ಗ್ರಾಹಕರೇ ಎಚ್ಚರ - ಬೈಕ್ ಸರ್ವೀಸ್‍ಗೆ ನೀಡಿದಾಗ ನಿಮಗೂ ಹೀಗೆ ಆಗಬಹುದು..!
ನಾವಿಗಾಗಲೇ ವಾಹನಗಳ ಡೀಲರ್‍ಗಳು ಮತ್ತು ಸರ್ವೀಸ್ ಸೆಂಟರ್‍ಗಳು ಗ್ರಾಹಕರಿಗೆ ಮಾಡುತ್ತಿರುವ ಮೋಸದ ಬಗ್ಗೆ ಹಲವಾರು ವಿಷಯಗಳನ್ನು ನೀಡಿದ್ದೆವೆ. ಇಲ್ಲಿಯವರೆಗು ತಮ್ಮಲ್ಲಿ ಸರ್ವೀಸ್‍ಗಾಗಿ ಬಂದ ವಾಹನಗಳಲ್ಲಿ ಸ್ಪೆರ್ ಪಾರ್ಟ್‍ಗಳನ್ನು ಕಳಚಿ ನಕಲು ಉಪಕರಣಗಳನ್ನು ಬಳಸಿ ಗ್ರಾಹಕರಿಗೆ ಹಿಂದಿರುಗಿಸುವುದನ್ನು ಕೇಳಿದ್ದೇವೆ. ಆದರೆ ಸರ್ವೀಸ್‍ಗಾಗಿ ಬಂದ ಬೈಕ್ ಕಳ್ಳತನವಾಗಿರುವ ಸುದ್ಧಿ ಎಂದಾದರು ಕೇಳಿದ್ದೀರಾ.?

ಹೌದು, ಲಕ್ಷ ಕೊಟ್ಟು ಆಸೆ ಪಟ್ಟು ಖರೀದಿಸಿದ ಬೈಕ್ ಅನ್ನು ಕೆಲ ದಿನಗಳ ನಂತರ ಸರ್ವೀಸ್ ಮಾಡಿಸಬೇಕೆಂದು ಹೊರಟ ಗ್ರಾಹಕನಿಗೆ ಶಾಕಿಂಗ್ ನ್ಯೂಸ್ ಒಂದು ಕಾದಿತ್ತು, ಅದೇನೆಂದರೆ ಸರ್ವೀಸ್‍ಗಾಗಿ ನೀಡಿ ಹೋದ ಬೈಕ್ ಕಳ್ಳತನವಾದದ್ದು.

ಇದು ನಿಜವಾಗಿಯೂ ನಡೆದ ಘಟನೆ. ತೆಲಂಗಾಣದ ರಾಜಧಾನಿ ಹೈದರಾಬಾದ್‍ನಲ್ಲಿ ಇಂತಹ ಘಟನೆಯು ನಡೆದಿದ್ದು, ಸುಮಾರು 2.19 ಲಕ್ಷ ಪಾವತಿಸಿ ವಿನಾಯಕ ಮೊಬೈಕ್ಸ್ ಪ್ರೈವೇಟ್ ಲಿಮಿಟೆಡ್‍ನಲ್ಲಿ ಹೊಸ ಡ್ಯೂಕ್ ಬೈಕ್ ಅನ್ನು ಖರೀದಿಸಿದ ಮಧುಸೂದನ್ ರಾಜು ಅವರು ಆ ಬೈಕಿಗೆ ಥರ್ಡ್ ಪಾರ್ಟಿ ವಿಮೆಯನ್ನು ಸಹ ಪಡೆದುಕೊಂಡಿದ್ದರು.

ಮಧುಸೂಧನ್ ರಾಜು ಅವರು ಬೈಕ್ ಅನ್ನು ಖರೀದಿಸಿದ ನಂತರ ಫೆಬ್ರವರಿ 9,2016ರಂದು ಮೊದಲ ಸರ್ವೀಸ್‍ಗಾಗಿ ನೀಡಬೇಕಾಗಿತ್ತು. ಬೈಕ್ ಅನ್ನು ಸರ್ವೀಸ್‍ಗಾಗಿ ನೀಡಿದ ನಾಲ್ಕು ದಿನಗಳ ನಂತರ ಅಧಿಕೃತ ಸರ್ವೀಸ್ ಸೆಂಟರ್‍ನಿಂದ ಬೈಕ್ ಕಳ್ಳತನವಾಗುವುದು ಅಂದ್ರೆ ಅರ್ಥವೇನು.?

ಇಷ್ಟ ಪಟ್ಟು ಖರೀದಿಸಿದ್ದ ಬೈಕ್ ಸರ್ವೀಸ್ ಸೆಂಟರ್‍ನಲ್ಲಿಯೇ ಕಳ್ಳತನವಾಗಿರುವ ವಿಷಯವನ್ನು ತಿಳಿದ ಮಧುಸೂದನ್ ಅವರು, ತಕ್ಷಣವೇ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಬೈಕ್ ಕಳ್ಳತನವಾಗಿರುವುದರ ಬಗ್ಗೆ ದೂರು ನೀಡಿದ್ದರು.

ಅಧಿಕೃತ ಸರ್ವೀಸ್ ಸೇಂಟರ್‍ನಲ್ಲಿಯೆ ಬೈಕ್ ಕಳ್ಳತನವಾಗಿರುವ ಕಾರಣದಿಂದ ಮಧುಸೂದನ್‍ರವರು ಶೇಕಡಾ 100ರಷ್ಟು ಕ್ಯಾಶ್‍ಬ್ಯಾಕ್ ನೀಡಬೇಕಾಗಿ ಮನವಿ ಮಾಡಿಕೊಂಡಿದ್ದರು. ಇದಕ್ಕೆ ಉತ್ತರವಾಗಿ ವಿನಾಯಕ ಮೊಬೈಕ್ಸ್ ಸಿಬ್ಬಂದಿ ಬೈಕ್ ಪತ್ತೆಯಾದರೆ ಅದನ್ನು ರಿಪೇರಿ ಮಾಡಿ ಜೊತೆಗೆ ವಿಮೆ ಕ್ಲೈಮ್ ಆದ ನಂತರ ಪರಿಹಾರದ ಮೊತ್ತವನ್ನು ಪಾವತಿಸುವುದಾಗಿ ಹೇಳಿಕೊಂಡಿದ್ದರು.

ಸುಮಾರು ಮೂರು ತಿಂಗಳ ನಂತರ ಮೇ 20,2016ರಲ್ಲಿ ಪೊಲೀಸರು ಕಳೆದು ಹೋದ ಡ್ಯೂಕ್ ಬೈಕ್ ಅನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದು, ಬೈಕ್ ಅನ್ನು ಸರ್ವೀಸ್ ಸೆಂಟರ್‍ಗೆ ನೀಡಲಾಯಿತು. ನೀಡಲಾದ ಬೈಕ್‍ನಲ್ಲಿ ಉಂಟಾದ ರಿಪೇರಿಗಳನ್ನು ಮಾಡಿ ಮತ್ತೆ ಮಧುಸೂದನ್‍ರವರಿಗೆ ಟೆಸ್ಟ್ ಡ್ರೈವ್‍ಗಾಗಿ ನೀಡಲಾಯಿತು.

ಅದಾಗ್ಯು ಬೈಕ್ ಕದ್ದ ಕಳ್ಳ ಈಗಾಗಲೆ ರ್‍ಯಾಷ್ ಮತ್ತು ನಿರ್ಲಕ್ಷ್ಯವಾಗಿ ರೈಡಿಂಗ್ ಮಾಡಿದ್ದಾನೆ. ಇದನ್ನು ತಿಳಿದ ಮಧುಸೂದನ್ ಬೈಕಿನ ಹಲವಾರು ಉಪಕರಣಗಳು ಡ್ಯಾಮೇಜ್ ಆಗಿದ್ದು ಮತ್ತು ಎಂಜಿನ್ ಸಾಮರ್ಥ್ಯವು ಸಹ ಕಡಿಮೆಯಾಗಿದೆ ಎಂದು ಮತ್ತೊಂದು ಬಾರಿ ದೂರು ದಾಖಲಿಸಿದ್ದರು.
MOST READ: ಡೀಸೆಲ್ ಕಾರುಗಳ ಮೈಲೇಜ್ ಹೆಚ್ಚಿಸಲು ಸಿದ್ದಗೊಂಡಿದೆ ಹೊಸ ತಂತ್ರಜ್ಞಾನ..!

ಕಳ್ಳತನವಾದ ಬೈಕ್ ಸಿಕ್ಕಿ ಮತ್ತೆ ಅದನ್ನು ರಿಪೇರಿ ಮಾಡಿ ಟೆಸ್ಟ್ ಡ್ರೈವ್‍ಗಾಗಿ ನೀಡಿದಾಗ ಈ ಲೋಪಗಳನ್ನು ಪತ್ತೆಹಚ್ಚಿದ ಮಧೂಸೂದನ್ ಅವರು, ಬೈಕ್‍ನ ಡೆಲಿವರಿ ಪಡೆಯಲು ತಿರಸ್ಕರಿಸಿ ಪರಿಹಾರದ ಮೊತ್ತವನ್ನು ನೀಡುವುದಾಗಿ ಕೇಸ್ ಹಾಕಿದರು.

ಇಷ್ಟೇಲ್ಲಾ ಆದ ಬಳಿಕ ಜಿಲ್ಲಾ ಗ್ರಾಹಕ ವೇದಿಕೆಯು ಎದುರಾಳಿ ಪಾರ್ಟಿಯ ನಿರ್ಲಕ್ಷ್ಯದಿಂದ ತಮ್ಮ ಪಾಲನೆಯಲ್ಲಿರುವ ಸ್ಥಳದಿಂದಲೇ ಬೈಕ್ ಕಳ್ಳತನವಾಗಿರುವ ಕಾರಣ, ಡೀಲರ್ ಗ್ರಾಹಕನಿಗೆ 2.19 ಲಕ್ಷ ಬೈಕ್ ಮೊತ್ತ ಹಾಗು ರೂ 75,000 ಸಾವಿರದ ಪರಿಹಾರ ನೀಡಬೇಕಾಗಿ ತೀರ್ಪು ನೀಡಿದೆ.

ಹೀಗಾಗಿ, ವಾಹನ ಮಾಲೀಕರು ಡೀಲರ್ಸ್ ಬಳಿ ಎಚ್ಚರದಿಂದ ವ್ಯವಹಾರ ಮಾಡುವ ಅವಶ್ಯಕತೆ ಇದ್ದು, ಮೊನ್ನೆಯಷ್ಟೆ ನಡೆದ ಡೀಲರ್ಸ್ ಒಬ್ಬರ ಮಹಾ ಮೋಸದಿಂದ ಕುಪಿತಗೊಂಡ ಟಿವಿಎಸ್ ಬೈಕ್ ಮಾಲೀಕನು ಹೊಸ ಬೈಕ್ ಅನ್ನು ಶೋರಂ ಎದುರಲ್ಲಿ ಸುಟ್ಟುಹಾಕಿದ್ದ ಘಟನೆ ನಡೆದಿತ್ತು.

ಚೆನ್ನೈ ನಗರದ ಈ ವ್ಯಕ್ತಿಯು ಬಹಳ ಆಸೆ ಇಂದ ಖರೀದಿಸಿದ ವಾಹನವು ಪದೇ ಪದೇ ತೊಂದರೆ ಕೊಡ್ಡುತ್ತಿದ್ದ ಕಾರಣ ಆ ವಾಹನವನ್ನು ಖರೀದಿಸಿದ ಶೋರಂನ ಮುಂದೆಯೆ ಬೆಂಕಿ ಹಾಕಿ ಸುಟ್ಟಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿತ್ತು.

ಹೌದು, ತಮಿಳು ನಾಡಿನ ಚೆನ್ನೈ ನಗರದ ನಿವಾಸಿಯಾದ ಗೋಪಿಯವರು ಶ್ರಮ ಪಟ್ಟು ಆಸೆಯಿಂದ ಟಿವಿಎಸ್ ವಿಕ್ಟರ್ ಬೈಕ್ ಅನ್ನು ರೂ.60,000 ಸಾವಿರ ನೀಡಿ ಖರೀದಿಸಿದ್ದರು. ಆದ್ರೆ ಖರೀದಿಸಿದ ಆರು ತಿಂಗಳಿನೊಳಗೆ ಬೈಕಿನ ಕೆಲ ಉಪಕರಣಗಳು ಸರಿಯಾಗಿ ಕೆಲಸ ಮಾಡದ ಕಾರಣ ಬೈಕ್ ಖರೀದಿಸಿದ ಶೋರಂನ ಮುಂದೆಯೆ ಆ ಬೈಕ್ ಅನ್ನು ಸುಟ್ಟಿದ್ದರು.

ಚೆನ್ನೈ ನಗರದಲ್ಲಿನ ಅಯನಾವರಂ ಏರಿಯಾದಲ್ಲಿನ ಎಸ್‍ಪಿಎಂ ಟಿವಿಎಸ್ ಶೋರಂನಲ್ಲಿ ಗೋಪಿಯವರು ಟಿವಿಎಸ್ ವಿಕ್ಟರ್ ಬೈಕ್ ಅನ್ನು ಖರೀದಿಸಿದ್ದರು, ಖರೀದಿಸಿದ ನಂತರ ಬೈಕ್ ತೊಂದರೆ ನೀಡುತ್ತಿರುವುದಾಗಿ ಶೋರಂಗೆ ತೆಗೆದುಕೊಂಡು ಹೋದಾಗ ಅವರು ಅದನ್ನು ಸರಿಪಡಿಸಿರುವುದಾಗಿ ಹೇಳಿದ್ದರು.

ಬೈಕ್‍ನಲ್ಲಿನ ಲೋಪದೋಷವನ್ನ ಸರಿ ಪಡಿಸಲಾಗಿದೆ ಎಂದು ಹೇಳಿದ ಕೆಲ ದಿನಗಳ ನಂತರವೇ ಮತ್ತೊಂದು ಲೋಪವು ಕಂಡುಬರುತ್ತಿತ್ತು, ಎಷ್ಟು ಬಾರಿ ರಿಪೇರಿ ಮಾಡಿದರೂ ತೊಂದರೆಗೆ ಕೊನೆಯೆ ಇಲ್ಲದಂತಾಯಿತು.
MOST READ: ಭಾರತದಲ್ಲಿ ಓಮ್ನಿ ಮಾರಾಟಕ್ಕೆ ಬ್ರೇಕ್ ಹಾಕಲು ನಿರ್ಧರಿಸಿದ ಮಾರುತಿ..!

ಗೋಪಿಯವರು ಟಿವಿಎಸ್ ವಿಕ್ಟರ್ ಬೈಕ್ ಅನ್ನು ಖರೀದಿಸಿ ಆರು ತಿಂಗಳಾದರೂ ಪ್ರತೀ 15ದಿನಗಳಿಗೊಮ್ಮೆ ಶೋರಂಗೆ ಹೋಗಬೇಕಾದ ಪರಿಸ್ಥಿತಿ ಬಂದರೂ ತೊಂದರೆಯು ಸರಿ ಹೋಗಲಿಲ್ಲ. ಆತ ನಿರಂತರವಾಗಿ ಸರ್ವೀಸ್ ಸೆಂಟರ್‍ಗೆ ಹೋಗುವುದನ್ನು ನೋಡಿ ಅಲ್ಲಿರುವವರೆ ಗೋಪಿಯವರನ್ನು ಹೀಯಾಳಿಸಲು ಶುರು ಮಾಡಿದರು.

ಇದರಿಂದ ಬೇಸತ್ತ ಗೋಪಿಯವರು ಒಂದು ನಿರ್ಣಯಕ್ಕೆ ಬಂದರು. ತಾಳ್ಮೆ ಕಳೆದುಕೊಂಡಿದ್ದ ಅವರು ಮಾರನೆಯ ದಿನ ತಾವು ಖರೀದಿಸಿದ್ದ ಶೋರಂನ ಮುಂದೆಯೆ ಬೈಕ್ ಅನ್ನು ಕೊಂಡೊಯ್ದು ಕಲ್ಲಿನಿಂದ ಬೈಕ್ ಅನ್ನು ಚಚ್ಚಿಹಾಕಲು ಮುಂದಾದರು.

ಕಲ್ಲಿನಿಂದ ಆಗದ ಕೆಲಸವನ್ನು ಅರಿತು ಅಲ್ಲೆ ಬೈಕ್‍ನಲ್ಲಿದ್ದ ಪೆಟ್ರೋಲ್ ಅನ್ನು ತೆಗೆದು ಅದನ್ನು ಬೈಕಿನ ಮೇಲೆ ಸುರಿದು ತಡಮಾಡದೆ ನಡುರಸ್ತೆಯಲ್ಲಿಯೆ ಬೆಂಕಿ ಹಚ್ಚಿದರು. ಈ ದೃಶ್ಯ ಕಂಡ ಸ್ಥಳಿಯರು ತಕ್ಷಣವೇ ಅಲ್ಲಿ ಸುತ್ತುವರಿದರು. ಇದನ್ನು ಕಂಡ ಶೋರಂ ಮಂದಿ ಇದನ್ನು ನಿಲ್ಲಿಸಲು ಗೋಪಿಯವರನ್ನು ಒತ್ತಾಯಿಸಿದರು.
ಅಷ್ಟರಲ್ಲೇ ಬೆಂಕಿಯು ಬೈಕಿನ ಸುತ್ತಲೂ ಆವರಿಸಿಕೊಂಡು ಉರಿಯಲು ಶುರುವಾಯಿತು. ಈ ದೃಶ್ಯವನ್ನು ಕಾಣಲು ಬಂದ ಅಲ್ಲಿನ ಜನರು ಗೋಪಿಯವರು ಕೋಪದಿಂದ ಮಾಡಿದ ವರ್ತನೆಗಳನ್ನ ತಮ್ಮ ತಮ್ಮ ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ಆ ವಿಡಿಯೋ ಇಲ್ಲಿದೆ ನೋಡಿ..

ಇಂತಹ ಘಟನೆಗಳು ಕೇವಲ ತಮಿಳುನಾಡಿನಲ್ಲಿ ಮಾತ್ರವಲ್ಲದೇ ದೇಶಾದ್ಯಂತ ನಡೆಯುತ್ತಲೇ ಇರುತ್ತವೆ. ಕೆಲವು ಬಾರಿ ವಾಹನ ತಯಾರಕ ಸಂಸ್ಥೆಗಳು ಮಾಡುವ ತಪ್ಪಿಗೆ ಡೀಲರ್‍ಗಳು ಬಲಿಯಾಗುತ್ತಿದ್ದಾರೆ. ಇಂತಹ ಸಮಯದಲ್ಲಿ ಡೀಲರ್‍ಗಳು ಬೈಕ್ ಅನ್ನು ರೀಪ್ಲೇಸ್ ಮಾಡಲೇಬೇಕಾಗಿದ್ದು, ವಾಹನ ತಯಾರಕ ಸಂಸ್ಥೆಗಳು ಇಂತಹ ಘಟನೆಗಳು ಮುಂದಾಗದಂತೆ ಎಚ್ಚೆತ್ತುಕೊಳ್ಳಬೇಕಾಗಿದೆ.


Click it and Unblock the Notifications








