HSRP ನಂಬರ್‌ಪ್ಲೇಟ್‌ ಅಪ್ಲೈ ಮಾಡುವುದು ಹೇಗೆ?: ದಂಡದಿಂದ ಪಾರಾಗಲು ಕೊನೆಯ ಅವಕಾಶ!

ಇತ್ತೀಚೆಗಷ್ಟೇ ಭಾರತ ಸರ್ಕಾರ ಇನ್ಮುಂದೆ ವಾಹನಗಳಲ್ಲಿ HSRP ಅಥವಾ ಹೈ ಸೆಕ್ಯೂರಿಟಿ ನಂಬರ್‌ ಪ್ಲೇಟ್‌ಗಳನ್ನು ಅಳವಡಿಸಬೇಕೆಂಬ ಆದೇಶವನ್ನು ಹೊರಡಿಸಿತ್ತು. ಇದನ್ನು ಹಲವಾರಿ ರಾಜ್ಯಗಳು ಈ ಕುರಿತಾಗಿ ಕ್ರಮ ಕೈಗೊಳ್ಳುತ್ತಿದ್ದರೂ ಕರ್ನಾಟಕ ರಾಜ್ಯ ಮಾತ್ರವೇ ಕಟ್ಟು ನಿಟ್ಟಾಗಿ ಇದನ್ನು ಅನುಸರಿಸುವತ್ತ ಹೆಜ್ಜೆ ಹಾಕಿದ್ದು ಫೆಬ್ರವರಿ 17 ರವರೆಗೆ ಗಡುವನ್ನೂ ವಿಸ್ತರಿಸಿದೆ.

ಹಲವರು ಎಚ್ಚೆತ್ತುಕೊಂಡು ತಮ್ಮ ವಾಹನಕ್ಕೆ HSRP ನಂಬರ್ ಪ್ಲೇಟ್‌ ಅನ್ನು ಹಾಕಿಸಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ತಮ್ಮ ವಾಹನಕ್ಕೆ ಈ ನಂಬರ್‌ ಪ್ಲೇಟ್ ಹಾಕಿಸಿಕೊಳ್ಳಬೇಕು ಎಂದಿದ್ದರೂ, ಅದು ಯಾವ ರೀತಿ ಎಂದು ತಿಳಿಯದೆ ಗೊಂದಲಕ್ಕೆ ಒಳಗಾಗಿ ಸುಮ್ಮನಿದ್ದಾರೆ. ಇಂದಿನ ಈ ಲೇಖನ ಅಂತಹವರಿಗಾಗಿ. ಯಾರೆಲ್ಲಾ ಈ ನಂಬರ್‌ ಪ್ಲೇಟ್‌ ಅನ್ನು ಹೇಗೆ ಪಡೆಯಬೇಕು ಎಂದು ಗೊಂದಲಕ್ಕೆ ಒಳಗಾಗಿದ್ದೀರೋ, ಅಂತಹವರು ಈ ಲೇಖನವನ್ನು ಕೊನೆಯವರೆಗೆ ಓದಿ.

HSRP Number Plate Application Process Steps You Need To Know

ಮಾಹಿತಿಗಳ ಪ್ರಕಾರ ಯಾವೆಲ್ಲಾ ವಾಹನಗಳು 2022, ಜುಲೈ ತಿಂಗಳ ನಂತರ ಮಾರಾಟವಾಗಿದೆಯೋ, ಅಂತಹ ವಾಹನಗಳಲ್ಲಿ ಈ ಹೈ ಸೆಕ್ಯೂರಿಟಿ ನಂಬರ್‌ ಪ್ಲೇಟ್‌ಗಳ ಜೊತೆಯೇ ಬಂದಿದೆ. ಕರ್ನಾಟಕದಂತಹ ರಾಜ್ಯಗಳು ಇದೀಗ ಈ ಹೈ ಸೆಕ್ಯೂರಿಟಿ ನಂಬರ್‌ ಪ್ಲೇಟ್‌ಗಳನ್ನು ಕಡ್ಡಾಯ ಗೊಳಿಸಿದ್ದು ಫೆಬ್ರವರಿ 17 ರ ನಂತರ ಯಾವೆಲ್ಲಾ ವಾಹನದಲ್ಲಿ ಈ ನಂಬರ್ ಪ್ಲೇಟ್‌ಗಳು ಇಲ್ಲವೋ, ಆ ವಾಹನದ ಮಾಲೀಕರಿಗೆ ಸುಮಾರು 500ರಿಂದ 1000 ವರೆಗೆ ದಂಡವನ್ನು ವಿಧಿಸಲಾಗುತ್ತದೆ.

ಇತ್ತೀಚಿನ ಮಾಹಿತಿಗಳ ಪ್ರಕಾರ ಸದ್ಯಕ್ಕೆ ನೀವು ಈ ಹೈ ಸೆಕ್ಯೂರಿಟಿ ನಂಬರ್‌ ಪ್ಲೇಟ್‌ಗಳನ್ನು ಪಡೆಯಲು ನೀವು ಕೇವಲ SIAM ಅಥವಾ ಸೊಸಯಟಿ ಆಫ್‌ ಇಂಡಿಯನ್‌ ಆಟೋಮೊಬೈಲ್‌ ಮಾನುಫಾಕ್ಚರ್ಸ್‌ ಔದ್ಯೋಗಿಕ ವೆಬ್‌ಸೈಟ್‌ನಲ್ಲಿ ಮಾತ್ರ ಸಾಧ್ಯ. HSRP ನಂಬರ್‌ ಪ್ಲೇಟ್‌ಗೆ ಅರ್ಜಿ ಹಾಕಲು ನೀವು ಆ ವೆಬ್‌ಸೈಟ್‌ನಲ್ಲಿ ಕೇಳುವ ಮಾಃಇತಿಗಳನ್ನು ತುಂಬಿಸಬೇಕಾಗುತ್ತದೆ. ಇದರಲ್ಲಿ ಸಾಧಾರಣವಾಗಿ ನಿಮ್ಮ ಹೆಸರು, ಈಮೈಲ್‌, ವಾಹನದ ನಂಬರ್, ಚೇಸಿಸ್‌ ನಂಬರ್‌, ರಾಜ್ಯದ ಹೆಸರು ಮತ್ತು ಇನ್ನಿತರ ಮಾಹಿತಿಗಳನ್ನು ನೀಡಬೇಕಾಗುತ್ತದೆ.

HSRP Number Plate Application Process Steps You Need To Know

ಇದರ ಜೊತೆಗೆ ಅಲ್ಲಿ ಕೇಳುವ ಮೊತ್ತವನ್ನು ಯುಪಿಐ ಅಥವಾ ಕ್ರೆಡಿಟ್‌, ಡೆಬಿಟ್‌ ಕಾರ್ಡ್‌ ಮೂಲಕ ಪಾವತಿಸಿದರೆ ನಿಮ್ಮ ಕೆಲಸ ಮುಗಿದಂತೆಯೇ. ಇದಾದ ಬಳಿಕ, ಮುಂದಿನ ಪೇಜ್‌ನಲ್ಲಿ ನಿಮ್ಮ ಜಿಲ್ಲೆ, ನಿಮ್ಮಲ್ಲಿರುವ ವಾಹನದ ಮಾದರಿ ದ್ವಿಚಕ್ರ ವಾಹನ ಅಥವಾ ನಾಲ್ಕು ಚಕ್ರ ಅಥವಾ ವಾಣಿಜ್ಯ ಉದ್ಯಮಕ್ಕೆ ಉಪಯೋಗಿಸುವ ವಾಹನವೇ ಎಂದು ತಿಳಿಸಬೇಕಾಗುತ್ತದೆ.

ಇದಾದ ನಂತರ ನಿಮ್ಮ ವಾಹನ ಯಾವ ಬ್ರಾಂಡ್‌ ಎಂದು ಸಹ ಕೇಳುತ್ತಾರೆ. ಇದನ್ನು ಸೆಲೆಕ್ಟ್ ಮಾಡಿದ ಕೂಡಲೇ, ನೀವು bookmyhsrp.com, orderyourhsrp.com, getmyhsrp.com ಮತ್ತು makemyhsrp.com ಎಂಬ ಈ ನಾಲ್ಕು ವೆಬ್‌ಸೈಟ್‌ಗಳಲ್ಲಿ ಒಂದಕ್ಕೆ ಭೇಟಿ ನೀಡುತ್ತೀರಿ. ಇದರಲ್ಲಿ ಯಾವುದಕ್ಕೆ ಹೋಗಬೇಕು ಎಂಬುದು ನಿಮ್ಮ ವಾಹನದ ಬ್ರಾಂಡ್‌ ಮೇಲೆ ನಿರ್ಧಾರಿತವಾಗಿರುತ್ತದೆ.

HSRP Number Plate Application Process Steps You Need To Know

ಈ ಪೇಜ್‌ನಲ್ಲಿಯೂ ನಿಮ್ಮ ವಿವರಗಳನ್ನು ನೀಡಿದ ನಂತರ ನೀವು ಅಂಗಡಿಯಲ್ಲಿ ಇದನ್ನು ಅಳವಡಿಸಲು ನಿರ್ಧರಿಸಿದರೆ ಆ ದಿನ ಮತ್ತು ಸಮಯವನ್ನು ಸಹ ನಿಗದಿ ಪಡಿಸಬೇಕಾಗುತ್ತದೆ. ಇನ್ನು ಇಲ್ಲಿ ನೀವು ಗಮನಿಸಬೇಕಾದ ಮತ್ತೊಂದು ಅಂಶವೆಂದರೆ, ಈ ಯಾವ ವೆಬ್‌ಸೈಟ್‌ ಸಹ ಕ್ಯಾಶ್‌ ಆನ್‌ ಡೆಲಿವರಿ ಸೌಲಭ್ಯವನ್ನು ನೀಡುವುದಿಲ್ಲ. ಬದಲಾಗಿ, ಆನ್‌ಲೈನ್‌ ಪೇಮೆಂಟ್‌ ಮಾತ್ರ ಮಾಡಬೇಕಾಗುತ್ತದೆ.

ನಿಮಗೆ ನಂಬರ್‌ ಪ್ಲೇಟ್‌ ಅನ್ನು ನಿಮ್ಮ ಮನೆಗೆ ಅಥವಾ ನಿಮ್ಮ ಸಮೀಪದಲ್ಲಿರುವ ಶೋ ರೂಮ್‌ಗೆ ಡೆಲಿವರಿ ಮಾಡಿಸಿಕೊಂಡು ಅಲ್ಲಿಂದ ಪಡೆಯಬಹುದಾಗಿದೆ. ನೀವು ಅಲ್ಲಿಂದ ನಿಮ್ಮ ವಾಹನದಲ್ಲಿ ಈ ಹೈ ಸೆಕ್ಯೂರಿಟಿ ನಂಬರ್‌ ಪ್ಲೇಟ್‌ ಅಳವಡಿಸಿಕೊಳ್ಳಬಹುದಾಗಿದೆ. ಆನ್‌ಲೈನ್‌ನಲ್ಲಿ ಇದನ್ನು ಬುಕ್‌ ಮಾಡಲು ಸಾಧ್ಯವಾಗದೆ ಇದ್ದರೆ ಸಮೀಪದ ಆರ್‌ಟಿಒ ಕಛೇರಿ ಅಥವಾ ಶೋ ರೂಮ್‌ಗೆ ಭೇಟಿ ನೀಡಬಹುದಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, February 14, 2024, 11:36 [IST]
English summary
Hsrp number plate application process steps you need to know
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+