ವಿಮಾನಗಳಿಗೆ ಪೈಪೋಟಿ: ಹೈದರಾಬಾದ್‌-ಬೆಂಗಳೂರಿಗೆ ಕೇವಲ 2 ಗಂಟೆ ಪ್ರಯಾಣ: ಶೀಘ್ರದಲ್ಲೆ ಹೈ-ಸ್ಪೀಡ್ ರೈಲು!

ವಿಮಾನಗಳಿಗೆ ಪೈಪೋಟಿ ನೀಡುವಂತಹ ರೈಲುಗಳನ್ನು ಶೀಘ್ರದಲ್ಲೇ ನಾವು ಭಾರತದಲ್ಲಿ ನೋಡಲಿದ್ದೇವೆ. ಅದು ಕೂಡ ದಕ್ಷಿಣ ಭಾರತದಲ್ಲಿ ಹೈದರಾಬಾದ್ ನಿಂದ ಬೆಂಗಳೂರು ಮತ್ತು ಚೆನ್ನೈಗೆ ಈ ರೈಲು ಮಾರ್ಗವಿರಲಿದೆ. ವೇಗದ ವಿಷಯದಲ್ಲಿ ಈ ಹೈ-ಸ್ಪೀಡ್ ರೈಲು ವಿಮಾನ ಪ್ರಯಾಣಕ್ಕೆ ಪ್ರತಿಸ್ಪರ್ಧಿಯಾಗಲಿದೆ. ಈ ರೈಲುಗಳು ಗಂಟೆಗೆ 320 ಕಿ.ಮೀ ವೇಗದಲ್ಲಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಎರಡು ಹೈ-ಸ್ಪೀಡ್ ರೈಲು ಕಾರಿಡಾರ್ಗಳನ್ನು ಅಭಿವೃದ್ಧಿಪಡಿಸುವ ಕೇಂದ್ರದ ಮಹತ್ವಾಕಾಂಕ್ಷೆಯ ಯೋಜನೆಯು ಪ್ರಯಾಣದ ಸಮಯವನ್ನು ಸುಮಾರು 10 ಗಂಟೆಗಳಷ್ಟು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ ಎಂದು ವರದಿಯಾಗಿದೆ.

ಸರಕು ರೈಲುಗಳು ಮತ್ತು ವಂದೇ ಭಾರತ್ ನಂತಹ ಪ್ರಯಾಣಿಕರ ಸೇವೆಗಳಿಗೆ ಅವಕಾಶ ನೀಡುವ ಸಾಂಪ್ರದಾಯಿಕ ರೈಲು ಹಳಿಗಳಿಗಿಂತ ಭಿನ್ನವಾಗಿ, ಈ ಹೊಸ ಕಾರಿಡಾರ್‌ಗಳು ಹೈಸ್ಪೀಡ್ ರೈಲುಗಳಿಗೆ ಮಾತ್ರ ಇರುತ್ತವೆ. ಈ ವಿನ್ಯಾಸವು ಪ್ರಸ್ತುತ ಬುಲೆಟ್ ರೈಲು ಕಾರ್ಯಾಚರಣೆಗಾಗಿ ಅಭಿವೃದ್ಧಿಯಲ್ಲಿರುವ ಮುಂಬೈ-ಅಹಮದಾಬಾದ್ ಹೈಸ್ಪೀಡ್ ಕಾರಿಡಾರ್ ಅನ್ನು ಪ್ರತಿಬಿಂಬಿಸುತ್ತದೆ.

hyderabad-bangalore-chennai-high-speed-rail-plan-details

ಹೈದರಾಬಾದ್-ಬೆಂಗಳೂರು ಕಾರಿಡಾರ್ 626 ಕಿ.ಮೀ ಹಾಗೂ ಹೈದರಾಬಾದ್-ಚೆನ್ನೈ ಕಾರಿಡಾರ್ 705 ಕಿ.ಮೀ. ಇರಲಿದ್ದು, ಇದರ ಸಮೀಕ್ಷೆ ಮತ್ತು ಮೌಲ್ಯಮಾಪನಕ್ಕೆ 33 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಇದರ ವಿವರವಾದ ಯೋಜನಾ ವರದಿ (ಡಿಪಿಆರ್), ಜೋಡಣೆ ವಿನ್ಯಾಸ, ಸಂಚಾರ ಅಂದಾಜು ಮತ್ತು ಎಂಜಿನಿಯರಿಂಗ್ ದಸ್ತಾವೇಜು ಸೇರಿದಂತೆ ಅಂತಿಮ ಸ್ಥಳ ಸಮೀಕ್ಷೆಗೆ ಎಂಜಿನಿಯರಿಂಗ್ ಸಲಹಾ ಸಂಸ್ಥೆಯಾದ ರೈಟ್ಸ್ ಲಿಮಿಟೆಡ್ ಟೆಂಡರ್ ಆಹ್ವಾನಿಸಿದೆ.

ಈ ಹೈ-ಸ್ಪೀಡ್ ರೈಲುಗಳು ಕಾರ್ಯರೂಪಕ್ಕೆ ಬಂದ ನಂತರ ಹೈದರಾಬಾದ್‌ನಿಂದ ಚೆನ್ನೈಗೆ 2 ಗಂಟೆ 20 ನಿಮಿಷಗಳು ಹಾಗೂ ಹೈದರಾಬಾದ್‌ನಿಂದ ಬೆಂಗಳೂರಿಗೆ ಕೇವಲ 2 ಗಂಟೆಗಳಲ್ಲಿ ತಲುಪಲಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಇದೇ ಪ್ರಯಾಣ ವಿಮಾನಗಳ ನಡುವೆ ನೋಡಿಕೊಂಡರೆ ಇನ್ನೂ ಕಡಿಮೆ ಇರಬಹುದಾದರೂ ಮನೆಗಳಿಂದ ಏರ್‌ಪೋರ್ಟ್‌ಗಳನ್ನು ರಸ್ತೆ ಮೂಲಕ ತಲುಪಲು 1 ರಿಂದ 2 ಗಂಟೆಗಳ ಸಮಯ ಬೇಕಾಗುತ್ತದೆ.

hyderabad-bangalore-chennai-high-speed-rail-plan-details

ಈ ಮೂಲಕ ವಿಮಾನ ನಿಲ್ದಾಣದಿಂದ ಗಮ್ಯ ಸ್ಥಳಗಳನ್ನು ತಲುಪುವ ಒಟ್ಟು ಪ್ರಯಾಣವನ್ನು 2 ರಿಂದ 3 ಗಂಟೆಗಳವರೆಗೆ ವಿಸ್ತರಿಸುತ್ತದೆ. ಇದನ್ನು ಉದ್ದೇಶಿತ ಹೈಸ್ಪೀಡ್ ರೈಲು ಪ್ರಯಾಣದ ಸಮಯಕ್ಕೆ ಹೋಲಿಸಬಹುದು. ಪ್ರಸ್ತುತ, ರಾಜೀವ್ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರು ಮತ್ತು ಚೆನ್ನೈಗೆ ವಿಮಾನಗಳು ಕ್ರಮವಾಗಿ 1 ಗಂಟೆ 15 ನಿಮಿಷ ಮತ್ತು 1 ಗಂಟೆ ಮತ್ತು 20 ನಿಮಿಷ ಸಮಯ ತೆಗೆದುಕೊಳ್ಳುತ್ತವೆ.

ಉದ್ದೇಶಿತ ಹೈ- ಸ್ಪೀಡ್ ರೈಲು ಗಂಟೆಗೆ 350 ಕಿ.ಮೀ ವೇಗದಲ್ಲಿ ಚಲಿಸುವಂತೆ ವಿನ್ಯಾಸಗೊಳಿಸಲಾದ ಕಾರಿಡಾರ್ ಗಳು ಆರಂಭದಲ್ಲಿ 320 ಕಿ.ಮೀ ವೇಗದಲ್ಲಿ ಕಾರ್ಯನಿರ್ವಹಿಸಲಿವೆ. ಅಸ್ತಿತ್ವದಲ್ಲಿರುವ ಬ್ರಾಡ್ ಗೇಜ್ ರೈಲ್ವೆ ಕಾರಿಡಾರ್ ಗಳ ಪಕ್ಕದಲ್ಲಿ ಭವಿಷ್ಯದ ಮಲ್ಟಿ-ಟ್ರ್ಯಾಕಿಂಗ್‌ಗೆ ಅವಕಾಶಗಳೊಂದಿಗೆ ಎಲಿವೇಟೆಡ್ ಟ್ರ್ಯಾಕ್‌ಗಳನ್ನು ನಿರ್ಮಿಸಲಾಗುವುದು.

hyderabad-bangalore-chennai-high-speed-rail-plan-details

ಪ್ರಮುಖ ಸೇತುವೆಗಳು, ವಯಾಡಕ್ಟ್‌ಗಳಿಗೆ ಡ್ರಿಲ್ಲಿಂಗ್, ರಿಮೋಟ್ ಸೆನ್ಸಿಂಗ್ ಅಧ್ಯಯನಗಳು, ಭೂವೈಜ್ಞಾನಿಕ ನಕ್ಷೆ ಮತ್ತು ಎರಡೂ ಕಾರಿಡಾರ್ಗಳಲ್ಲಿ ಮಣ್ಣು ಮತ್ತು ಬಂಡೆಯ ಮಾದರಿಗಳ ಪ್ರಯೋಗಾಲಯ ಪರೀಕ್ಷೆಯನ್ನು ಆಯ್ಕೆಯಾದ ಸಂಸ್ಥೆ ನಡೆಸುತ್ತದೆ. ಇತರ ರಚನೆಗಳನ್ನು ಒಳಗೊಂಡ ಸಿವಿಲ್ ಎಂಜಿನಿಯರಿಂಗ್ ಮೌಲ್ಯಮಾಪನಗಳು ಮತ್ತು ಹಣಕಾಸು ಆಂತರಿಕ ರಿಟರ್ನ್ ದರವನ್ನು ನಿರ್ಧರಿಸಲು ವಿವರವಾದ ಯೋಜನಾ ಮೌಲ್ಯಮಾಪನಗಳನ್ನು ಒಳಗೊಂಡಿರುತ್ತದೆ ಎಂದು ಟೆಂಡರ್ ನೋಟಿಸ್ ತಿಳಿಸಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, February 12, 2025, 16:21 [IST]
English summary
Hyderabad bangalore chennai high speed rail plan details
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+