ರನ್ವೇ ಬೇಡ; 3 ವಾರ ಗಾಳಿಯಲ್ಲೇ ತೇಲುವ ವಿಮಾನ!
ಕೆಲವು ತಿಂಗಳುಗಳ ಹಿಂದೆಯಷ್ಟೇ ಜಗತ್ತಿನ ಅತ್ಯಂತ ದೊಡ್ಡದಾದ ವಿಮಾನ ಏರ್‌ಬಸ್ ಬಗ್ಗೆ ವರದಿ ಮಾಡಿದ್ದೆವು. ಫ್ರಾನ್ಸ್‌ನ ಏರ್‌ಬಸ್ ಪ್ರಮುಖವಾಗಿ ಅಮೆರಿಕದ ಐಕಾನಿಕ್ ಬೋಯಿಂಗ್ ವಿಮಾನಗಳಿಗೆ ಪ್ರತಿಸ್ಪರ್ಧಿಯಾಗಿ ಗುರುತಿಸಿಕೊಂಡಿತ್ತು. (ಜಗತ್ತಿನ ಅತಿದೊಡ್ಡ ಪ್ರಯಾಣಿಕ ವಿಮಾನ - ಏರ್‌ಬಸ್ ಎ380)
ಆದರೆ ಇದೀಗ ಮಗದೊಂದು ಅತ್ಯಾಕರ್ಷಕ ವಿಮಾನದ ಪ್ರವೇಶವಾಗುತ್ತಿದೆ. ಇದರ ವೈಶಿಷ್ಟ್ಯಗಳನ್ನು ಕೇಳಿದರೆ ಅಂತಿಂಥ ಸಾಮಾನ್ಯ ವಿಮಾನವಲ್ಲ ಎಂಬುದು ಮೊದಲ ನೋಟದಲ್ಲೇ ಸ್ಪಷ್ಟವಾಗುತ್ತದೆ. ಯಾಕೆಂದರೆ ಗಾಳಿಯಲ್ಲಿ ಮೂರು ವಾರಗಳಷ್ಟು ಕಾಲ ತೇಲಾಡುವ ಸಾಮರ್ಥ್ಯ ಹೊಂದಿರುವ ಈ ವಿಮಾನಕ್ಕೆ ಟೇಕ್ ಆಫ್ ಆಗಲು ಯಾವುದೇ ರನ್ವೇಗಳ ಅಗತ್ಯವಿಲ್ಲ ಎಂಬುದು ಎಲ್ಲರನ್ನು ಅಚ್ಚರಿ ಮೂಡಿಸುತ್ತದೆ. ಅಂದ ಮಾತ್ರಕ್ಕೆ ಈ ವಿಮಾನ ಯಾವುದು? ಇದನ್ನು ತಯಾರಿಸಿದ ಸಂಸ್ಥೆಯಾದರೂ ಯಾವುದು? ಯಾವಾಗ ಮೊದಲ ಪಯಣ ಕೈಗೊಳ್ಳಲಿದೆ? ಎಂಬಿತ್ಯಾದಿ ಮಹತ್ವಪೂರ್ಣ ವಿಚಾರಗಳ ಬಗ್ಗೆ ಮಾಹಿತಿಗಳನ್ನು ಪಡೆಯೋಣವೇ..

ಬ್ರಿಟನ್ ಮೂಲದ ವಿಮಾನ ವಿನ್ಯಾಸ ಹಾಗೂ ತಯಾರಿಕ ಸಂಸ್ಥೆಯಾಗಿರುವ ಹೈಬ್ರಿಡ್ ಏರ್ ವೆಹಿಕಲ್ಸ್ ಲಿಮಿಟೆಡ್, ಈ ಅತ್ಯಾಕರ್ಷಕ ಏರ್‌ಲ್ಯಾಂಡರ್ ವಿಮಾನ ವಿನ್ಯಾಸಗೊಳಿಸಿದೆ.

ಎಚ್‌ಎವಿ-3 ಎಂಬ ಹೆಸರಿನಿಂದಲೂ ಅರಿಯಲ್ಪಡುವ ಏರ್‌ಲ್ಯಾಂಡರ್, ಹೈಬ್ರಿಡ್ ಏರ್‌ಶಿಪ್ ವಿನ್ಯಾಸಿತ ವಿಮಾನವಾಗಿದೆ. ಇದನ್ನು ಸ್ಕೈಕ್ಯಾಟ್ ತಲಹದಿಯಲ್ಲಿ ರೂಪಿಸಲಾಗಿದೆ.

ಇದು ಅಮೆರಿಕದ ಲಾಂಡ್ ಎಡ್ಯೂರನ್ಸ್ ಮಲ್ಟಿ ಇಂಟೆಲಿಜೆನ್ಸ್ ವೆಹಿಕಲ್ (ಎಲ್‌ಇಎಂವಿ) ಯೋಜನೆಗೆ ಆಯ್ಕೆಯಾಗಿತ್ತು. ಎಂಇಎಂವಿ ಪ್ರಮುಖವಾಗಿಯೂ ನೆಲದ ಪಡೆಗೆ ಗುಪ್ತಚರ, ಕಣ್ಗಾವಲು ಹಾಗೂ ಸ್ಥಳಾನ್ವೇಷಣೆಗೆ (ಐಎಸ್‌ಆರ್) ಸಹಾಯವನ್ನು ಒದಗಿಸುತ್ತದೆ. ಆದರೆ ದರ ಕಡಿತದ ಹಿನ್ನಲೆಯಲ್ಲಿ 2012ರಲ್ಲಿ ಅಮೆರಿಕ ಯೋಜನೆ ಕೈಬಿಡಲಾಗಿತ್ತು.

ಸ್ಕೈಕ್ಯಾಟ್ ಕಾನ್ಸೆಪ್ಟ್ ಆಧಾರಿತ ವಿಮಾನವಾಗಿರುವ ಎಚ್‌ಎವಿ-3 ವಿಮಾನ ಪ್ರಸ್ತುತ ಮೊದಲ ಮಾದರಿಯಲ್ಲಿದ್ದು, 2016ನೇ ಸಾಲಿನಲ್ಲಿ ಮೊದಲ ಹಾರಾಟ ನಡೆಸುವ ಸಂಭವವಿದೆ.

ಸಂಸ್ಥೆಯ ಪ್ರಕಾರ ಏರ್‌ಲ್ಯಾಂಡರ್ ಅತ್ಯಂತ ಸುರಕ್ಷಿತ ಪಯಣ ಒದಗಿಸಲಿದೆ. ಸಂಸ್ಥೆಯ ಪ್ರಕಾರ ಮೂರು ವಾರಗಳಷ್ಟು ಕಾಲ ಗಾಳಿಯಲ್ಲೇ ತೇಲಾಡಲಿದೆ.

ಆಯಾಮ
ಉದ್ದ 91 ಮೀಟರ್
ಅಗಲ 34 ಮೀಟರ್
ಎತ್ತರ 26 ಮೀಟರ್
ಎಂಜಿನ್: ಫೋರ್ X 350 ಎಚ್‌ಪಿ, 4 ಲೀಟರ್ ಸೂಪರ್‌ಚಾರ್ಜ್ಡ್ ವಿ8 ಡೀಸೆಲ್

ಮೂಲಸೌಕರ್ಯಗಳ ಮೇಲೆ ಹೆಚ್ಚು ಅವಲಂಬಿಸದ ಏರ್‌ಲ್ಯಾಂಡರ್ ಹೆಚ್ಚು ಪರಿಸರ ಸ್ನೇಹಿ ಆಗಿದೆ ಎಂದು ತಯಾರಕರು ಅಭಿಪ್ರಾಪಡುತ್ತಾರೆ.

ಈ ಎಚ್‌ಎವಿ 304 ಏರ್‌ಲ್ಯಾಂಡರ್ ವಿಮಾನವನು 20 ಟನ್ ಭಾರವನ್ನು ಹೊರಬಲ್ಲದು. ಅಲ್ಲದೆ ಭವಿಷ್ಯದಲ್ಲಿ ಏರ್‌ಲ್ಯಾಂಡರ್ 50 ಪರಿಚಯಿಸುವ ಯೋಜನೆಯನ್ನು ಸಂಸ್ಥೆ ಹೊಂದಿದೆ.

ಇದೀಗ ಏರ್‌ಲ್ಯಾಂಡರ್ ಬಗೆಗಿನ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ...


Click it and Unblock the Notifications








