ಒದ್ದೆಯಾದ ರಸ್ತೆಯಲ್ಲಿ ಕೋಕಾ ಕೋಲಾ ಬಂಡಿಯ ಬ್ರೇಕ್ ಡ್ಯಾನ್ಸ್
ಮಳೆಗಾಲದಲ್ಲಿ ರಸ್ತೆ ಒದ್ದೆಯಾಗಿರುವುದು ಸಾಮಾನ್ಯ. ಈ ಸಂದರ್ಭದಲ್ಲಿ ಅತೀವ ಜಾಗರೂಕತೆಯಿಂದ ವಾಹನ ಚಾಲನೆ ಮಾಡಬೇಕಾಗುತ್ತದೆ. ನಾವಿಂದು ಇಂತಹದೊಂದು ಘಟನೆಯ ಬಗ್ಗೆ ವೀಡಿಯೋ ಮೂಲಕ ಚರ್ಚಿಸಲಿದ್ದೇವೆ.
ಜಗತ್ತಿನ ಜನಪ್ರಿಯ ತಂಪು ಪಾನೀಯಗಳಲ್ಲಿ ಒಂದಾಗಿರುವ ಕೋಲಾ ಕೋಲಾ ವಿತರಣಾ ಟ್ರಕ್ ವಾಹನವೊಂದು ಇಂತಹದೊಂದು ಅಪಘಾತದಿಂದ ಕೂದಲೆಳೆಯ ಅಂತರದಲ್ಲಿ ಪಾರಾಗುವುದನ್ನು ನಾವಿಲ್ಲಿ ನೋಡಬಹುದು.

ಥಾಯ್ಲೆಂಡ್‌ನಲ್ಲಿ ಈ ಘಟನೆ ವರದಿಯಾಗಿದೆ. ಆದರೆ ನಾವಿಲ್ಲಿ ಕೋಕಾ ಕೋಲಾ ವಿತರಣೆ ಮಾಡುತ್ತಿರುವ ಚಾಲಕರ ಚಾಲನಾ ಕೌಶಲ್ಯವನ್ನು ಮೆಚ್ಚಲೇಬೇಕಾಗುತ್ತದೆ. ಇದಕ್ಕಿಂತಲೂ ಮಿಗಿಲಾಗಿ ಆತ ತೆಗೆದುಕೊಂಡಿರುವ ಸ್ಥೆರ್ಯವು ಮೆಚ್ಚುಗೆಗೆ ಪಾತ್ರವಾಗುತ್ತದೆ.
ಹಾಗಿದ್ದರೆ ಇನ್ಯಾಕೆ ತಡ ಕೆಳಗಡೆ ಕೂಡಲಾಗಿರುವ ವೀಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿ ಈ ರೋಚಕ ಘಟನೆಯನ್ನು ಸವಿಯಿರಿ. ಅಂತಿಮವಾಗಿ ನಿಮ್ಮ ಅಭಿಪ್ರಾಯಗಳನ್ನು ನಮ್ಮ ಜೊತೆ ಹಂಚಿಕೊಳ್ಳಲು ಮರೆಯದಿರಿ...


Click it and Unblock the Notifications








