ಪತ್ನಿಗೆ ನೆಚ್ಚಿನ ರಾಯಲ್ ಎನ್‍ಫೀಲ್ಡ್ ಬೈಕನ್ನು ಸರ್ಪ್ರೈಸ್ ಗಿಫ್ಟ್ ಆಗಿ ನೀಡಿದ ಪತಿ

ಇಂದಿಗೂ ಭಾರತೀಯ ರಸ್ತೆಗಳಲ್ಲಿ ರಾಜನಂತೆ ಮೆರೆಯುತ್ತಿವೆ ರಾಯಲ್ ಎನ್‍ಫೀಲ್ಡ್ ಬೈಕ್‍‍ಗಳು. ಈ ರಾಯಲ್ ಎನ್‍ಫೀಲ್ಡ್ ಕೇವಲ ಯುವಕರ ಕನಸಿನ ಬೈಕ್ ಮಾತ್ರವಲ್ಲ ಯುವತಿಯರ ಕನಸಿನ ಬೈಕ್ ಕೂಡ ಆಗಿದೆ. ರಾಯಲ್ ಎನ್‍ಫೀಲ್ಡ್ ತನ್ನ ವಿಶಿಷ್ಟವಾದ ಲುಕ್ ಮತ್ತು ಆಕರ್ಷಕ ವಿನ್ಯಾಸದಿಂದ ಎಲ್ಲರ ಗಮನಸೆಳೆದ ಬೈಕ್.

ಪತ್ನಿಗೆ ನೆಚ್ಚಿನ ರಾಯಲ್ ಎನ್‍ಫೀಲ್ಡ್ ಬೈಕನ್ನು ಸರ್ಪ್ರೈಸ್ ಗಿಫ್ಟ್ ಆಗಿ ನೀಡಿದ ಪತಿ

ರಾಯಲ್ ಎನ್‍ಫೀಲ್ಡ್ ಬೈಕ್‌ ಮೇಲೆ ಕುಳಿತು ರೈಡ್‌ ಮಾಡುವುದೆಂದರೆ ಅದೊಂದು ಗತ್ತು. ಆರೇಳು ದಶಕಗಳಿಂದಲೂ ಅದೇ ಕ್ರೇಜ್‌, ಅದೇ ಟ್ರೆಂಡ್‌ ಉಳಿಸಿಕೊಂಡು ಬಂದಿರುವುದು ರಾಯಲ್‌ ಎನ್‌ಫೀಲ್ಡ್‌ ಬೈಕ್‌ಗಳ ಹೆಗ್ಗಳಿಕೆ. ಕಾಲೇಜು ಯುವಕರಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಈ ರಾಯಲ್ ಎನ್‍ಫಿಲ್ಡ್ ಬೈಕ್‍ಗಳ ಅಭಿಮಾನಿಗಳಾಗಿದ್ದಾರೆ. ಇತ್ತೀಚೆಗೆ ರಾಯಲ್ ಎನ್‍ಫೀಲ್ಡ್ ಥಂಡರ್‌ಬರ್ಡ್ ಎಕ್ಸ್ ಮಾದರಿಯನ್ನು ಆಧರಿಸಿ ನಿರ್ಮಾಣಗೊಂಡಿರುವ ಮಿಟಿಯೊರ್ 350 ಬೈಕನ್ನು ಬಾರತದಲ್ಲಿ ಬಿಡುಗಡೆಗೊಳಿಸಿತು.

ಪತ್ನಿಗೆ ನೆಚ್ಚಿನ ರಾಯಲ್ ಎನ್‍ಫೀಲ್ಡ್ ಬೈಕನ್ನು ಸರ್ಪ್ರೈಸ್ ಗಿಫ್ಟ್ ಆಗಿ ನೀಡಿದ ಪತಿ

ಹೊಸ ಮಿಟಿಯೊರ್ 350 ಕ್ರೂಸರ್ ಬೈಕ್ ಮಾದರಿಯು ಕ್ಲಾಸಿಕ್ ಬೈಕ್ ಮಾರಾಟದಲ್ಲಿ ಹೊಸ ಸಂಚಲನ ಮೂಡಿಸಿದೆ. ಹೊಸ ಕ್ರೂಸರ್ ಬೈಕ್ ಮಾದರಿಯು ಬಿಡುಗಡೆಯಾದ ಕೆಲವೇ ತಿಂಗಳಿನಲ್ಲಿ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿದೆ.

MOST READ: ಫೆಬ್ರವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಡೀಸೆಲ್ ಕಾರುಗಳಿವು

ಪತ್ನಿಗೆ ನೆಚ್ಚಿನ ರಾಯಲ್ ಎನ್‍ಫೀಲ್ಡ್ ಬೈಕನ್ನು ಸರ್ಪ್ರೈಸ್ ಗಿಫ್ಟ್ ಆಗಿ ನೀಡಿದ ಪತಿ

ಈ ರಾಯಲ್ ಎನ್‍ಫೀಲ್ಡ್ ಮಿಟಿಯೊರ್ 350 ಕ್ರೂಸರ್ ಬೈಕನ್ನು ತನ್ನ ಪ್ರಿತಿಯ ಮಡದಿಗೆ ಪತಿ ಕ್ರೇಲಿಫ್ ರೋಹಿತ್ ಅವರು ಸರ್ಪೈಸ್ ಆಗಿ ಗಿಫ್ಟ್ ನೀಡಿದ್ದಾರೆ. ಗಿಫ್ಟ್ ನೀಡುವ ಭಾವನತ್ಮಾಕ ವೀಡಿಯೋವನು ಯೂಟ್ಯೂಬ್‌ನಲ್ಲಿ ಅವರು ಹಂಚಿಕೊಂಡಿದ್ದಾರೆ.

ಪತ್ನಿಗೆ ನೆಚ್ಚಿನ ರಾಯಲ್ ಎನ್‍ಫೀಲ್ಡ್ ಬೈಕನ್ನು ಸರ್ಪ್ರೈಸ್ ಗಿಫ್ಟ್ ಆಗಿ ನೀಡಿದ ಪತಿ

ವೀಡಿಯೋದ ಆರಂಭದಲ್ಲಿ ಪತ್ನಿಯ ಜೊತೆ ನಡೆಸುವ ಸಂಭಾಷಣೆಯ ಕೆಲವು ಸನ್ನಿವಿಷಗಳನ್ನು ತೋರಿಸಿದ್ದಾರೆ. ನಂತರ ತನ್ನ ಪತ್ನಿಯನ್ನು ಮನೆಯ ಕೆಳಗಡೆ ಕರೆಯುತ್ತಾನೆ. ನಂತರ ಕೆಳಗಡೆ ಪಾರ್ಕ್ ಮಾಡಿದ ರಾಯಲ್ ಎನ್‍ಫೀಲ್ಡ್ ಮಿಟಿಯೊರ್ 350 ಬೈಕ್ ಬಳಿ ತೆರಳುತ್ತಾರೆ.

MOST READ: ಐಷಾರಾಮಿ ಬಿಎಂಡಬ್ಲ್ಯು ಎಕ್ಸ್7 ಕಾರು ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ಪತ್ನಿಗೆ ನೆಚ್ಚಿನ ರಾಯಲ್ ಎನ್‍ಫೀಲ್ಡ್ ಬೈಕನ್ನು ಸರ್ಪ್ರೈಸ್ ಗಿಫ್ಟ್ ಆಗಿ ನೀಡಿದ ಪತಿ

ಬೈಕ್ ನೋಡಿ ಆಕೆ ಇದರ ಬಣ್ಣ ಇಷ್ಟ ಆಯ್ತು ಅಂತ ಹೇಳುತ್ತಾಳೆ. ಈ ಸಂದರ್ಭದಲ್ಲಿ ಪತಿಯು ಬೈಕಿನ ಕೀ ತೋರಿಸಿ ನಿನ್ನದು ಎಂದು ಹೇಳುತ್ತಾನೆ. ಇದನ್ನು ಕೇಳಿದ ಪತ್ನಿ ಭಾವುಕಳಾಗುತ್ತಾಳೆ. ನಂತರ ಗಂಡನ್ನು ಕೀಯನ್ನು ನೀಡಲು ಮುಂದಾಗುತ್ತಾನೆ. ಅದನ್ನು ಪಡೆಯಲು ಪತ್ನಿ ಬಂದಾಗ ತಮಷೆಗಾಗಿ ಕೆಳ ಹೊತ್ತು ಆಟ ಆಡಿಸುತ್ತಾನೆ.

ಪತ್ನಿಗೆ ನೆಚ್ಚಿನ ರಾಯಲ್ ಎನ್‍ಫೀಲ್ಡ್ ಬೈಕನ್ನು ಸರ್ಪ್ರೈಸ್ ಗಿಫ್ಟ್ ಆಗಿ ನೀಡಿದ ಪತಿ

ನಂತರ ಪತ್ನಿ ಕೀ ಪಡೆದು ಬೈಕಿನ ಸ್ಟ್ಯಾಂಡ್ ತೆಗೆದು ಕೂರುತ್ತಾಳೆ. ಈ ವೇಳೆ ಪತಿಯು ಬೈಕಿನ ಸೀಟಿನ ಎತ್ತರವನ್ನು ಕಡಿಮೆ ಮಾಡಲು ಮಾಡಿಫೈ ಮಾಡಿರುವುದಾಗಿ ಹೇಳುತ್ತಾನೆ. ನಂತರ ಅವಳು ತನ್ನ ಮೆಚ್ಚಿನ ರಾಯಲ್ ಎನ್‍ಫೀಲ್ಡ್ ಬೈಕ್ ಅನ್ನು ರೈಡ್ ಮಾಡುತ್ತಾಳೆ.

MOST READ: ಕರೋನಾ ವೈರಸ್ ಬಗ್ಗೆ ಜನ ಜಾಗೃತಿ ಮೂಡಿಸಲು ಉಬರ್ ಜೊತೆಗೆ ಕೈಜೋಡಿಸಿದ ಪೊಲೀಸ್ ಇಲಾಖೆ

ಪತ್ನಿಗೆ ನೆಚ್ಚಿನ ರಾಯಲ್ ಎನ್‍ಫೀಲ್ಡ್ ಬೈಕನ್ನು ಸರ್ಪ್ರೈಸ್ ಗಿಫ್ಟ್ ಆಗಿ ನೀಡಿದ ಪತಿ

ವೀಡಿಯೋದಲ್ಲಿರುವ ಬೈಕ್ ಬೀಜ್ ಕಸ್ಟಮ್ ಬಣ್ಣದಲ್ಲಿದೆ. ಇನ್ನು ರಾಯಲ್ ಎನ್‍ಫೀಲ್ಡ್ ಮಿಟಿಯೊರ್ 350ಬೈಕ್ ಮಾದಿರಿಯು ಫೈರ್‌ಬಾಲ್, ಸ್ಟೆಲ್ಲಾರ್ ಮತ್ತು ಸೂಪರ್‌ನೊವಾ ಎಂಬ ಮೂರು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

ಡಬಲ್ ಡೌನ್‌ಟ್ಯೂಬ್ ಕ್ರೆಡಲ್ ಫ್ರೇಮ್ ಮೇಲೆ ಅಭಿವೃದ್ದಿಗೊಂಡಿರುವ ಹೊಸ ಬೈಕ್ ಮಾದರಿಯು ಥಂಡರ್‌ಬರ್ಡ್ ಮಾದರಿಗಿಂತಲೂ ಹೆಚ್ಚು ಅರಾಮದಾಯಕ ರೈಡಿಂಗ್ ಅನುಭವ ನೀಡುತ್ತದೆ. ಈ ಬೈಕಿನ ಸಸ್ಪೆಂಕ್ಷನ್ ಗಾಗಿ ಮುಂಭಾಗದಲ್ಲಿ 41-ಎಂಎಂ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ 6 ಹಂತಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಟ್ವಿನ್ ಶಾಕ್‌ ಅಬ್ಸಾರ್ಬರ್‌ ನೀಡಲಾಗಿದೆ.

ಪತ್ನಿಗೆ ನೆಚ್ಚಿನ ರಾಯಲ್ ಎನ್‍ಫೀಲ್ಡ್ ಬೈಕನ್ನು ಸರ್ಪ್ರೈಸ್ ಗಿಫ್ಟ್ ಆಗಿ ನೀಡಿದ ಪತಿ

ಮಿಟಿಯೊರ್ 350 ಬೈಕಿನಲ್ಲಿ 349ಸಿಸಿ ಫ್ಯೂಲ್ ಇಂಜೆಕ್ಷೆಡ್ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 20.2-ಬಿಎಚ್‌ಪಿ ಪವರ್ ಮತ್ತು 27-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ. ಎಂಜಿನ್ ಅನ್ನು 5-ಸ್ಪೀಡ್ ಗೇ‌ರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.

ಪತ್ನಿಗೆ ನೆಚ್ಚಿನ ರಾಯಲ್ ಎನ್‍ಫೀಲ್ಡ್ ಬೈಕನ್ನು ಸರ್ಪ್ರೈಸ್ ಗಿಫ್ಟ್ ಆಗಿ ನೀಡಿದ ಪತಿ

ಇದರೊಂದಿಗೆ ರಾಯಲ್ ಎನ್‍ಫೀಲ್ಡ್ ಮಿಟಿಯೊರ್ 350 ಬೈಕಿನಲ್ಲಿ ಟಿಪ್ಪರ್ ಪಾಡ್ ಒಳಗೊಂಡಿರುವ ಟರ್ನ್-ಬೈ-ಟರ್ನ್ ಗೂಗಲ್ ನ್ಯಾವಿಗೇಷನ್, ಬ್ಲೂಟೂತ್ ಮೂಲಕ ಕನೆಕ್ಟ್ ಮಾಡಬಹುದಾದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ. ಇನ್ನು ಇದರೊಂದಿಗೆ ಹಲವಾರು ಫೀಚರ್ ಗಳನ್ನು ಒಳಗೊಂಡಿದೆ.

Image Courtesy: CrayLyf Rohit

Most Read Articles

Kannada
English summary
Husband gifts wife a Royal Enfield Meteor 350. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X