಮಾಡಲಾಗುತ್ತದೆ. ಈ ರೋಬೊಟ್ ಆಂಟಿಸೆಪ್ಟಿಕ್‌ ಮಿಷಿನ್‌ಗಳು ಅಲ್ಟ್ರಾ ವಯೋಲೆಟ್ ಲೈಟಿಂಗ್ ಹಾಗೂ ಏರ್ ಪ್ಯೂರಿಫಿಕೇಶನ್‌ಗಳನ್ನು ಹೊಂದಿವೆ.

Most Read Articles

Kannada
English summary
Hong Kong Airport unveils automatic full body disinfection robots. Read in Kannada.
Story first published: Thursday, April 30, 2020, 15:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X