ರಾಷ್ಟ್ರಪತಿಯವರು ಆಗಮಿಸುವ ರಸ್ತೆಯಲ್ಲಿ ಪೊಲೀಸರ ಫಜೀತಿ..!

ಹಳೇ ಬಸ್, ಲಾರಿ ಅಥವಾ ಇನ್ನು ಯಾವುದೇ ವಾಹನಗಳು ರಸ್ತೆಗಳಲ್ಲಿ ಬ್ರೇಕ್ ಫೇಲ್ ಅಥವಾ ಇನ್ನೀತರ ಕಾರಣಗಳಿಂದ ಕೆಟ್ಟು ನಿಲ್ಲುವುದು ಸಾಮಾನ್ಯ. ಬಸ್ ಮತ್ತು ಲಾರಿಗಳಂತಹ ಬೃಹತ್ ಗಾತ್ರದ ವಾಹನಗಳು ರಸ್ತೆಯಲ್ಲಿ ಕೆಟ್ಟು ನಿಂತರೆ ಅದನ್ನು ತೆರವುಗೊಳಿಸುವುದು ಅಷ್ಟು ಸುಲಭವಲ್ಲ.

ರಾಷ್ಟ್ರಪತಿಯವರು ಆಗಮಿಸುವ ರಸ್ತೆಯಲ್ಲಿ ಪೊಲೀಸರ ಫಜೀತಿ..!

ಭಾರೀ ಗಾತ್ರದ ವಾಹನಗಳು ರಸ್ತೆಯಲ್ಲಿ ಕೆಟ್ಟು ನಿಂತಾಗ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಅದನ್ನು ತೆರವು ಗೊಳಿಸುವುದು ಕೂಡ ಅಷ್ಟು ಸುಲಭದ ಮಾತಲ್ಲ. ಬೃಹತ್ ವಾಹನಗಳು ಕೆಟ್ಟು ನಿಂತಾಗ ಕ್ರೇನ್‍‍ಗಳನ್ನು ಬಳಸಿ ಅದನ್ನು ಸಾಗಿಸಬೇಕಾಗುತ್ತದೆ. ಅದೇ ರೀತಿ ಬೃಹತ್ ಲಾರಿಯೊಂದು ರಸ್ತೆ ಮಧ್ಯೆದಲ್ಲಿ ಕೆಟ್ಟುಹೋಗಿ ಅದನ್ನು ತೆರವುಗೊಳಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ರಾಷ್ಟ್ರಪತಿಯವರು ಆಗಮಿಸುವ ರಸ್ತೆಯಲ್ಲಿ ಪೊಲೀಸರ ಫಜೀತಿ..!

ಭಾರತದ ರಾಷ್ಟ್ರಪತಿಯವರು ಹೈದರಾಬಾದ್‍‍ಗೆ ಭೇಟಿ ನೀಡುವ ಸ್ವಲ್ಪ ಮೊದಲು ಈ ಟ್ರಕ್ ರಸ್ತೆಯಲ್ಲಿ ಕೆಟ್ಟು ನಿಂತಿದೆ. ಟ್ರಕ್ ಅನ್ನು ರಸ್ತೆಯಿಂದ ತೆರವುಗೊಳಿಸಲು ಪೊಲೀಸರೇ ಸ್ವತಃ ಟ್ರಕ್‍ ಅನ್ನು ತಳ್ಳಲು ಪ್ರಾರಂಭಿಸಿದರು.

ರಾಷ್ಟ್ರಪತಿಯವರು ಆಗಮಿಸುವ ರಸ್ತೆಯಲ್ಲಿ ಪೊಲೀಸರ ಫಜೀತಿ..!

ಈ ಟ್ರಕ್‍‍ನಲ್ಲಿ ಯಾವುದಾದರೂ ವಸ್ತುವನ್ನು ಲೋಡ್ ಮಾಡಲಾಗಿತ್ತೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ರಸ್ತೆಯಿಂದ ಟ್ರಕ್ ಅನ್ನು ಸರಿಸಲು 20ಕ್ಕೂ ಹೆಚ್ಚು ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಹರಸಾಹಸ ಪಟ್ಟಿದ್ದಾರೆ.

ರಾಷ್ಟ್ರಪತಿಯವರು ಆಗಮಿಸುವ ರಸ್ತೆಯಲ್ಲಿ ಪೊಲೀಸರ ಫಜೀತಿ..!

ಅದೇ ಸಮಯದಲ್ಲಿ ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಹೈದರಾಬಾದ್ ನಗರಕ್ಕೆ ಭೇಟಿ ನೀಡುತ್ತಿದ್ದರು. ಇದೇ ಮಾರ್ಗದಲ್ಲಿ ರಾಷ್ಟ್ರಪತಿಯವರು ಸಾಗಬೇಕಾಗಿರುವುದರಿಂದ ಟ್ರಕ್ ಅನ್ನು ರಸ್ತೆಯಿಂದ ತೆರವುಗೊಳಿಸುವುದು ಅನಿವಾರ್ಯವಾಗಿತ್ತು.

ರಾಷ್ಟ್ರಪತಿಯವರು ಆಗಮಿಸುವ ರಸ್ತೆಯಲ್ಲಿ ಪೊಲೀಸರ ಫಜೀತಿ..!

ವೀಡಿಯೋದಲ್ಲಿ ಒಂದು ಬದಿಯಿಂದ 11 ಪೊಲೀಸರು ತಳ್ಳುತ್ತಿದ್ದಾರೆ. ಟ್ರಕ್‍‍ನ ಇನ್ನೊಂದು ಬದಿ ವೀಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತಿಲ್ಲ. ಒಟ್ಟಾರೆಯಾಗಿ 20ಕ್ಕೂ ಹೆಚ್ಚು ಪೊಲೀಸರು ಟ್ರಕ್ ಅನ್ನು ತಳ್ಳುತ್ತಿದ್ದರು.

ರಾಷ್ಟ್ರಪತಿಯವರು ಆಗಮಿಸುವ ರಸ್ತೆಯಲ್ಲಿ ಪೊಲೀಸರ ಫಜೀತಿ..!

ಟ್ರಕ್ ಲೋಡ್ ಹೊಂದಿದರ ಬಗ್ಗೆ ಮಾಹಿತಿ ಇಲ್ಲ. ಆದರೂ ಖಾಲಿ ಟ್ರಕ್ ಕೂಡ ಸಾಕಷ್ಟು ತೂಕವನ್ನು ಹೊಂದಿರುತ್ತದೆ ಎಂಬುದನ್ನು ಗಮನಿಸಬೇಕು. ಟ್ರಕ್‍‍ನಲ್ಲಿ ಯಾವುದೇ ಸರಕು ಇಲ್ಲದೆ ಸುಮಾರು 10,000 ಕೆಜಿ ತೂಕವಿರುತ್ತದೆ.

MOST READ: ದುಬಾರಿ ಬೆಂಝ್ ಕಾರನ್ನು ಹೆಲಿಕಾಪ್ಟರ್ ಮೂಲಕ ಪುಡಿ ಮಾಡಿದ ಭೂಪ

ರಾಷ್ಟ್ರಪತಿಯವರು ಆಗಮಿಸುವ ರಸ್ತೆಯಲ್ಲಿ ಪೊಲೀಸರ ಫಜೀತಿ..!

ರಾಷ್ಟ್ರಪತಿ ದೇಶದ ಮೊದಲ ಪ್ರಜೆ ಎಂಬುದು ನಮೆಗೆಲ್ಲಾ ಗೂತ್ತಿರುವ ವಿಚಾರ. ಅವರ ಭದ್ರತೆಗಾಗಿ ದೊಡ್ಡ ಬೆಂಗಾವಲು ಪಡೆ ಇರುತ್ತದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ದೊಡ್ಡ ಬೆಂಗಾವಲು ಪಡೆ ಈ ರಸ್ತೆಯಲ್ಲಿ ಸಾಗಬೇಕಾಗಿರುವುದರಿಂದ ಈ ಟ್ರಕ್ ಅನ್ನು ತೆರವು ಮಾಡಿಬೇಕಾದ ಅನಿವಾರ್ಯತೆ ಇರುತ್ತದೆ.

MOST READ: ನವೆಂಬರ್ ತಿಂಗಳಲ್ಲಿ ಮಾರಾಟವಾದ ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳೆಷ್ಟು ಗೊತ್ತಾ?

ಇದರಿಂದ ನಗರ ಪೊಲೀಸರು ಕ್ರೇನ್‍ ಬರುವುದನ್ನು ಕಾದರೆ ಸಮಯ ವ್ಯರ್ಥವಾಗುತ್ತದೆ ಎಂದು ತಮ್ಮ ಬಲದಿಂದ ಟ್ರಕ್ ಅನ್ನು ತೆರವುಗೊಳಿಸಲು ನಿರ್ಧರಿಸುತ್ತಾರೆ. ಪೊಲೀಸರೇ ಸ್ವತಃ ಟ್ರಕ್ ಅನ್ನು ತಳ್ಳಿ ತೆರವುಗೊಳಿಸಿದರು. ಪೊಲೀಸರು ಟ್ರಕ್ ಅನ್ನು ಎಷ್ಟು ದೂರಕ್ಕೆ ತಳ್ಳಿದ್ದಾರೆ ಎಂಬುದರ ಮಾಹಿತಿ ಇಲ್ಲ.

MOST READ: ಕಳ್ಳತನವಾಗಿದ್ದ ಕಾರು ಫಾಸ್ಟ್‌ಟ್ಯಾಗ್‌‍‍ನಿಂದಾಗಿ ವಾಪಸ್ ಸಿಕ್ಕಿದ್ದೆ ಒಂದು ರೋಚಕ

ರಾಷ್ಟ್ರಪತಿಯವರು ಆಗಮಿಸುವ ರಸ್ತೆಯಲ್ಲಿ ಪೊಲೀಸರ ಫಜೀತಿ..!

ರಾಷ್ಟ್ರಪತಿ ಬಳಸುವ ಕಾರು

ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮರ್ಸಿಡಿಸ್ ಬೆಂಝ್ ಎಸ್600 ಪುಲ್‍‍ಮ್ಯಾನ್ ಗಾರ್ಡ್ ಕಾರ್ ಅನ್ನು ಅಧಿಕೃತವಾಗಿ ಬಳಸುತ್ತಾರೆ. ಇದು ಭಾರೀ ಬುಲೆಟ್ ಪ್ರೂಫ್ ಲಿಮೋಸಿನ್ ಕಾರ್ ಆಗಿದೆ. ಈ ಕಾರಿಗೆ ಭಾರೀ ಗಾತ್ರದ ಬುಲೆಟ್ ಅಥವಾ ಬಾಂಬ್ ಸ್ಪೋಟದಿಂದ ಯಾವುದೇ ಹಾನಿಯುಂಟಾಗುವುದಿಲ್ಲ.

ರಾಷ್ಟ್ರಪತಿಯವರು ಆಗಮಿಸುವ ರಸ್ತೆಯಲ್ಲಿ ಪೊಲೀಸರ ಫಜೀತಿ..!

ರಾಷ್ಟ್ರಪತಿಯವರ ಬೆಂಗಾವಲು ಪಡೆ

ರಾಷ್ಟ್ರಪತಿಯವರ ಬೆಂಗಾವಲು ಪಡೆ ಶಸ್ತ್ರಸಜ್ಜಿತ ಟೊಯೊಟಾ ಫಾರ್ಚೂನರ್, ಲ್ಯಾಂಡ್ ಕ್ರೂಸರ್ ಮತ್ತು ಮಹೀಂದ್ರಾ ಸ್ಕಾರ್ಪಿಯೋ ಎಸ್‌ಯುವಿಗಳು ಸೇರಿದಂತೆ ಹಲವಾರು ವಾಹನಗಳನ್ನು ಹೊಂದಿದ್ದಾರೆ. ಭಾರತದ ರಾಷ್ಟ್ರಪತಿಯವರು ಎಲ್ಲಿಗೆ ಹೋದರೂ ಈ ವಾಹನವನ್ನು ಸ್ಥಳಕ್ಕೆ ಸಾಗಿಸಲಾಗುತ್ತದೆ. ಅಲ್ಲದೇ ಅವರಿಗೆ ಉನ್ನತ ರಕ್ಷಣೆಯನ್ನು ನೀಡಲಾಗುತ್ತದೆ.

Image Courtesy: FB TV/YouTube

Most Read Articles

Kannada
English summary
Why are so many Hyderabad cops pushing this truck? - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X